ಚನ್ನಗಿರಿ: ಭೂಮಿ ಒತ್ತುವರಿ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದ್ದೂ, ಅರಣ್ಯ ಭೂಮಿ ನಾಶ ಮಾಡುತ್ತಿದ್ದಾರೆ. ಅದರಂತೆಯೇ ಇಲ್ಲೊಂದು ಪ್ರಕರಣದಲ್ಲಿ ಸುಮಾರು 15 ಎಕರೆ ಅರಣ್ಯ ಪ್ರದೇಶವನ್ನ ಒತ್ತುವರಿ ಮಾಡಿದ್ದವರಿಗೆ ಅರಣ್ಯಾಧಿಕಾರಿಗಳು ಶಾಕ್ ನೀಡಿದ್ದಾರೆ.
ಚನ್ನಗಿರಿ ತಾಲೂಕಿನ ಶಾಂತಿಸಾಗರದಲ್ಲಿ ಅರಣ್ಯ ಭೂಮಿ ಒತ್ತುವರಿ ಮಾಡಿದವರಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಒತ್ತುವರಿ ಮಾಡಿದ್ದ 15 ಎಕರೆ ಅರಣ್ಯ ಪ್ರದೇಶವನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ಬೆಳಗಾವಿ| ಅಂಗನವಾಡಿ ಶಿಕ್ಷಕಿ ಮೇಲೆ ಅತ್ಯಾಚಾರ ಯತ್ನ
ಚನ್ನಗಿರಿ ತಾಲೂಕಿನ ಶಾಂತಿಸಾಗರದ ಗುಡುಂಘಟ್ಟದ ಸರ್ವೇ ನಂ. 43 ರಲ್ಲಿ 15 ಎಕರೆ ಜಾಗವನ್ನು ಅರಣ್ಯ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಈ ಭಾಗದಲ್ಲಿ ಅರಣ್ಯ ಪ್ರದೇಶವನ್ನ ಜನರು ಒತ್ತುವರಿ ಮಾಡಿಕೊಂಡು, ಒತ್ತುವರಿ ಜಾಗದಲ್ಲಿ ಅಡಿಕೆ ಮತ್ತು ಬಾಳೆ ಬೆಳೆಯನ್ನ ಬೆಳೆದಿದ್ದರು. ಈ ಒಂದು ಮಾಹಿತಿ ಪಡೆದ ಅರಣ್ಯ ಅಧಿಕಾರಿಗಳು 3 ಸಾವಿರ ಅಡಿಕೆ ಮತ್ತು ಬಾಳೆ ಗಿಡಗಳನ್ನು ತೆರವು ಮಾಡಿ, ಜಾಗವನ್ನು ಸರ್ಕಾರದ ವಶಕ್ಕೆ ಪಡೆದಿದ್ದಾರೆ.
ಸುಮಾರು ವರ್ಷಗಳಿಂದ ರೈತರು ಅರಣ್ಯ ಪ್ರದೇಶವನ್ನು ಒತ್ತುವರಿ ಮಾಡಿ ಸಾಗುವಳಿ ಮಾಡಿಕೊಂಡು ಅಲ್ಲಿ ಬೆಳೆಗಳನ್ನ ಬೆಳೆಯುತ್ತಾ ಬಂದಿದ್ದರು. ಆ ನಂತರ ಯಾರೂ ಕೇಳುವವರಿಲ್ಲ ಎಂದು ತಿಳಿದ ಮೇಲೆ ಜಾಗದಲ್ಲಿ ಅಡಿಕೆ ತೋಟ ಮಾಡಿದ್ದರು. ಅಡಿಕೆ, ಬಾಳೆಗಿಡಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಸಿಬ್ಬಂದಿಗಳು ತೆರವುಗೊಳಿಸಿದ್ದಾರೆ.
ಇದನ್ನೂ ನೋಡಿ: ವಿವೇಕಾನಂದ ಸಮಾಜಮುಖಿ ಚಿಂತಕ – ಟಿ. ಸುರೇಂದ್ರರಾವ್ Janashakthi Media