ಚೆನ್ನೈ: ಇದು ಪರಿಸರ ವ್ಯವಸ್ಥೆಯ ರಕ್ಷಣೆ, ಪ್ಲಾಸ್ಟಿಕ್ ತ್ಯಾಜ್ಯವನ್ನು ಕಡಿಮೆಗೊಳಿಸುವುದು ಹಾಗೂ ತಮಿಳುನಾಡು ಮತ್ತು ಕರ್ನಾಟಕ ಒಂದು ಲಕ್ಷ ಜನರಿಗೆ ಉದ್ಯೋಗ ನೀಡುವ ಗುರಿ ಹೊಂದಿದೆ. ಭಾರತದ ಕರಾವಳಿ ತೀರದ ಜನರನ್ನು ಬೆಂಬಲಿಸುವ ಹೊಸ ಯೋಜನೆಗೆ ವಿಶ್ವ ಬ್ಯಾಂಕ್ ಅನುಮೋದನೆ ನೀಡಿದೆ. ಚೆನ್ನೈ
ಕರಾವಳಿ ತೀರದ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ‘ಕರಾವಳಿ ಸ್ಥಿತಿಸ್ಥಾಪಕತ್ವ ಮತ್ತು ಆರ್ಥಿಕತೆಯನ್ನು ಬಲಪಡಿಸುವ’ (ಶೋರ್) ಯೋಜನೆಯಡಿ 212.64 ಮಿಲಿಯನ್ ಡಾಲರ್ ಖರ್ಚು ಮಾಡಲಿದೆ.
ಇದನ್ನೂ ಓದಿ: ನೋಂದಾಯಿಸಿಕೊಂಡ ಮಾತ್ರಕ್ಕೆ ಆಸ್ತಿಯ ಮಾಲೀಕರಾಗಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್
ಭಾರತದಲ್ಲಿ 10 ಸಾವಿರ ಕಿ.ಮೀಟರ್‌ಗೂ ಅಧಿಕ ಸಮುದ್ರ ತೀರವಿದ್ದು, ಇದರಲ್ಲಿ ಮೂರನೇ ಒಂದಷ್ಟು ಸವಕಳಿ ಹಾಗೂ ತೀವ್ರ ವಾತಾವರಣದಿಂದಾಗಿ ಅಪಾಯದಲ್ಲಿದೆ. ದೇಶದ ಜನಸಂಖ್ಯೆಯ ಸುಮಾರು 25 ಕೋಟಿ ಮಂದಿ ತಮ್ಮ ನಿತ್ಯ ಜೀವನಕ್ಕೆ ಕರಾವಳಿ ತೀರವನ್ನೇ ಆಶ್ರಯಿಸಿದ್ದಾರೆ. ಈ ಪ್ರದೇಶಗಳು ಸುಮಾರು 18 ಸಾವಿರ ಪ್ರಬೇಧದ ಪ್ರಾಣಿ ಮತ್ತು ಸಸ್ಯ ಸಂಪತ್ತಿಗೆ ಆವಾಸ ಸ್ಥಾನವಾಗಿದೆ.
ಕರಾವಳಿ ಸವಕಳಿ, ಪ್ರದೂಷಣೆ, ತೀವ್ರ ಮೀನುಗಾರಿಕೆ, ಮ್ಯಾಂಗ್ರೋವ್ ಕಾಡುಗಳ ಅವನತಿ ಮತ್ತು ನಗರ ಒತ್ತಡದಿಂದಾಗಿ ಕಡಲಿನ ಜೀವ ವ್ಯವಸ್ಥೆ ಅಪಾಯದ ಮಟ್ಟದಲ್ಲಿದೆ.
‘ತಮಿಳುನಾಡು ಮತ್ತು ಕರ್ನಾಟಕದಲ್ಲಿ, ಈ ಯೋಜನೆಯು 1 ಲಕ್ಷ ಜನರಿಗೆ ಜ್ಞಾನ, ಕೌಶಲ್ಯ ಅಭಿವೃದ್ಧಿ ಸಹಾಯ ಮಾಡಲಿದೆ. ಸರ್ಕಾರಿ ಸಂಸ್ಥೆಗಳು ಮತ್ತು ಸ್ಥಳೀಯ ಸಮುದಾಯಗಳಿಗೆ ಹಣವನ್ನು ಬಳಸಿಕೊಳ್ಳುವ ಮೂಲಕ ಎರಡೂ ರಾಜ್ಯಗಳ ಕರಾವಳಿ ನಿರ್ವಹಣಾ ಯೋಜನೆಗಳನ್ನು ಬೆಂಬಲಿಸುತ್ತದೆ’ ಎಂದು ವಿಶ್ವಬ್ಯಾಂಕ್ ಬುಧವಾರ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ನೋಡಿ: ಧರ್ಮಸ್ಥಳ ನಿಗೂಢಗಳು | ಕಣ್ಣಿಗೆ ಕಂಡದ್ದನ್ನು ಹೇಳದಾದರು!! ಕೇರಳ, ತಮಿಳುನಾಡು ಎಂದೆಲ್ಲ ಲಿಂಕ್ ಕೊಟ್ಟರು!!!
