‘ಸಾಕಷ್ಟು ಸಾಕ್ಷ್ಯಗಳಿವೆ’ – ತೀಸ್ತಾ ಬಿಡುಗಡೆ ವಿರೋಧಿಸಿದ ಗುಜರಾತ್ ಸರ್ಕಾರ

2002 ರ ಗುಜರಾತ್ ಗಲಭೆ ಪ್ರಕರಣದಲ್ಲಿ ಖ್ಯಾತ ಮಾನವ ಹಕ್ಕುಗಳ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಅವರ ಬಿಡುಗಡೆಯ ಮನವಿಯನ್ನು ಗುಜರಾತ್ ಸರ್ಕಾರ ವಿರೋಧಿಸಿದೆ. ಗಲಭೆಗೆ ಸಂಬಂಧಿಸಿದ ಸಾಕ್ಷಿಗಳನ್ನು ಅವರು ಸೃಷ್ಟಿ ಮಾಡಿದ್ದಾರೆ ಎಂಬ ಆರೋಪದ ಬಗ್ಗೆ ತೀಸ್ತಾ ವಿರುದ್ಧ “ಪ್ರಾಥಮಿಕ ಸಾಕ್ಷ್ಯಗಳಿಂಗಿಂತ ಹೆಚ್ಚಿನ ಸಾಕ್ಷ್ಯಗಳಿವೆ” ಇದೆ ಎಂದು ಎಂದು ಸರ್ಕಾರ ಹೇಳಿದೆ. ಸೋಮವಾರ ಸೆಷನ್ಸ್ ನ್ಯಾಯಾಲಯಕ್ಕೆ ಗುಜರಾತ್ ಸರ್ಕಾರ ಸಲ್ಲಿಸಿದ ಉತ್ತರದಲ್ಲಿ ಈ ಹೇಳಿಕೆ ನೀಡಿದೆ.

ಮೇ ತಿಂಗಳಲ್ಲಿ, ಪ್ರಕರಣದಲ್ಲಿ ತನ್ನ ವಿರುದ್ಧದ ವಿಚಾರಣೆಯನ್ನು ನಿಲ್ಲಿಸುವಂತೆ ಕೋರಿ ತೀಸ್ತಾ ಅವರು ಅಹಮದಾಬಾದ್ ಸೆಷನ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಪ್ರಕರಣದ ಸಹ ಆರೋಪಿ ಮಾಜಿ ಡಿಜಿಪಿ ಆರ್‌.ಬಿ. ಶ್ರೀಕುಮಾರ್ ಅವರು ತನ್ನ ಬಿಡುಗಡೆಗಾಗಿ ಸಲ್ಲಿಸಿದ್ದ ಅರ್ಜಿಯನ್ನು ಸೆಷನ್ಸ್ ಕೋರ್ಟ್ ಈ ಹಿಂದೆ ತಿರಸ್ಕರಿಸಿತ್ತು.

ಗಲಭೆ ಸಂತ್ರಸ್ತರಿಗೆ ಅರ್ಥವಾಗದ ಇಂಗ್ಲಿಷ್‌ನಲ್ಲಿ ಅಫಿಡವಿಟ್‌ಗಳನ್ನು ತಯಾರಿಸುವ ಮೂಲಕ ತೀಸ್ತಾ ಅವರು “ಸಂತ್ರಸ್ತರನ್ನು ನಂಬಿಸಿ, ಅವರ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ” ಎಂದು ಗುಜರಾತ್ ಸರ್ಕಾರ ಆರೋಪಿಸಿದೆ. ತೀಸ್ತಾ ಅವರು “ಮುಗ್ಧ ವ್ಯಕ್ತಿಗಳನ್ನು ಸಿಲುಕಿಸಲು ಪ್ರಯತ್ನಿಸಿದ್ದು ಈ ಪಿತೂರಿಯ ಭಾಗವಾಗಿ ಕಾನೂನು ಪ್ರಕ್ರಿಯೆಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ” ಎಂದು ಸರ್ಕಾರ ಹೇಳಿದೆ.

ಕಳೆದ ಶನಿವಾರವಷ್ಟೆ ಗುಜರಾತ್ ಹೈಕೋರ್ಟ್ ತೀಸ್ತಾ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿ “ತಕ್ಷಣವೇ ಶರಣಾಗಲು” ಆದೇಶಿಸಿತ್ತು. ಗುಜರಾತ್ ಹೈಕೋರ್ಟ್‌ನ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ ತೆರಳಿದ ತೀಸ್ತಾ ಅವರು ಒಂದು ವಾರದವರೆಗೆ ಬಂಧನದಿಂದ ಮಧ್ಯಂತರ ರಕ್ಷಣೆ ಪಡೆದಿದ್ದಾರೆ.

ಇದನ್ನೂ ಓದಿ: ತೀಸ್ತಾ ಸೆಟಲ್ವಾಡ್‌ ಜಾಮೀನು ನಿರಾಕರಿಸಿದ್ದ ಗುಜರಾತ್‌ ಹೈಕೋರ್ಟ್ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆ

Donate Janashakthi Media

Leave a Reply

Your email address will not be published. Required fields are marked *