ಕಲಬುರಗಿ : ಕೊರೊನಾ ಬಂದು ಹೋದದ್ದೇ ತಡ ಹಣ ಮಾಡಲು ಕಳ್ಳದಾರಿ ಹಿಡಿಯುವವರ ಸಂಖ್ಯೆ ಹೆಚ್ಚಾಗಿದೆ. ಸದ್ಯ ಈಗ ರಾಜ್ಯದಲ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚಾಗಿದೆ. ಮಾಡಿಲ್ಲ ಅಂದ್ರೂ ಕ್ಲಿನಿಕ್ ಇಟ್ಕೊಂಡು ಚಿಕಿತ್ಸೆ ನೀಡಿ ಅಮಾಯಕರ ಜೀವನದ ಜೊತೆ ಆಟ ಆಡಲಾಗುತ್ತಿದೆ. ಹೀಗಾಗಿ ಆರೋಗ್ಯ ಇಲಾಖೆ ನಕಲಿ ವೈದ್ಯರ ಮೇಲೆ ಹದ್ದಿನ ಕಣ್ಣಿಟ್ಟಿದೆ. ಸದ್ಯ ಕಲಬುರಗಿ ಜಿಲ್ಲೆಯ ಹಳ್ಳಿ ಹಳ್ಳಿಗಳಲ್ಲಿ ನಕಲಿ ವೈದ್ಯರ ಹಾವಳಿ ಮಿತಿ ಮೀರಿದೆ. ಹೀಗಾಗಿ ಆರೋಗ್ಯ ಇಲಾಖೆ ಅಧಿಕಾರಿಗಳು ಖಚಿತ ಮಾಹಿತಿ ಮೇರೆಗೆ ನಕಲಿ ವೈದ್ಯರ ಕ್ಲಿನಿಕ್ಗಳ ಮೇಲೆ ದಾಳಿ ನಡೆಸಿದ್ದು 109 ನಕಲಿ ವೈದ್ಯರು ಪತ್ತೆಯಾಗಿದ್ದಾರೆ. ವೈದ್ಯರು
ಕಲಬುರಗಿ ಜಿಲ್ಲೆಯಯಲ್ಲಿ ಅನುಮತಿ ಪಡೆಯದೆ ರಾಜಾರೋಷವಾಗಿ ಜನರಿಗೆ ಚಿಕಿತ್ಸೆ ನೀಡಿ ಜನರ ಜೀವನದ ಜೊತೆ ಆಟ ಆಡುತ್ತಿದ್ದಾರೆ. ಈ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಆರೋಗ್ಯ ಇಲಾಖೆ, ತಹಶೀಲ್ದಾರ್, ಪೊಲೀಸ್ ಟೀಂ ರಚಿಸಿಕೊಂಡು ಕಾರ್ಯಾಚರಣೆ ನಡೆಸಲಾಗಿದೆ. ಈ ವೇಳೆ 109 ನಕಲಿ ವೈದ್ಯರು ಪತ್ತೆಯಾಗಿದ್ಧಾರೆ. ಅಧಿಕಾರಿಗಳು 43 ಕ್ಲಿನಿಕ್ಗಳನ್ನ ಬಂದ್ ಮಾಡಿಸಿದ್ದಾರೆ. KPME ಅನುಮತಿ ಪಡೆಯದೆ ಚಿಕಿತ್ಸೆ ನೀಡ್ತಿರುವ ಕ್ಲಿನಿಕ್ಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ನೋಟಿಸ್ ನೀಡಿದ ಮೇಲೂ ಅನುಮತಿ ಪಡೆಯದಿದ್ರೆ ಕ್ರಿಮಿನಲ್ ಕೇಸ್ ದಾಖಲಿಸುವ ಎಚ್ಚರಿಕೆಯನ್ನು ಅಧಿಕಾರಿಗಳು ನೀಡಿದ್ದಾರೆ. ವೈದ್ಯರು
ಇದನ್ನು ಓದಿ : ಬರ ಪರಿಹಾರ, ಕೇಂದ್ರದ ತಾರತಮ್ಯ ನೀತಿ| ದೆಹಲಿಯಲ್ಲಿ ಫೆಬ್ರವರಿ 7 ರಂದು ಕಾಂಗ್ರೆಸ್ ಪ್ರತಿಭಟನೆ
ನಕಲಿ ವೈದ್ಯರು ಹುಟ್ಟೋದು ಹೇಗೆ?
ಈ ನಕಲಿ ವೈದ್ಯರು ಹುಟ್ಟೋದು ಹೇಗೆ ಎಂಬ ಚರ್ಚೆಗಳು ಆಗಾಗ ಕೇಳಿ ಬರುತ್ತವೆ. ಅದು ಹೇಗೆಂದರೆ,ಯಾವುದಾದರೂ ವೃತ್ತಿಪರ ಡಾಕ್ಟರ್ ಗಳ ಕ್ಲಿನಿಕ್ ಗಳಲ್ಲಿ ಸಹಾಯಕರಾಗಿ (ಗ್ರಾಮಗಳಲ್ಲಿ ಜನ ಅವರನ್ನು ಕಂಪೌಂಡರ್ ಅಂತ ಕರೆಯುತ್ತಾರೆ) ಕೆಲಸ ಮಾಡುತ್ತಾ ಚುಚ್ಚುಮದ್ದು ನೀಡುವುದು ಕಲಿಯುವುದರ ಜೊತೆಗೆ, ಸಾಮಾನ್ಯ ಜ್ವರ, ಶೀತ, ಮೈಕೈನೋವುಗಳಿಗೆ ವೈದ್ಯರು ಪ್ರಿಸ್ಕ್ರೈಬ್ ಮಾಡುವ ಔಷಧಿಗಳ ಬಗ್ಗೆ ತಿಳಿದುಕೊಳ್ಳುತ್ತಾರೆ.
ಅಲ್ಲಿಂದ ಹೊರಬಂದು ಒಂದು ಆರ್‌ಎಂಪಿ (RMP) ಸರ್ಟಿಫೀಕೇಟ್ ತರಿಸಿಕೊಳ್ಳುತ್ತಾರೆ. ಇವು ರೂ. 1,500-2,000 ಕೊಟ್ಟರೆ ಸಿಗುವ ಪ್ರಮಾಣ ಪತ್ರಗಳು. ಅದು ಸಿಕ್ಕ ಮೇಲೆ ತಮ್ಮ ಹೆಸರಿನ ಹಿಂದೆ ಡಾಕ್ಟರ್ ಮತ್ತು ಮುಂದೆ ಆರ್‌ಎಂಪಿ ಅಂತ ಬರೆಸಿದ ಬೋರ್ಡನ್ನು ತೂಗು ಹಾಕ್ಕೊಂಡು ‘ವೈದ್ಯಕೀಯ ವೃತ್ತಿ’ ಶುರುಮಾಡುತ್ತಾರೆ. ಇಂಥ 43 ಕ್ಲಿನಿಕ್ ಗಳ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು ಅವುಗಳನ್ನು ಸೀಲ್ ಮಾಡಿದ್ದಾರೆ.
ಇದನ್ನು ನೋಡಿ : ಚರ್ಚೆ : ಮಧ್ಯಂತರ ಬಜೆಟ್ : ಚುನಾವಣೆ ಮೇಲೆ ಕಣ್ಣು