ದೀಪಾವಳಿ ಪಟಾಕಿ ಅವಘಡ| ಬೆಂಗಳೂರಿನಾದ್ಯಂತ 20 ಮಂದಿಗೆ ಸುಟ್ಟಗಾಯ

ಬೆಂಗಳೂರು: ದೀಪಾವಳಿಯನ್ನು ಸುರಕ್ಷಿತವಾಗಿ ಆಚರಿಸಲು ಬೆಂಗಳೂರಿಗರು ಕ್ರಮ ಕೈಗೊಂಡಿದ್ದರೂ ಭಾನುವಾರ ಮಧ್ಯರಾತ್ರಿಯವರೆಗೂ ನಗರದಲ್ಲಿ 20 ಪಟಾಕಿ ಅವಘಡ ಪ್ರಕರಣಗಳು ವರದಿಯಾಗಿವೆ. ದೀಪಾವಳಿ

ಪಟಾಕಿ ಸಿಡಿತದಿಂದ ಆರು ಮಂದಿ ಗಂಭೀರವಾಗಿ ಗಾಯಗೊಂಡಿರುವ ವರದಿಯಾಗಿದೆ ಎಂದು ನಾರಾಯಣ ಹೆಲ್ತ್‌ನ ಅಧ್ಯಕ್ಷ ಡಾ.ರೋಹಿತ್ ಶೆಟ್ಟಿ ಹೇಳಿದ್ದಾರೆ. ಗಾಯಾಳುಗಳ ಪೈಕಿ ಶೇ. 90 ರಷ್ಟು ಮಂದಿ ನೋಡುಗರು ಅಥವಾ ಕೆಲಸದಿಂದ ಮನೆಗೆ ಮರಳುತ್ತಿದ್ದ ಅಮಾಯಕ ನಾಗರಿಕರಾಗಿದ್ದಾರೆ. ಇದು ಆತಂಕಕ್ಕೆ ದೊಡ್ಡ ಕಾರಣ ಅಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ:ಅತ್ತಿಬೆಲೆ ಪಟಾಕಿ ದುರಂತ: ಮತ್ತೊಬ್ಬ ಸಾವು: ಮೃತರ ಸಂಖ್ಯೆ 17ಕ್ಕೆ ಏರಿಕೆ

ನಾರಾಯಣ ಆಸ್ಪತ್ರೆಯಲ್ಲಿನ ಆರು ಪ್ರಕರಣಗಳಲ್ಲಿ ಮೂರು ಪ್ರಕರಣಗಳು 19 ಮತ್ತು 22 ರ ನಡುವಿನ ವಯಸ್ಸಿನವರಾಗಿದ್ದರೆ, ಒಬ್ಬರು 50 ವರ್ಷದ ವ್ಯಕ್ತಿಯಾಗಿದ್ದಾರೆ.ರೋಗಿಗಳಿಗೆ ಇಂಟ್ರಾಕ್ಯುಲರ್ ರಕ್ತಸ್ರಾವವಾಗಿರುವುದರಿಂದ ಮತ್ತು ಅವರ ಕಣ್ಣುಗಳಲ್ಲಿ ಕಣಗಳು ಇದ್ದುದರಿಂದ ಗಂಭೀರವಾಗಿ ಗಾಯಗೊಂಡಿದ್ದಾರೆ, ಅವುಗಳನ್ನು ತೆಗೆದು ಸ್ವಚ್ಛಗೊಳಿಸಲಾಗಿದೆ. ಎಲ್ಲಾ ರೋಗಿಗಳನ್ನು ಮುಂದಿನ 48 ಗಂಟೆಗಳ ಕಾಲ ನಿಗಾವಣೆ ಮಾಡಲಾಗುತ್ತಿದ್ದು, ಅವರಿಗೆ ಯಾವುದೇ ಶಾಶ್ವತ ಹಾನಿಯಾಗದಂತೆ ನೋಡಿಕೊಳ್ಳಲಾಗುತ್ತಿದೆ ಎಂದು  ಡಾ.ರೋಹಿತ್ ತಿಳಿಸಿದ್ದಾರೆ.

ಶಂಕರ ನೇತ್ರಾಲಯದಲ್ಲಿ  ಎರಡು ಪಟಾಕಿ ಗಾಯದ ಪ್ರಕರಣ ವರದಿಯಾಗಿದೆ. ಇದರಲ್ಲಿ ಆರು ಮತ್ತು ಏಳು ವರ್ಷದ ಮಕ್ಕಳು ಪಟಾಕಿಯಿಂದ ಗಾಯಗೊಂಡಿದ್ದಾರೆ. ಪಟಾಕಿ ಹಚ್ಚುವುದನ್ನು ನೋಡುತ್ತಿದ್ದಾಗ ಏಳು ವರ್ಷದ ಹುಡುಗ ಗಂಭೀರವಾಗಿ ಗಾಯಗೊಂಡಿರುವುದಾಗಿ ತಿಳಿದುಬಂದಿದೆ.

ಪಟಾಕಿ ತರಲು ಹೋಗಿದ್ದ ಯುವಕರು ರಸ್ತೆ ಅಪಘಾತಕ್ಕೆ ಬಲಿ

ಧಾರವಾಡದಲ್ಲಿ ದೀಪಾವಳಿ ಹಬ್ಬಕ್ಕೆಂದು ಪಟಾಕಿ ತೆಗೆದುಕೊಂಡು ಹೋಗುತ್ತಿದ್ದ ಇಬ್ಬರು ಯುವಕರು ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ನವಲಗುಂದ ತಾಲೂಕಿನ ಶಿವಳ್ಳಿ ಬಳಿ ನಡೆದಿದೆ.  ಕ್ರೂಸರ್ ಹಾಗೂ ಬೈಕ್ ನಡುವೆ ಡಿಕ್ಕಿಯಾಗಿ ಇಬ್ಬರು ಮೃತಪಟ್ಟಿದ್ದು ಐವರು ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಸದ್ಯ ನವಲಗುಂದ ತಾಲೂಕು ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಮೂವರು ಯುವಕರು ಹಬ್ಬಕ್ಕೆಂದು ಪಟಾಕಿ ತೆಗೆದುಕೊಂಡು ಬೈಕ್‌ನಲ್ಲಿ ನವಲಗುಂದದಿಂದ ಧಾರವಾಡಕ್ಕೆ ಬರುತ್ತಿದ್ದರು. ಈ ವೇಳೆ ಬೈಕ್‌ ಹಾಗೂ ಕ್ರೂಸರ್ ಡಿಕ್ಕಿಯಾಗಿ ಇಬ್ಬರು ಸವಾರರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಡಿಯೋ ನೋಡಿ:ನ್ಯಾಯ ಕೇಳಿದ ಕಾರ್ಮಿಕರನ್ನು ಕೂಡಿ ಹಾಕಿದ ಬಾಲಾಜಿ ಗಾರ್ಮೆಂಟ್ಸ್ ವಿರುದ್ಧ ಆಕ್ರೋಶ Janashakthi Media

Donate Janashakthi Media

Leave a Reply

Your email address will not be published. Required fields are marked *