ಬಾಗಲಕೋಟೆ| ಮಾಜಿ ಶಾಸಕ ವೀರಣ್ಣ ಚರಂತಿಮಠ ವಿರುದ್ಧ ಹಲ್ಲೆ ಆರೋಪ

ಬಾಗಲಕೋಟೆ: ಹಿಂದೂ ಜಾಗರಣಾ ವೇದಿಕೆ ಜಿಲ್ಲಾಧ್ಯಕ್ಷ ಆನಂದ ಮುತ್ತಗಿ ಮೇಲೆ ಬ್ಯಾಂಕ್ ಸಾಲ ಮರುಪಾವತಿ ಮಾಡದ ಹಿನ್ನಲೆಯಲ್ಲಿ ಮಾಜಿ ಶಾಸಕ ವೀರಣ್ಣ ಚರಂತಿಮಠ ವಿರುದ್ಧ ಹಲ್ಲೆ ಆರೋಪ ಕೇಳಿಬಂದಿದೆ.

ಹಲ್ಲೆಗೊಳಗಾದ ಆನಂದ ಮುತ್ತಗಿಗೆ ಸದ್ಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಶಾಸಕ ವೀರಣ್ಣ ಚರಂತಿಮಠ ಸೇರಿ ನಾಲ್ವರ ವಿರುದ್ಧ ಬಾಗಲಕೋಟೆ ಶಹರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಬಾಗಲಕೋಟೆ

ಚರಂತಿಮಠ ಬೀಳೂರು ಗುರುಬಸವ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿದ್ದಾರೆ. ಇದೇ ಸಹಕಾರ ಸಂಘದಿಂದ ಆನಂದ ಮುತ್ತಗಿ 35 ಲಕ್ಷ ರೂಪಾಯಿ ಸಾಲ ಪಡೆದಿದ್ದರು. 2018ರಿಂದ ಸಾಲ ಮರುಪಾವತಿ ಮಾಡದೆ ಬಾಕಿ ಉಳಿಸಿಕೊಂಡಿದ್ದರು. ಇದೀಗ ಸಾಲದ ಹಣ ಕಟ್ಟದಿದ್ದಕ್ಕೆ ವೀರಣ್ಣ ಚರಂತಿಮಠ ಹಲ್ಲೆ ಮಾಡಿದ್ದಾರೆಂದು ಆರೋಪ ಮಾಡಿದ್ದಾರೆ. ಬಾಗಲಕೋಟೆ

ಇದನ್ನೂ ಓದಿ:  ರಾಜ ಸರ್ಕಾರದ ವಿರುದ್ಧ  60% ಕಮಿಷನ್ ಆರೋಪ: ಎಚ್‌ಡಿಕೆ ವಿರುದ್ಧ ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ವಾಗ್ದಾಳಿ

ನನಗೆ, ನನ್ನ ಕುಟುಂಬದವರಿಗೆ ಏನಾದ್ರೂ ಆದರೆ ಚರಂತಿಮಠ ಕಾರಣ: ಆನಂದ ಮುತ್ತಗಿ

ಈ ಬಗ್ಗೆ ಆನಂದ ಮುತ್ತಗಿ ಮಾಧ್ಯಮದವರೊಂದಿಗೆ ಮಾತನಾಡಿದ್ದು, ಬೀಳೂರು ಗುರುಬಸವ ಪತ್ತಿನ ಸಹಕಾರ ಸಂಘದಿಂದ ಸಾಲ ಪಡೆದಿದ್ದೆ. ಉದ್ಯಮದಲ್ಲಿ ನಷ್ಟವಾಗಿದ್ದರಿಂದ 35 ಲಕ್ಷ ರೂ. ಸಾಲ ಮರುಪಾವತಿಸಿರಲಿಲ್ಲ. ಜಮೀನು ಮಾರಾಟ ಮಾಡಿ ಸಾಲದ ಹಣ ಹಿಂದಿರುಗಿಸಲು ನಿರ್ಧರಿಸಿದ್ದೆ ಎಂದಿದ್ದಾರೆ.

ಸಹಕಾರ ಸಂಘದ ಸಿಬ್ಬಂದಿ ನನ್ನನ್ನು ಬಸವೇಶ್ವರ ಶಿಕ್ಷಣ ಸಂಸ್ಥೆ ಸಂಘದ ಕಚೇರಿಗೆ ಕರೆದುಕೊಂಡು ಹೋಗಿದ್ದರು. ನಾನು ಕಚೇರಿಗೆ ಹೋಗ್ತಿದ್ದಂತೆ ಅಧ್ಯಕ್ಷ ವೀರಣ್ಣ ಚರಂತಿಮಠ ನಿಂದಿಸಿದ್ದರು. ಅವಾಚ್ಯ ಶಬ್ದಗಳಿಂದ ನಿಂದಿಸಿ ಮಾನಸಿಕವಾಗಿ ಹಿಂಸಿಸಿ ಹಲ್ಲೆ ಮಾಡಿದ್ದರು.

ಹಲ್ಲೆಯಿಂದ ನಾನು ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದೇನೆ. ನನ್ನ ಮೇಲೆ ಹಲ್ಲೆ ನಡೆಸಿದ ವೀರಣ್ಣ ಚರಂತಿಮಠ ಸೇರಿದಂತೆ ನಾಲ್ವರ ವಿರುದ್ಧ ದೂರು ದಾಖಲಿಸಿದ್ದೇನೆ. ನನಗೆ, ನನ್ನ ಕುಟುಂಬದವರಿಗೆ ಏನಾದ್ರೂ ಆದರೆ ಚರಂತಿಮಠ ಕಾರಣ ಎಂದು ಹೇಳಿದ್ದಾರೆ.

ಇದನ್ನೂ ನೋಡಿ: ಶೇ.60 ಕಮಿಷನ್ ಆರೋಪ ಸಾಬೀತು ಮಾಡಲಿ: ಎಚ್‌ಡಿಕೆಗೆ ಸಿಎಂ ಸಿದ್ದರಾಮಯ್ಯ ಸವಾಲು Janashakthi Media

Donate Janashakthi Media

Leave a Reply

Your email address will not be published. Required fields are marked *