ಗುತ್ತಿಗೆ ಪದ್ದತಿ ಕೈಬಿಟ್ಟು ಸೇವಾ ಭದ್ರತೆ ಖಚಿತಪಡಿಸಿ – ಹಾಸ್ಟೆಲ್‌ ನೌಕರರ ಅನಿರ್ದಿಷ್ಟ ಮುಷ್ಕರ

ಬೆಂಗಳೂರು: ಸರ್ಕಾರಿ ಹಾಸ್ಟೆಲ್ ಹಾಗೂ ಸರ್ಕಾರಿ ವಸತಿ ಶಾಲೆ-ಕಾಲೇಜುಗಳ ಹೊರಗುತ್ತಿಗೆ ನೌಕರರ ಬಾಕಿ ವೇತನ ಹಾಗೂ ಲಾಕ್‌ಡೌನ್ ಅವಧಿಯ ವೇತನವನ್ನು ಸಂದಾಯ ಮಾಡಬೇಕು. ಹೊರಗುತ್ತಿಗೆ ಪದ್ಧತಿ ಕೈ ಬಿಡಬೇಕು ಎಂದು ಹಾಸ್ಟೆಲ್‌ ಅಡುಗೆ ನೌಕರರು ಸ್ವಾತಂತ್ರ್ಯ ಉದ್ಯಾನವನದಲ್ಲಿ ಅನಿರ್ಧಿಷ್ಟ ಮುಷ್ಕರ ನಡೆಸುತ್ತಿದ್ದಾರೆ.ಮುಷ್ಕರ

ಇದನ್ನೂ ಓದಿ:ಮಾರ್ಚ್‌ 10ರಿಂದ ಹಾಸ್ಟೆಲ್‌ ಹೊರಗುತ್ತಿಗೆ ನೌಕರರ ಅನಿರ್ದಿಷ್ಟ ಧರಣಿ

ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಹಾಗೂ ವಸತಿ ಶಾಲೆ – ಕಾಲೇಜುಗಳ ಹೊರಗುತ್ತಿಗೆ ನೌಕರರ ಸಂಘದ ನೇತೃತ್ವದಲ್ಲಿ ಬುಧುವಾರ (ಅಕ್ಟೋಬರ್-11‌) ಅನಿರ್ಧಿಷ್ಟ ಮುಷ್ಕರ ನಡೆಸುತ್ತಿದ್ದಾರೆ.  ಮುಷ್ಕರವನ್ನು ಉದ್ದೇಶಿಸಿ ಸಂಘದ ರಾಜ್ಯಾಧ್ಯಕ್ಷ  ಭೀಮಶೆಟ್ಟಿ ಯಂಪಳ್ಳಿ ಮಾತನಾಡಿ, ಹೊರಗುತ್ತಿಗೆ ಪದ್ಧತಿ ಕೈಬಿಡಬೇಕು, ನೌಕರರ ಬಾಕಿ ವೇತನ ಸಂದಾಯ, ಹೊರಗುತ್ತಿಗೆ ಸಿಬ್ಬಂದಿಗಳು ನಿವೃತ್ತಿವರೆಗೆ ಸೇವೆಯಲ್ಲಿ ಮುಂದುವರಿಸಬೇಕು ಹಾಗೂ ಹೊರಗುತ್ತಿಗೆ ನೌಕರರ ವಿವಿಧ ಬೇಡಿಕೆಗಳನ್ನು  ಬೇಡಿಕೆ ಈಡೇರುವವರೆಗೆ ಮುಷ್ಕರ ಹಿಂಪಡೆಯುವುದಿಲ್ಲ. ದಸರಾ ದೀಪಾವಳಿಯನ್ನು ಫ್ರೀಡಂ ಪಾರ್ಕ್‌ನಲ್ಲಿ ಆಚರಿಸಲು ನಾವು ಸಿದ್ದರಾಗಿ ಬಂದಿದ್ದೇವೆ ಎಂದು ಹೇಳಿದರು.

ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ (ರಿ), ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ, ಪರಿಶಿಷ್ಟ ಪಂಗಡ ಮತ್ತು ವರ್ಗಗಳ ಇಲಾಖೆಯಲ್ಲಿ ಕಳೆದ ಹತ್ತಾರು ವರ್ಷಗಳಿಂದ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಕಾಲೇಜುಗಳಲ್ಲಿ ಹೊರಗುತ್ತಿಗೆ ಸಿಬ್ಬಂದಿಗಳಾಗಿ ಯಾವುದೇ ಕಾನೂನು ಬದ್ಧ ಸೌಲಭ್ಯಗಳಿಲ್ಲದೆ ದಯನೀಯ ಜೀವನ ನಡೆಸುತ್ತಿದ್ದೇವೆ ಎಂದು ಹೊರಗುತ್ತಿಗೆ ಸಿಬ್ಬಂದಿಗಳು ತಮ್ಮ ನೋವನ್ನು ಹೊರ ಹಾಕಿದರು. ಕೂಡಲೇ ಸರ್ಕಾರ ನಮ್ಮ ಪರಿಸ್ಥಿತಿಯನ್ನು ಅರಿತುಕೊಂಡು ನಮಗೆ ನೇರವಾಗಿ ಇಲಾಖೆಯಿಂದ ವೇತನ ನೀಡಬೇಕು ಎಂದರು.

ವಸತಿ ನಿಲಯಗಳಲ್ಲಿ ಅಡುಗೆ ಕೆಲಸ ಮಾಡುವ ಸಿಬ್ಬಂದಿಗಳನ್ನು ಮನಸ್ಸಿಗೆ ಬಂದಂತೆ ಬೈದು ಕೆಲಸದಿಂದ ತೆಗೆದು ಹಾಕಿ ಗೋಳಾಡಿಸಲಾಗುತ್ತದೆ. ಹೊರಗುತ್ತಿಗೆ ನೌಕರರನ್ನು ಗುತ್ತಿಗೆದಾರರು ಶೋಷಣೆಗೆ ಒಳಪಡಿಸುತ್ತಾರೆ, ಮಾತ್ರವಲ್ಲ ಅಧಿಕಾರಿಗಳು ಸಹ ತೀವ್ರ ಕಿರುಕುಳ ಕೊಡುತ್ತಾರೆ ಎಂದು ತಮ್ಮ ಅಳಲನ್ನು ತೊಡಿಕೊಂಡರು.

ಇದನ್ನೂ ಓದಿ:ಮಾ.10ರಿಂದ ವಸತಿಶಾಲಾ ಹೊರಗುತ್ತಿಗೆ ನೌಕರರ ಅನಿರ್ದಿಷ್ಟಾವಧಿ ಧರಣಿ

ನ್ಯಾಯಬದ್ಧ ಹಕ್ಕೊತ್ತಾಯಗಳಿಗೆ ಮಹಾತ್ಮ ಗಾಂಧಿಜಿಯವರು ಈ ಹಿಂದೆ ಕರೆ ನೀಡಿದಂತೆ ಈಗ ಅನಿವಾರ್ಯವಾಗಿ “ಮಾಡು ಇಲ್ಲವೆ ಮಡಿ” ಎಂಬ ಘೋಷಣೆಗೆ ಅನುಗುಣವಾಗಿ ಬೆಂಗಳೂರು ಸ್ವಾತಂತ್ರ್ಯ ಉದ್ಯಾನವನದಲ್ಲಿ ಹೊರಗುತ್ತಿಗೆ ನೌಕರರೆಲ್ಲರೂ ಸುಮಾರು 500-600 ಕಿ.ಲೋ ಮೀಟರ್‌ ದೂರದ ಊರಿನಿಂದ ತಮ್ಮ ಕುಟುಂಬದ ಜೊತೆಗೆ ತಮ್ಮ ಸಣ್ಣ-ಪುಟ್ಟ ಮಕ್ಕಳನ್ನು ಕರೆದುಕೊಂಡು ಬಂದು ಅನಿರ್ದಿಷ್ಟ ಮುಷ್ಕರ ನಡೆಸುತ್ತಿದ್ದೇವೆ.  ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು ನಮ್ಮ ಬೇಡಿಕೆಗಳ ಈಡೇರಿಕೆಗೆ ಕ್ರಮ ವಹಿಸಬೇಕು. ಸಂಬಂಧಪಟ್ಟ ಇಲಾಖೆಯ ಸಚಿವರು ಹಾಗೂ ಕಾರ್ಮಿಕರ ಇಲಾಖೆಯ ಸಚಿವರು ಕೂಡಲೇ ಮುಷ್ಕರದ ಸ್ಥಳಕ್ಕೆ ಭೇಟಿ ಮಾಡಬೇಕು ಎಂದು ಪ್ರತಿಭಟನೆಕಾರರು ಆಗ್ರಹಿಸಿದರು.ಮುಷ್ಕರ

ಬೇಡಿಕೆಗಳು:

  • ಹೊರಗುತ್ತಿಗೆ ಪದ್ಧತಿ ಕೈ ಬಿಡಬೇಕು.
  • ನೇರವಾಗಿ ಇಲಾಖೆಯಿಂದ ವೇತನ ಕೊಡಬೇಕು.
  • ಹಾಸ್ಟೆಲ್ ಮತ್ತು ವಸತಿ ಶಾಲೆ ಹೊರಗುತ್ತಿಗೆ ನೌಕರರಿಗೆ ನಿವೃತ್ತಿವರೆಗೆ ಸೇವಾ ಭದ್ರತೆ ಕೊಡಬೇಕು.
  • ಸಮಾಜ ಕಲ್ಯಾಣ ಇಲಾಖೆಯಿಂದ ಸಿಬ್ಬಂದಿ ಸಂಖ್ಯೆ ಕಡಿಮೆ ಮಾಡಿದ ಆದೇಶ ರದ್ದು ಪಡಿಸಬೇಕು
  • ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಮೆಟ್ರಿಕ್ ಪೂರ್ವ ಮತ್ತು ನಂತರದ ಬಾಲಕರ ನಿಲಯಗಳಲ್ಲಿ ರಾತ್ರಿ ಕಾವಲುಗಾರರು ನೇಮಿಸಬೇಕು.
  • ಹಾಸ್ಟೆಲ್ ಮತ್ತು ವಸತಿ ಶಾಲೆ ವಿದ್ಯಾರ್ಥಿಗಳ ಆಹಾರ ಭತ್ಯೆ ದಿನಕ್ಕೆ 100 ರೂಪಾಯಿಗಳಂತೆ ತಿಂಗಳಿಗೆ 3000 ರೂಪಾಯಿಗಳಿಗೆ ಹೆಚ್ಚಿಸಬೇಕು.
  • ಕ್ರೈಸ್ ಸಂಸ್ಥೆಯಲ್ಲಿ 2017 ರ ನಂತರದ ಹೊಸ ವಸತಿ ಶಾಲೆಗಳಿಗೆ ಕನಿಷ್ಠ 11 ರಂತೆ ಸಿಬ್ಬಂದಿಗಳನ್ನು ನೇಮಿಸಬೇಕು. ಹಾಗೆಯೇ ಕಾರ್ಮಿಕ ಇಲಾಖೆ ನಿಗದಿಪಡಿಸಿದ ವೇತನ ಪಾವತಿಸಬೇಕು,
  • ಸುಮಾರು 15 ವರ್ಷಗಳ ಕಾಲ ಹೊರಗುತ್ತಿಗೆದಾರರು ಸಿಬ್ಬಂದಿಗಳ ಪಿ.ಎಫ್ ಹಣ ಸರಿಯಾಗಿ ಜಮಾ ಮಾಡಿರುವುದಿಲ್ಲ. ಇದರ ಬಗ್ಗೆ ತನಿಖೆ ನಡೆಸಿ ಜಮಾ ಮಾಡದಿರುವ ಹಣವನ್ನು ನೌಕರರ ಹೆಸರಿಗೆ ಜಮಾ ಮಾಡಲು ಆದೇಶ ಹೊರಡಿಸಬೇಕು.
  • ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸಿದ್ದು, ಅದರ ಅನುಗುಣವಾಗಿ ಅಡುಗೆ ಸಿಬ್ಬಂದಿಗಳನ್ನು ಹೆಚ್ಚಿಸಬೇಕು. ಇಲಾಖೆಯ ದಿನಾಂಕ 27-12-2013 ಆದೇಶದಂತೆ ಸಿಬ್ಬಂದಿಯ ನೇಮಕಾತಿ ಆಗಬೇಕು.
  • ಸುಪ್ರೀಂಕೋರ್ಟ್ ಆದೇಶದಂತೆ ಸಮಾನ ಕೆಲಸಕ್ಕೆ ಸಮಾನ ವೇತನ ಕೊಡಬೇಕು.
  • ಹೊರಗುತ್ತಿಗೆ ನೌಕರರಿಗೆ ಕೆಲಸದ ಸಮಯ ನಿಗದಿಪಡಿಸಬೇಕು. ಭವಿಷ್ಯ ನಿಧಿ, ವಾರದ ರಜೆ, ವೇತನ ಚೀಟಿ ಮತ್ತು ಹೆರಿಗೆ ಭತ್ಯೆ ಹಾಗೂ ಬಾಕಿ ಅರಿಯರ್ ಕಡ್ಡಾಯವಾಗಿ ಕೊಡಬೇಕು.
  • ಬಾಕಿ ಇರುವ ಸಂಬಳವನ್ನು ತಕ್ಷಣ ಕೊಡಬೇಕು.
  • ನೇರ ನೇಮಕಾತಿ ಸಮಯದಲ್ಲಿ ಕೆಲಸ ಕಳೆದುಕೊಂಡ ಹೊರಗುತ್ತಿಗೆ ನೌಕರರನ್ನು ಮತ್ತೆ ಕೆಲಸಕ್ಕೆ ತೆಗೆದು ಕೊಳ್ಳಬೇಕು.
  • ವಾರ್ಡ್‌ನ ಮತ್ತು ಅಧಿಕಾರಿಗಳ ಕಿರುಕುಳ ನಿಲ್ಲಬೇಕು. ಅಕ್ರಮವಾಗಿ ನೇಮಕ ಮಾಡಿಕೊಳ್ಳುವ ವಾರ್ಡ್ನನ ಮತ್ತು ಅಧಿಕಾರಿಗಳ ಮೇಲೆ ಕ್ರಮ ಜರುಗಿಸಬೇಕು.
  • ನಿವೃತ್ತಿ ನಂತರ ಜೀವನ ನಿರ್ವಹಣೆಗೆ 5 ಲಕ್ಷ ಪರಿಹಾರ ಕೊಡಬೇಕು.
  • ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದವಸತಿ ನಿಲಯಗಳಲ್ಲಿ ಎಫ್‌ ಡಿಸಿ/ಎಸ್ಡಿಸಿ/ನರ್ಸ್ ಮೊದಲಾದ ಬೋಧಕೇತರ ಹುದ್ದೆಗಳಿಗೆ ನೇರ ನೇಮಕಾತಿ ಮಾಡಬಾರದು. ಈಗ ಕೆಲಸ ಮಾಡುತ್ತಿರುವ ಹೊರ ಸಂಪನ್ಮೂಲ ನೌಕರರನ್ನು ಆಯಾ ಹುದ್ದೆಗಳಲ್ಲಿ ಕಾಯಂ ಮಾಡಬೇಕು.
  • ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ 68 ಮೊರಾರ್ಜಿ ವಸತಿ ಶಾಲೆಗಳನ್ನು ಮೇಲ್ದರ್ಜೆಗೆ ಏರಿಸಿದ್ದು, ಮಕ್ಕಳ ಸಂಖ್ಯೆ ಹೆಚ್ಚು ಮಾಡಿದ್ದು, ಹಾಗಾಗಿ ಸಿಬ್ಬಂದಿಗಳ ಸಂಖ್ಯೆ ಹೆಚ್ಚಿಸಬೇಕು.
  • ಕಸ್ತೂರಿ ಭಾ ವಸತಿ ಶಾಲೆ ನಿಲಯಗಳಲ್ಲಿ ಕೆಲಸ ಮಾಡುವ ಹೊರಗುತ್ತಿಗೆ ನೌಕರರಿಗೆ ಕನಿಷ್ಠ ವೇತನ, ಪಿ.ಎಫ್. ಮೊದಲಾದ ಕಾನೂನು ಸೌಲಭ್ಯಗಳನ್ನು ಕೊಡಬೇಕು.
  • ಕರೋನ ಲಾಕ್‌ಡೌನ್ ಅವಧಿಯಲ್ಲಿ ಎಲ್ಲಾ ಸರ್ಕಾರಿ ನೌಕರರಿಗೆ ಸ್ಟೀಮ್ ನೌಕರರಿಗೆ ವೇತನ ಪಾವತಿ ಮಾಡಲಾಗಿದೆ. ಹಾಸ್ಟೆಲ್ ಹೊರಗುತ್ತಿಗೆ ನೌಕರರಿಗೆ ಕೊಡಲಿಲ್ಲ. ಈಗಲಾದರೂ ವೇತನ ಕೊಡಬೇಕು.

ಪ್ರತಿಭಟನೆಯಲ್ಲಿ ಸಂಘಟನೆಯ ಗೌರವಾಧ್ಯಕ್ಷ ನಿತ್ಯಾನಂದಸ್ವಾಮಿ, , ಪ್ರಧಾನ ಕಾರ್ಯದರ್ಶಿ ಕೆ.ಹನುಮೇಗೌಡ, ಖಂಜಾಜಿ ಚಂದ್ರಪ್ಪ ಹೊಸ್ಕೇರಾ, ಎಸ್‌ಎಫ್‌ಐ ರಾಜ್ಯಕಾರ್ಯದರ್ಶಿ ಭೀಮನಗೌಡ, ಹಾಸ್ಟೆಲ್‌ ನೌಕರರ ಮುಖಂಡರಾದ ಎಂ.ಜಂಬಯ್ಯ ನಾಯಕ, ಕೆ.ಮುನಿಯಪ್ಪ, ಹುಲುಗಪ್ಪ ಚಲುವಾದಿ,ಶಾಂತಕ್ಕ ಗಡ್ಡಿಯವರ್, ಪ್ರದೀಪ್ ದಳವಾಯಿ, ಗ್ಯಾನೇಶ್ ಕಡಗದ, ನಂಜುಂಡಸ್ವಾಮಿ, ಇಸಾಮುದ್ದೀನ್, ಈ.ಆರ್.ಯಲ್ಲಪ್ಪ, ಎಸ್.ಶಿವಮೂರ್ತಿ, ರಾಜೇಶ್ ದೇಶಪಾಂಡೆ, ಮಂಜುಳಾ ಕೋಲಾರ, ಉದಯ.ಡಿ.ನಾಯಕ ಉತ್ತರ ಕನ್ನಡ, ಗಿರಿಯಪ್ಪ ಪೂಜಾರಿ ರಾಯಚೂರು, ಸುನಂದಮ್ಮ ಹಾಸನ, ಹಾಲೇಶ್ ನಾಯಕ್ ದಾವಣಗೆರೆ,ಎಲ್.ಭವಾನಿ ಉಡುಪಿ, ಭೀಮಾ ನಾಯಕ್ ಮೈಸೂರು, ಜಿ.ಕೆ.ದಿನೇಶ್ ಕೊಡುಗು, ಮಲ್ಲಿಕಾರ್ಜುನ್ ಚಾಮರಾಜನಗರ,ಬೆಟ್ಟಸ್ವಾಮಿ ರಾಮನಗರ,ಮಹಾಂತೇಶ್ ಹೆಚ್.ಶಿರಸೂರೆ ಗದಗ, ಕೆ.ಯತೀಶ್ ದಕ್ಷಿಣ ಕನ್ನಡ, ಪ್ರಕಾಶ್ ಶಿವಮೊಗ್ಗ, ಶಿವರಾಜ್ ಬೆಂಗಳೂರು ನಗರ, ಪರಶುರಾಮ ಅದಳಗಿ ಕಲಬುರ್ಗಿ, ದಾವಲ್ ಸಾಬ್ ನಧಾಫ್ ಯಾದಗಿರಿ, ಅಣ್ಣ ಬಸಪ್ಪ ದೇವೇಂದ್ರಪ್ಪ ಬೀದರ್, ಬಸವರಾಜ ಭೋವಿ ಹಾವೇರಿ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ಪದಾಧಿಕಾರಿಗಳು ಇದ್ದರು.

ವಿಡಿಯೋ ನೋಡಿ:ಕಟ್ಟಡ ಕಾರ್ಮಿಕರ ಮಕ್ಕಳ ಸ್ಕಾಲರ್ಶಿಪ್‌ಗೆ ಕೊಕ್ಕೆ! ಭುಗಿಲೆದ್ದ ಕಾರ್ಮಿಕರ ಆಕ್ರೋಶ Janashakthi Media

Donate Janashakthi Media

Leave a Reply

Your email address will not be published. Required fields are marked *