ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಮೂರನೇ ಅಲೆ ಉತ್ತುಂಗ ಸ್ಥಿತಿಗೆ ತಲುಪುವ ಸಾಧ್ಯತೆ

ನವದೆಹಲಿ: ಈ ವರ್ಷ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಕೋವಿಡ್-19ರ ಮೂರನೇ ಅಲೆ ಎದುರಾಗುವ ಸಾಧ್ಯತೆಗಳು ದಟ್ಟವಾಗಿವೆ ಎಂದು ಕಾನ್ಪುರ ಐಐಟಿಯ ಪ್ರಾಧ್ಯಾಪಕರಾದ ರಾಜೇಶ್ ರಂಜನ್, ಮಹೇಂದ್ರ ವರ್ಮಾ ಅವರನ್ನೊಳಗೊಂಡ ತಂಡವು ಅಧ್ಯಯನ ನಡೆಸಿದ್ದು, ಕೋವಿಡ್‌ ಮೂರನೇ ಅಲೆಯ ಬಗ್ಗೆ ಮಾಹಿತಿ ನೀಡಿದೆ.

ಮೂರನೇ ಅಲೆ ಬಗ್ಗೆ ಸರಕಾರ ಹಾಗೂ ಸಾರ್ವಜನಿಕರಲ್ಲಿ ಹೆಚ್ಚಿನ ಆತಂಕವಂತೂ ಇದೆ. ಇದಕ್ಕಾಗಿ, ಎಸ್‌ಐಆರ್ ಮಾದರಿ ಬಳಸಿಕೊಂಡು, ಎರಡನೇ ಅಲೆಯ ಸಾಂಕ್ರಾಮಿಕ ಪರಿಣಾಮಗಳ ವಿವಿಧ ಅಧ್ಯಯನಗಳನ್ನು ಬಳಸಿಕೊಂಡು ಮೂರನೇ ಅಲೆಯಲ್ಲಿ ಎದುರಾಗಲಿರುವ ಅಂಶಗಳನ್ನು ವಿವರಿಸಿದ್ದಾರೆ.

ಜುಲೈ 15ರ ಹೊತ್ತಿಗೆ ದೇಶದಲ್ಲಿ ಸಂಪೂರ್ಣವಾಗಿ ನಿರ್ಬಂಧಗಳು ಇಲ್ಲದಂತಾಗಿದೆ ಎಂದು ಭಾವಿಸುವುದಾದರೆ ಮೂರನೇ ಅಲೆ ಬಗೆಗಿನ ಈ ಕೆಳಗಿನ ಕೆಲವು ಅಂಶಗಳನ್ನು ಪರಿಗಣಿಸಬಹುದಾಗಿದೆ.  ಪ್ರಮುಖದ

ಸಾಧ್ಯತೆ 1 ಸಹಜತೆಯತ್ತ ಮರಳಿದರೆ – ಮೂರನೇ ಅಲೆ ಅಕ್ಟೋಬರ್​ ತಿಂಗಳಲ್ಲಿ ಉನ್ನತ ಸ್ಥಿತಿಗೆ ತಲುಪಲಿದೆ. ಆದರೆ, ಆ ಹಂತದಲ್ಲಿ ಅದು ಉಂಟುಮಾಡುವ ಪರಿಣಾಮಗಳು ಎರಡನೇ ಅಲೆಗಿಂತ ಕೊಂಚ ಕಡಿಮೆ ಇರಲಿದೆ.

ಸಾಧ್ಯತೆ 2 ವೈರಸ್ ರೂಪಾಂತರಗೊಂಡಲ್ಲಿ ಆಗ ಹೆಚ್ಚು ಗಂಭೀರ ಪರಿಸ್ಥಿತಿ ನಿರ್ಮಾಣವಾಗಬಹುದು. ಇದು ಎರಡನೇ ಅಲೆಗಿಂತಲೂ ಅಧಿಕ ಪರಿಣಾಮ ಬೀರುವ ಸಾಧ್ಯತೆಯಿದ್ದು, ಸೆಪ್ಟೆಂಬರ್ ಆರಂಭದಲ್ಲಿ ಕಾಣಿಸಿಕೊಳ್ಳಬಹುದು.

ಸನ್ನಿವೇಶ 3 (ಕಠಿಣ ಮಧ್ಯಸ್ಥಿಕೆಗಳು)  ಕಠಿಣ ಸಾಮಾಜಿಕ ಅಂತರ ಪಾಲನೆಯೊಂದಿಗೆ ಅಕ್ಟೋಬರ್ ಅಂತ್ಯದವರೆಗೂ ಮೂರನೇ ಅಲೆ ಉತ್ತುಂಗ ವಿಳಂಬವಾಗುವ ಸಾಧ್ಯತೆಯಿದೆ. ಮೂರನೇ ಅಲೆ ಉತ್ತುಂಗತ್ತೆ ಎರಡನೇ ಅಲೆಗಿಂತ ಕಡಿಮೆಯಾಗಿರುತ್ತದೆ.

ಈ ಮೂರು ಸಾಧ್ಯತೆಗಳನ್ನು ಐಐಟಿ ಅಧ್ಯಯನಕಾರರು ತೆರೆದಿಟ್ಟಿದ್ದು, ಮೂರನೇ ಅಲೆ ಉಂಟಾಗುವುದಂತೂ ಸ್ಪಷ್ಟವಾಗಿದೆ. ಇದರಲ್ಲಿ ಇನ್ನೊಂದು ಗಮನಾರ್ಹ ಅಂಶವೆಂದರೆ ಸಾಧ್ಯತೆಗಳ ಪಟ್ಟಿಯಲ್ಲಿ ಲಸಿಕೆಯನ್ನು ಕೈ ಬಿಡಲಾಗಿದ್ದು, ಒಂದು ವೇಳೆ ಲಸಿಕೆ ವಿತರಣೆಯು ಇನ್ನಷ್ಟು ವೇಗ ಪಡೆದು ಎಲ್ಲರನ್ನೂ ತಲುಪಿದಲ್ಲಿ ಮೂರನೇ ಅಲೆ ಪ್ರಭಾವ ಗಣನೀಯವಾಗಿ ತಗ್ಗಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಲಾಗಿದೆ.

ಅಧ್ಯಯನದ ವರದಿಯ ಬಗ್ಗೆ ಹೇಳಿಕೆಯನ್ನು ಪ್ರಕಟಿಸಿರುವ ಕಾನ್ಪುರ ಐಐಟಿಯ ಪ್ರಾಧ್ಯಾಪಕರಾದ  ಪ್ರೊ. ರಾಜೇಶ್ ರಂಜನ್ ಮತ್ತು ಮಹೇಂದ್ರ ವರ್ಮಾ, ತಮ್ಮ ತಂಡದೊಂದಿಗೆ, ದೇಶದಲ್ಲಿನ ದೈನಂದಿನ ಕೋವಿಡ್-19 ಮುನ್ಸೂಚನೆಗಳನ್ನು covid19-forecast.org ನಲ್ಲಿ ಒದಗಿಸುತ್ತಾರೆ. ಐಐಟಿ ಕಾನ್ಪುರ್ ತಂಡದ ಪ್ರಕಾರ, ಕೆಲವು ಈಶಾನ್ಯ ರಾಜ್ಯಗಳನ್ನು ಹೊರತುಪಡಿಸಿದಂತೆ  ಎರಡನೇ ಅಲೆಯೂ ಪ್ರತಿಯೊಂದು ರಾಜ್ಯದಲ್ಲೂ ಗಮನಾರ್ಹವಾಗಿ ಕ್ಷೀಣಿಸಿದೆ.

Donate Janashakthi Media

Leave a Reply

Your email address will not be published. Required fields are marked *