ಬೆಂಗಳೂರು: ನಗರದಲ್ಲಿ ಕಿಟ್ಟಿ ಪಾರ್ಟಿ ಆಯೋಜಿಸಿ ಜನರಿಗೆ 50 ಕೋಟಿ ವಂಚನೆ ಕೇಸ್ ಗೆ ಸಂಬಂಧಿಸಿದಂತೆ ಪೊಲೀಸರ ತನಿಖೆ ಚುರುಕುಕೊಂಡಿದೆ. ಇದೀಗ ಲಾಯರ್ ಅಂತ ಸುಳ್ಳು ಹೇಳಿದ್ದ ಮತ್ತೋರ್ವನನ್ನು ಜುಲೈ 11ರಂದು ಪೊಲೀಸರು ಬಂಧಿಸಿದ್ದಾರೆ. ಕಿಟ್ಟಿ
ಬಹುಕೋಟಿ ವಂಚಕಿ ಸವಿತಾಳ ಪರ ಲಾಯರ್ ಎಂದು ಎಂಟ್ರಿ ಕೊಟ್ಟು ಎಸಿಪಿ, ಸಬ್ ಇನ್ಸ್ಪೆಕ್ಟರ್‌ಗೆ ಅವಾಜ್ ಹಾಕಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ನಕಲಿ ವಕೀಲ ಯೋಗಾನಂದನನ್ನು (52) ಇದೀಗ ಬಂಧಿಸಲಾಗಿದೆ.
ಇದನ್ನೂ ಓದಿ: ನಟ ದರ್ಶನ್‌ಗೆ ಸ್ವಿಟ್ಜರ್‌ಲ್ಯಾಂಡ್ ವೀಸಾ ನಿರಾಕರಣೆ
ಪೊಲೀಸರು ವಂಚಕಿ ಸವಿತಾಳನ್ನು ಅರೆಸ್ಟ್ ಮಾಡಿದ ಬಳಿಕ ಈತ ಪೊಲೀಸರಿಗೆ ಅವಾಜ್ ಹಾಕಿದ್ದ. ಅಲ್ಲದೇ ಆರೋಪಿ ಸವಿತಾ ಬಳಿಯಿದ್ದ ಮನೆ ಕೀ ಹೊರಗೆ ತೆಗೆದುಕೊಂಡು ಹೋಗ್ತಿದ್ದ ವೇಳೆ ಆರೋಪಿ ಕೀ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ ಎಂದು ಅಡ್ಡ ಹಾಕಿದ್ದ ಪೊಲೀಸರಿಗೆ ಆವಾಜ್ ಹಾಕಿದ್ದನು ಎಂದು ಗೊತ್ತಾಗಿದೆ.
ಯೋಗಾನಂದನ ಕೇಸ್ ಹಿಸ್ಟರಿ ಕೆದಕಿದಾಗ ಈ ಹಿಂದೆ ಪ್ರೊಫೆಸರ್ ಎಂದು ಹೇಳಿಕೊಂಡು ಮೋಸ ಮಾಡಿದ್ದನು ಎಂದು ಗೊತ್ತಾಗಿದೆ. ಇದೀಗ ಲಾಯರ್ ಎಂದು ಹೇಳ್ಕೊಂಡು ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದ. ಇದರ ಪರಿಣಾಮ ಮತ್ತೆ ಕೆಪಿ ಅಗ್ರಹಾರ ಪೊಲೀಸರು ಜೈಲಿಗಟ್ಟಿದ್ದಾರೆ.
ಇದನ್ನೂ ನೋಡಿ: ಪಾಲಾರ್ ಸಿನಿಮಾ | ಚನ್ನರಾಯಪಟ್ಟಣ ಭೂಸ್ವಾಧೀನ ಹೋರಾಟ Janashakthi Media
