ಮ್ಯೂನಿಚ್: ಯೂರೋ-2020ರ ಸಾಲಿನ ಫುಟ್ಬಾಲ್ ಪಂದ್ಯಾವಳಿಯ ತೀವ್ರವಾದ ಪೈಪೋಟಿ ಪಂದ್ಯಾವಳಿಯಲ್ಲಿ ಕ್ವಾರ್ಟರ್ ಫೈನಲ್ ನ ಮೊದಲ ಎರಡು ಪಂದ್ಯಗಳಲ್ಲಿ ಇಟಲಿ ಮತ್ತು ಸ್ಪೇನ್ ದೇಶಗಳು ಸೆಮಿಫೈನಲ್ ಪ್ರವೇಶಿಸಿದೆ.
ಯೂನಿಯನ್ ಯುರೋಪಿಯನ್ ಫುಟ್ಬಾಲ್ ಅಸೋಸಿಯೇಶನ್ (ಯುಇಎಫ್‌ಎ) ಯೂರೋ ಕಪ್ ಪಂದ್ಯದ ಕ್ವಾರ್ಟರ್ ಫೈನಲ್ ನಲ್ಲಿ ಇಟಲಿ ಬೆಲ್ಜಿಯಂ ವಿರುದ್ಧ ಮತ್ತು ಸ್ಪೇನ್ ಸ್ವಿಟ್ಜರ್‌ಲ್ಯಾಂಡ್ ವಿರುದ್ಧ ಜಯಗಳಿದೆ.
ಇದನ್ನು ಓದಿ: ಯೂರೋ 2020: ಚಾಂಪಿಯನ್ ಪಟ್ಟ ಕಳೆದುಕೊಂಡ ಫ್ರಾನ್ಸ್-ರೋಚಕ ಜಯ ಸಾಧಿಸಿದ ಸ್ವಿಟ್ಜರ್‌ಲ್ಯಾಂಡ್
ಸ್ಪೇನ್‌ಗೆ ನಾಲ್ಕನೇ ಬಾರಿ ಕಪ್ ಗೆಲ್ಲುವ ಆಸೆ ಜೀವಂತ
ಸೆಂಟ್ ಪೀಟರ್ಸ್‌ಬರ್ಗ್‌ನಲ್ಲಿ ಸ್ಪೇನ್ ಮತ್ತು ಸ್ವಿಟ್ಜರ್‌ಲ್ಯಾಂಡ್ ಪಂದ್ಯದಲ್ಲಿ 3-1 ಗೋಲುಗಳ ಅಂತರದಲ್ಲಿ ಸ್ಪೇನ್ ಜಯಗಳಿಸಲು ಯಶಸ್ವಿಯಾಗಿದೆ. ಪಂದ್ಯದಲ್ಲಿ ಸ್ಪೇನ್‌ನ ಗೋಲ್ ಕೀಪರ್ ಉನಯೈ ಸೈಮನ್ ಅವರ ಆಟವು ಗೆಲುವು ಸಾಧಿಸಲು ಸಹಕಾರಿಯಾಯಿತು. ಎರಡು ತಂಡಗಳು ಪಂದ್ಯದ 1-1 ಸಮಬಲದಲ್ಲಿದ್ದಾಗ ಕೊನೆಯ 43 ನಿಮಿಷಗಳ ಹೊತ್ತಿಗೆ ಸ್ವಿಟ್ಝರ್ಲೆಂಡ್ ನ ಕೇವಲ 10 ಆಟಗಾರರು ಮಾತ್ರ ಆಡುವಂತಾಯಿತು. ಇದು ತಂಡದ ಹಿನ್ನಡೆಗೆ ಕಾರಣವಾಗಿದೆ. ಪಂದ್ಯದ ಕೊನೆಯ ಹಂತಕ್ಕೆ ಉನಯ್ ಸೈಮನ್ ಎರಡು ಶೂಟೌಟ್‌ಗಳನ್ನು ಆಡುವ ಮೂಲಕ ಸ್ಪೇನ್ ದೇಶವು ಸೆಮಿಫೈನಲ್ ಪ್ರವೇಶಕ್ಕೆ ಅವಕಾಶ ಕಲ್ಪಿಸಿದರು.
ಸತತ ನಾಲ್ಕನೇ ಬಾರಿಗೆ ಕಪ್ ಗೆಲ್ಲುವ ನಿರೀಕ್ಷೆಯಲ್ಲಿರುವ ಸ್ಪೇನ್‌ನ ಮುಂದಿನ ಪಂದ್ಯಗಳು ಸಹ ಕುತೂಹಲಕಾರಿಯಾಗಿದೆ. ಸ್ವಿಟ್ಜರ್ಲೆಂಡ್ ತನ್ನ ಇತಿಹಾಸದಲ್ಲಿ ಮೊದಲ ಬಾರಿಗೆ ಪ್ರಮುಖ ಟೂರ್ನಿಯ ಸೆಮಿಫೈನಲ್ ತಲುಪುವ ಆಸೆ ನುಚ್ಚು ನೂರಾಯಿತು. ಪಂದ್ಯ ಮುಗಿಯಲು 13 ನಿಮಿಷ ಇದ್ದಾಗ ಮಿಡ್‌ಫೀಲ್ಡರ್ ರೆಮೊ ಫ್ರೂಲರ್ ಅವರು ರೆಡ್‌ಕಾರ್ಡ್ ಪಡೆದದ್ದು ತಂಡದ ಪಾಲಿಗೆ ದುಬಾರಿಯಾಯಿತು.
ಸೆಮಿಫೈನಲ್‌ಗೆ ಇಟಲಿ
ಜರ್ಮನಿಯ ಮ್ಯೂನಿಚ್‌ನಲ್ಲಿರುವ ಅಲಿಯಾನ್ಸ್ ಅರೆನಾದಲ್ಲಿ ಇಟಲಿ ವಿರುದ್ಧ ಬೆಲ್ಜಿಯಂ ನಡುವಿನ ಪಂದ್ಯದ ಮೊದಲಾರ್ಧದ 31ನೇ ನಿಮಿಷದಲ್ಲಿ ಇಟಲಿಯ ನಿಕೊಲೊ ಬರೆಲ್ಲಾ 31ನೇ ನಿಮಿಷಲ್ಲಿ ಮತ್ತು ಮೊದಲ ಗೋಲ್ ಬಾರಿಸಿತು. ಅದಾದ 44ನೇ ನಿಮಿಷದಲ್ಲಿ ಲೊರೆನ್ಸೊ ಇನ್‌ಸೈನ್ ಅವರ ಗೋಲಿನ ನೆರವಿನೊಂದಿಗೆ ಇಟಲಿಯು ಎರಡನೇ ಗೋಲ್ ಗಳಿಸಿತು. ಬೆಲ್ಜಿಯಂ ವಿರುದ್ಧ 2-1 ಗೋಲುಗಳ ಅಂತರದಲ್ಲಿ ಇಟಲಿಯು ಜಯ ಸಾಧಿಸಿತು.
ಪ್ರಥಮಾರ್ಧದ ಕೊನೇ ಕ್ಷಣದಲ್ಲಿ ಅಂದರೆ 45+2ನೇ ಬೆಲ್ಜಿಯಂನ ಆಟಗಾರ ರೊಮೇಲು ಲುಕಾಕು ಗೋಲ್ ಬಾರಿಸಿ ಸೋಲಿನ ಅಂತರವನ್ನು ಕಡಿಮೆ ಮಾಡಿಕೊಂಡರು. ಪಂದ್ಯದ ದ್ವಿತೀಯಾರ್ಧದಲ್ಲಿ ಗೋಲ್‌ಗಾಗಿ ಇತ್ತಂಡಗಳ ಮಧ್ಯೆ ಜಿದ್ದಾಜಿದ್ದಿಯ ಹೋರಾಟ ನಡೆಯಿತಾದರೂ ಆ ಬಳಿಕ ಗೋಲ್ ದಾಖಲಾಗಲಿಲ್ಲ. ಅಂತಿಮವಾಗಿ ಇನ್‌ಸೈನ್ ಗೋಲಿನಿಂದಾಗಿ ರೊಬೆರ್ಟೊ ಮೆನ್ಸಿನಿ ತಂಡ ಸತತ 13ನೇ ಜಯ ದಾಖಲಿಸಿ ತಮ್ಮ ಅಜೇಯ ಸರಣಿಯನ್ನು 32 ಪಂದ್ಯಗಳಿಗೆ ವಿಸ್ತರಿಸಿದರು.
ಜುಲೈ 6ರಂದು ವೆಂಬ್ಲಿಯಲ್ಲಿ ನಡೆಯಲಿರುವ ಸೆಮಿಫೈನಲ್‌ನಲ್ಲಿ ಇಟಲಿ ತಂಡವು ಸ್ಪೇನ್ ಅನ್ನು ಎದುರಿಸಲಿದೆ.
ಕ್ವಾರ್ಟರ್ ಫೈನಲ್‌ನ ಮತ್ತೆರೆಡು ಪಂದ್ಯಗಳು ಇಂದು ನಡೆಯಲಿದ್ದು, ರಾತ್ರಿ 9.30ಕ್ಕೆ ಕ್ರೆಚ್ ರಿಪಬ್ಲಿಕ್ ವಿರುದ್ಧ ಡೆನ್ಮಾರ್ಕ್ ನಡುವೆ ಪಂದ್ಯವಿದೆ. ಮಧ್ಯರಾತ್ರಿ ಉಕ್ರೇನ್ ಮತ್ತು ಇಂಗ್ಲೇಂಡ್ ನಡುವಿನ ಫುಟ್ಬಾಲ್ ಪಂದ್ಯ ನಡೆಯಲಿದೆ. ಈ ಎರಡು ಪಂದ್ಯದಲ್ಲಿ ಗೆಲುವ ಸಾಧಿಸುವ ತಂಡಗಳು ಸೆಮಿ ಫೈನಲ್ ಪ್ರವೇಶಿಸಲಿದೆ.
ಅಂತಿಮವಾಗಿ ಜುಲೈ 12ರ ಮಧ್ಯರಾತ್ರಿ 12.30ಕ್ಕೆ ಯೂರೋ ಕಪ್ 2020ರ ಫೈನಲ್ ಪಂದ್ಯವಳಿ ನಡೆಯಲಿದ್ದು, ಯೂರೋ ಕಪ್ ಯಾರ ಪಾಲಾಗಲಿದೆ ಎಂದು ತಿಳಿಯಲಿದೆ.