ಬೆಂಗಳೂರು : ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರನ್ನ ಉತ್ತರಪ್ರದೇಶದ ಪೊಲೀಸರು ಗೃಹಬಂಧನದಲ್ಲಿರಿಸಿದ್ದು, ಈ ವರ್ತನೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿ ಆಕ್ರೋಶ ಹೊರಹಾಕಿರುವ ಸಿದ್ದರಾಮಯ್ಯ, ಇದು ಬಿಜೆಪಿಯ ತಾಲಿಬಾನಿ ಸಂಸ್ಕೃತಿ ಎಂದು ಆರೋಪಿಸಿದ್ದಾರೆ.
ರೈತರ ಪರ ನಿಲ್ಲೋದನ್ನು ತಪ್ಪಿಸುವ ಪರಿ ಇದಾಗಿದ್ದು, ಪ್ರಜಾಪ್ರಭುತ್ವಕ್ಕೆ ಇದು ಕಪ್ಪುಚುಕ್ಕೆ ಎಂದು ಬರೆದುಕೊಂಡಿದ್ದಾರೆ. ಇದೇ ವೇಳೆ ದೆಹಲಿಯಲ್ಲಿ ಪ್ರತಿಭಟನಾ ನಿರತ ರೈತರ ಮೇಲೆ ಕಾರು ಹತ್ತಿಸಿದ ಪ್ರಕರಣವನ್ನೂ ಖಂಡಿಸಿದ್ದಾರೆ.
ಪ್ರತಿರೋಧ- ಭಿನ್ನಾಭಿಪ್ರಾಯವನ್ನು ಸಹಿಸದ@BJP4India
ತನ್ನ ತಾಲಿಬಾನಿ ಮನಸ್ಥಿತಿಯನ್ನು
ಬತ್ತಲು ಮಾಡಿಕೊಳ್ಳುತ್ತಿದೆ.ರೈತರ ಹತ್ಯೆ ನಡೆದ ಸ್ಥಳಕ್ಕೆ ಭೇಟಿ ನೀಡಲು ಹೊರಟ ಕಾಂಗ್ರೆಸ್ ನಾಯಕಿ @priyankagandhi ಅವರನ್ನು ಬಂಧಿಸಿರುವ @myogiadityanath ಸರ್ಕಾರದ ಕೃತ್ಯ ಖಂಡನೀಯ.
3/3#FarmersProtest pic.twitter.com/kuHku7YVUr— Siddaramaiah (@siddaramaiah) October 4, 2021
ರೈತರ ಅವರ ಹಕ್ಕಿಗಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಮುಗ್ಧ ರೈತರ ಮೇಲೆ ಈ ರೀತಿ ಮಾಡಿದ್ದು ಸರಿಯಲ್ಲ. ಈ ಘಟನೆಯನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದಿದ್ದಾರೆ. ಅಲ್ಲದೆ ಬಿಜೆಪಿ ಆಡಳಿತವಿರುವ ರಾಜ್ಯಗಳು ಹಾಗೂ ಇಡೀ ದೇಶ ಗೂಂಡಾ ರಾಜ್ಯವಾಗಿ ಬದಲಾಗುತ್ತಿದೆ. ಬಿಜೆಪಿ ತಪ್ಪನ್ನು ಪ್ರಶ್ನೆ ಮಾಡುವಂತಾ ಹಕ್ಕೆ ಇಲ್ಲದಂತಾಗಿದೆ. ಇದು ಮೋದಿ ಆಡಳಿತದ ನಿರಂಕುಶ ಪ್ರಭುತ್ವವೇ ಎಂದು ಮಾಜಿ ಸಿಎಂ ಪ್ರಶ್ನಿಸಿದ್ದಾರೆ.