ಫ್ಯಾಕ್ಟ್‌ಚೆಕ್ | ಎಸ್‌ಎಫ್‌ಐ ನಾಯಕನ ಚಿತ್ರ ಬಳಸಿ ಸಂಸತ್ ದಾಳಿಯ ಆರೋಪಿ ಎಂದು ಬಿಂಬಿಸುತ್ತಿರುವ ಬಿಜೆಪಿ ಐಟಿ ಸೆಲ್

ಮೈಸೂರು ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರ ಪಾಸ್ ಮೂಲಕ ಪ್ರವೇಶ ಪಡೆದು ಡಿಸೆಂಬರ್ 13ರ ಬುಧವಾರದಂದು ಲೋಕಸಭೆಗೆ ದಾಳಿ ಮಾಡಿದ ಮನೋರಂಜನ್ ಡಿ. ಎಂಬ ಆರೋಪಿ ಎಡಪಂಥೀಯ ವಿದ್ಯಾರ್ಥಿ ಸಂಘಟನೆ ಎಸ್‌ಎಫ್‌ಐ ಕಾರ್ಯಕರ್ತ ಎಂದು ಪ್ರತಿಪಾದಿಸಿ ಬಿಜೆಪಿ ಪೇಜ್‌ಗಳು, ಬೆಂಬಲಿಗರು ಸೇರಿದಂತೆ ಹಲವಾರು ಬಲಪಂಥೀಯರು, ಯುವಕನೊಬ್ಬ ಸಭೆಯೊಂದರಲ್ಲಿ ಮಾತನಾಡುತ್ತಿರುವ ಚಿತ್ರವನ್ನು ವ್ಯಾಪಕವಾಗಿ ಹರಡುತ್ತಿದ್ದಾರೆ. ಸಂಸತ್

“SFI ಸಮ್ಮೇಳನದಲ್ಲಿ ‘ಕ್ಷೇತ್ರದ ಪ್ರಜೆ’ಯಾಗಿ ಪಾಸ್ ಪಡೆದು ಕುಕೃತ್ಯ ಎಸಗಿದ ಮನೋರಂಜನ್ !!! ಪ್ರತಾಪ್ ಸಿಂಹರಿಗೆ ಕೆಟ್ಟ ಹೆಸರು ತರುವ ಕೆಲಸ ಬಿಟ್ಟುಬಿಡಿ ಕಾಂಗ್ರೆಸಿಗರೇ, ಕಮ್ಮಿನಿಷ್ಟರೇ ..‌ !!!” ಎಂಬ ಸಂದೇಶದೊಂದಿಗೆ ಹಲವಾರು ಜನರು ಈ ಚಿತ್ರವನ್ನು ವೈರಲ್ ಮಾಡುತ್ತಿದ್ದಾರೆ. ಜೊತೆಗೆ ಬಿಜೆಪಿಯ ಹಲವಾರು ಫೇಸ್‌ಬುಕ್ ಪೇಜ್‌ಗಳು ಇದನ್ನು ಹರಡುತ್ತಿದೆ. ಸಂಸತ್ ಇದನ್ನೂ ಓದಿ: ಫ್ಯಾಕ್ಟ್‌ಚೆಕ್ | ತಿರುಪತಿ ದೇವಸ್ಥಾನದ ಅರ್ಚಕನ ಮನೆಯಲ್ಲಿ ಸಿಕ್ಕ ಚಿನ್ನಾಭರಣ ಎಂದು ಸಂಬಂಧವಿಲ್ಲದ ಚಿತ್ರ ವೈರಲ್

ಬಹಳ ಮುಖ್ಯವಾಗಿ ಬಿಜೆಪಿ ಜೊತೆಗೆ ಸಂಬಂಧ ಹೊಂದಿರುವ ಪ್ರಶಾಂತ್ ಸಂಬರ್ಗಿ, ಅಜಿತ್ ಶೆಟ್ಟಿ ಎಸ್ ಕಿರಾಡಿ ಎಂಬ ಖಾತೆಗಳು ಸೇರಿದಂತೆ ಬಿಜೆಪಿ ಹಾಗೂ ಪ್ರಧಾನಿ ಮೋದಿ ಅವರ ಹೆಸರಿನಲ್ಲಿ ಇರುವ ಹಲವಾರು ಫೇಸ್‌ಬುಕ್ ಪೇಜ್‌ಗಳು ಕೂಡಾ ಇದನ್ನು ಹಂಚಿಕೊಳ್ಳುತ್ತಿವೆ.

“ಸಂಸತ್ ಮೇಲೆ ದಾಳಿ ಮಾಡಿದ,ಮೈಸೂರಿನ ಅರ್ಬನ್ ನಕ್ಸಲ್,ಕಮ್ಯುನಿಸ್ಟ್ ಖದೀಮ..’ಮನೋರಂಜನ್’ ಇವನೇ” ಎಂಬ ಸಂದೇಶದೊಂದಿಗೆ ಅದೇ ಚಿತ್ರವನ್ನು ಇವರು ವೈರಲ್ ಮಾಡುತ್ತಿದ್ದಾರೆ. ಇದನ್ನೂ ಓದಿ: ಫ್ಯಾಕ್ಟ್‌ಚೆಕ್ | ಲತಾ ಮಂಗೇಶ್ಕರ್ ಅವರ ‘ಜೈ ಭಾರತಿ’ ಹಾಡನ್ನು ಇಂದಿರಾ ಗಾಂಧಿ ತಡೆದಿದ್ದಾರೆಂಬ ಹೇಳಿಕೆಗೆ ಆಧಾರವಿಲ್ಲ

ಈ ಬಗ್ಗೆ ಫ್ಯಾಕ್ಟ್‌ಚೆಕ್ ಮಾಡುವಂತೆ ಜನಶಕ್ತಿ ಮೀಡಿಯಾದ +916361984022 ನಂಬರ್‌ಗೆ ವಿನಂತಿಗಳು ಬಂದಿವೆ. ಜನಶಕ್ತಿ ಮೀಡಿಯಾದ ಫ್ಯಾಕ್ಟ್‌ಚೆಕ್ ಗ್ರೂಪ್‌ಗೆ ಸೇರಿಲು ಇಲ್ಲಿ ಕ್ಲಿಕ್ ಮಾಡಿ.

ಫ್ಯಾಕ್ಟ್‌ಚೆಕ್

ಈ ಬಗ್ಗೆ ನಾವು ಹುಡುಕಾಡಿದಾಗ ಬಿಜೆಪಿ ಬೆಂಬಲಿಗರು ಚಿತ್ರಗಳನ್ನು ಹಂಚಿಕೊಂಡಿರುವ ವ್ಯಕ್ತಿಗೂ, ಸಂಸತ್ ದಾಳಿಗೂ ಯಾವುದೆ ಸಂಬಂಧವಿಲ್ಲ ಎಂದು ನಾವು ಕಂಡುಕೊಂಡಿದ್ದೇವೆ. ಬಿಜೆಪಿ ಬೆಂಬಲಿಗರು ಹಂಚಿಕೊಂಡಿರುವ ವ್ಯಕ್ತಿ ಎಸ್‌ಎಫ್‌ಐ ಮೈಸೂರು ಜಿಲ್ಲೆಯ ಅಧ್ಯಕ್ಷರಾದ ವಿಜಯ ಕುಮಾರ್ ಟಿ. ಎಸ್‌. ಅವರಾಗಿದ್ದಾರೆ.  ಇದನ್ನೂ ಓದಿ: ಫ್ಯಾಕ್ಟ್‌ಚೆಕ್ | ಚರಕ ಪೂಜೆಯ ಅಣಕು ನರಬಲಿ ಆಚರಣೆ ‘ನಿಜ’ ಎಂಬಂತೆ ವೈರಲ್!

2022ರ ಸೆಪ್ಟೆಂಬರ್ 8 ರಂದು ಎಸ್‌ಎಫ್‌ಐನ 2ನೇ ಮೈಸೂರು ನಗರ ಸಮ್ಮೇಳನದ ಚಿತ್ರವನ್ನು ಎಸ್‌ಎಫ್ಐ ಮೈಸೂರು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಲಾಗಿತ್ತು ಬಿಜೆಪಿ ಬೆಂಬಲಿಗರು ಈ ಚಿತ್ರವನ್ನು  ಎಸ್‌ಎಫ್‌ಐ ಮೈಸೂರು ಎಂಬ ಫೇಸ್‌ಬುಕ್‌ ಪೇಜ್‌ನಿಂದ ತೆಗೆದುಕೊಂಡಿದ್ದಾರೆ ಎಂದು ವಿಜಯ ಕುಮಾರ್ ಅವರು ಪ್ರತಿಪಾದಿಸಿದ್ದಾರೆ.

 

ತಮ್ಮ ಫೋಟೋವನ್ನು ಬಿಜೆಪಿ ಬೆಂಬಲಿಗರು ವೈರಲ್ ಮಾಡುತ್ತಿರುವ ಬಗ್ಗೆ ಸ್ವತಃ ವಿಜಯ ಕುಮಾರ್ ಅವರು ಜನಶಕ್ತಿ ಮೀಡಿಯಾ ಜೊತೆಗೆ ಮಾತನಾಡಿದ್ದು, ತಮ್ಮ ಸಂಸದನ ಮುಖ ಉಳಿಸಲು ಬಿಜೆಪಿ ನಡೆಸುತ್ತಿರುವ ಹತಾಶ ಪ್ರಯತ್ನ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಅವರು ಯಾವ ಮಟ್ಟಕ್ಕೂ ಇಳಿಯಲು ತಯಾರಿದ್ದಾರೆ. ಆದರೆ ನಮ್ಮ ಹೋರಾಟವೇನಿದ್ದರೂ ಪ್ರಭುತ್ವಕ್ಕೆ ಎದೆ ತೋರಿಸಿಯೆ ಹೊರತು ಕದ್ದು ಮುಚ್ಚಿಯಲ್ಲ. ನಮ್ಮ ಹೋರಾಟವನ್ನು ನಾವು ಹೌದು ನಾವು ಮಾಡಿದ್ದೇವೆ ಎಂದು ಗಟ್ಟಿಯಾಗಿ ಹೇಳುತ್ತೇವೆ” ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಫ್ಯಾಕ್ಟ್‌ಚೆಕ್ | ಕ್ಲಿಪ್ ಮಾಡಿದ ವಿಡಿಯೊ ಬಳಸಿ, ‘ರಾಹುಲ್ ಗಾಂಧಿ ಭಾರತ ಮಾತೆಗೆ ಅವಮಾನಿಸಿದ್ದಾರೆ’ ಎಂದು ಸುಳ್ಳು ಹೇಳಿದ ಬಿಜೆಪಿ

ಆರೋಪಿ ಮನೋರಂಜನ್ ಮತ್ತು ವಿದ್ಯಾರ್ಥಿ ನಾಯಕ ವಿಜಯ ಕುಮಾರ್ ಅವರ ನಡುವಿನ ವ್ಯತ್ಯಾಸವನ್ನು ಕೆಳಗಿನ ಚಿತ್ರದಲ್ಲಿ ಗಮನಿಸಬಹುದಾಗಿದೆ. ಅಲ್ಲದೆ, ಮನೋರಂಜನ್ ಸೇರಿದಂತೆ ಐವರು ಆರೋಪಿಗಳನ್ನು ಪೊಲೀಸರು ಸಂಸತ್ ದಾಳಿಯ ಕೆಲವೇ ಕ್ಷಣದಲ್ಲಿ ಬಂಧಿಸಿದ್ದರು. ಅದರಲ್ಲೂ ಮನೋರಂಜನ್ ಈಗಾಗಲೆ ಪೊಲೀಸರ ಕಸ್ಟಡಿಯಲ್ಲಿ ಇದ್ದಾರೆ.

ಫ್ಯಾಕ್ಟ್‌ಚೆಕ್, ಎಸ್‌ಎಫ್‌ಐ,ನಾಯಕ,ಚಿತ್ರ, ಸಂಸತ್ ದಾಳಿ, ಆರೋಪಿ,ಬಿಜೆಪಿ ಐಟಿ ಸೆಲ್, FactCheck, BJP, IT cell ,Parliament attack,picture,SFI, leader ಜನಶಕ್ತಿ ಮೀಡಿಯಾ ಫ್ಯಾಕ್ಟ್‌ಚೆಕ್

ತಮ್ಮ ನಾಯಕನ ಬಗ್ಗೆ ತಪ್ಪಾಗಿ ಬಿಂಬಿಸುತ್ತಿರುವ ಬಿಜೆಪಿ ಬೆಂಬಲಿಗರ ಬಗ್ಗೆ ರಾಜ್ಯ ಎಸ್‌ಎಫ್‌ಐ ಆಕ್ರೋಶ ವ್ಯಕ್ತಪಡಿಸಿದ್ದು, ಅಪಪ್ರಚಾರ ನಡೆಸುತ್ತಿರುವವರ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಹೇಳಿದೆ.

ಈ ಕುರಿತು ಎಸ್‌ಎಫ್‌ಐ ರಾಜ್ಯಾಧ್ಯಕ್ಷ ಅಮರೇಶ್‌ ಕಡಗದ್‌ ಮತ್ತು ರಾಜ್ಯ ಕಾರ್ಯದರ್ಶಿ ಭೀಮನಗೌಡ ಜಂಟಿ ಹೇಳಿಕೆ ನೀಡಿದ್ದು, “ಬಿಜೆಪಿಯ ಕಾರ್ಯಕರ್ತರು ಸೈದ್ಧಾಂತಿಕವಾಗಿ ಎದುರಿಸಲಾಗದೆ, ಸೋಶಿಯಲ್ ಮೀಡಿಯಾದಲ್ಲಿ ಅಪ್ರಚಾರ ಮಾಡುತ್ತಾ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಈ ಕೃತ್ಯ ಎಸಗಿದ ವ್ಯಕ್ತಿಗಳ ಬಂಧನ ಆದರೂ ದುರುದ್ದೇಶದಿಂದ ಇಂತಹ ಕೆಲಸ ಮಾಡುತ್ತಿದ್ದಾರೆ” ಎಂದು ಹೇಳಿದ್ದಾರೆ. ಇದನ್ನೂ ಓದಿ: ಫ್ಯಾಕ್ಟ್‌ಚೆಕ್ | ಹಿಂದೂಗಳ ವ್ಯಾಪಾರ ಬಹಿಷ್ಕರಿಸುವಂತೆ ಬೆಂಗಳೂರಿನಲ್ಲಿ ಮುಸ್ಲಿಮರು ಕರೆ ನೀಡಿಲ್ಲ

“ಎಸ್‌ಎಫ್ಐ ಸಂಘಟನೆ ತ್ಯಾಗ ಬದ್ದತೆಯ ಮೂಲಕ ವಿದ್ಯಾರ್ಥಿಗಳ, ಶಿಕ್ಷಣದ ಮತ್ತು ಸಮಾಜದ ಪ್ರಗತಿಗಾಗಿ ಹಾಗೂ ಸೌಹಾರ್ದ, ಸಾಮರಸ್ಯದ ಘನತೆಯ ಬದುಕಿಗಾಗಿ ಐದು ದಶಕಗಳಿಂದ ವಿದ್ಯಾರ್ಥಿ ಸಮುದಾಯದ ಪರವಾಗಿ ದೇಶಾದ್ಯಂತ ಹೋರಾಟ ಮಾಡುತ್ತಾ ಬರುತ್ತಿದೆ. ಇದನ್ನು ಸಹಿಸದ ಈ ದೇಶದ ಕೋಮುವಾದಿ ಬಿಜೆಪಿ ಪಕ್ಷದ ಕಾರ್ಯಕರ್ತರು ಸೈದ್ದಾಂತಿಕವಾಗಿ ಸಂಘಟನೆಯನ್ನು ಎದುರಿಸಲಾಗದೆ ಈ ಪ್ರಕರಣದಲ್ಲಿ ‌ವಿನಾಕಾರಣ ಎಸ್ಎಫ್ಐ ಮೈಸೂರು ಜಿಲ್ಲಾ ಅಧ್ಯಕ್ಷರಾದ‌ ವಿಜಯ್ ಕುಮಾರ್ ಇವರ ಹೆಸರನ್ನು ಎಳೆದು ತಂದು ಅಪಪ್ರಚಾರ ಮಾಡುತ್ತಿದ್ದಾರೆ” ಎಂದು ಅವರು ಹೇಳಿದ್ದಾರೆ.

ಬಿಜೆಪಿಯ ಐಟಿ ಸೆಲ್‌ಗಳು ಹಾಗೂ ಅದನ್ನು ನಿರ್ವಹಿಸುವ ಅಡ್ಮಿನ್‌ಗಳನ್ನು ಮತ್ತು ಸುಳ್ಳು ಸುದ್ದಿಯನ್ನು ಶೇರ್ ಮಾಡುತ್ತಿರುವ ಎಲ್ಲಾ ವ್ಯಕ್ತಿಗಳು ಹಾಗೂ ಗುಂಪುಗಳ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಎಸ್‌ಎಫ್‌ಐ ಜಂಟಿ ಹೇಳಿಕೆಯಲ್ಲಿ ತಿಳಿಸಿದೆ. ಸಂಸತ್

ಅಲ್ಲದೆ, ಬಂಧಿತ ಆರೋಪಿ ಮನೋರಂಜನ್ ಪ್ರಧಾನಿ ಮೋದಿ ಅವರ ಅಭಿಮಾನಿ ಎಂದು ಅವರ ತಂದೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಜೊತೆಗೆ ತಾನು ಕೂಡಾ ಸಂಸದ ಪ್ರತಾಪ್ ಸಿಂಹ ಅವರ ವೋಟರ್ ಎಂದು ಕೂಡಾ ಅವರು ಹೇಳಿದ್ದಾರೆ. ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಪ್ರಧಾನಿ ಮೋದಿ ಭಾರತೀಯರಿಗೆ 3 ತಿಂಗಳ ಉಚಿತ ರೀಚಾರ್ಜ್ ನೀಡುತ್ತಿದ್ದಾರೆ ಎಂಬುದು ಸುಳ್ಳು!

ಒಟ್ಟಿನಲ್ಲಿ ಹೇಳುವುದಾದರೆ, ಡಿಸೆಂಬರ್ 13ರ ಬುಧವಾರದಂದು ಸಂಸತ್ ಲೋಕಸಭೆಗೆ ದಾಳಿ ಮಾಡಿದ ಮನೋರಂಜನ್ ಡಿ. ಎಂಬ ಆರೋಪಿ ಎಡಪಂಥೀಯ ವಿದ್ಯಾರ್ಥಿ ಸಂಘಟನೆ ಎಸ್‌ಎಫ್‌ಐ ಕಾರ್ಯಕರ್ತ ಅಲ್ಲ. ಈ ಬಗ್ಗೆ ಬಿಜೆಪಿ ಪೇಜ್‌ಗಳು, ಬೆಂಬಲಿಗರು ಸೇರಿದಂತೆ ಹಲವಾರು ಬಲಪಂಥೀಯರು ತಪ್ಫಾಗಿ ಚಿತ್ರವನ್ನು ಹರಡುತ್ತಿದ್ದಾರೆ. ಬಿಜೆಪಿ ಬೆಂಬಲಿಗರ ಈ ಕೃತ್ಯದ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಎಸ್‌ಎಫ್‌ಐ ಈಗಾಗಲೆ ಹೇಳಿಕೆ ನೀಡಿದೆ.


ಯಾವುದೆ ವಿಡಿಯೊ, ಚಿತ್ರ ಅಥವಾ ಸುದ್ದಿಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚುವ ಮುಂಚೆ ಅದು ಸತ್ಯವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ. ಅವುಗಳ ಬಗ್ಗೆ ನಿಮಗೆ ಸಂಶಯವಿದ್ದರೆ ಜನಶಕ್ತಿ ಮೀಡಿಯಾದ +916361984022 ಈ ನಂಬರ್‌ಗೆ ಕಳುಹಿಸಿ. ನಾವು ಅದನ್ನು ಫ್ಯಾಕ್ಟ್‌ಚೆಕ್ ಮಾಡುತ್ತೇವೆ.


ವಿಡಿಯೊ ನೋಡಿ: ಸರ್ಕಾರಕ್ಕೆ ನಾವು ಕೊಡುವ ತೆರಿಗೆ ಹಣ ನಮ್ಮ ಅಭಿವೃದ್ಧಿಗೆ ಬಳಕೆಯಾಗಬೇಕು – ಮೀನಾಕ್ಷಿ ಸುಂದರಂ Janashakthi Media

Donate Janashakthi Media

Leave a Reply

Your email address will not be published. Required fields are marked *