ಮುಂಬೈ: ಇತ್ತೀಚೆಗೆ ಪ್ರಕಟಗೊಂಡ ಮಹಾರಾಷ್ಟ್ರ ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ ಪರಾಭವಗೊಂಡಿರುವ ಮಹಾವಿಕಾಸ್ ಅಘಾಡಿ ಅಭ್ಯರ್ಥಿಗಳು ತಮ್ಮ ಕ್ಷೇತ್ರಗಳ ಇವಿಎಂ-ವಿವಿಪ್ಯಾಟ್ ಗಳ ಪರಿಶೀಲನೆಗೆ ಕೋರಲು ನಿರ್ಧರಿಸಿದ್ದಾರೆ ಎಂದು ವಿರೋಧ ಪಕ್ಷಗಳ ಮೈತ್ರಿಕೂಟದ ನಾಯಕರೊಬ್ಬರು ತಿಳಿಸಿದ್ದಾರೆ.
ಮಂಗಳವಾರ ಶಿವಸೇನೆ (ಉದ್ಧವ್ ಬಣ) ಮುಖ್ಯಸ್ಥ ಉದ್ಧವ್ ಠಾಕ್ರೆ ರೊಂದಿಗಿನ ಸಂವಾದದ ಸಂದರ್ಭದಲ್ಲಿ ವಿದ್ಯುನಾನ ಮತಯಂತ್ರಗಳ (ಇವಿಎಂ) ಕಾರ್ಯನಿರ್ವಹಣೆಯತ್ತ ವಿರೋಧ ಪಕ್ಷದ ಶಿವಸೇನೆಯ (ಯುಬಿಟಿ) ಹಲವು ಸೋತ ಅಭ್ಯರ್ಥಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಮುಂಬೈನ ತಮ್ಮ ನಿವಾಸದಲ್ಲಿ ನಡೆದ ಸಭೆಯಲ್ಲಿ ಠಾಕ್ರೆ, ತಮ್ಮ ಪಕ್ಷದ ನೀರಸ ಪ್ರದರ್ಶನದ ಬಗ್ಗೆ ಅವಲೋಕಿಸಿದರು.
ಇದನ್ನೂ ಓದಿ: ಅದಾನಿ ಲಂಚ ಪ್ರಕರಣವೂ- ದುಬಾರಿ ವಿದ್ಯುತ್ ದರವೂ
ಕಳೆದ ವಾರ ನಡೆದ ಚುನಾವಣಾ ತೀರ್ಪು ಶಿವಸೇನೆ, ಬಿಜೆಪಿ ಮತ್ತು ಎನ್ಸಿಪಿ ಒಳಗೊಂಡಿರುವ ಮಹಾಯುತಿ ಒಕ್ಕೂಟವು ಅಧಿಕಾರವನ್ನು ಉಳಿಸಿಕೊಂಡಿದೆ, ಮಹಾ ವಿಕಾಸ್ ಅಘಾಡಿ (ಎಂವಿಎ) ಹೀನಾಯ ಸೋಲು ಕಂಡಿದೆ. 288 ಸದಸ್ಯರ ಸದನದಲ್ಲಿ ಮಹಾಯುತಿ 230 ಸ್ಥಾನಗಳನ್ನು ಮತ್ತು ಎಂವಿಎ ಕೇವಲ 46 ಸ್ಥಾನಗಳನ್ನು ಗೆದ್ದಿದೆ. ಠಾಕ್ರೆ ನೇತೃತ್ವದ ಸೇನೆ (ಯುಬಿಟಿ) 20 ಸ್ಥಾನಗಳನ್ನು ಗೆಲ್ಲುವ ಮೂಲಕ ವಿರೋಧ ಪಾಳಯದಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ನಂತರದಲ್ಲಿ ಕಾಂಗ್ರೆಸ್ 16 ಕ್ಷೇತ್ರಗಳನ್ನು, ಅದರ ಎನ್ಸಿಪಿ (ಶರದ್ ಪವಾರ್) 10 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.
ಪಿಟಿಐ ಜೊತೆ ಮಾತನಾಡಿದ ಮುಂಬೈನ ಚಂಡಿವಾಲಿ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಯಲ್ಲಿ ಪರಾಭವಗೊಂಡ ಕಾಂಗ್ರೆಸ್ ನಾಯಕ ಆರಿಫ್ ವಸೀಮ್ ಖಾನ್, ಠಾಕ್ರೆ ರೊಂದಿಗೆ ಚರ್ಚೆ ನಡೆಸಿದ್ದೇನೆ, ಇವಿಎಂಗಳನ್ನು ಟ್ಯಾಂಪರಿಂಗ್ ಮಾಡಿರಬಹುದೆಂದು ತಮ್ಮ ಪಕ್ಷದ ಕಾರ್ಯಕರ್ತರಿಂದ ದೂರುಗಳು ಬಂದಿವೆ ಎಂದು ಹೇಳಿದರು.
ಇದನ್ನೂ ನೋಡಿ: ವಚನಾನುಭವ 20 | ಕಾಣದ ಠಾವಿನಲ್ಲಿ | ಮನುಷ್ಯನೊಳಗಿನ ಕಲ್ಮಷ ತೊಳೆದ ಬಸವಣ್ಣ – ಮೀನಾಕ್ಷಿ ಬಾಳಿ Janashakthi Media