ಕೃಷಿಕಾಯ್ದೆ ವಿರೋಧಿಸಿ ಬಿಜೆಪಿಗೆ ರಾಜೀನಾಮೆ ನೀಡಿದ ಮಾಜಿ ಶಾಸಕ

ಪಂಜಾಬ್:  ಕೇಂದ್ರ ಸರಕಾರ ಜಾರಿಗೆ ತಂದ ಕೃಷಿ ಕಾಯ್ದೆಯನ್ನು ವಿರೋಧಿಸಿ ನಡೆಸಿದ್ದ ಪ್ರತಿಭಟನೆಯಲ್ಲಿ ರೈತರು ಮೃತಪಟ್ಟಿರುವ ಕಾರಣವನ್ನು ನೀಡಿ ಬಿಜೆಪಿ ಮಾಜಿ ಶಾಸಕ ಸುಖ್ಪಾಲ್ ಸಿಂಗ್‌ರವರು ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ.

ಈ ಕುರಿತು ತಮ್ಮ ನಿವಾಸದಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ನನ್ನೂ, ಕೃಷಿ ಕಾಯ್ದೆಗಳ ವಿರುದ್ಧ ನಡೆಯುತ್ತಿರುವ ಆಂದೋಲನದಲ್ಲಿ ಹಲವಾರು ಮಂದಿ ರೈತರು ಮೃತಪಟ್ಟಿರುವುದು ನನಗೆ ಮತ್ತು ನನ್ನ ಬೆಂಬಲಿಗರಿಗೆ ಅಸಮಾಧಾನ ತಂದಿದೆ.  ಮುಂಬರುವ ವಿಧಾನಸಭಾ ಚುನಾವಣೆಗೆ ಮುಂಚೆ ಏನಾದರೂ ನಿರ್ಧಾರ ಕೈಗೊಳ್ಳಬೇಕೆಂದು ನನ್ನ ಬೆಂಬಲಿಗರು ತಿಳಿಸಿದ್ದರು ಹಾಗಿಗಿ ಈ ನಿರ್ಧಾರ ತೆಗೆದುಕೊಂಡಿದ್ದೇನು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ : ಕೇಂದ್ರ ಕೃಷಿ ಮಸೂದೆಗೆ ವಿರೋಧ; ಎನ್​ಡಿಎ ಮೈತ್ರಿ ತೊರೆದ ಅಕಾಲಿದಳ

ಕಳೆದ ಸೆಪ್ಟೆಂಬರ್‌ನಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದ ಕೃಷಿ ಸುಧಾರಣೆ ಸಂಬಂಧ ಮೂರು ಕಾನೂನುಗಳ ವಿಚಾರದಲ್ಲಿ ಪ್ರತಿಭಟನೆ ಮಾಡುತ್ತಿರುವ ರೈತರ ಬೇಡಿಕೆಗಳನ್ನು ಆಲಿಸುತ್ತಿಲ್ಲ ಎಂದು ಆಪಾದಿಸಿದ್ದಾರೆ. “ನನ್ನ ಮನೆಯ ಮೇಲೆ ಬಿಜೆಪಿ ಧ್ವಜ ಯಾವಾಗಲೂ ಹಾರಾಡುತ್ತಿತ್ತು. ಆದರೆ ಈಗ ಭಾರವಾದ ಹೃದಯದಿಂದ ಅದನ್ನು ತೆಗೆದುಹಾಕಿ, ಕಪ್ಪು ಧ್ವಜ ಹಾರಿಸಿ ರೈತರ ಸಮಸ್ಯೆಗಳನ್ನು ಬಗೆಹರಿಸದ ಕೇಂದ್ರ ಸರ್ಕಾರದ ವಿರುದ್ಧ ನನ್ನ ಸಿಟ್ಟು ತೋರಿಕೊಳ್ಳುತ್ತಿದ್ದೇನೆ”  ಎಂದು ಸುಖ್ಪಾಲ್‌ ತಿಳಿಸಿದ್ದಾರೆ.

ಸಂಸದೀಯ ವ್ಯವಹಾರಗಳ ಮಾಜಿ ಕಾರ್ಯದರ್ಶಿಯೂ ಆಗಿದ್ದ ಸುಖ್ಪಾಲ್‌ ಸಿಂಗ್‌,  ಫಿರೋಝ್‌ ಪುರದಲ್ಲಿ ಬಿಜೆಪಿಯಿಂದ ಚುನಾವಣೆಗೆ ಸ್ಫರ್ಧಿಸಿ 2002 ಮತ್ತು 2007ರಲ್ಲಿ ಎರಡು ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದರು. ಆದರೆ 2011 ಮತ್ತು 2017ರಲ್ಲಿ ಅವರು ಪರಾಜಿತರಾಗಿದ್ದರು.

Donate Janashakthi Media

Leave a Reply

Your email address will not be published. Required fields are marked *