ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಜನರನ್ನು ಸ್ಥಳಾಂತರ : ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಮಳೆ,ಪ್ರವಾಹದಿಂದಾಗುವ ಜೀವಹಾನಿ ತಡೆಯಲು  ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲಾಡಳಿತಗಳಿಗೆ ಹೇಳಿದರು. ಪ್ರವಾಹಪೀಡಿತ ಪ್ರದೇಶಗಳ ಜನರ ಮನವೊಲಿಸಿ, ಇಲ್ಲವೇ ಬಲವಂತವಾಗಿಯಾದರೂ ಸ್ಥಳಾಂತರಿಸಬೇಕು ಎಂದು ಸಿದ್ದರಾಮಯ್ಯನವರು ಜಿಲ್ಲಾಡಳಿತದ ಅಧಿಕಾರಿಗಳಿಗೆ ಆದೇಶಿಸಿದರು.

ಬುಧವಾರ ಜಿಲ್ಲಾಧಿಕಾರಿಗಳು ಜಿಲ್ಲಾ ಪಂಚಾಯಿತಿ ಸಿಇಒಗಳ ಜತೆ ನಡೆಸಿದ ವಿಡಿಯೊ ಸಂವಾದದಲ್ಲಿ ರಾಜ್ಯದ ಹವಾಮಾನ ಪರಿಸ್ಥಿತಿ,ಮಳೆ ಹಾಗೂ ಕೃಷಿ ಚಟುವಟಿಕೆಗಳ ಪರಿಶೀಲನೆಗಾಗಿ ಬಗ್ಗೆ ಅವರು ಮಾತನಾಡಿದರು.

ಮಳೆಯಿಂದಾಗಿ ಉಡುಪಿಯಲ್ಲಿ 9 ಜನ ಸೇರಿದಂತೆ ರಾಜ್ಯದ 64 ಜನರು ಮೃತಪಟ್ಟಿದ್ದಾರೆ.ಕಾಲು ಜಾರುವ ಕಡೆಗಳಲ್ಲಿ ಜನರನ್ನು ಹೋಗದಂತೆ,ತುಂಬಿ ಹರಿವ ನದಿಗಳನ್ನು ದಾಟದಂತೆ ಜಾಗೃತಿ ಮೂಡಿಸಬೇಕು.ಶಿಥಿಲ ಶಾಲಾ,ಕಾಲೇಜು,ಅಂಗನವಾಡಿ ಕಟ್ಟಡಗಳಲ್ಲಿ ಮಕ್ಕಳ ಪ್ರವೇಶ ನಿರ್ಬಂಧಿಸಬೇಕು.ಸಮೀಪದ ಕಟ್ಟಡಗಳಿಗೆ ಸ್ಥಳಾಂತರಿಸಬೇಕು,ಲಭ್ಯವಿರುವ ಅನುದಾನ ಬಳಸಿಕೊಂಡು ದುರಸ್ತಿಗೆ ಕ್ರಮ ಕೈಗೊಳ್ಳಬೇಕು.ಆಯಾ ಜಿಲ್ಲೆಗಳ ಉಸ್ತುವಾರಿ ಸಚಿವರು ನಿಗಾವಹಿಸಬೇಕು ಎಂದರು.

ಪ್ರವಾಹ ಇಳಿಯತ್ತಿದ್ದಂತೆ ಮತ್ತೆ ಮೂಲ ಗ್ರಾಮಗಳಿಗೆ ಮರಳಿದ್ದಾರೆ. ಈ ಬಾರಿಯೂ ನಿರಂತರ ಮಳೆಯಾಗುತ್ತಿದ್ದು ಪ್ರವಾಹದ ಭೀತಿ ಎದುರಾಗಿದೆ.ಇಂತಹ ಸಮಯದಲ್ಲಿ ಜೀವಹಾನಿ,ಅನಾಹುತಗಳನ್ನು ತಡೆಯಬೇಕು.ಅದಕ್ಕಾಗಿ ತಗ್ಗಿನ ಪ್ರದೇಶಗಳು,ಮಣ್ಣು ಕುಸಿಯುವ ಸ್ಥಳಗಳ ಜನರ ,ಮನವೊಲಿಕೆ ಮಾಡುಬೇಕು.ಒಪ್ಪದಿದ್ದರೆ ಬಲವಂತವಾಗಿಯಾದರೂ ಸ್ಥಳಾಂತರ ಮಾಡಬೇಕು. ಹಿಂದೆಲ್ಲ ಪ್ರವಾಹದಿಂದ ಮುಳುಗಡೆಯಾಗುತ್ತಿದ್ದ ಗ್ರಾಮಗಳ ಜನರಿಗೆ ಸಮೀಪದ ಎತ್ತರ ಪ್ರದೇಶಗಳಲ್ಲಿ ಪರ್ಯಾಯ ಮನೆಗಳನ್ನು ಕಟ್ಟಿಕೊಡಲಾಗಿದೆ. ಆದರೂ,ಬಹುತೇಕರು ಅಲ್ಲಿಗೆ ಸ್ಥಳಾಂತರಗೊಂಡಿಲ್ಲ. ಹಿಂದನ ಪ್ರವಾಹದ ಅನುಭವದ ಆಧಾರದಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು.ಪೊಲೀಸ್‌,ಕಂದಾಯ,ನೀರಾವರಿ, ಗ್ರಾಮೀಣಾಭಿವೃದ್ಧಿ ಇಲಾಖೆಗಳ ನಡುವೆ ಸಮನ್ವಯ ಅಗತ್ಯ.ಎಲ್ಲ ಇಲಾಖೆಗಳು ಸಮನ್ವಯದಿಂದ ಕೆಲಸ ಮಾಡಿದರೆ ಜೀವಹಾನಿ ತಪ್ಪಿಸಬಹುದು.ಅಧಿಕಾರಿಗಳು ತಾವು ಕೆಲಸ ನಿರ್ವಹಿಸುವ ಕೇಂದ್ರಗಳಲ್ಲೇ ಉಳಿಯಬೇಕು.ವಾರ್‌ ರೂಂ ತೆರೆಯಬೇಕು ಎಂದರು.

ಇದನ್ನೂ ಓದಿ:ರಾಜ್ಯದಲ್ಲಿ ಅಲ್ಪಸಂಖ್ಯಾತರು ಆದಿವಾಸಿ ಬುಡಕಟ್ಟು ಸಮುದಾಯಗಳ ರಕ್ಷಣೆಗೆ ಸರ್ಕಾರ ಬದ್ಧ:ಸಿಎಂ

ಕಡಲು ಕೊರೆತ ತಡೆಯಲು ಶಾಶ್ವತ ಪರಿಹಾರ ಕಂಡುಕೊಳ್ಳಬೇಕು.ತಗ್ಗು ಪ್ರದೇಶಗಳಲ್ಲಿ ಶಾಶ್ವತ ಪರ್ಯಾಯ ರಸ್ತೆ ನಿರ್ಮಾಣ ಮಾಡಬೇಕು.ಜಲಾಶಯಗಳಿಂದ ನದಿಗೆ ನೀರು ಬಿಡುವ ಮೊದಲು ಸಾರ್ವಜನಿಕರಿಗೆ ಮಾಹಿತಿ ನೀಡಬೇಕು ಎಂದು  ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿದರು.

Donate Janashakthi Media

Leave a Reply

Your email address will not be published. Required fields are marked *