ಬೆಂಗಳೂರು: ಬೇನಾಮಿ ಬಿಪಿಒ ಕಂಪನಿಯೊಂದು ಷೇರು ಮಾರುಕಟ್ಟೆನಲ್ಲಿ ಹೂಡಿಕೆ ಮಾಡುವಂತೆ ಕರೆ ಮಾಡಿ ಸಾರ್ವಜನಿಕರಿಗೆ ವಂಚನೆ ಮಾಡುತ್ತಿರುವ ಘಟನೆ ಬೆಳಕಿಗೆ ಬಂದಿದ್ದು, ಹುಳಿಮಾವು ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ. ಬಿಪಿಒ
ಬಿಹಾರ ಮೂಲದ ಜಿತೇಂದ್ರಕುಮಾರ್ ಅಲಿಯಾಸ್ ಜೀತು ಮತ್ತು ಚಂದನ್ ಕುಮಾರ್ ಬಂಧಿತರು. ದಾಳಿ ವೇಳೆ ಏಳು ಯುವತಿಯರು ಮತ್ತು 8 ಯುವಕರನ್ನು ವಶಕ್ಕೆ ಪಡೆಯಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಆತ್ಮೀಯ ವಿಭಾಗ ಡಿಸಿಪಿ ಸಾರಾ ಮಾಹಿತಿ ನೀಡಿದ್ದಾರೆ.
ಕಿಂಗ್‌ಪಿನ್‌ಗಳಾದ ಜಿತೇಂದ್ರ ಮತ್ತು ಚಂದನ್ ಸೇರಿಕೊಂಡು ಸೈಬರ್ ವಂಚನೆ ಉದ್ದೇಶಕ್ಕೆ ವರ್ಷದ ಹಿಂದೆ ಬೇನಾಮಿ ಕಾಲ್ ಸೆಂಟರ್ ತೆರೆದಿದ್ದರು. ಹುಳಿಮಾವು ಬಸ್ ನಿಲ್ದಾಣ ಸಮೀಪದಲ್ಲಿ ಫಿನಿಕ್ಸ್ ಇಂಟೀರಿಯರ್ಸ್ ಡಿಸೈನಿಂಗ್ ಕಚೇರಿ ಎಂದು ಬೋರ್ಡ್ ಹಾಕಿಕೊಂಡು ಒಳಗೆ ಕಾಲ್ ಸೆಂಟರ್ ನಡೆಸುತ್ತಿದ್ದರು. ಬಿಪಿಒ
ಇದನ್ನೂ ಓದಿ : ಮಂಗಳೂರು| ಇಡಿ ಹೆಸರಿನಲ್ಲಿ ದಾಳಿ; 30 ಲಕ್ಷ ರೂ. ಕದ್ದು ಪರಾರಿ
ಬಿಎ, ಬಿಕಾಂ ಓದಿರುವ 20ಕ್ಕೂ ಅಧಿಕ ಯುವಕ, ಯುವತಿಯರನ್ನು ನೇಮಕ ಮಾಡಿಕೊಂಡಿದ್ದರು. ಕಂಪ್ಯೂಟರ್, ಲ್ಯಾಪ್‌ಟಾಪ್ ಮತ್ತು ಮೊಬೈಲ್ ಪೆನ್‌ಗಳನ್ನು ಇಟ್ಟುಕೊಂಡಿದ್ದರು. ಅಕ್ರಮವಾಗಿ ಸಾರ್ವಜನಿಕರ ಮೊಬೈಲ್ ನಂಬರ್ ಪಡೆದು ನೌಕರರ ಕಡೆಯಿಂದ ಕರೆ ಮಾಡಿಸಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಕಡಿಮೆ ಅವಧಿಯಲ್ಲಿ ಶೇ.30ರಿಂದ 50 ಲಾಭಾಂಶ ಸಿಗಲಿದೆ ಎಂದು ಆಸೆ ಹುಟ್ಟಿಸುತ್ತಿದ್ದರು.
ಬಣ್ಣ ಬಣ್ಣದ ಮಾತುಗಳನ್ನು ಆಡಿ ಅಮಾಯಕ ಜನರನ್ನು ಮರಳು ಮಾಡಿ ಅವರಿಂದ ಹಣ ಹೂಡಿಕೆ ಮಾಡಿಸಿಕೊಂಡು ಕೊನೆಗೊಂದು ದಿನ ಸಂಪರ್ಕ ಕಡಿತ ಮಾಡಿಕೊಂಡು ವಂಚಿಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಹುಳಿಮಾವು ಪೊಲೀಸರು ಕಾಲ್ ಸೆಂಟರ್ ಮೇಲೆ ಶುಕ್ರವಾರ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. 5 ಲ್ಯಾಪ್‌ಟಾಪ್, 30 ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ.
ಕಳೆದೊಂದು ವರ್ಷದಿಂದ ಎಷ್ಟು ಮಂದಿಗೆ ವಂಚನೆ ಮಾಡಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕಬೇಕಾಗಿದೆ. ಬಂಧಿತರ ಬ್ಯಾಂಕ್ ಖಾತೆಗಳ ವಿವರ ಮತ್ತು ಕರೆಗಳ ವಿಶ್ಲೇಷಣೆ ಮಾಡಲಾಗುತ್ತಿದೆ. ಸದ್ಯ ಇಬ್ಬರನ್ನು ಬಂಧಿಸಿದ್ದು, ತನಿಖೆ ವೇಳೆ ಉಳಿದವರ ಪಾತ್ರ ಕಂಡುಬಂದರೆ, ಬಂಧಿಸಿ ಜೈಲಿಗೆ ಕಳುಹಿಸುವುದಾಗಿ ಸಾರಾ ಾತಿಮಾ ಮಾಹಿತಿ ನೀಡಿದ್ದಾರೆ. ಹುಳಿಮಾವು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ನೋಡಿ : ಸೈಬರ್ ಕಳ್ಳರ ಬಗ್ಗೆ ಎಚ್ಚರವಿರಲಿ Janashakthi Media #Cybercrime #Cyberfraud #CyberPolice