ಭೂಮಿಗೆ ಮರಳಲು ಹಣ ಬೇಕು; 65 ವರ್ಷದ ಮಹಿಳೆಗೆ ರೂ. 24 ಲಕ್ಷ ವಂಚಿಸಿದ ನಕಲಿ ಗಗನಯಾತ್ರಿ

ಜಪಾನ್‌ : ರಷ್ಯಾದ ಗಗನಯಾತ್ರಿ ಎಂದು ಹೇಳಿಕೊಂಡ ಒಬ್ಬ ವಂಚಕನು, ತಾನು ಭೂಮಿಗೆ ಹಿಂದಿರುಗಲು ರೂ. 24 ಲಕ್ಷದ ಅವಶ್ಯಕತೆ ಇದೆ ಎಂದು ಸುಳ್ಳು ಹೇಳಿ 65 ವರ್ಷದ ಮಹಿಳೆಯೊಬ್ಬಳಿಗೆ ವಂಚಿಸಿರುವ ವಿಚಿತ್ರವಾದ ಘಟನೆಯೊಂದು ನಡೆದಿದೆ. ಅಲ್ಲದೆ, ತಾನು ಭೂಮಿಗೆ ಬಂದ ತಕ್ಷಣವೇ ನಿನ್ನನ್ನು ಮದುವೆಯಾಗುವುದಾಗಿಯೂ ಮಾತು ಕೊಟ್ಟಿದ್ದಾನೆ.

ಇಂತಹದೊದ್ದು ವಿಚಿತ್ರ ಘಟನೆಯೊಂದರ ಬಗ್ಗೆ ಇದೀಗ ಸಾಮಾಜಿಕ ಜಾಕತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಒಳಪಟ್ಟಿದೆ. ಸಾಮಾಜಿಕ ಜಾಲತಾಣದ ನಕಲಿ ಖಾತೆಗಳನ್ನು ಸೃಷ್ಠಿಸಿಕೊಂಡು ಅವುಗಳ ಮೂಲಕ ಒಂದಲ್ಲ ಒಂದು ರೀತಿಯಲ್ಲಿ ಆಮಿಷಗಳನ್ನು ಒಡ್ಡುವ ವಂಚಕರು. ಹಣವನ್ನು ಲಫಟಾಯಿಸಲು ಏನೇನೆಲ್ಲಾ ತಂತ್ರಗಳನ್ನು ಅನುಸರಿಸುತ್ತಾರೆ, ಮತ್ತು ಅವುಗಳನ್ನು ನಂಬುವ ನಂಬಿ ವಿವೇಚನೆ ಮಾಡದೆ ವಂಚನೆಗೊಳ್ಳುತ್ತಾರೆ ಎಂಬುದರ ಬಗ್ಗೆ ಇದೀಗ ಹೊಸದೊಂದು ಪ್ರಕರಣ ಘಟಿಸಿದೆ.

ಜೂನ್‌ ತಿಂಗಳಿನಲ್ಲಿ ನಕಲಿ ಗಗನಯಾತ್ರಿ ತನ್ನ ಇನ್‌ಸ್ಟ್ರಾಗ್ರಾಂ ಮೂಲಕ ಈ ಮಹಿಳೆಯೊಂದಿಗೆ ಸಂಪರ್ಕ ಬೆಳೆಸಿಕೊಂಡಿದ್ದಾನೆ. ಅಲ್ಲದೆ, ತಾನು ಬಾಹ್ಯಾಕಾಶ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವೆ ಎಂದು ತಿಳಿಸಿರುವ ವಂಚಕನು ಮಹಿಳೆಯನ್ನು ನಂಬಿಸಲು ಮುಂದಾಗಿದ್ದಾನೆ. ಅಲ್ಲದೆ, ತನ್ನ ಸಾಮಾಜಿಕ ಜಾಲತಾಣದ ನಕಲಿ ಖಾತೆಯಲ್ಲಿ ಬಾಹ್ಯಾಕಾಶದ ಕೆಲವು ಫೋಟೋಗಳನ್ನು ಹಾಕಿದ್ದಾನೆ. ಅಲ್ಲದೆ, ಮೊಬೈಲ್​ನಿಂದ ಸೀಮಿತ ವಲಯದ ತನಕ ಮಾತ್ರ ಸಂಪರ್ಕಿಸಲು ತನಗೆ ಸಾಧ್ಯ ಎಂದಿದ್ದಾನೆ.

ಪರಸ್ಪರ ಸಂದೇಶಗಳನ್ನು ರವಾನಿಸಿಕೊಂಡಿರುವ ಇವರುಗಳು ನಿರಂತರ ಸಂಪರ್ಕದಲ್ಲಿದ್ದ ಬಗ್ಗೆ ಪುರಾವೆಗಳು ಲಭ್ಯವಾಗಿದೆ. ಅದರಲ್ಲಿನ ಒಂದು ಸಂದೇಶದಲ್ಲಿ, ‘ನಾನು ನಿನ್ನನ್ನು ಪ್ರೀತಿಸುತ್ತೇನೆ. ಇದು 1000 ಸಲ ಹೇಳಿದರೂ ಸಾಕಾಗುವುದಿಲ್ಲ’ ಇದು ಅವನು ಕಳಿಸಿದ ಸಂದೇಶವಾಗಿದೆ.

ನಕಲಿ ಗಗನಯಾತ್ರಿಯೊಬ್ಬನು, ಮಹಿಳೆಯನ್ನು ಪದೇಪದೇ ಹೇಳಿ ಆಕೆಯನ್ನು ಮರಳು ಮಾಡಿದ್ದಾನೆ. ಪರಸ್ಪರ ಮದುವೆಯಾಗಿ ಜಪಾನಿನಲ್ಲಿ ಮುಂದಿನ ಜೀವನವನ್ನು ಪ್ರಾರಂಭಿಸೋಣ. ಸದ್ಯ ಲ್ಯಾಂಡಿಂಗ್​ ಫೀಸ್​ ಮತ್ತು ವಾಪಸ್ಸು​ ಬರಲು ರ‍್ಯಾಕೆಟ್ಟಿನ ಖರ್ಚನ್ನು ನಿಭಾಯಿಸಲು ಹಣದ ಅಗತ್ಯವಿದೆ ಹಾಗಾಗಿ ಹಣ ಕಳಿಸು ಎಂದು ಆಕೆಗೆ ತಿಳಿಸಿದ್ದಾನೆ.

ವಂಚಕನ ಮಾತನ್ನು ನಂಬಿದ ಮಹಿಳೆಯು ಆಗಸ್ಟ್ 19 ರಿಂದ ಸೆಪ್ಟೆಂಬರ್ 5 ರವರೆಗೆ 5 ಕಂತುಗಳಲ್ಲಿ ರೂ.24 ಲಕ್ಷಕ್ಕೂ ಹೆಚ್ಚಿನ ಮೊತ್ತದ ಹಣವನ್ನು ರವಾನಿಸಿದ್ದಾಳೆ. ಆದರೆ, ವಂಚಕನ ಬೇಡಿಕೆ ಹೆಚ್ಚುತ್ತಲೇ ಇದ್ದಾಗ ಆಕೆ ಅನುಮಾನಗೊಂಡು ಪೊಲೀಸರಿಗೆ ದೂರು ನೀಡಿದ್ದಾಳೆ ಎಂದು ವರದಿಯಾಗಿದೆ.

ಹೌದು, ಇಂತಹ ವಂಚನೆ ಪ್ರಕರಣವೊಂದು ನಡೆದಿರುವುದು ಜಪಾನ್‌ ದೇಶದಲ್ಲಿ ಮಹಿಳೆ ಹಾಗೂ ವಂಚಕ ನಡುವಿನ ಸಂದೇಶ ರವಾನೆಯು ಜಪಾನೀಸ್ ಮೆಸೇಜಿಂಗ್ ಅಪ್ಲಿಕೇಶನ್(ಲೈನ್‌) ನಲ್ಲಿ ದಾಖಲಾಗಿದೆ. ಜಪಾನಿ ಕರೆನ್ಸಿ ಪ್ರಕಾರ ಕಳೆದುಕೊಂಡ ಮೊತ್ತ 4.4 ಮಿಲಿಯನ್‌ ʻಯೆನ್‌ʼ  ಅಂದರೆ, ರೂ.24,69,891 ಮೊತ್ತ.

ಜಪಾನಿನಲ್ಲಿ ಇಂತಹ ವಂಚನೆಯ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸಾಮಾಜಿಕ ಜಾಲತಾಣದ ಮೂಲಕ ನಕಲಿ ಖಾತೆಗಳನ್ನು ಸೃಷ್ಟಿಸುವ ವಂಚಕರು ಹಣ ಪೀಕುತ್ತಿರುವುದು ಹೆಚ್ಚಾಗುತ್ತಿದೆ ಎಂದು ಅಲ್ಲಿನ ಸ್ಥಳೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

Donate Janashakthi Media

Leave a Reply

Your email address will not be published. Required fields are marked *