ಯೂರೋ ಕಪ್ ಫುಟ್ಬಾಲ್: ಎರಡನೇ ಬಾರಿ ಚಾಂಪಿಯನ್ ಆದ ಇಟಲಿ

ಲಂಡನ್: ವೆಂಬ್ಲೆಯಲ್ಲಿ ಭಾನುವಾರ ಮಧ್ಯರಾತ್ರಿ ಪ್ರಶಸ್ತಿ ಸುತ್ತಿನ ಪಂದ್ಯದ ಅಂತಿಮ ಹಂತದ ಯೂರೋ ಕಪ್ ರೋಚಕ ಪಂದ್ಯ ಪೆನಾಲ್ಟಿ ಶೂಟೌಟ್‌ನಲ್ಲಿ 3-2 ಗೋಲುಗಳಿಂದ ಇಂಗ್ಲೆಂಡ್‌ ತಂಡವನ್ನು ಸೋಲಿಸಿದ ಇಟಲಿಯು ಎರಡನೇ ಬಾರಿಗೆ ಚಾಂಪಿಯನ್‌ ಪಟ್ಟವನ್ನು ಪಡೆದುಕೊಂಡಿದೆ.

1968ರ ನಂತರ ಮತ್ತೊಮ್ಮೆ ಯುರೋಪಿಯನ್ ಚಾಂಪಿಯನ್‌ಶಿಪ್ ಪಟ್ಟಕ್ಕೆ ಏರಿದೆ ಇಟಲಿ ತಂಡ. ಪಂದ್ಯದ ಆರಂಭಿಕ ಹಂತದಲ್ಲಿ 1-1 ಗೋಲುಗಳಿಂದ ಡ್ರಾ ಆಯಿತು. ಪೆನಾಲ್ಟಿ ಶೂಟೌಟ್‌ನಲ್ಲಿ 3-2 ಗೋಲುಗಳ ಅಂತರದಿಂದ ಇಟಲಿ ಪಂದ್ಯವನ್ನು ಗೆದ್ದುಕೊಂಡಿತು.

ಇದನ್ನು ಓದಿ: ಯೂರೋ ಕಪ್ ಫುಟ್ಬಾಲ್: ಇಟಲಿಯನ್ನು ಎದುರಿಸಲಿದೆ ಇಂಗ್ಲೇಂಡ್‌

67 ಸಾವಿರ ಪ್ರೇಕ್ಷಕರ ವೀಕ್ಷಕರು ಇದ್ದ ಪಂದ್ಯ ಆರಂಭವಾಗಿ ಎರಡನೇ ನಿಮಿಷದಲ್ಲೇ ಇಂಗ್ಲೆಂಡ್ ತಂಡ ಮೊದಲ ಗೋಲು ಗಳಿಸಿತ್ತು. ತಂಡದ ಲ್ಯೂಕ್ ಶಾ ಆರಂಭದಲ್ಲೇ ಭರ್ಜರಿ ಗೋಲು ಗಳಿಸಲು ಸಫಲರಾದರು. ಮೊದಲ ಬಾರಿ ವಿಶ್ರಾಂತಿಗೆ ತೆರಳುವ ಮುನ್ನ ಹ್ಯಾರಿ ಕೇನ್‌ ಬಳಗ 1-0 ಮುನ್ನಡೆಯನ್ನೇ ಕಾಯ್ದುಕೊಂಡಿದ್ದವು. ನಂತರದ ಪಂದ್ಯಾವಳಿಯಲ್ಲಿ 67 ನಿಮಿಷದವರೆಗೂ ಉಭಯ ತಂಡಗಳು ಗೋಲುಗಳಿಸಲು ಸಾಧ್ಯವಾಗಲಿಲ್ಲ. ನಂತರ ಇಟಲಿಯ ಲಿಯೊನಾರ್ಡೊ ಬೊನುಸಿ ಗೋಲು ಗಳಿಸುವ ಮೂಲಕ ಪಂದ್ಯ 1-1 ಗೋಲುಗಳಿಂದ ಡ್ರಾ ಆಯಿತು.

ಫುಟ್ಬಾಲ್‌ ತಂಡದ ಹಣಾಹಣಿಯಲ್ಲಿ ಪೆನಾಲ್ಟಿ ಶೂಟೌಟ್‌ನಲ್ಲಿ 3-2 ಗೋಲುಗಳಿಂದ ಇಂಗ್ಲೆಂಡ್ ತಂಡವನ್ನು ಸೋಲಿಸುವ ಮೂಲಕ ಇಟಲಿ ತಂಡ ಯೂರೋ ಕಪ್‌ ಗೆದ್ದುಕೊಂಡಿತು. ಈ ಮೂಲಕ ಫೈನಲ್‌ ಹಂತಕ್ಕೂ ಪ್ರವೇಶಿಸಲು ಸಾಧ್ಯವಾಗದಿದ್ದ ಇಂಗ್ಲೆಂಡ್‌ ತಂಡದ ಯುರೋಪಿಯನ್ ಚಾಂಪಿಯನ್‌ಶಿಪ್ ಟ್ರೋಫಿ ಗೆಲ್ಲುವ ಅವಕಾಶ ತಪ್ಪಿತು.

ಇದನ್ನು ಓದಿ: ಯೂರೋ 2020: ಚಾಂಪಿಯನ್‌ ಪಟ್ಟ ಕಳೆದುಕೊಂಡ ಫ್ರಾನ್ಸ್‌-ರೋಚಕ ಜಯ ಸಾಧಿಸಿದ ಸ್ವಿಟ್ಜರ್‌ಲ್ಯಾಂಡ್

ಕಳೆದ 2000 ಹಾಗೂ 2012ರಲ್ಲಿ ತವರು ನೆಲದಲ್ಲಿ ನಡೆದಿದ್ದ ಫೈನಲ್‌ ಹಣಾಹಣಿಯಲ್ಲಿ ಸೋತು ಭಾರಿ ನಿರಾಸೆ ಅನುಭವಿಸಿದ್ದ ಇಟಲಿಗೆ ಪ್ರಸಕ್ತ ಪಂದ್ಯದಲ್ಲಿ ಪೆನಾಲ್ಟಿ ಶೂಟೌಟ್‌ನಲ್ಲಿ ಇಂಗ್ಲೆಂಡ್‌ ತಂಡವನ್ನು ಮಣಿಸಿ 2020ರ ಯುರೋ ಕಪ್‌ ಗೆದ್ದುಕೊಂಡಿದೆ. 2006ರ ಫಿಫಾ ವಿಶ್ವಕಪ್ ಗೆಲುವಿನ ನಂತರ ಇಟಲಿ ಗೆದ್ದ ಮೊದಲ ಪ್ರಮುಖ ಅಂತರರಾಷ್ಟ್ರೀಯ ಟ್ರೋಫಿ ಇದಾಗಿದೆ.

ಇಂಗ್ಲೆಂಡ್ ತಂಡವು 1966ರಲ್ಲಿ ತವರಿನಲ್ಲಿ ಫಿಫಾ ವಿಶ್ವಕಪ್ ಗೆದ್ದ ನಂತರ ಯುರೋಪಿಯನ್ ಟ್ರೋಫಿ ಪಡೆಯಬೇಕೆಂಬ ಅವಕಾಶ ತಪ್ಪಿದೆ.  ಯುರೋ 2000 ಮತ್ತು ಯುರೋ 2012 ರಲ್ಲಿ ಫೈನಲ್ ತಲುಪಿತ್ತು. ಆದರೆ ಕ್ರಮವಾಗಿ ಫ್ರಾನ್ಸ್ ಮತ್ತು ಸ್ಪೇನ್ ವಿರುದ್ಧ ಸೋತಿತ್ತು.

ಪೆನಾಲ್ಟಿ ಶೂಟೌಟ್‌ ಗೋಲು ಹೊಡೆದ ಆಟಗಾರರು

ಇಂಗ್ಲೆಂಡ್‌ ತಂಡದ ಪರ ಪೆನಾಲ್ಟಿ ಶೂಟೌಟ್‌ನಲ್ಲಿ ಹ್ಯಾರಿ ಕೇನ್‌, ಮಗ್ಯೂರಿ ಮಾತ್ರ ಗೋಲು ಗಳಿಸಿದರು. ಆದರೆ, ರ‍್ಯಾಷ್‌ಪರ್ಡ್‌, ಜೆ ಸ್ಯಾಂಚೊ ಹಾಗೂ ಬಿ ಸಾಕಾ ಗೋಲು ಗಳಿಸುವಲ್ಲಿ ವಿಫಲರಾದರು. ಎದುರಾಳಿ ಇಟಲಿ ತಂಡದ ಪರವಾಗಿ ಬೆಲೊಟ್ಟಿ ಹಾಗೂ ಜೊರ್ಗಿನ್ಹೋ ಗೋಲುಗಳಿಸುವಲ್ಲಿ ವಿಫಲರಾದರೂ ಬೆನಾರ್ಡಿ, ಬೆನುಸ್ಸಿ ಹಾಗೂ ಬೆನಾರ್ಡಿಸ್ಕೀ ಅವರು ಗಳಿಸಿ ಮೂರು ಗೋಲು ಪಡೆದುಕೊಂಡರು.

 

Donate Janashakthi Media

Leave a Reply

Your email address will not be published. Required fields are marked *