ಆಡಳಿತಕ್ಕೆ ಕಳಂಕ ತರುವ ಋಣಾತ್ಮಕ ಸುದ್ದಿಗಳ ಫ್ಯಾಕ್ಟ್‌ಚೆಕ್‌ ಮಾಡಿ: ಡಿಸಿಗಳಿಗೆ ಯುಪಿ ಸರ್ಕಾರ ಪತ್ರ

ಋಣಾತ್ಮಕ

ಲಕ್ನೋ: ರಾಜ್ಯ ಸರ್ಕಾರದ “ಇಮೇಜಿಗೆ ಕಳಂಕ” ತರುವ ಋಣಾತ್ಮಕ ಸುದ್ದಿಗಳನ್ನು ಜಿಲ್ಲಾಡಳಿತವು ಫ್ಯಾಕ್ಟ್‌ಚೆಕ್‌ ಮಾಡಬೇಕಾಗುತ್ತದೆ ಎಂದು ಉತ್ತರ ಪ್ರದೇಶ ಸರ್ಕಾರ ಶುಕ್ರವಾರ ನೀಡಿರುವ ಪತ್ರದಲ್ಲಿ ರಾಜ್ಯದ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ. ವರದಿಗಳಲ್ಲಿ ”ತಿರುಚಿದ” ಅಥವಾ “ಸರಿಯಾಗಿಲ್ಲದ ಸಂಗತಿಗಳನ್ನು” ಪ್ರಸ್ತುತಪಡಿಸಿದರೆ ಮಾಧ್ಯಮಗಳಿಂದ ಸ್ಪಷ್ಟೀಕರಣ ಪಡೆಯಬೇಕು ಎಂದು ಪತ್ರವೂ ಅಧಿಕಾರಿಗಳಿಗೆ ಹೇಳಿದೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಪ್ರಧಾನ ಕಾರ್ಯದರ್ಶಿ ಸಂಜಯ್ ಪ್ರಸಾದ್ ಅವರು ಹೊರಡಿಸಿದ ಪತ್ರದಲ್ಲಿ ಎಲ್ಲಾ 18 ವಿಭಾಗೀಯ ಆಯುಕ್ತರು, 75 ಜಿಲ್ಲಾಧಿಕಾರಿಗಳು ಮತ್ತು ಇತರ ಇಲಾಖಾ ಮುಖ್ಯಸ್ಥರು “ಋಣಾತ್ಮಕ ಸುದ್ದಿಗಳ ಪ್ಯಾಕ್ಟ್‌ಚೆಕ್ ಪರಿಶೀಲಿಸುವಂತೆ” ಸೂಚಿಸಿದ್ದಾರೆ.

ಇದನ್ನೂ ಓದಿ: ಗೋಡ್ಸೆ ವೈಭವೀಕರಣ: ಸಾರಿಗೆ ಇಲಾಖೆಯ ಮೆನ್ಷನ್ ಮಾಡಿ ಸುಮ್ಮನಾಯ್ತೆ ಬೆಂಗಳೂರು ನಗರ ಪೊಲೀಸ್‌?

ಈ “ಋಣಾತ್ಮಕ ಸುದ್ದಿಗಳ” ಸಾಪ್ತಾಹಿಕ ವರದಿಯನ್ನು ರಾಜ್ಯದ ಕುಂದುಕೊರತೆ ನಿವಾರಣಾ ವ್ಯವಸ್ಥೆಯಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ ಮತ್ತು ತನಿಖೆಗಾಗಿ ರಾಜ್ಯದ ಅಧಿಕಾರಿಗಳೊಂದಿಗೆ ಹಂಚಿಕೊಳ್ಳಲಾಗುವುದು ಎಂದು ಪತ್ರವು ಹೇಳಿದೆ.

ವಾರದ ವರದಿಗಳನ್ನು ವಿಭಾಗೀಯ ಆಯುಕ್ತರು, ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳು ಮತ್ತು ಇಲಾಖೆಗಳ ಮುಖ್ಯಸ್ಥರೊಂದಿಗೆ “ತನಿಖೆ”ಗಾಗಿ ಹಂಚಿಕೊಳ್ಳಲಾಗುವುದು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ರಾಜ್ಯದ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ನಿರ್ದೇಶಕರು ವಾರದ ವರದಿಗಳನ್ನು ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕಗಳ ಪ್ರಧಾನ ಕಾರ್ಯದರ್ಶಿಗೆ ಕಳುಹಿಸಬೇಕಾಗುತ್ತದೆ.

“ಪತ್ರಿಕೆಗಳು ಮತ್ತು ಮಾಧ್ಯಮಗಳಲ್ಲಿ ಪ್ರಕಟವಾದ ‘ನಕಾರಾತ್ಮಕ’ ವರದಿಗಳ ಬಗ್ಗೆ ರಾಜ್ಯದ ಮಾಹಿತಿ ಇಲಾಖೆಯು ಈಗಾಗಲೇ ಮಾಹಿತಿಯನ್ನು ಸಂಗ್ರಹಿಸುತ್ತಿದೆ. ಈ ನಕಾರಾತ್ಮಕ ಸುದ್ದಿಗಳ ತ್ವರಿತ ಫ್ಯಾಕ್ಟ್‌ಚೆಕ್‌ ಅಗತ್ಯ” ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಕ್ರಿಮಿನಲ್‌ ಮಾನಷ್ಟ ಪ್ರಕರಣ:ಬಾಂಬೆ ಹೈಕೋರ್ಟ್‌ಗೆ ಮೊರೆಹೋದ ರಾಹುಲ್‌ ಗಾಂಧಿ

“ತಿರುಚಿದ ಅಥವಾ ನಿಖರವಲ್ಲದ ಸಂಗತಿಗಳನ್ನು ಆಧರಿಸಿ ಯಾವುದೇ ಪತ್ರಿಕೆ ಅಥವಾ ಮಾಧ್ಯಮವು ರಾಜ್ಯ ಸರ್ಕಾರದ ಪ್ರತಿಷ್ಠೆಯನ್ನು ಹಾಳುಮಾಡಲು ಪ್ರಯತ್ನಿಸಿದೆ ಎಂದು ಕಂಡುಬಂದರೆ… , ಸಂಬಂಧಪಟ್ಟ ಜಿಲ್ಲಾಧಿಕಾರಿಗಳು ಮಾಧ್ಯಮ ಗುಂಪಿನ ವ್ಯವಸ್ಥಾಪಕರಿಂದ ಸ್ಪಷ್ಟೀಕರಣವನ್ನು ಪಡೆಯಬೇಕು” ಎಂದು ಪತ್ರದಲ್ಲಿ ಬರೆಯಲಾಗಿದೆ.

ಆದಿತ್ಯನಾಥ್ ಸರ್ಕಾರವು ಈ ಹಿಂದಿನಿಂದಲೂ ಮಾಧ್ಯಮಗಳ ಹಿಡಿತಕ್ಕೆ ನಿರಂತರ ಪ್ರಯತ್ನಿಸುತ್ತಿದೆ. 2020 ರಲ್ಲಿ ಹತ್ರಾಸ್ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ವರದಿ ಮಾಡಲು ಹೊರಟಿದ್ದ ಪತ್ರಕರ್ತ ಸಿದ್ದಿಕ್ ಕಪ್ಪನ್ ಅವರನ್ನು ಯುಪಿ ಪೊಲೀಸರು ಬಂಧಿಸಿದ್ದರು. ಅವರ ವಿರುದ್ಧ ಯುಎಪಿಎ ಪ್ರಕರಣ ದಾಖಲಿಸಿ ಬಂಧಿಸಿದ್ದ ಸರ್ಕಾರವು, ಸುಪ್ರೀಂ ಕೋರ್ಟ್ ಅವರಿಗೆ ಜಾಮೀನು ನೀಡುವವರೆಗೆ ಬಂಧನದಲ್ಲಿಟ್ಟಿತ್ತು. ಇದರಿಂದಾಗಿ ಸಿದ್ದೀಕ್ ಅವರು ಸುಮಾರು 800 ದಿನಗಳ ಕಾಲ ಜೈಲಿನಲ್ಲಿದ್ದರು.

ವಿಡಿಯೊ ನೋಡಿ: ಚೇಳುಗಳ ಜಾತ್ರೆ : ಚೇಳುಗಳ ಜೊತೆ ಜನರ ಸಂಭ್ರಮ, ಉಳಿಯಬೇಕಿದೆ ಚೇಳಿನ ಸಂತತಿ Janashakthi Media

Donate Janashakthi Media

Leave a Reply

Your email address will not be published. Required fields are marked *