ನಂದಿಗಿರಿಧಾಮದ ಪ್ರವೇಶ ನಿರ್ಬಂಧ ಮೇ 9 ರ ವರೆಗೆ ವಿಸ್ತರಣೆ

ಚಿಕ್ಕಬಳ್ಳಾಪುರ: ಪ್ರಸಿದ್ಧ ಪ್ರವಾಸಿ ತಾಣ ತಾಲ್ಲೂಕಿನ ನಂದಿಗಿರಿಧಾಮಕ್ಕೆ ವಾರದ ದಿನಗಳಲ್ಲಿ ವಿಧಿಸಿರುವ ಪ್ರವಾಸಿಗರ ಪ್ರವೇಶ ನಿರ್ಬಂಧವನ್ನು ಮೇ 9 ಶುಕ್ರುವಾರದ ವರೆಗೆ ವಿಸ್ತರಿಸಲಾಗಿದ್ದೂ, ಗಿರಿಧಾಮದ ಆರಂಭದಿಂದ 7.70 ಕಿ.ಮೀ ವರೆಗೆ ರಸ್ತೆ ನವೀಕರಣ ಕಾಮಗಾರಿ ಕೈಗೊಳ್ಳಲಿದೆ. ನಂದಿಗಿರಿ

ಏಪ್ರಿಲ್‌ 25ರವರೆಗೆ ವಾರದ ದಿನಗಳಲ್ಲಿ (ಸೋಮವಾರದಿಂದ ಶುಕ್ರವಾರದವರೆಗೆ) ಪ್ರವಾಸಿಗರ ಪ್ರವೇಶ ನಿರ್ಬಂಧಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದರು. ವಾರಾಂತ್ಯದ ಶನಿವಾರ ಮತ್ತು ಭಾನುವಾರ ಮಾತ್ರ ಗಿರಿಧಾಮ ಪ್ರವೇಶಿಸಲು ಅವಕಾಶ ನೀಡಲಾಗಿತ್ತು.

ರಸ್ತೆ ನವೀಕರಣ ಪೈಕಿ 4.10 ಕಿ.ಮೀ ಉದ್ದದ ಕಾಮಗಾರಿ ಪೂರ್ಣವಾಗಿದೆ. ಬಾಕಿ 3.60 ಕಿ.ಮೀ ಉದ್ದದ ರಸ್ತೆ ಡಾಂಬರ್ ಹಾಕುವ ಕಾಮಗಾರಿ ಪೂರ್ಣಗೊಳಿಸಲು 10 ದಿನದ ಅವಶ್ಯವಿದೆ.

ಇದನ್ನೂ ಓದಿ: ಮೇ 20ರ ಕಾರ್ಮಿಕ ಮುಷ್ಕರ ಜನರ ಮುಷ್ಕರವಾಗಲಿ – ಡಾ. ಕೆ ಪ್ರಕಾಶ್

ಆದ್ದರಿಂದ ಮೇ.9ರವರೆಗೆ ಪ್ರವೇಶ ನಿರ್ಬಂಧ ವಿಸ್ತರಿಸಬೇಕು ಎಂದು ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮತ್ತು ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕರು ಸಹ ಕೋರಿಕೆ ಸಲ್ಲಿಸಿದ್ದರು. ಈ ಕೋರಿಕೆಗಳನ್ನು ಪರಿಗಣಿಸಿ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ನಿರ್ಬಂಧದ ಅವಧಿ ವಿಸ್ತರಿಸಿದ್ದಾರೆ.

ಗಿರಿಧಾಮದ ರಸ್ತೆಯು ತೀರಾ ಕಿರಿದಾಗಿದೆ. ಅಪಾಯಕಾರಿ ತಿರುವುಗಳು ಇವೆ. ಆದ್ದರಿಂದ ರಸ್ತೆಗೆ ಡಾಂಬರ್ ಹಾಕಲು ರಸ್ತೆ ಸಂಚಾರ ಬಂದ್ ಮಾಡಬೇಕಾಗಿದೆ.

ಇದನ್ನೂ ನೋಡಿ: ಪಿಯುಸಿ ನಂತರ ಪಶುವೈದ್ಯಕೀಯ ಶಿಕ್ಷಣ ಪಡೆಯುವುದು ಹೇಗೆ? Janashakthi Media

Donate Janashakthi Media

Leave a Reply

Your email address will not be published. Required fields are marked *