ಕೇರಳದಲ್ಲಿ ಎಡರಂಗ – ತಮಿಳುನಾಡಿಗೆ ಸ್ಟಾಲಿನ್‌, ಬಂಗಾಳದಲ್ಲಿ ತೃಣಮೂಲ

ನವದೆಹಲಿ: ಐದು ರಾಜ್ಯಗಳಲ್ಲಿ ನಡೆದ ವಿಧಾನಸಭೆ ಚುನಾವಣೆಯ ಎಲ್ಲಾ ಹಂತದ ಮತದಾನ ಪ್ರಕ್ರಿಯೆಗಳು ಪೂರ್ಣಗೊಂಡಿದೆ. ಕೇರಳ, ತಮಿಳುನಾಡು, ಪುದುಚೇರಿಯಲ್ಲಿ ಒಂದೇ ಹಂತದಲ್ಲಿ ಮತ್ತು ಅಸ್ಸಾಂನಲ್ಲಿ ಮೂರು ಹಂತದ ಮತದಾನ ನಡೆದು ಏಪ್ರಿಲ್ 6ರಂದು ಕೊನೆಗೊಂಡಿತು.

ಪಶ್ಚಿಮ ಬಂಗಾಳದಲ್ಲಿ 8ನೇ ಹಾಗೂ ಕೊನೆ ಹಂತದ ಮತದಾನ ಏಪ್ರಿಲ್ 29 ಕೊನೆಗೊಂಡಿದೆ. ಎಲ್ಲಾ ರಾಜ್ಯಗಳ ಎಲ್ಲಾ ಹಂತದ ಚುನಾವಣೆಗಳು ಪೂರ್ಣಗೊಂಡ ಬಳಿಕ ದೇಶದ ಪ್ರಮುಖ ಮಾಧ್ಯಮಗಳು ಸೇರಿದಂತೆ ಸ್ಥಳೀಯ ಖಾಸಗಿ ಸುದ್ದಿ ವಾಹಿನಿಗಳು ಚುನಾವಣೋತ್ತರ ಸಮೀಕ್ಷೆಗಳ ವಿವರಗಳು ಹೊರಬಿದ್ದಿವೆ. ಮೇ 2 ರಂದು ಅಧಿಕೃತವಾಗಿ ಅಂತಿಮ ಫಲಿತಾಂಶವೇ ನಿರ್ಣಾಯಕ.

ಇದನ್ನು ಓದಿ : ಕೇರಳ ಚುನಾವಣೆ ಹೇಗಿದೆ? ಎಲ್.ಡಿ.ಎಫ್‌ ಯುಡಿಎಫ್‌ ನಡುವೆ ನಡೆದಿದೆ ನೇರ ಹಣಾಹಣಿ

ಕೇಂದ್ರ ಚುನಾವಣಾ ಆಯೋಗವು ಮಾರ್ಚ್ 27 ರಿಂದ ಏಪ್ರಿಲ್ 29ರ ಸಂಜೆ 7ರವರೆಗೂ ಎಕ್ಸಿಟ್ ಪೋಲ್ ಸಮೀಕ್ಷೆಗಳನ್ನು ಪ್ರಕಟಿಸುವಂತಿಲ್ಲ ಎಂದು ಆದೇಶ ನೀಡಿತ್ತು.

ವಿಧಾನಸಭೆ ಚುನಾವಣೆ ಅಥವಾ ಉಪ ಚುನಾವಣೆಯ ಪ್ರತಿ ಹಂತದ ಮತದಾನ ನಡೆದ ಬಳಿಕ ಎಕ್ಸಿಟ್ ಪೋಲ್ ಅಥವಾ ಬೇರೆ ಯಾವುದೇ ರೀತಿಯ ಚುನಾವಣಾ ಸಮೀಕ್ಷೆಗಳ ಫಲಿತಾಂಶ ಪ್ರಕಟಿಸುವಂತಿಲ್ಲ ಎಂದು ಆಯೋಗದ ನಿಯಮವಿದೆ.

ಒಟ್ಟು ವಿಧಾನಸಭಾ ಕ್ಷೇತ್ರಗಳು

  • ಪಶ್ಚಿಮ ಬಂಗಾಳ 294  ಸ್ಥಾನಗಳು
  • ತಮಿಳುನಾಡು 234 ಸ್ಥಾನಗಳು
  • ಕೇರಳ 140 ಸ್ಥಾನಗಳು
  • ಪುದುಚೇರಿ 30 ಸ್ಥಾನಗಳು
  • ಅಸ್ಸಾಂ 126 ಸ್ಥಾನಗಳು

ಕೇರಳ ವಿಧಾನಸಭೆ

ಕೇರಳ ವಿಧಾನಸಭಾ ಚುನಾವಣೆಯ ಫಲಿತಾಂಶದಲ್ಲಿ ಎಡಪಕ್ಷಳ ನೇತೃತ್ವದ ಎಲ್‌ಡಿಎಫ್‌ ಮತ್ತು ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ಮೈತ್ರಿಕೂಟವು ದಶಕಗಳ ಕಾಲ ಎರಡನೇ ಬಾರಿಗೆ ಅಧಿಕಾರವನ್ನು ಹಿಡಿಯಲಿಲ್ಲ. ಆದರೆ ಈ ಬಾರಿ ಕೇರಳದಲ್ಲಿ ಎಲ್‌ಡಿಎಫ್‌ ಮೈತ್ರಿಕೂಟದ ಜನಪರ ಆಡಳಿತದಿಂದಾಗಿ ಮರಳಿ ಅಧಿಕಾರಕ್ಕೆ ಏರಲಿದೆ ಎಂದು ಸಮೀಕ್ಷೆಗಳು ಪ್ರಕಟಪಡಿಸಿವೆ.

ಇದನ್ನು ಓದಿ: ಬಿಜೆಪಿ ಏಕಾಧಿಪತ್ಯಕ್ಕೆ ಬ್ರೇಕ್ ಹಾಕುವುದೇ ಈ ಚುನಾವಣೆಗಳು?

ಪಿಣರಾಯ್ ವಿಜಯನ್ ನೇತೃತ್ವದ ಎಡರಂಗ ಸರ್ಕಾರವು ಎರಡನೇ ಬಾರಿ ಅಧಿಕಾರಕ್ಕೆ ಬರಲಿದೆ. ಈ ಮೂಲಕ ‘ಪರ್ಯಾಯ ಆಳ್ವಿಕೆ’ ಕೊನೆಗೊಳ್ಳಲಿದೆ ಎಂಬುದು ಸಮೀಕ್ಷೆಗಳ ಅಂದಾಜು.

ಕಳೆದ ಬಾರಿ ಒಂದು ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿತ್ತು. ಈ ಬಾರಿ ಎರಡರಲ್ಲಿ ಗೆಲ್ಲಬಹುದು ಎಂಬುದು ಕೆಲ ಸಮೀಕ್ಷೆಗಳ ಅಂದಾಜು. ಹಾಗಾಗಿ ಭಾರಿ ದೊಡ್ಡ ಮುನ್ನಡೆ ಬಿಜೆಪಿಗೆ ಸಾಧ್ಯವಾಗದು.

ರಾಜ್ಯದಲ್ಲಿ ಕೋಮು ಧ್ರುವೀಕರಣಕ್ಕೆ ಯುಡಿಎಫ್‌ ಹಾಗೂ ಬಿಜೆಪಿ ಎರಡೂ ಪ್ರಯತ್ನಿಸಿದ್ದವು. ಸಮೀಕ್ಷೆಗಳ ಫಲಿತಾಂಶ ನಿಜವಾದರೆ, ರಾಜಕೀಯ ಪಕ್ಷಗಳ ಕೋಮುವಾದಿ ಮನಸ್ಥಿತಿಗೆ ಕೇರಳದ ಮತದಾರರು ಮಣೆ ಹಾಕಿಲ್ಲ ಎಂಬುದು ಸಾಬೀತಾಗುತ್ತದೆ.

ಇದನ್ನು ಓದಿ: ಕೇರಳ ಚುನಾವಣೆಗಳಲ್ಲಿ ಅಪವಿತ್ರ ತ್ರಿವಳಿ ಕೂಟ

ನಿಫಾ, ಭೀಕರ ಪ್ರವಾಹ, ಕೊರೊನಾ ಪರಿಸ್ಥಿತಿಯನ್ನು ಯಶಸ್ವಿಯಾಗಿಯೇ ನಿರ್ವಹಿಸಿದರು ಎಂಬ ಜನಾಭಿಪ್ರಾಯವುಳ್ಳ ಪಿಣರಾಯಿ ವಿಜಯನ್ ಸರ್ಕಾರ ಈ ವಿಧಾನಸಭೆಯಲ್ಲಿ ಉತ್ತಮ ಬಹುಮತದಿಂದಲೇ ಮರಳಿ ಆಯ್ಕೆ ಆಗಲಿದ್ದಾರೆ ಎಂದಿದೆ ಟುಡೇಸ್ ಚಾಣಕ್ಯ ಸಮೀಕ್ಷೆ.

  • ಟೈಮ್ಸ್‌ ನೌ : ಎಲ್‌ಡಿಎಫ್: 74; ಯುಡಿಎಫ್ : 65; ಎನ್‌ಡಿಎ+: 1; ಇತರೆ: 00
  • ರಿಪಬ್ಲಿಕ್‌—ಸಿಎನ್‌ಎಕ್ಸ್‌ : ಎಲ್‌ಡಿಎಫ್: 76; ಯುಡಿಎಫ್ : 62; ಎನ್‌ಡಿಎ+: 2; ಇತರೆ: 00
  • ಎಬಿಪಿ ಸಿ-ವೋಟರ್ಸ್‌ :  ಎಲ್‌ಡಿಎಫ್: 71-77; ಯುಡಿಎಫ್ : 62-68; ಎನ್‌ಡಿಎ+: 0-2; ಇತರೆ: 00
  • ಟುಡೇಸ್‌ ಚಾಣಕ್ಯ : ಯುಡಿಎಫ್ : 102; ಎಲ್‌ಡಿಎಫ್: 71-77; ಎನ್‌ಡಿಎ+: 0-2; ಇತರೆ: 00
  • ಪಿ-ಮಾರ್ಕ್ಯೂ ಯುಡಿಎಫ್ :76; ಎಲ್‌ಡಿಎಫ್: 63; ಎನ್‌ಡಿಎ+:1; ಇತರೆ: 00
  • ಮೈ ಆಕ್ಸಿಸ್: ಯುಡಿಎಫ್ :111; ಎಲ್‌ಡಿಎಫ್: 28; ಎನ್‌ಡಿಎ+:1; ಇತರೆ: 00
  • ಸಮೀಕ್ಷೆಗಳ ಸಮೀಕ್ಷೆ: ಯುಡಿಎಫ್ : 88; ಎಲ್‌ಡಿಎಫ್: 51; ಎನ್‌ಡಿಎ+:2;

ತಮಿಳುನಾಡು

ತಮಿಳುನಾಡಿನಲ್ಲಿ ಆಡಳಿತರೂಢ ಎಐಎಡಿಎಂಕೆ ಹಿನ್ನಡೆ ಅನುಭವಿಸಲಿದ್ದು, ಪ್ರತಿಪಕ್ಷ ಡಿಎಂಕೆ ಅಧಿಕಾರಕ್ಕೆ ಬರುವ ಸಾಧತ್ಯೆ ಇದ್ದು ಡಿಎಂಕೆ ಪಕ್ಷದ ಅಧ್ಯಕ್ಷ ಎಂ.ಕೆ.ಸ್ಟಾಲಿನ್‌ ಮುಖ್ಯಮಂತ್ರಿ ಗದ್ದುಗೆ ಏರುವುದು ಬಹುತೇಕ ಖಚಿತವಾಗಿದೆ.

ಇದನ್ನು ಓದಿ : ‘ಕೇರಳ ರಾಜ್ಯಸಭೆ ಚುನಾವಣೆ ನಡೆಸಿ, ಕಮಿಶನ್ ಸ್ವಾತಂತ್ರ್ಯ ಎತ್ತಿಹಿಡಿಯಿರಿ ’: ಮುಖ್ಯ ಚುನಾವಣಾಧಿಕಾರಿಗೆ ನೀಲೋತ್ಪಲ ಬಸು ಪತ್ರ

ಸತತ ಎರಡು ಬಾರಿ ಅಧಿಕಾರವನ್ನು ವಹಿಸಿಕೊಂಡಿದ್ದ ಆಡಳಿರೂಢ ಎಐಎಡಿಎಂಕೆ ಪಕ್ಷಕ್ಕೆ ಈ ಬಾರಿ ಭಾರಿ ಮುಖಭಂಗವಾಗು ಸಂಭವವಿದೆ. ಈ ಪಕ್ಷವು 70 ಸ್ಥಾನಗಳು ಪಡೆಯುವುದಿಲ್ಲ ಎಂದು ಸಮೀಕ್ಷೆಗಳ ಅಂದಾಜು. ಆಡಳಿತ ವಿರೋಧಿ ನೀತಿಯೇ ಮರಳಿ ಅಧಿಕಾರಕ್ಕೆ ಬರಲಿ ಸಾಧ್ಯವಿಲ್ಲವೆಂದು ಸಮೀಕ್ಷೆಗಳು ಹೇಳುತ್ತಿವೆ.

  • ರಿಪಬ್ಲಿಕ್‌—ಸಿಎನ್‌ಎಕ್ಸ್‌ : ಎಐಎಡಿಎಂಕೆ+: 58-68; ಡಿಎಂಕೆ+: 160-170; ಎಂಎನ್ಎಂ +: 0-2; ಎಎಂಎಂಕೆ+: 4-6; ಇತರೆ: 0
  • ಎಬಿಪಿ ಸಿ-ವೋಟರ್ಸ್‌ :  ಎಐಎಡಿಎಂಕೆ+: 58-70; ಡಿಎಂಕೆ+: 160-172; ಎಂಎನ್ಎಂ +: 0; ಇತರೆ: 0-7.
  • ಟುಡೇಸ್‌ ಚಾಣಕ್ಯ : ಎಐಎಡಿಎಂಕೆ+ ಬಿಜೆಪಿ: 57; ಡಿಎಂಕೆ+ ಕಾಂಗ್ರೆಸ್ : 175; ಕಮಲ್ ಹಾಸನ್ ಪಕ್ಷ : 2 ರಿಂದ 4.
  • ಸಮೀಕ್ಷೆಗಳ ಸಮೀಕ್ಷೆ: ಎಐಎಡಿಎಂಕೆ+ ಬಿಜೆಪಿ: 56; ಡಿಎಂಕೆ+ ಕಾಂಗ್ರೆಸ್ : 174; ಕಮಲ್ ಹಾಸನ್ ಪಕ್ಷ : 22; ಎಎಂಎಂಕೆ+: 2; ಇತರೆ: 1

ಬಂಗಾಳದಲ್ಲಿ ಮೂರನೇ ಬಾರಿ ದೀದಿ ಸರಕಾರ

ಪಶ್ಚಿಮ ಬಂಗಾಳ ಮಮತಾ ಬ್ಯಾನರ್ಜಿ ನೇತೃತ್ವದ ಆಡಳಿತರೂಢ ಟಿಎಂಸಿ ಗೆಲ್ಲುತ್ತದೆ ಎಂದೇ ಬಹುತೇಕ ಎಲ್ಲಾ ಸಮೀಕ್ಷೆಗಳು ಹೇಳುತ್ತಿವೆ. ಸರ್ಕಾರ ರಚಿಸಲು 148 ಸ್ಥಾನದ ಸರಳ ಬಹುಮತ ಬೇಕಿದೆ. ಈ ಬಾರಿ ಸಮೀಕ್ಷೆಗಳು ಕಳೆದ ಬಾರಿ ಕೇವಲ ಮೂರು ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ ಈ ಬಾರಿ 115 ಸ್ಥಾನಗಳನ್ನು ಗೆಲ್ಲಬಹುದೆಂದು ಸಮೀಕ್ಷೆಗಳು ತಿಳಿಸುತ್ತಿವೆ.

ಇದನ್ನು ಓದಿ : ಚುನಾವಣೆ: ಬೃಹತ್‌ ರ‍್ಯಾಲಿ ನಡೆಸದಿರಲು ಸಿಪಿಐ(ಎಂ) ನಿರ್ಧಾರ

ಪ್ರಮುಖ ವಿರೋಧ ಪಕ್ಷವಾಗಿ ಬಿಜೆಪಿ ಪಡೆಯಬಹುದೆಂಬ ಅಂದಾಜು ಇದೆ.  ಕಾಂಗ್ರೆಸ್‌ ಮತ್ತು ಎಡಪಕ್ಷಗಳ ಮೈತ್ರಿಕೂಟ 20-25 ಸ್ಥಾನ ಪಡೆಯಬಹುದೆಂಬುದು ಸಮೀಕ್ಷೆಗಳ ಅಂದಾಜು.

  • ರಿಪಬ್ಲಿಕ್‌ ಟಿವಿ : ಟಿಎಂಸಿ 128-138, ಬಿಜೆಪಿ 138-148
  • ಎಬಿಪಿ ಸಿ-ವೋಟರ್ಸ್‌ : ಟಿಎಂಸಿ 152-164, ಬಿಜೆಪಿ 109-121 ಹಾಗೂ ಕಾಂಗ್ರೆಸ್ 14-16.
  • ಪಶ್ಚಿಮ ಬಂಗಾಳ ಪೀಪಲ್ಸ್ ಪಲ್ಸ್ ಎಕ್ಸಿಟ್ ಪೋಲ್: ಬಿಜೆಪಿ ಅಧಿಕಾರ ಹಿಡಿಯಲಿದೆ ಎಂದಿದೆ.
  • ಟೈಮ್ಸ್ ನೌ: ಟಿಎಂಸಿ: 158; ಬಿಜೆಪಿ : 115; ಕಾಂಗ್ರೆಸ್+ ಎಡಪಕ್ಷ: 22
  • ಸಿ-ವೋಟರ್ಸ್‌: ಟಿಎಂಸಿ-152-164, ಬಿಜೆಪಿ-109-121
  • ಜನ್‌ಕಿ ಬಾತ್‌ : ಟಿಎಂಸಿ 104-121, ಬಿಜೆಪಿ 162-185

ಅಸ್ಸಾಂ

ಅಸ್ಸಾಂ ವಿಧಾನಸಭಾಯಲ್ಲಿ ಆಡಳಿತರೂಢ ಬಿಜೆಪಿ ನೇತೃತ್ವದ ಎನ್‌ಡಿಎ ಮತ್ತೆ ಅಧಿಕಾರ ಪಡೆಯಲಿದೆ ಎಂಬುದು ಸಮೀಕ್ಷೆಗಳ ಅಂದಾಜು. ಬಿಜೆಪಿ ಸರ್ಕಾರ ಉಳಿಸಿಕೊಳ್ಳುತ್ತದೆ.

ಇಲ್ಲಿ ಕಾಂಗ್ರೆಸ್‌ ಪಕ್ಷವೂ ದೊಡ್ಡ ಮಟ್ಟದಲ್ಲಿಯೇ ಭಾರಿ ಚುನಾವಣಾ ಪ್ರಚಾರಗಳನ್ನು ನಡೆಸಿದ್ದವು. ಆದರೆ, ಅಧಿಕಾರ ಹಿಡಿಯಲಿದೆ ಎಂಬುದು ಹುಸಿಯಾಗಬಹುದು.

ಇದನ್ನು ಓದಿ : ರಾಜ್ಯಸಭೆ ಚುನಾವಣೆ: ಕೇರಳದ ಹಾಲಿ ವಿಧಾನಸಭೆ ಅವಧಿಯಲ್ಲೇ ನಡೆಸಲು ಕೋರ್ಟ್‌ ಆದೇಶ

2016ರಲ್ಲಿ ಎನ್‌ಡಿಎ ಕೂಟ 86 ಸ್ಥಾನ ಪಡೆದಿದ್ದವು. ರಾಷ್ಟ್ರೀಯ ಪೌರತ್ವ ನೋಂದಣಿಗೆ ಸಂಬಂಧಿಸಿದಂತೆ ಬಿಜೆಪಿಗೆ ಅಸ್ಸಾಂನಲ್ಲಿ ಪ್ರಬಲ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ ಈ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಹೀಗಾಗಿಯೇ ಎನ್‌ಆರ್‌ಸಿಯನ್ನು ವಿರೋಧಿಸಿದ್ದ ರಾಜಕೀಯ ಪಕ್ಷಗಳನ್ನು ಕಲೆಹಾಕಿ, ಕಾಂಗ್ರೆಸ್ ಪಕ್ಷ ಮೈತ್ರಿಕೂಟ ರಚಿಸಿತು. ಎನ್‌ಡಿಎ ಕೂಟವನ್ನು ಸೋಲಿಸುವ ಗುರಿ ಹೊಂದಿದ್ದವು.

  • ಆಕ್ಸಿಸ್ ಮೈ ಇಂಡಿಯಾ : ಬಿಜೆಪಿ 75-85, ಬಿಜೆಪಿ ಶೇ 48ರಷ್ಟು ಮತಗಳಿಕೆ ಪಡೆಯುವ ಸಾಧ್ಯತೆ
  • ಎಬಿಪಿ ಸಿ ವೋಟರ್ ಸಮೀಕ್ಷೆ: ಬಿಜೆಪಿಗೆ 58-71, ಕಾಂಗ್ರೆಸ್ 53-66, ಇತರೆ 0- ಇಂದ 5 ಸ್ಥಾನ
  • ಟುಡೇಸ್‌ ಚಾಣಕ್ಯ : ಬಿಜೆಪಿ+: 70; ಕಾಂಗ್ರೆಸ್+ : 56; ಇತರೆ : 0-3 ಸ್ಥಾನ
  • ರಿಪಬ್ಲಿಕ್‌—ಸಿಎನ್‌ಎಕ್ಸ್‌ : ಎನ್‌ಡಿಎ: 78-84; ಯುಪಿಎ: 40-50; ಇತರೆ: 1-3
  • ಸಮೀಕ್ಷೆಗಳ ಸಮೀಕ್ಷೆ : ಎನ್‌ಡಿಎ 72; ಯುಪಿಎ 53

ಪುದುಚೇರಿ

ಪುದುಚೇರಿ ವಿಧಾನಸಭೆಯ ಮತದಾನೋತ್ತರ ಸಮೀಕ್ಷೆಯ ಪ್ರಕಾರ ಎನ್‌ಡಿಎ ಮೈತ್ರಿಕೂಟ ಸರಳ ಪಡೆದು ಅಧಿಕಾರ ಹಿಡಿಯಲಿದೆ. ಮೂರು ಸಮೀಕ್ಷೆಗಳು ಈರೀತಿ ಭವಿಷ್ಯ ನುಡಿದಿವೆ.  ಎನ್.ರಂಗಸ್ವಾಮಿ ಅವರ ಎನ್‌.ಆರ್‌.ಕಾಂಗ್ರೆಸ್‌ ಮೈತ್ರಿಕೂಟದ ಪ್ರಮುಖ ಪಕ್ಷ. ಈ ಪಕ್ಷದ ಜತೆಗೆ ಬಿಜೆಪಿ ಮತ್ತು ಎಐಎಡಿಎಂಕೆ ಇವೆ. ಕಾಂಗ್ರೆಸ್ ನೇತೃತ್ವದ ಯುಪಿಎ ಎರಡನೇ ಸ್ಥಾನ ಗಳಿಸಬಹುದು ಎಂದು ತಿಳಿಸಿವೆ.

ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ಕೇಂದ್ರ ಸರ್ಕಾರವು ಮೂವರು ಶಾಸಕರನ್ನು ನಾಮ ನಿರ್ದೇಶನ ಮಾಡುತ್ತದೆ. ಕಳೆದ ವಿಧಾನಸಭೆಯಲ್ಲಿ ಮೂವರು ಬಿಜೆಪಿ ಶಾಸಕರನ್ನು ಕೇಂದ್ರ ನಾಮನಿರ್ದೇಶನ ಮಾಡಿತ್ತು. ಚುನಾವಣೆ ಸಮೀಪಿಸುತ್ತಿದ್ದಂತೆಯೇ ವಿ.ನಾರಾಯಣಸ್ವಾಮಿ ನೇತೃತ್ವದ ಕಾಂಗ್ರೆಸ್ ಸರ್ಕಾರದ ಪತನಗೊಂಡಿತು.

  • ರಿಪಬ್ಲಿಕ್‌ ಟಿವಿ : ಪುದುಚೇರಿಯಲ್ಲಿ ಎನ್‌ಡಿಎಗೆ ಅಧಿಕಾರಕ್ಕೆ
  • ಟೈಮ್ಸ್ ನೌ: ಎನ್‌ಡಿಎ: 21; ಯುಪಿಎ: 8; ಎಎಂಎಂಕೆ +: 0, ಎಂಎನ್ಎಂ+: 0, ಇತರೆ: 1
  • ಸಿಎನ್‌ಎಕ್ಸ್: ಎನ್‌ಡಿಎ: 18;ಯುಪಿಎ:12; ಎಎಂಎಂಕೆ +: 0, ಎಂಎನ್ಎಂ+: 0, ಇತರೆ: 1
  • ಸಮೀಕ್ಷೆಗಳ ಸಮೀಕ್ಷೆ: ಎನ್‌ಡಿಎ: 20; ಯುಪಿಎ: 10;

ಅಂತಿಮವಾಗಿ ಮೇ 2ರಂದು ಚುನಾವಣಾ ಫಲಿತಾಂಶ ಪ್ರಕಟಗೊಂಡ ಮೇಲೆ ವಿಧಾನಸಭಾ ಕ್ಷೇತ್ರಗಳ ಮತದಾರರ ಒಲವು ಯಾರ ಕಡೆಗೆ ಎಂಬುದು ಬಹಿರಂಗಗೊಳ್ಳಲಿದೆ.

Donate Janashakthi Media

Leave a Reply

Your email address will not be published. Required fields are marked *