ಪ್ರಯಾಣಿಕರ ಸೋಗಲ್ಲಿ ಬಂದು ಸುಲಿಗೆ; ಆರೋಪಿ ಬಂಧನದಿಂದ ಹೊಸ ಪ್ರಕರಣಗಳು ಬೆಳಕಿಗೆ..!

ಬೆಂಗಳೂರು: ಓಲಾ-ಊಬರ್ ಚಾಲಕರನ್ನು ಗುರಿಯಾಗಿಸಿ ಈ ಖದೀಮ ದರೋಡೆ ಮಾಡುತ್ತಿದ್ದ. ಚಾಲಕರು ಪೊಲೀಸರಿಗೆ ದೂರು ನೀಡುವುದಿಲ್ಲ ಎನ್ನುವ ಆಧಾರದ ಮೇಲೆ ಕುಕೃತ್ಯ ಮಾಡುತ್ತಿದ್ದು ಇದೀಗ ಕಡೆಗೂ ಪ್ರಕರಣಗಳು ಬೆಳಕಿಗೆ ಬಂದಿವೆ. ಉತ್ತರ ಕರ್ನಾಟಕ ಭಾಗದ ಓಲಾ, ಊಬರ್​ ಚಾಲಕರನ್ನು ಈ ಖದೀಮ, ಪ್ರಯಾಣಿಕನ ಸೋಗಿನಲ್ಲಿ ಈತ ಬುಕ್​ ಮಾಡಿ ಕಾರನ್ನು ಏರುತ್ತಿದ್ದ. ನಂತರ ಚಾಕು ತೋರಿಸಿ ಸುಲಿಗೆ ಮಾಡುತ್ತಿದ್ದ. ಇದೀಗ ಈತನನ್ನು ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ವಿನಯ್ ಎಂದು ಗುರುತಿಸಲಾಗಿದೆ. ಈ ವಿನಯ್​, ಎಚ್ಎಎಲ್, ಬಾಣಸವಾಡಿ, ಹೈ ಗ್ರೌಂಡ್ಸ್, ಎಂ.ಜಿ ರೋಡ್ ಭಾಗಗಳಿಂದ ಕ್ಯಾಬ್ ಬುಕ್ ಮಾಡಿ ಚಾಲಕರನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗುತ್ತಿದ್ದ.

ಇದನ್ನೂ ಓದಿ:ರ‍್ಯಾಪಿಡೊ ಚಾಲಕನಿಂದ ಲೈಂಗಿಕ ಕಿರುಕುಳ; ಆರೋಪಿ ಬಂಧನ

ನಂತರ ಚಾಕು ತೋರಿಸಿ ಸುಲಿಗೆ ಮಾಡುತ್ತಿದ್ದ ಎನ್ನಲಾಗಿದೆ. ನಿರ್ಜನ ಪ್ರದೇಶದಲ್ಲಿ ಚಾಕು ತೋರಿಸುತ್ತಿದ್ದ ಈತ, ಬೆದರಿಕೆ ಹಾಕಿ ಫೋನ್ ಪೇ ಮೂಲಕ ಹಣ ಹಾಕಿಸಿಕೊಳ್ಳುತ್ತಿದ್ದ. ಚಾಲಕನ ಕೈಯಲ್ಲಿ ಆತನ ಕುಟುಂಬದವರಿಗೂ ಕರೆ ಮಾಡಿಸಿ ಹಣ ಹಾಕಿಸುವಂತೆಯ ಹೆದರಿಸುತ್ತಿದ್ದ‌. ನನಗೆ ಆ್ಯಕ್ಸಿಡೆಂಟ್ ಆಗಿದ್ದು ಆಸ್ಪತ್ರೆಯಲ್ಲಿದ್ದೇನೆ ಎಂದು ಹೇಳಿಸಿ ಹಣ ಹಾಕಿಸಿಕೊಳ್ಳುವಂತೆ ಈ ವಿನಯ್ ಚಾಲಕರಿಗೆ ಒತ್ತಡ ತರುತ್ತಿದ್ದ. ನಂತರ ಆ ಹಣವನ್ನೂ ಫೋನ್​ ಪೇ ಮೂಲಕ ಹಾಕಿಸಿಕೊಂಡು ಪರಾರಿ ಆಗುತ್ತಿದ್ದ. ಈ ಆರೋಪಿ ವಿನಯ್ ಬಂಧನದಿಂದ ನಾಲ್ಕು ಸುಲಿಗೆ ಪ್ರಕರಣಗಳು ಬೆಳಕಿಗೆ ಬಂದಿದ್ದು ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Donate Janashakthi Media

Leave a Reply

Your email address will not be published. Required fields are marked *