ನವದೆಹಲಿ: ಕೆಲವು ಸಂದರ್ಭದಲ್ಲಿ ಭಾರತ ಸರ್ವೋಚ್ಚ ನ್ಯಾಯಾಲಯಕ್ಕೆ ಸಾರ್ವಜನಿಕ ಹಿತಾಸಕ್ತಿಯೆಂದು ವಿವಿಧ ಅರ್ಜಿಗಳು ಸಲ್ಲಿಕೆಯಾಗುತ್ತಿರುತ್ತವೆ. ಕೆಲವು ಅರ್ಜಿಗಳು ಅದು ನ್ಯಾಯಾಲದ ಪ್ರಾಮುಖ್ಯತೆಯನ್ನೇ ಕಡೆಗಣಿಸುವ ಮಟ್ಟದಲ್ಲಿರುತ್ತವೆ. ಕೇವಲ ಪ್ರಚಾರದ ದೃಷ್ಟಿಯಿಂದ ಸಲ್ಲಿಕೆಯಾಗುವ ಹಲವು ಅರ್ಜಿಗಳನ್ನು ಸರ್ವೋಚ್ಚ ನ್ಯಾಯಾಲಯ ವಜಾ ಮಾಡಿ ಅರ್ಜಿದಾರರಿಗೆ ದಂಡ ವಿಧಿಸಲಿದೆ.
ಇಂಥದ್ದೆ ಒಂದು ಪ್ರಸಂಗದಲ್ಲಿ ಸರ್ವೋಚ್ಚ ನ್ಯಾಯಾಲಯಕ್ಕೆ ಅರ್ಜಿಯೊಂದು ಸಲ್ಲಿಕೆಯಾಗಿದ್ದು, ನ್ಯಾಯಮೂರ್ತಿಗಳಾದ ಎಂ.ಆರ್.ಷಾ ಮತ್ತು ಸಿ.ಟಿ.ರವಿಕುಮಾರ್ ಅವರ ಪೀಠವು ಸಾರ್ವಜನಿಕ ಅರ್ಜಿಯನ್ನು ವಜಾಗೊಳಿಸಿ 1 ಲಕ್ಷ ರೂ. ದಂಡ ವಿಧಿಸಿದೆ.
ಅರ್ಜಿದಾರರು, ಸತ್ಸಂಗದ ಸಂಸ್ಥಾಪಕ ಶ್ರೀ ಠಾಕೂರ್ ಅನುಕೂಲ್‌ಚಂದ್ರ ಅವರನ್ನು ‘ಪರಮಾತ್ಮ’ ಎಂದು ಘೋಷಿಸಬೇಕೆಂದು ಕೋರಿ ಅರ್ಜಿ ಸಲ್ಲಿಸಿದರು. ಇದನ್ನು ವಜಾಗೊಳಿಸಿದ ನ್ಯಾಯಪೀಠ ಭಾರತ ಜಾತ್ಯತೀತ ರಾಷ್ಟ್ರ. ಪ್ರತಿಯೊಬ್ಬರಿಗೂ ಅವರ ಧರ್ಮವನ್ನು ಪಾಲಿಸುವ ಹಕ್ಕಿದೆ ಸ್ಪಷ್ಟವಾಗಿ ತಿಳಿಸಿದೆ.
ಅರ್ಜಿದಾರ ಉಪೇಂದ್ರ ನಾಥ್ ದಾಲೈ ತಮ್ಮ ಅರ್ಜಿಯನ್ನು ಓದಲು ಮುಂದಾಗುತ್ತಿದ್ದಂತೆಯೇ, ಓದಲು ತಡೆ ನೀಡಿದ ನ್ಯಾಯಪೀಠ, ಇದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯೇ? ಇದು ಹೇಗೆ ಸಾಧ್ಯ? ಪ್ರತಿಯೊಬ್ಬರಿಗೂ ಅವರ ಧರ್ಮವನ್ನು ಪಾಲಿಸುವ ಹಕ್ಕಿದೆ. ಹೀಗಿರುವಾಗ ನಿರ್ಧಿಷ್ಟ ಧರ್ಮವನ್ನು ಪಾಲಿಸಿ ಎಂದು ಜನರಿಗೆ ನಾವು ಹೇಗೆ ಹೇಳಲು ಸಾಧ್ಯ? ನೀವು ಬೇಕಾದರೆ ಠಾಕೂರ್ ಚಂದ್ರರನ್ನು ಪರಮಾತ್ಮ ಎಂದು ಪರಿಗಣಿಸಿ. ಅದನ್ನು ಬೇರೆಯವರ ಮೇಲೆ ಯಾಕೆ ಹೇರುತ್ತೀರಿ ಎಂದು ತಿಳಿಸಿದೆ.
ಉಪನ್ಯಾಸ ಕೇಳಲು ನಾವಿಲ್ಲ ಬಂದಿಲ್ಲ, ನಮ್ಮದು ಜಾತ್ಯತೀತ ದೇಶ. ಪಿಐಎಲ್ ಎಂಬುದಕ್ಕೆ ಅರ್ಥ ಇರುತ್ತದೆ” ಎಂದು ನ್ಯಾಯಮೂರ್ತಿ ಶಾ ಹೇಳಿದರು. ಭಾರತ ಜಾತ್ಯತೀತ ರಾಷ್ಟ್ರವಾಗಿದ್ದು, ಪಿಐಎಲ್ ಮೂಲಕ ಅಂತಹ ಪ್ರಾರ್ಥನೆ ಮಾಡುವಂತಿಲ್ಲ. ಅರ್ಜಿಯನ್ನು ವಜಾಗೊಳಿಸಲಾಗಿದೆ ಎಂದು ಪೀಠ ಆದೇಶದಲ್ಲಿ ತಿಳಿಸಿದೆ.
ಠಾಕೂರ್ ಚಂದ್ರ ಅವರು ಬಾಂಗ್ಲಾದೇಶದ ಪಬ್ನಾದಲ್ಲಿ 1888ರ ಸೆಪ್ಟೆಂಬರ್ 14 ರಂದು ಜನಿಸಿದರು. ಅಲ್ಲದೇ ಸತ್ಸಂಗದ ಸ್ಥಾಪಕರು ಹಾಗೂ ಅಧ್ಯಾತ್ಮ ಪ್ರತಿಪಾದಕರಾಗಿದ್ದರು. ಅವರು, 27 ಜನವರಿ 1969ರಂದು ನಿಧನ ಹೊಂದಿದರು.