ಬಿಜೆಪಿಯಲ್ಲಿ ಮುಗಿಯದ ಶೋಧ! ಕಾಣದ ಸೋಲಿನ ಹೊಣೆ, ಕಾರಣ!

     ಎಸ್.ವೈ. ಗುರುಶಾಂತ್

ನಿಜಕ್ಕೂ ನ.ಕು. ಕಟೀಲ್ ಅವರನ್ನು ಅಧ್ಯಕ್ಷರನ್ನಾಗಿಸಿದ ಹೊಣೆ ಸಂಘ ಪರಿವಾರದ್ದೇ. ಪರಿವಾರಕ್ಕೆ ಬೇಕೆದ್ದುದು ಹೇಳಿದ ಮಾತು ಕೇಳುವ ಒಬ್ಬ ಡೆಮ್ಮಿ ಅಧ್ಯಕ್ಷ! ಯಡಿಯೂರಪ್ಪನವರನ್ನು ಬೈಯ್ಯಬೇಕು ಎಂದಾಗ ಬೈಯ್ಯುವ ಹೊಗಳಬೇಕೆಂದಾಗ ಹೊಗಳುವ ಪ್ರಸಂಗಗಳನ್ನು ನೋಡಿ ಆಗಿದೆ. ಒಂದು ವೇಳೆ ಸೋಲಿನ ಹೊಣೆಯನ್ನು ರಾಜ್ಯದ ಅಧ್ಯಕ್ಷ ಹೊತ್ತುಕೊಳ್ಳ ಬೇಕು ಎಂದಾದರೆ ಅದನ್ನು ಆರ್.ಎಸ್.ಎಸ್ಸೇ ಹೊತ್ತುಕೊಳ್ಳಬೇಕಾಗುತ್ತದೆ. ಎಲ್ಲಾ ವಿದ್ಯಮಾನಗಳನ್ನು ಗಮನಿಸಿದರೆ ಕರ್ನಾಟಕದಲ್ಲಿ ಚುನಾವಣೆಯನ್ನು ನಡೆಸುವ ಹೊಣೆ ಖಂಡಿತಕ್ಕೂ ರಾಜ್ಯದ ಸಾಂಸ್ಥಿಕ ನಾಯಕರಲ್ಲಿ ಇರಲಿಲ್ಲ ಎನ್ನುವುದು ಕಾಣುತ್ತದೆ.

ಕರ್ನಾಟಕದಲ್ಲಿ ಬಿಜೆಪಿ ಸೋಲಿಗೆ ಕಾರಣವೇನು? ಈ ಸೋಲಿನ ಹೊಣೆ ಯಾರದು? 2024ರ ಪಾರ್ಲಿಮೆಂಟ್ ಇದರಲ್ಲಿ ಕೆಲವರು ಅನಾರೋಗ್ಯದ ಪ್ರಶ್ನೆಗಳಿದ್ದರೂ ಬಿಜೆಪಿಯ ಚುನಾವಣಾ ಹೋರಾಟದ ಸ್ವರೂಪವೇನು? ಕ್ರಮಗಳೇನು? ಇಂತಹ ಪ್ರಶ್ನೆಗಳು ಕೇಳಿ ಬರುತ್ತಲೇ ಇವೆ. ಉತ್ತರ ಇನ್ನೂ ಸ್ಪಷ್ಟವಾಗಿ ಸಿಗುತ್ತಿಲ್ಲ! ಉತ್ತರಿಸಬೇಕಾದವರೇ ಪ್ರಶ್ನೆಗಳಾಗಿ ಕಾಡಿದರೆ? ಕರ್ನಾಟಕದ ವಿಧಾನಸಭಾ ಚುನಾವಣೆಗಳು ಮುಗಿದು ಒಂದು ತಿಂಗಳು ಕಳೆಯುತ್ತಿದೆ.

ಆಡಳಿತದಲ್ಲಿದ್ದ ಬಿಜೆಪಿ ಸೋಲಿಗೆ ಕಾರಣವೇನು? ಮತ್ತು ಅದರ ಹೊಣೆ ಯಾರು ಹೊರಬೇಕು? ಎನ್ನುವ ವಿಷಯದಲ್ಲಿ ಇಲ್ಲಿಯವರೆಗೂ ಯಾವುದೇ ಒಂದು ಖಚಿತ ನಿರ್ಧಾರಕ್ಕೆ ಬಿಜೆಪಿ ಬಂದಿಲ್ಲ. ಚುನಾವಣಾ ಸೋಲಿನ ಆತ್ಮಾವಲೋಕನದ ಹೆಸರಿನ ಬೈಟಕ್ ಗಳು ಹಾಗೊಂದು, ಹೀಗೊಂದು ನಡೆದಿವೆಯಾದರೂ ಪೂರ್ಣ ಪ್ರಮಾಣದಲ್ಲಿ ಅದರ ವಿಮರ್ಶೆ ಮತ್ತು ಕಾರಣಗಳನ್ನು ಖಚಿತವಾಗಿ ಗುರುತಿಸಲಾಗಿಲ್ಲ. ಒಂದು ವೇಳೆ ಗುರುತಿಸಿದ್ದರು ಸಾರ್ವಜನಿಕರ ಮುಂದೆ ಮಂಡಿತವಾಗುತ್ತಿಲ್ಲ. ಈ ಗೊಂದಲ ಗೋಜಲುಗಳ ಸೃಷ್ಟಿ ಯಾಕೆ ಎನ್ನುವುದು ಇನ್ನಷ್ಟೇ ಅರ್ಥವಾಗಬೇಕು! ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದಂತೆಯೇ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯವರು ಈ ಸೋಲಿನ ಸಂಪೂರ್ಣ ಹೊಣೆಯನ್ನು ನಾನೇ ಹೊರುತ್ತೇನೆ.

ಯಾಕೆಂದರೆ ನಾನು ರಾಜ್ಯದ ಮುಖ್ಯಮಂತ್ರಿ. ನಂತರದಲ್ಲಿ ವಿವರವಾದ ವಿಮರ್ಶೆ ನಡೆದು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ& ಎಂದು ಹೇಳಿದ್ದರು. ಇತ್ತೀಚೆಗೆ ಬೆಳಗಾವಿಯಲ್ಲಿ ಬಿಜೆಪಿ ಮುಖಂಡರ ಸಭೆಯ ಬಳಿಕ ಮಾತನಾಡಿ ಅದೇ ಮಾತನ್ನು ಪುನರುಚ್ಚರಿಸಿದರು. ಇನ್ನು ಹಲವು ಕಾರಣಗಳ ಬಗ್ಗೆ ಆತ್ಮಾವಲೋಕನ ನಡೆಸುತ್ತೇವೆ ಎಂದು ಹೇಳಿದರು. ಫಲಿತಾಂಶದ ಬಳಿಕ ಸೋಲಿನ ಹೊಣೆಯನ್ನು ನಾನೇ ಹೊರುತ್ತೇನೆ ಎಂದು ಪಕ್ಷದ ಅಧ್ಯಕ್ಷ ನಳೀನ ಕುಮಾರ ಕಟೀಲ ನೀಡಿದ ಹೇಳಿಕೆ ಹೆಚ್ಚಾಗಿ ಯಾರ ಗಮನವನ್ನು ಸೆಳೆಯಲಿಲ್ಲ ಮತ್ತು ಜನರೂ ಗಂಭೀರವಾಗಿ ಪರಿಗಣಿಸಿದಂತೆ ಕಾಣಲಿಲ್ಲ. ಅವರ ಹೇಳಿಕೆ ಕೇವಲ ಔಪಚಾರಿಕವಾಗಿತ್ತು. 2023 ಜೂನ್ 9ರಂದು ಬಿಜೆಪಿ ಪಕ್ಷದ ರಾಜ್ಯ ಕಚೇರಿ ಯಲ್ಲಿ ಹಾಲಿ ಶಾಸಕರು, ಸೋತ ಅಭ್ಯರ್ಥಿಗಳ ಪ್ರತ್ಯೇಕ ಸಭೆಗಳು ಕೇಂದ್ರ ಉಸ್ತುವಾರಿ ಅರುಣ್ ಸಿಂಗ್ ಸಮ್ಮುಖದಲ್ಲಿ ನಡೆದಿದೆ. ಈ ಆತ್ಮವಲೋಕನ ಸಭೆಯಲ್ಲಿ ನಡೆದ ಚರ್ಚೆಗಳು ಮತ್ತು ಕಲಾಪಗಳನ್ನು ಗಮನಿಸಿದರೆ ಸೋಲಿಗೆ ಸಮಗ್ರವಾದ ಕಾರಣಗಳ ಅವಲೋಕನಕ್ಕೆ ಬದಲಾಗಿ ಬಿಜೆಪಿ ಪಕ್ಷದೊಳಗೆ ಈಗಾಗಲೇ ಇರುವ ಎರಡು ಗುಂಪುಗಳ ನಡುವಿನ ಪರಸ್ಪರ ಬೈದಾಟಗಳು ಪ್ರಾಮುಖ್ಯತೆಯನ್ನು ಪಡೆದಿವೆ. ಒಂದುಗುಂಪು ಇನ್ನೊಂದು ಗುಂಪಿನ ಮೇಲೆ ತೋರು ಬೆರಳಿನಿಂದ ಚುಚ್ಚಿದೆ.

ಒಂದೆಡೆ ಯಡಿಯೂರಪ್ಪನವರ ಬಣ ಈ ಸೋಲಿಗೆ ಈಶ್ವರಪ್ಪ, ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿಯಂತವರನ್ನು ದೂರ ಇಟ್ಟಿದ್ದು ಕಾರಣ ಎನ್ನುತ್ತಾ ಇದಕ್ಕೆಲ್ಲಾ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರು ಕಾರಣ ಎಂದು ಪರೋಕ್ಷವಾಗಿ ಗುರುತಿಸುತ್ತಿದ್ದರೆ, ಅದಕ್ಕೆ ತಿರುಗೇಟು ಕೊಡುವಂತೆ ಬಿ.ಎಲ್. ಸಂತೋಷ ಅವರ ಬಣವು ಇಷ್ಟಾದರೂ ಬಂದಿದೆಯಲ್ಲಾ, ಇಲ್ಲವಾಗಿದ್ದರೆ ನಮ್ಮದು ಅಧೋಗತಿ ಎಂದು ವಾದಿಸಿದೆ. ಸಂತೋಷ್ ಅವರನ್ನು ಸಮರ್ಥಿಸುತ್ತಾ ಸೋಲಿನ ಹೊಣೆ ಅವರ ವಿರೋಧಿ ಯಡಿಯೂರಪ್ಪ ಬಳಗದ ತಲೆಗೆ ಕಟ್ಟಲು ಯತ್ನಿಸಿದೆ ಎಂದು ವರದಿಯಾಗಿದೆ. ಸಭೆಯ ಬಳಿಕ ಮಾತನಾಡಿದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಯವರೇನೋ ಒಳ ಮೀಸಲಾತಿಯ ಪೆಟ್ಟು, ಕಾಂಗ್ರೆಸ್‌ನ ಗ್ಯಾರಂಟಿ ಕಾರ್ಡ್ಗಳನ್ನು ನಂಬಿ ಜನರು ಮತ ಚಲಾಯಿಸಿರುವುದು ಮತ್ತು ಸರ್ಕಾರದ ವಿರುದ್ಧ ನಡೆದ ನಕಾರಾತ್ಮಕ ಪ್ರಚಾರ ನಮ್ಮ ಪಕ್ಷದ ಸೋಲಿಗೆ ಪ್ರಮುಖ ಕಾರಣ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ’ ಎಂದು ಹೇಳಿದ್ದಾರೆ. ಇಷ್ಟಾದರೂ ಬಿಜೆಪಿಯ ಸೋಲಿಗೆ ಕಾರಣವಾದ ಅಂಶಗಳ ಬಗ್ಗೆ ವಸ್ತುನಿಷ್ಠವಾದ ವಿಮರ್ಶೆಯಾಗಲಿ ಅವರೇ ಹೇಳಿಕೊಳ್ಳುವಂತೆ ಆತ್ಮಾವಲೋಕನವು ಆಗಲಿಯೇ ಇಲ್ಲ. ಅಂದರೆ ಬಿಜೆಪಿ ಪಕ್ಷದ ದುರಾಡಳಿತ, ಜನದ್ರೋಹಿತನ, ಭ್ರಷ್ಟಾಚಾರ, ಕೋಮು ದ್ವೇಷ, ಕೇಂದ್ರ ಸರಕಾರದ ದುಷ್ಟ ನೀತಿಗಳು ಇತ್ಯಾದಿ ಅಂಶಗಳತ್ತ ಒಂದು ಸಣ್ಣ ಕಿರು ನೋಟವು ಬೀರಲಿಲ್ಲ.

ಬಿಜೆಪಿ ನಾಯಕತ್ವವು ಐಕ್ಯತೆಯಿಂದ ಅವಲೋಕನ ಮಾಡಿಕೊಳ್ಳುವ ಸನ್ನಿವೇಶಗಳು ಇನ್ನೂ ಏರ್ಪಡಲಿಲ್ಲ. ಬದಲಾಗಿ ಬಣಗಳ ಬಡಿದಾಟದ ಸುತ್ತಲೇ ಗಿರಕಿ ಹೊಡೆಸುತ್ತಿರುವುದು ಪ್ರಧಾನವಾಗಿ ಕಂಡು ಬರುತ್ತಿದೆ. ಇದು ಒಂದು ಗುಪ್ತ ಅಜೆಂಡಾದ ಭಾಗವಾಗಿ ಇರಲೂಬಹುದು. ಈ ನಡುವಿನಲ್ಲಿಯೇ ಮುಂದಿನ ಪಾರ್ಲಿಮೆಂಟಿನ ಚುನಾವಣೆಯ ಸಿದ್ಧತೆಗಳು ಆರಂಭಗೊಂಡಿವೆ. ರಾಜ್ಯದ ಚುನಾವಣೆಯಲ್ಲಿ ಬಿಜೆಪಿಯ ಸೋಲಿನ ಫಲಿತಾಂಶ ನಿಚ್ಚಳವಾಗುತ್ತಿದ್ದಂತೆ ಚುನಾವಣೆಯ ಪ್ರಮುಖ ಸೂತ್ರಧಾರಿ, ಸಂಘದ ಕಟ್ಟಾಳು ಬಿ. ಎಲ್.ಸಂತೋಷ್ ಅವರು ಆ ಬಗ್ಗೆ ಎಳ್ಳಷ್ಟೂ ತಲೆ ಕೆಡಿಸಿಕೊಂಡಂತೆ ಕಾಣಲಿಲ್ಲ. ನಾವು 30,000 ಮತಗಟ್ಟೆಗಳಲ್ಲಿ ಶಕ್ತಿಯುತರಾಗಿದ್ದೇವೆ. ಇನ್ನು 10,000 ಮತಗಟ್ಟೆಗಳಲ್ಲಿ ಬಲ ಪಡೆಯಲು ಇಂದಿನಿಂದಲೇ ಕೆಲಸ ಆರಂಭಿಸುತ್ತೇವೆ ಎಂದು ಪಾರ್ಲಿಮೆಂಟ್ ಚುನಾವಣೆಗೆ ಸನ್ನದ್ಧರಾಗುವಂತೆ ಆಗಿರುವಂತೆ ಸಂತೋಷ್ ಹೇಳುವುದನ್ನು ಬಿಟ್ಟರೆ ಸೋಲಿನ ಕುರಿತು ದುಸರಾ ಮಾತು ಆಡಿರಲಿಲ್ಲ. ಈ ಚುನಾವಣಾ ಸೋಲಿನ ವಿಮರ್ಶೆ ಅಥವಾ ಆತ್ಮಾವಲೋಕನ ಎನ್ನುವುದಕ್ಕೆ ಮಹತ್ವ ಇಲ್ಲ, ಮುಂದ ನೋಡಿ ಎನ್ನುವ ತಿರಸ್ಕಾರದ ದಾಟಿಯಲ್ಲಿ ಅವರ ದನಿ ಇತ್ತು. ಹಾಗೆ ನೋಡಿದರೆ ಈ ಚುನಾವಣೆಯ ಕಾರ್ಯತಂತ್ರ ಪ್ರಚಾರದ ವಿಷಯಗಳು ಅಭ್ಯರ್ಥಿಗಳ ಆಯ್ಕೆ ಮತ್ತು ಚುನಾವಣೆ ಸಂಘಟಿಸುವಲ್ಲಿ ಎಲ್ಲವೂ ಬಿ.ಎಲ್ ಸಂತೋಷ ಅವರ ಪಾತ್ರವೇ ಅತ್ಯಂತ ಪ್ರಮುಖ ಎಂದು ಹೇಳಲಾಗುತ್ತಿದೆ.

ಸಂಘ, ಪಕ್ಷದ ಹೈಕಮಾಂಡ್, ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ರವರು ಕೂಡ ಇವರಿಗೆ ಸಂಪೂರ್ಣವಾದ ಬೆಂಬಲವನ್ನು ನೀಡಿದ್ದಾರೆ ಮತ್ತು ಇದು ಪರಸ್ಪರ ಸಮಾಲೋಚನೆ ನಡೆಸಿಕೊಂಡು ಮಾಡಿರುವ ಚುನಾವಣೆಯ ಕಾರ್ಯತಂತ್ರ ಎನ್ನುವುದು ಖಚಿತವಾಗಿದೆ. ಇಡೀ ಬಿಜೆಪಿ ಪಕ್ಷದಲ್ಲಿ ಹಿರಿಯ ನಾಯಕರೆಲ್ಲರನ್ನು ಬದಲಾಯಿಸಿ ಆರ್.ಎಸ್.ಎಸ್ ಹೇಳಿದಂತೆ ಕೇಳುವ ಹೌದಪ್ಪ ಕೈಗೊಂಬೆಗಳನ್ನು ಚುನಾವಣೆಯಲ್ಲಿ ಗೆಲ್ಲಿಸಿ ಇಡೀ ಸರ್ಕಾರದ ಸೂತ್ರ ಸಂಘವೇ ಇಟ್ಟುಕೊಳ್ಳಲು ಒಂದು ಖಚಿತವಾದ ನಿರ್ಧಾರವನ್ನು ಕೈಗೊಳ್ಳಲಾಗಿತ್ತು. ಯಡಿಯೂರಪ್ಪನವರನ್ನು ನವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ ನಂತರದಿಂದಲೇ ಆ ಪ್ರಯತ್ನ ಅತ್ಯಂತ ಆಕ್ರಮಣಕಾರಿಯಾಗಿ ನಡೆದಿತ್ತು.

ಬಸವರಾಜ್ ಬೊಮ್ಮಾಯಿ ಅವರೇ ನಾಯಕರು ಅವರೇ ಮುಂದಿನ ಮುಖ್ಯಮಂತ್ರಿಗಳು ಎಂದು ಜೋರಾಗಿ ಮೈಕ್ ನಲ್ಲಿ ಹೇಳುತ್ತಿದ್ದರೂ ಅಂತಿಮವಾಗಿ ಕೇಶವ ಕೃಪಾದಲ್ಲಿ ಕೈಗೊಳ್ಳುವ ನಿರ್ಧಾರವೇ ಅಂತಿಮವಾಗಿರುತ್ತಿತ್ತು. ಆಂತರಿಕವಾಗಿ ಈ ಚುನಾವಣಾ ಫಲಿತಾಂಶದ ಬಳಿಕ ಹೊಸ ಮುಖ್ಯಮಂತ್ರಿಯನ್ನು ನೇಮಿಸುವ ಗುಪ್ತ ನಿರ್ಧಾರವು ಇಲ್ಲದೆ ಇರಲಿಲ್ಲ. ಈ ಕಾರಣಗಳಿಂದಲೂ ಪಕ್ಷದೊಳಗಡೆ ಇನ್ನೂ ಬಲವನ್ನು ಹೊಂದಿದ್ದ ಬಿ.ಎಸ್. ಯಡಿಯೂರಪ್ಪ ಮತ್ತು ಅವರ ಬಣವನ್ನು ವ್ಯವಸ್ಥಿತವಾಗಿ ದುರ್ಬಲಗೊಳಿಸಿ ಮೂಲೆಗುಂಪು ಮಾಡುವ ಪ್ರಯತ್ನಗಳು ನಡೆದಿದ್ದವು. ಸಾರ್ವಜನಿಕರಲ್ಲಿ ಈ ಸಂದೇಶ ಹೋದರೆ ತಿರುಗು ಬಾಣವಾಗಬಹುದು ಎನ್ನುವ ಅಂದಾಜಿನೊಂದಿಗೆ ಯಡಿಯೂರಪ್ಪನವರು ಪ್ರಚಾರದ ಅಧ್ಯಕ್ಷರು, ಪ್ರಮುಖರು ಎಂದೆಲ್ಲಾ ಬಿಂಬಿಸಲು ಪ್ರಯತ್ನಿಸಿದ್ದು ಜೊಳ್ಳು ಎನ್ನುವುದು ಬಿಜೆಪಿಯ ಆಂತರಿಕ ವಲಯದಲ್ಲಿ ಸ್ಪಷ್ಟವಿತ್ತು. ಈಗಲೂ ಬಿಜೆಪಿ ಪಕ್ಷದೊಳಗೆ ನಡೆಯುತ್ತಿರುವ ಗುಜುಗುಜು, ಗೊಂದಲ ಮತ್ತು ಹಿಂದೇಟುಗಳನ್ನು ಗಮನಿಸಿದರೆ ಈ ಸೋಲಿಗೆ ನಿಖರವಾದ ಕಾರಣಗಳನ್ನು ಗುರುತಿಸಿಕೊಳ್ಳಲು ಬಿಜೆಪಿ ನಾಯಕತ್ವ ಸಿದ್ಧವಿಲ್ಲ. ಮತ್ತು ರಾಜ್ಯದ ಸಂಘಟನಾ, ರಾಜಕೀಯ ವಿದ್ಯಾಮಾನಗಳಲ್ಲಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರ ಅತಿಯಾದ ಮೂಗು ತೂರಿಸುವಿಕೆ, ಎಲ್ಲವನ್ನೂ ನಿಯಂತ್ರಿಸುವ ಸರ್ವಾಧಿಕಾರಿ ಶಕ್ತಿ ಮತ್ತು ಕರ್ನಾಟಕ ರಾಜ್ಯದಲ್ಲಿ ಬಿಜೆಪಿಗಿರುವ ಬೆಂಬಲವನ್ನು ಸಂಪೂರ್ಣವಾಗಿ ಸಂಘ ಪರಿವಾರದ ಹಿಂದುತ್ವದ ಅಜೆಂಡಾಕ್ಕೆ ಅನುಗುಣವಾಗಿ ಹಿಡಿತಕ್ಕೆ ತೆಗೆದುಕೊಳ್ಳುವ ಉದ್ದೇಶ ಬಿಟ್ಟು ಕೊಡಲು ತಯಾರಿಲ್ಲ.

ಅಂದರೆ ಹಿಂದುತ್ವದ ಅಜೆಂಡವನ್ನು ಮತ್ತಷ್ಟು ತೀವ್ರವಾಗಿ ಕರ್ನಾಟಕದಲ್ಲಿ ಜಾರಿಗೊಳಿಸಲು ಆರ್ ಎಸ್ ಎಸ್ ಉತ್ಸುಕವಾಗಿದೆ, ಬದ್ದವಾಗಿದೆ ಎನ್ನುವುದು ಸ್ಪಷ್ಟವಿದೆ. ಬಿಜೆಪಿ ಸೋತ ಫಲಿತಾಂಶದ ಬೆನ್ನಲ್ಲೇ ಪಕ್ಷದ ರಾಜ್ಯಾಧ್ಯಕ್ಷ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಬೇಕೆಂಬ ಕೂಗು ದೊಡ್ಡ ಪ್ರಮಾಣದಲ್ಲಿ ಕೇಳಿ ಬಂತು. ವಿಶೇಷವಾಗಿ ಅವರ ಆಯ್ಕೆಯಾಗಿರುವ ಕರಾವಳಿ ಭಾಗದಲ್ಲಿ ಸ್ವಪಕ್ಷೀಯರಿಂದಲೇ ಅಂತಹ ಅಗ್ರಹದ ಪ್ರತಿಭಟನೆಗಳು ನಡೆದವು. ಸೋಲಿನ ಹೊಣೆಯನ್ನು ಸಾಮಾನ್ಯವಾಗಿ ಪಕ್ಷದ ಚುಕ್ಕಾಣಿ ಹಿಡಿದಿರುವ ರಾಜ್ಯದ ಅಧ್ಯಕ್ಷರು ವಹಿಸಿಕೊಳ್ಳುವುದು ಈ ಪಕ್ಷಗಳಲ್ಲಿ ನಡೆವ ಒಂದು ಸಹಜ ಸಂಪ್ರದಾಯ. ಆದರೆ ಬಿಜೆಪಿಯ ಅತ್ಯಂತ ದುರ್ಬಲ ಅಧ್ಯಕ್ಷರೆಂದು ಸ್ವಪಕ್ಷೀಯರಿಂದಲೇ ಬಣ್ಣಿಸಲ್ಪಟ್ಟ ನ.ಕು.ಕಟೀಲ್ ಅವರು ಚುನಾವಣೆಯ ಸಂಘಟನಾ ನಿರ್ಧಾರಗಳನ್ನು ಅಥವಾ ಯಾವುದೇ ಕಾರ್ಯತಂತ್ರಗಳನ್ನು ನಿರ್ಧರಿಸುವ ಅಥವಾ ಪ್ರಭಾವಿಸುವ ಯಾವುದೇ ಶಕ್ತಿಯನ್ನು ಹೊಂದಿಲ್ಲ ಎನ್ನುವುದು ಕೂಡ ಎಲ್ಲರಿಗೂ ಗೊತ್ತಿರುವ ಸಂಗತಿ. ನಿಜಕ್ಕೂ ನ.ಕು. ಕಟೀಲ್ ಅವರನ್ನು ಅಧ್ಯಕ್ಷರನ್ನಾಗಿಸಿದ ಹೊಣೆ ಸಂಘ ಪರಿವಾರದ್ದೇ. ಪರಿವಾರಕ್ಕೆ ಬೇಕೆದ್ದುದು ಹೇಳಿದ ಮಾತು ಕೇಳುವ ಒಬ್ಬ ಡೆಮ್ಮಿ ಅಧ್ಯಕ್ಷ! ಯಡಿಯೂರಪ್ಪನವರನ್ನು ಬೈಯ್ಯಬೇಕು ಎಂದಾಗ ಬೈಯ್ಯುವ ಹೊಗಳಬೇಕೆಂದಾಗ ಹೊಗಳುವ ಪ್ರಸಂಗಗಳನ್ನು ನೋಡಿ ಆಗಿದೆ. ಒಂದು ವೇಳೆ ಸೋಲಿನ ಹೊಣೆಯನ್ನು ರಾಜ್ಯದ ಅಧ್ಯಕ್ಷ ಹೊತ್ತುಕೊಳ್ಳ ಬೇಕು ಎಂದಾದರೆ ಅದನ್ನು ಆರ್.ಎಸ್.ಎಸ್ಸೇ ಹೊತ್ತುಕೊಳ್ಳಬೇಕಾಗುತ್ತದೆ. ಎಲ್ಲಾ ವಿದ್ಯಮಾನಗಳನ್ನು ಗಮನಿಸಿದರೆ ಕರ್ನಾಟಕದಲ್ಲಿ ಚುನಾವಣೆಯನ್ನು ನಡೆಸುವ ಹೊಣೆ ಖಂಡಿತಕ್ಕೂ ರಾಜ್ಯದ ಸಾಂಸ್ಥಿಕ ನಾಯಕರಲ್ಲಿ ಇರಲಿಲ್ಲ ಎನ್ನುವುದು ಕಾಣುತ್ತದೆ.

ಅಂದರೆ ಈ ಚುನಾವಣೆಯನ್ನು ಬಿಜೆಪಿಯ ಹೈಕಮಾಂಡ್ ಮತ್ತು ಆರ್ ಎಸ್ ಎಸ್ ಗಳೇ ಸಂಪೂರ್ಣವಾಗಿ ವಹಿಸಿಕೊಂಡಿವೆ. ಬಿ.ಎಲ್.ಸಂತೋಷ್ ಅದರ ಪ್ರಮುಖ ವಾಹಕ. ಆದರೆ ಈ ಸತ್ಯ ಸಂಗತಿಯನ್ನು ನಿಖರ ಮತ್ತು ನಿಷ್ಠರವಾಗಿ ಹೇಳಲು ಬಿಜೆಪಿಯ ಯಾವೊಬ್ಬ ನಾಯಕರು ತಯಾರಿಲ್ಲ! ಹಾಗೊಂದು ವೇಳೆ ಹೇಳಿದ್ದೇ ಆದಲ್ಲಿ ಬಿಜೆಪಿ ಪಕ್ಷದಲ್ಲಿ ಉಳಿಯುವುದು ಮಾತ್ರವಲ್ಲ ಸಾರ್ವಜನಿಕವಾಗಿಯೂ ಅವರು ರಾಜಕೀಯವಾಗಿ ತಲೆ ಎತ್ತಿ ಓಡಾಡುವಂತೆ ಇರಲಿಕ್ಕಿಲ್ಲ ಎನ್ನುವ ಭಯ ಬಹುತೇಕರನ್ನು ಕಾಡುತ್ತಿದೆ. (ಸಿಬಿಐ, ಇ.ಡಿ. ಇತ್ಯಾದಿ ಸರ್ಪಗಳು ಹೆಡೆ ಎತ್ತಿ ಆಡುತ್ತಿರುವಾಗ!) ಹೀಗಾಗಿಯೇ ಹುಲ್ಲಿನ ಪೊದೆಯ ಸುತ್ತಲೇ ಹುಲ್ಲು ಕಡ್ಡಿಯಿಂದ ಹೊಡೆಯುವ ಶಾಸ್ತ್ರ ಮಾಡಲಾಗುತ್ತಿದೆ.

ಇದನ್ನೂ ಓದಿ:ಬಿಜೆಪಿ ಜಾರಿ ಮಾಡಿದ್ದ ಎಪಿಎಂಸಿ , ಮತಾಂತರ ಕಾಯ್ದೆ ವಾಪಸ್ಸಿಗೆ ಸಂಪುಟ ನಿರ್ಧಾರ- ಕೆಪಿಆರ್‌ಎಸ್‌ ಸ್ವಾಗತ

ಈ ನಡುವಿನಲ್ಲಿಯೇ ಮುಂದಿನ ಪಾರ್ಲಿಮೆಂಟ್ ಚುನಾವಣೆಯ ಸಿದ್ಧತೆಗಳನ್ನು ಆರಂಭಿಸಲಾಗಿದೆ. ಕರ್ನಾಟಕ ರಾಜ್ಯದಲ್ಲಿ ಈಗಿರುವ ಸುಮಾರು 13 ಸಂಸದರ ಸ್ಪರ್ದೆಗೆ ಕೊಕ್ ಕೊಡಲು ನಿರ್ಧರಿಸಲಾಗಿದೆಯಂತೆ. ಅಂತವರ ಪಟ್ಟಿಯಲ್ಲಿ ಮಾಜಿ ಮುಖ್ಯಮಂತ್ರಿ ಹಾಲಿ ಕೇಂದ್ರ ಸಚಿವ ಬೆಂಗಳೂರು ಉತ್ತರದ ಡಿ.ವಿ. ಸದಾನಂದ ಗೌಡ, ಚಿಕ್ಕಬಳ್ಳಾಪುರದ ಸಂಸದ ಬಚ್ಚೇಗೌಡ, ಕೋಲಾರದ ಮುನಿಸ್ವಾಮಿ, ಚಾಮರಾಜನಗರದ ಶ್ರೀನಿವಾಸ ಪ್ರಸಾದ್, ವಿಜಯಪುರದ ರಮೇಶ್ ಜಿಗಜಿಣಗಿ, ತುಮಕೂರು ಜಿ.ಎಸ್. ಬಸವರಾಜು, ಕೊಪ್ಪಳದ ಸಂಗಣ್ಣ ಕರಡಿ, ದಾವಣಗೆರೆಯ ಜಿ.ಎಂ. ಸಿದ್ದೇಶ್ವರ, ಚಾಮರಾಜ ನಗರದ ಶ್ರೀನಿವಾಸ್ ಪ್ರಸಾದ್, ಉತ್ತರ ಕನ್ನಡದ ಅನಂತ ಕುಮಾರ್ ಹೆಗ್ಡೆ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಮುಂತಾದವರು ಸೇರಿದ್ದಾರೆ. ಇದರಲ್ಲಿ ಕೆಲವರ ಅನಾರೋಗ್ಯದ ಪ್ರಶ್ನೆಗಳಿದ್ದರೂ ಉಳಿದವರನ್ನು ಕೈ ಬಿಡುವ ಅಂಶವು ಕೂಡ ಬಿಜೆಪಿಯಲ್ಲಿ ಹಳೆಯ ತಲೆಮಾರಿನ ನಾಯಕರು ನಿರ್ಗಮಿಸಬೇಕು, ಆಜ್ಞಾ ಪಾಲಕ ಸಂಘನಿಷ್ಠರು ಬರಬೇಕು ಎನ್ನುವ ಸೂತ್ರವೇ ಕಾರ್ಯಾಚರಣೆಯಲ್ಲಿ ಇರುವುದನ್ನು ಕಾಣಬಹುದು. ತಮ್ಮನ್ನು ಕೈ ಬಿಡುವ ಕುರಿತಾದಂತೆ ಡಿವಿ ಸದಾನಂದ ಗೌಡರು ಬಹಿರಂಗವಾಗಿಯೇ ಅತೃಪ್ತಿ ಮತ್ತು ಆಕ್ಷೇಪವನ್ನು ವ್ಯಕ್ತಪಡಿಸಿದ್ದಾರೆ. ಇಂತಹ ಅತೃಪ್ತರು, ಆಕಾಂಕ್ಷಿಗಳು ಅನಾರೋಗ್ಯದ ಕಾರಣ ಇರುವುದನ್ನು ಹೊರತುಪಡಿಸಿದರೆ ಉಳಿದವರು ಸಂಸತ್ ಚುನಾವಣೆಯಲ್ಲಿ ವಹಿಸಬಹುದಾದ ಪಾತ್ರದ ಬಗ್ಗೆಯೂ ಯೋಚಿಸಬೇಕಿದೆ.

ಕರ್ನಾಟಕದಲ್ಲಿನ ವಿಧಾನಸಭಾ ಚುನಾವಣೆಯ ಫಲಿತಾಂಶದ ಬಳಿಕ ಎಚ್ಚೆತ್ತಿರುವ ಬಿಜೆಪಿ ವಿವಿಧ ರಾಜ್ಯಗಳಲ್ಲಿ ವಿವಿಧ ಸ್ಥಳೀಯ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವ ಸಂಗೀತ ವ್ಯಕ್ತಪಡಿಸಿದೆ. ಮತ್ತು ಆ ದೆಸೆಯಲ್ಲಿ ಆಗಲೇ ಒಳ ಮಾತುಕತೆಗಳು ಆರಂಭಗೊಂಡಿವೆ. ತೆಲಂಗಾಣ-ಆAದ್ರದಲ್ಲಿ ಚಂದ್ರಬಾಬು ನಾಯ್ಡು ತೆಲುಗು ದೇಶಂ ಪಕ್ಷ, ಕರ್ನಾಟಕದಲ್ಲಿ ಜಾತ್ಯತೀತ ಜನತಾದಳ ಹೀಗೆ ಪ್ರಸ್ತಾವಿತವಾಗುತ್ತಿರುವ ಹೆಸರುಗಳು. ಈ ಪಕ್ಷಗಳ ನಾಯಕರ ಇತ್ತೀಚಿನ ಹೇಳಿಕೆಗಳನ್ನು ಗಮನಿಸಿದರೆ ಅಂತಹ ಮೈತ್ರಿಯ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ. ನೂತನ ಸಂಸತ್ತಿನ ಉದ್ಘಾಟನೆಗೆ ದೇವೇಗೌಡ್ರು ಹೋಗಿ ಬಂದ ಬಳಿಕ, ಕಾಂಗ್ರೆಸ್ ವಿರೋಧಿಸುವ ಭರದಲ್ಲಿ ಜೆಡಿಎಸ್ ನಾಯಕರ ಅಭಿಪ್ರಾಯಗಳು ಗಮನ ಸೆಳೆಯುವಂತೆ ಇವೆ. ಅಂತೂ, ಬಿಜೆಪಿಯಲ್ಲಿನ ಆತ್ಮಾವಲೋಕನದ ಪ್ರಹಸನವೇನೋ ಮುಗಿದಿಲ್ಲ.

ಅಷ್ಟು ಸುಲಭದಲ್ಲಿ ಮುಗಿಯುವಂತೆಯೂ ಇಲ್ಲ! ಗೆಲುವು ತನ್ನಿಂದ, ಸೋಲು ಇತರರಿಂದ ಎನ್ನುವ ದಾಟಿ ಬಿಜೆಪಿಯಲ್ಲಿ ಢಾಳಾಗಿ ಕಾಣಿಸುತ್ತಿದೆ.  ಮತ್ತು ಆ ಪಕ್ಷದಲ್ಲಿ ನಾಯಕರು ಅಬ್ಬರಿಸುವಂತೆ ಆಂತರಿಕ ಪ್ರಜಾಪ್ರಭುತ್ವದ ಅವನತಿ ಹೇಗಿದೆ ಎನ್ನುವುದು ದರ್ಶನವಾಗುತ್ತಿದೆ. ಇವೆಲ್ಲವುದರ ನಡುವೆಯೂ ಮುಂದಿನ ಸಂಸತ್ತಿನ ಚುನಾವಣೆಯಲ್ಲಿ ಬಿಜೆಪಿಯ ಕಾರ್ಯತಂತ್ರ, ಅದರ ದಾಳಿ

Donate Janashakthi Media

Leave a Reply

Your email address will not be published. Required fields are marked *