ಫ್ಯಾಕ್ಟ್‌ಚೆಕ್ | ತಿರುಪತಿ ದೇವಸ್ಥಾನದ ಅರ್ಚಕನ ಮನೆಯಲ್ಲಿ ಸಿಕ್ಕ ಚಿನ್ನಾಭರಣ ಎಂದು ಸಂಬಂಧವಿಲ್ಲದ ಚಿತ್ರ ವೈರಲ್

ತಿರುಪತಿ ಬಾಲಾಜಿ ದೇವಸ್ಥಾನದ ಅರ್ಚಕ ಇ.ಡಿ. ಕೈಗೆ ಸಿಕ್ಕಿಹಾಕಿಕೊಂಡು 128 ಕೆಜಿ ಬಂಗಾರ, 150 ಕೆಜೆ ಬೆಳ್ಳಿ ಸೇರಿದಂತೆ 70 ಕೋಟಿ ಬೆಳೆಬಾಳುವ ವಜ್ರಗಳು ದೊರೆತಿವೆ ಎಂದು ಪ್ರತಿಪಾದಿಸಿ ಚಿತ್ರವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಈ ಬಗ್ಗೆ ವ್ಯಕ್ತಿಯೊಬ್ಬರ ಚಿತ್ರ ಹಾಗೂ ಚಿನ್ನಾಭರಣ ಮತ್ತು ಹಣದ ಕಂತೆಯನ್ನು ಜೋಡಿಸಿಟ್ಟಿರುವ ಚಿತ್ರದ ಕೊಲಾಜ್ ಒಂದನ್ನು ಕೂಡಾ ಹಂಚಲಾಗುತ್ತಿದೆ.

ವೈರಲ್ ಸಂದೇಶದಲ್ಲಿ, “ಇವನು ತಿರುಪತಿ ಬಾಲಾಜಿ ದೇವಸ್ಥಾನದ. ಅರ್ಚಕ. E.D. ಅಧಿಕಾರಿ ಕೈಗೆ ಸಿಕ್ಕಿ ಹಾಕಿ ಕೊಂಡಾಗ ಸಹಜವಾಗಿ ಸಿಕ್ಕ 128 ಕೆಜಿ ಬಂಗಾರ. 150 ಕೆಜಿ ಬೆಳ್ಳಿ.150 ಕೋಟಿ ನಗದು. 70 ಕೋಟಿಗೆ ಬೆಳೆ ಬಾಳುವ ವಜ್ರಗಳು ದೊರೆತಿವೆ. ನೀವು ಕೊಟ್ಟ ಭಕ್ತಿಯ ಕಾಣಿಕೆಯ ದುರುಪಯೋಗ. ಹಸಿದವರ ಹೊಟ್ಟೆಗೆ ಒಂದಿಷ್ಟು ಅನ್ನ ನೀಡುವುದರ ಮೂಲಕ ಸೇವೆ ಮಾಡಿ, ಅದುವೇ ನಾವು ಭಗವಂತನಿಗೆ ಸಲ್ಲಿಸುವ ನೈಜ್ಯ ಸೇವೆ. ಆಗ ಭಗವಂತನಿಗೆ ತೃಪ್ತಿ” ಎಂದು ಹೇಳಲಾಗಿದೆ. ಇದನ್ನೂ ಓದಿ: ಫ್ಯಾಕ್ಟ್‌ಚೆಕ್ | ಚರಕ ಪೂಜೆಯ ಅಣಕು ನರಬಲಿ ಆಚರಣೆ ‘ನಿಜ’ ಎಂಬಂತೆ ವೈರಲ್!

ಇದನ್ನು ಹಲವಾರು ಜನರು ಫೇಸ್‌ಬುಕ್ ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇದೇ ಚಿನ್ನಾಭಾರಣದ ಚಿತ್ರದೊಂದಿಗೆ ಇದೇ ರೀತಿಯ ಸುದ್ದಿಯೊಂದು ಈ ಹಿಂದೆ ಕೂಡಾ  ವೈರಲ್ ಆಗಿತ್ತು. ಆಗ ವಿಡಿಯೊವೊಂದನ್ನು ಹರಡಿ ತಿರುಪತಿ ದೇವಸ್ಥಾನದ ಮಾಜಿ ಟ್ರಸ್ಟಿ ಜೆ. ಸೇಕರ್‌ ರೆಡ್ಡಿ ಅವರಿಂದ ವಶಪಡಿಸಿಕೊಂಡಿರುವ ಚಿನ್ನಾಭರಣಗಳು ಎಂದು ಪ್ರತಿಪಾದಿಸಿ ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಲಾಗಿತ್ತು. ಅವರುಗಳ ಆರ್ಕೈವ್ ಲಿಂಕ್‌ ಅನ್ನು ಇಲ್ಲಿ ವೀಕ್ಷಿಸಿ.

 

ಈ ಬಗ್ಗೆ ಫ್ಯಾಕ್ಟ್‌ಚೆಕ್ ಮಾಡುವಂತೆ ಜನಶಕ್ತಿ ಮೀಡಿಯಾದ +916361984022 ನಂಬರ್‌ಗೆ ವಿನಂತಿಗಳು ಬಂದಿವೆ. ಜನಶಕ್ತಿ ಮೀಡಿಯಾದ ಫ್ಯಾಕ್ಟ್‌ಚೆಕ್ ಗ್ರೂಪ್‌ಗೆ ಸೇರಿಲು ಇಲ್ಲಿ ಕ್ಲಿಕ್ ಮಾಡಿ. ಇದನ್ನೂ ಓದಿ: ಫ್ಯಾಕ್ಟ್‌ಚೆಕ್ | ಮುಸ್ಲಿಂ ಆಧ್ಯಾತ್ಮಿಕ ನಾಯಕನನ್ನು ಭಯೋತ್ಪಾದಕ ಬೆಂಬಲಿಗ ಎಂದು ಸುಳ್ಳು ಹೇಳಿದ ಬಿಜೆಪಿ ಶಾಸಕ ಯತ್ನಾಳ್

ಫ್ಯಾಕ್ಟ್‌‌ಚೆಕ್‌

ವಾಸ್ತವದಲ್ಲಿ ಚಿತ್ರದಲ್ಲಿ ಇರುವುದು ತಿರುಪತಿ ದೇವಾಲಯದ ಆಡಳಿತ ಮಂಡಳಿ ಸದಸ್ಯರಾಗಿದ್ದ ಜೆ. ಶೇಕರ್ ರೆಡ್ಡಿ ಎಂಬವರಾಗಿದ್ದಾರೆ. ಆದರೆ ಚಿತ್ರದಲ್ಲಿರುವ ಚಿನ್ನಾಭರಣಕ್ಕೂ ತಿರುಪತಿ ದೇವಸ್ಥಾನಕ್ಕೂ ಯಾವುದೇ ಸಂಬಂಧವೇ ಇಲ್ಲ. ಚಿತ್ರದಲ್ಲಿ ಇರುವುದು  ಈ ಬಗ್ಗೆ ನಾವು ರಿವರ್ಸ್ ಸರ್ಚ್ ಮೂಲಕ ಹುಡುಕಾಡಿದಾಗ, ಅದು 2021ರಲ್ಲಿ ತಮಿಳುನಾಡಿನಲ್ಲಿ ನಡೆದ ಚಿನ್ನಾಭರಣಗಳ ಅಂಗಡಿಯಿಂದ ನಡೆದ ದರೋಡೆ ಪ್ರಕರಣದಲ್ಲಿ ಪೊಲೀಸರು ಆರೋಪಿಗಳಿಂದ ಮರುವಶಪಡಿಸಿರುವ ಚಿನ್ನಾಭರಣಗಳ ಚಿತ್ರವಾಗಿದೆ ಎಂದು ತಿಳಿದು ಬಂದಿದೆ.

ಈ ಘಟನೆಯನ್ನು ತಮಿಳು ಮಾಧ್ಯಮ ಜಯಾ ಪ್ಲಸ್‌ ಡಿಸೆಂಬರ್‌ 22, 2021 ರಂದು ವರದಿ ಮಾಡಿತ್ತು. ವರದಿಯ ಪ್ರಕಾರ, ತಮಿಳುನಾಡಿನ ವೆಲ್ಲೂರಿನಲ್ಲಿ ಇರುವ ಜೋಸ್‌ ಅಲುಕ್ಕಾಸ್‌ ಶೋರೂಂನಿಂದ ಈ ದರೋಡೆ ನಡೆದಿತ್ತು. ಅದನ್ನು ದರೋಡೆಕೋರದಿಂದ ಪೊಲೀಸರು ಮರು ವಶಪಡಿಸಿಕೊಂಡಿರುವ ವಿಡಿಯೊ ಇದಾಗಿದೆ. ಇದನ್ನು ಹಲವಾರು ತಮಿಳು ಸುದ್ದಿ ವೆಬ್‌ಸೈಟ್‌ಗಳು ತಮ್ಮ ಯೂಟ್ಯೂಬ್‌ ಚಾನೆಲ್‌ಗಳು ಪ್ರಸಾರ ಮಾಡಿವೆ. ಅವುಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. ಇದನ್ನೂ ಓದಿ: ಫ್ಯಾಕ್ಟ್‌ಚೆಕ್ | ಕ್ಲಿಪ್ ಮಾಡಿದ ವಿಡಿಯೊ ಬಳಸಿ, ‘ರಾಹುಲ್ ಗಾಂಧಿ ಭಾರತ ಮಾತೆಗೆ ಅವಮಾನಿಸಿದ್ದಾರೆ’ ಎಂದು ಸುಳ್ಳು ಹೇಳಿದ ಬಿಜೆಪಿ

ಈ ದರೋಡೆಯ ಘಟನೆಯು ಡಿಸೆಂಬರ್ 14, 2021 ರ ಮಧ್ಯರಾತ್ರಿ ವೆಲ್ಲೂರಿನ ಜೋಸ್ ಅಲುಕ್ಕಾಸ್ ಶೋರೂಮ್‌ನಿಂದ 15 ಕೆಜಿ ಚಿನ್ನ ಮತ್ತು ಸುಮಾರು 500 ಗ್ರಾಂ ವಜ್ರಗಳನ್ನು ದರೋಡೆ ಮಾಡಲಾಗಿತ್ತು. ತನಿಖೆಯ ನಂತರ ವೆಲ್ಲೂರು ಪೊಲೀಸರು ವೆಲ್ಲೂರಿನ ಸ್ಮಶಾನದಲ್ಲಿ ಹೂತಿಟ್ಟಿದ್ದ ಎಲ್ಲಾ ಕದ್ದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಜೋಸ್ ಅಲುಕ್ಕಾಸ್ ಶೋರೂಂನಿಂದ ಚಿನ್ನ ಮತ್ತು ವಜ್ರಗಳನ್ನು ದರೋಡೆ ಮಾಡಿದ್ದ ಆರೋಪಿ ಡೀಕಾರಾಮನ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಹೀಗಾಗಿ ಈ ಚಿನ್ನಾಭರಣದ ಚಿತ್ರಕ್ಕೂ ತಿರುಪತಿ ದೇವಾಲಯಕ್ಕೂ ಯಾವುದೆ ಸಂಬಂಧವಿಲ್ಲ ಎಂದು ಹೇಳಬಹುದಾಗಿದೆ.

ಆದರೆ 2016ರಲ್ಲಿ ತಿರುಪತಿ ದೇವಾಲಯದ ಆಡಳಿತ ಮಂಡಳಿ ಸದಸ್ಯರಾಗಿದ್ದ ಜೆ. ಶೇಕರ್ ರೆಡ್ಡಿ ಅವರ ಮನೆಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ₹100 ಕೋಟಿ ನಗದು ಹಾಗೂ 120 ಕೆಜಿ ಚಿನ್ನಾಭರಣ ವಶಪಡಿಸಿಕೊಂಡಿದ್ದರು. ಈ ಐಟಿ ದಾಳಿಗಳ ನಂತರ ಆಂಧ್ರಪ್ರದೇಶ ಸರ್ಕಾರ ಸೇಕರ್ ರೆಡ್ಡಿ ಅವರನ್ನು ಟಿಟಿಡಿ ಸದಸ್ಯತ್ವದಿಂದ ತೆಗೆದುಹಾಕಿತ್ತು. ಇದನ್ನೂ ಓದಿ: ಫ್ಯಾಕ್ಟ್‌ಚೆಕ್ | ಹಿಂದೂಗಳ ವ್ಯಾಪಾರ ಬಹಿಷ್ಕರಿಸುವಂತೆ ಬೆಂಗಳೂರಿನಲ್ಲಿ ಮುಸ್ಲಿಮರು ಕರೆ ನೀಡಿಲ್ಲ

ಆದರೆ, ಸಾಕ್ಷ್ಯಾಧಾರಗಳ ಕೊರತೆಯ ಆಧಾರದ ಮೇಲೆ 2020 ರ ಸೆಪ್ಟೆಂಬರ್‌ನಲ್ಲಿ ಜೆ. ಶೇಕರ್ ರೆಡ್ಡಿ ಅವರು  ವಿರುದ್ಧ ಸಿಬಿಐ ದಾಖಲಿಸಿದ ಪ್ರಕರಣವನ್ನು ವಿಶೇಷ ನ್ಯಾಯಾಲಯವು ವಜಾಗೊಳಿಸಿತ್ತು. ಪ್ರಕರಣವನ್ನು ವಜಾ ಮಾಡಿದ ನಂತರ ಶೇಕರ್ ರೆಡ್ಡಿ ಮತ್ತೇ ತಿರುಪತಿ ಆಡಳಿತ ಮಂಡಳಿಗೆ ಸೇರಿದ್ದರು. ಆದಾಗ್ಯೂ, ಆಗಸ್ಟ್ 2021 ರಲ್ಲಿ ರಚಿತವಾದ ಹೊಸ ಮಂಡಳಿಯಲ್ಲಿ ಅವರನ್ನು ಸೇರಿಸಲಾಗಿಲ್ಲ.

ಒಟ್ಟಿನಲ್ಲಿ ಹೇಳುವುದಾದರೆ, ತಿರುಪತಿ ಬಾಲಾಜಿ ದೇವಸ್ಥಾನದ ಅರ್ಚಕ ಎಂದು ಹರಿದಾಡುತ್ತಿರುವ ಚಿತ್ರದಲ್ಲಿರುವ ವ್ಯಕ್ತಿ ಜೆ. ಶೇಕರ್ ರೆಡ್ಡಿ ಆಗಿದ್ದು ಅವರು ಈ ಹಿಂದೆ ತಿರುಪತಿ ದೇವಾಲಯದ ಆಡಳಿತ ಮಂಡಳಿ ಸದಸ್ಯರಾಗಿದ್ದರು. ಆದರೆ ಅದೇ ಕೊಲಾಜ್‌ನಲ್ಲಿ ಇರುವ ಚಿನ್ನಾಭರಣದ ಚಿತ್ರಕ್ಕೂ,ಅವರಿಗೂ, ತಿರುಪತಿಗೂ ಯಾವುದೆ ಸಂಬಂಧವಿಲ್ಲ. ಆ ಚಿತ್ರ ತಮಿಳುನಾಡಿದ್ದಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವುದು ಸುಳ್ಳಾಗಿದೆ.


ಯಾವುದೆ ವಿಡಿಯೊ, ಚಿತ್ರ ಅಥವಾ ಸುದ್ದಿಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚುವ ಮುಂಚೆ ಅದು ಸತ್ಯವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ. ಅವುಗಳ ಬಗ್ಗೆ ನಿಮಗೆ ಸಂಶಯವಿದ್ದರೆ ಜನಶಕ್ತಿ ಮೀಡಿಯಾದ +916361984022 ಈ ನಂಬರ್‌ಗೆ ಕಳುಹಿಸಿ. ನಾವು ಅದನ್ನು ಫ್ಯಾಕ್ಟ್‌ಚೆಕ್ ಮಾಡುತ್ತೇವೆ.


ವಿಡಿಯೊ ನೋಡಿ: ಮಹಾಧರಣಿ : ದುಡಿಯುವ ಜನರ ಹೋರಾಟದ ಹಾಡುಗಳು| ಕ್ರಾಂತಿಯಾಗಲಿ ಈ ನೆಲದ ಕ್ರಾಂತಿಯಾಗಲಿ Janashakthi Media

Donate Janashakthi Media

Leave a Reply

Your email address will not be published. Required fields are marked *