ಈ ಸಂದರ್ಭದಲ್ಲಿ ಕೆಲವು ವಿಶೇಷ ಸಂಗತಿಗಳನ್ನ ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ಕ್ಯೂಬಾದ ಕ್ರಾಂತಿಕಾರಿ ಅರ್ನೆಸ್ಟೋ ಚೆ ಗುವಾರ ಸ್ವತಃ ಒಬ್ಬ ಡಾಕ್ಟರ್ ಆಗಿದ್ದುಕೊಂಡು ಕ್ರಾಂತಿಯಲ್ಲಿ ಭಾಗವಹಿಸಿ ಫಿಡೆಲ್ ಕ್ಯಾಸ್ಟ್ರೋ ಜೊತೆ ಸೇರಿ ಕ್ಯೂಬಾದ ಕ್ರಾಂತಿಯನ್ನ ಯಶಸ್ವಿಗೊಳಿಸಿದವ….
“ಮನುಕುಲದ ಬಗೆಗಿನ ಪ್ರೀತಿ” ಎಂತಹದ್ದು ಅಂದರೆ, 1967 ರಲ್ಲಿ ಚೆ ಗೆ ಗುಂಡಿಕ್ಕಿದ್ದ ಸೈನಿಕ ಮಾರಿಯೊ ಟೆರನ್ ಸಲಝಾರ್ ತಲೆ ಮರೆಸಿಕೊಂಡ ಹಲವು ವರ್ಷಗಳ ನಂತರ 2006ರಲ್ಲಿ ಆತನ ಕಣ್ಣಿನ ಪೊರೆಯನ್ನು ತೆಗೆಯಲು ಕ್ಯೂಬಾದ ಸರ್ಕಾರ ಶಸ್ತ್ರಚಿಕಿತ್ಸೆ ನಡೆಸಿತು. ಹಗೆ ತೀರಿಸುವುದು ಚೆಗುವಾರನ ವಾರಸುದಾರಿಕೆ ಆಗಿರಲಿಲ್ಲ ಅದು ಮಾನವಕುಲಕ್ಕೆ ಒಬ್ಬ ವೈದ್ಯನ ಪ್ರೀತಿಯಾಗಿಯೇ ಉಳಿದಿದೆ.
ಈ ಪರಂಪರೆಯ ಮುಂದುವರಿಕೆಯ ಭಾಗವಾಗಿ ಕೋವಿಡ್ ಸೋಂಕು ಜಗತ್ತನ್ನೇ ತಲ್ಲಣಿಸುತ್ತಿರುವಾಗ ಕ್ಯೂಬಾದ ವೈದ್ಯರುಗಳ ತಂಡಗಳು ಜಗತ್ತಿನ ವಿವಿಧ ದೇಶಗಳಿಗೆ ಹೋಗಿ ತಮ್ಮ ಅಮೂಲ್ಯವಾದ ಸೇವೆಯನ್ನು ಸಲ್ಲಿಸಿದರು. ಇವತ್ತಿಗೂ ಜಗತ್ತಿನ ಅತ್ಯಂತ ಪುಟ್ಟ ಸಮಾಜವಾದ ರಾಷ್ಟ್ರ ಕ್ಯೂಬಾ ಆರೋಗ್ಯ ಕ್ಷೇತ್ರದಲ್ಲಿ ಜಗತ್ತಿನಲ್ಲೇ ಹೊಸ ಮಾದರಿಗಳೊಂದಿಗೆ ಮುಂದಿದೆ. ಇಲ್ಲಿ ಒಂದು ಸಾವಿರ ಜನಸಂಖ್ಯೆಗೆ ಒಂಭತ್ತು ತಜ್ಞವೈದ್ಯರಿದ್ದಾರೆ.
ಚೆ ಹೇಳಿದ ಮತ್ತೊಂದು ಮಾತು
“ನಾನು ಸಮಾಜವಾದ ಕಟ್ಟಬಯಸುತ್ತೇನೆ, ‘ಜನಗಳನ್ನು ಶುದ್ಧೀಕರಿಸುವ, ಸ್ವಾರ್ಥಪರತೆಯಿಂದ ಆಚೆಗೆ ಚಲಿಸುವ, ಅವರನ್ನು ಸ್ಪರ್ಧೆ ಮತ್ತು ದುರಾಸೆಯಿಂದ ರಕ್ಷಿಸುವ’ ಒಂದು ವ್ಯವಸ್ಥೆಯನ್ನು ಕಟ್ಟಯಸುತ್ತೇನೆ”.
ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಆರೋಗ್ಯ ಕ್ಷೇತ್ರ ಲಾಭ ಮಾಡುವ ಕ್ಷೇತ್ರವಾಗಿ ಪರಿಣಮಿಸಿರುವುದೇ ತೋರಿಸುತ್ತದೆ. ಬಂಡವಾಳಶಾಹಿ ಮನುಕುಲ ವಿರೋಧಿ… ಸಮಾಜವಾದಿ ವ್ಯವಸ್ಥೆ ಜೀವಪರ…
ಮಾಹಿತಿ ಸಂಗ್ರಹ: ಎಚ್.ಆರ್.ನವೀನ್ ಕುಮಾರ್, ಹಾಸನ