ಮಂಜೂರಾದ ಹುದ್ದೆಯಲ್ಲಿ 10 ವರ್ಷ ನಿರಂತರ ಕೆಲಸ ; ಕಾರ್ಯನಿರ್ವಹಿಸಿದ ಉದ್ಯೋಗಿ ಕಾಯಂಗೆ ಅರ್ಹ: ಹೈಕೋರ್ಟ್‌

ಬೆಂಗಳೂರು: ದಿನಗೂಲಿ ಆಧಾರದಲ್ಲಿ ಸತತ 30 ವರ್ಷಗಳ ಕಾಲ ಅರಣ್ಯ ವೀಕ್ಷಕ/ಚಾಲಕ ಉದ್ಯೋಗದಲ್ಲಿ ಕಾರ್ಯನಿರ್ವಹಿಸಿದ ದಿನಗೂಲಿ ನೌಕರನೋರ್ವನ ಸೇವೆ ಕಾಯಂಗೊಳಿಸಲು ಹೈಕೋರ್ಟ್‌, ರಾಜ್ಯ ಸರಕಾರ ಮತ್ತು ಅರಣ್ಯ ಇಲಾಖೆಗೆ ಆದೇಶಿಸಿದೆ. ಅಲ್ಲದೆ, ಮಂಜೂರಾದ ಹುದ್ದೆಯಲ್ಲಿ 10 ವರ್ಷಗಳ ಕಾಲ ನಿರಂತರವಾಗಿ ಕೆಲಸ ಮಾಡಿದ ಉದ್ಯೋಗಿಯು ಸೇವೆ ಕಾಯಂಗೆ ಅರ್ಹ ಎಂದು ನ್ಯಾಯಾಲಯ ಮತ್ತೆ ಸ್ಪಷ್ಟಪಡಿಸಿದೆ. ಕಾಯಂ

ತಮ್ಮ ಸೇವೆ ಕಾಯಂಗೊಳಿಸಲು ನಿರಾಕರಿಸಿ ಅರಣ್ಯ ಇಲಾಖೆ ನೀಡಿದ್ದ ಹಿಂಬರಹ ಪುರಸ್ಕರಿಸಿದ ಕರ್ನಾಟಕ ಆಡಳಿತಾತ್ಮಕ ನ್ಯಾಯಾಧೀಕರಣದ (ಕೆಎಟಿ) ಆದೇಶ ರದ್ದು ಕೋರಿ ಆನೇಕಲ್‌ ವಲಯದಲ್ಲಿ ಅರಣ್ಯ ವೀಕ್ಷಕ (ಫಾರೆಸ್ಟ್‌ ವಾಚರ್‌) 53 ವರ್ಷದ ಪಿ. ಜುಂಜಪ್ಪ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಮತ್ತು ನ್ಯಾಯಮೂರ್ತಿ ರಾಮಚಂದ್ರ ಡಿ. ಹುದ್ದಾರ್‌ ಅವರಿದ್ದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.

”ದಿನಗೂಲಿ ನೌಕರನಾಗಿರುವ ಜುಂಜಪ್ಪ ಕಾಯಂ ಉದ್ಯೋಗಿಗೆ ಸರಿಸಮಾನವಾಗಿ 30 ವರ್ಷ ನಿರಂತರವಾಗಿ ಸೇವೆ ಸಲ್ಲಿಸಿದ್ದಾರೆ. ಜುಂಜಪ್ಪ ವೇತನ, ಸೇವಾ ದಾಖಲೆಗಳು ಮತ್ತು ಅರಣ್ಯ ಇಲಾಖೆಯ ಅಧಿಕೃತ ಪತ್ರ ವ್ಯವಹಾರಗಳನ್ನು ಮೌಲ್ಯಮಾಪನ ಮಾಡುವಲ್ಲಿಕೆಎಟಿ ವಿಫಲವಾಗಿದೆ. ಔಪಚಾರಿಕ ನೇಮಕ ಪತ್ರ ಹಾಜರುಪಡಿಸಿಲ್ಲ ಎಂಬ ಏಕೈಕ ಅಂಶವು ನಿರಂತರವಾಗಿ ಸೇವೆ ಸಲ್ಲಿಸಿರುವ ಉದ್ಯೋಗಿಯ ಸೇವಾ ಕಾಯಮಾತಿಯ ಕಾನೂನುಬದ್ಧ ಹಕ್ಕನ್ನು ನಿರಾಕರಿಸುವುದಕ್ಕೆ ಆಧಾರವಾಗುವುದಿಲ್ಲ” ಎಂದು ನ್ಯಾಯಪೀಠ ಆದೇಶಿಸಿದೆ.

ಇದನ್ನೂ ಓದಿ : ರೇಪ್‌ ಮರ್ಡರ್‌ ಅಂಡ್ ಷೂಟೌಟ್‌ ! ಕಾಯಂ

ಪ್ರಕರಣದ ಹಿನ್ನೆಲೆ : ಆನೇಕಲ್ ವಲಯದ ಅರಣ್ಯ ವೀಕ್ಷಕ ಆಗಿ ಕಳೆದ 30 ವರ್ಷದಿಂದ, ಪಿ.ಜುಂಜಪ್ಪ ಎಂಬುವವರು ದಿನಗೂಲಿ ನೌಕರರಾಗಿ ಸೇವೆ ಸಲ್ಲಿಸುತ್ತಿದ್ದರಯ. ಇಷ್ಟೊಂದು ವರ್ಷದಿಂದ ಸೇವೆ ಸಲ್ಲಿಸುತ್ತಿದ್ದರೂ ಕೆಲಸ ಪರ್ಮನೆಂಟ್ ಆಗಿಲ್ಲವೆಂದು, ಸಾಕಷ್ಟು ಬಾಗಿ ಸರ್ಕಾರದ ಮೋರೆ ಹೋಗಿದ್ದರು. ತಮ್ಮ ಕೆಲಸ ಖಾಯಂ ಮಾಡಿ ಎಂದು ಮನವಿ ಮಾಡಿದ್ದರು. ಆದರೆ ಅರಣ್ಯ ಇಲಾಖೆ 2016ರಲ್ಲಿ ಅವರ ಸೇವೆಯನ್ನು ಖಾಯಂಗೊಳಿಸಲು ನಿರಾಕರಿಸಿ, ಹಿಂಬರಹ ಪತ್ರ ನೀಡಿ, ಅವಕಾಶ ನಿರಾಕರಿಸಿತ್ತು. ಜುಂಜಪ್ಪ ಈ ತೀರ್ಮಾನವನ್ನ ಪ್ರಶ್ನಿಸಿ ಮೊದಲು ಕರ್ನಾಟಕ ಆಡಳಿತಾತ್ಮಕ ನ್ಯಾಯಾಧೀಕರಣಕ್ಕೆ ಮೆಲುಕು ಹಾಕಿದರು. ಆದರೆ, 2019ರ ಜುಲೈ 31 ರಂದು ಕೆಎಟಿ ಕೂಡ ಆತನ ಅರ್ಜಿಯನ್ನು ವಜಾ ಮಾಡಿದಾಗ, ಜುಂಜಪ್ಪ ಹೈಕೋರ್ಟ್ ಮೆಟ್ಟಿಲು ಏರಿದರು.

ಇನ್ನು ಅರ್ಜಿದಾರರು ಮಂಜೂರಾತಿ ಹುದ್ದೆಯಲ್ಲಿಯೇ ಕೆಲಸ ಮಾಡಿಲ್ಲ ಮತ್ತು ನೇಮಕಾತಿ ಪತ್ರವಿಲ್ಲವೆಂದು ಸರ್ಕಾರದ ಪರ ವಕೀಲರು ಆಕ್ಷೇಪಿಸಿದರು. ಆದರೆ ನ್ಯಾಯಪೀಠ ಈ ಆಕ್ಷೇಪಣೆಗೆ ಒಪ್ಪಲಿಲ್ಲ. ಜುಂಜಪ್ಪ ದಿನಗೂಲಿ ನೌಕರನಾಗಿದ್ದರೂ, ಸರಕಾರದ ಬೇರೆ ನೌಕರರಂತೆ ಕೆಲಸ ಮಾಡಿದ್ದಾರೆ. ನೇಮಕಾತಿ ಪತ್ರವಿಲ್ಲದೆ ಈ ಸೇವೆ ನಿರಾಕರಿಸುವುದು ಅನ್ಯಾಯ ಎಂದು ತೀರ್ಪಿನಲ್ಲಿ ತಿಳಿಸಿದರು. ಅಲ್ಲದೇ ಹೈಕೋರ್ಟ್ ಈ ಮೂಲಕ ಕೆಎಟಿ ನೀಡಿದ್ದ ತೀರ್ಪನ್ನು ರದ್ದುಪಡಿಸಿದೆ ಮತ್ತು ಅರಣ್ಯ ಇಲಾಖೆ, ರಾಜ್ಯ ಸರ್ಕಾರಕ್ಕೆ ಜುಂಜಪ್ಪನ ಸೇವೆ ಖಾಯಂಗೊಳಿಸಲು ಸ್ಪಷ್ಟ ಆದೇಶ ನೀಡಿದೆ.

ಇದನ್ನೂ ನೋಡಿ : ಅಲಹಾಬಾದ ಹೈಕೋರ್ಟ್- ಸ್ತ್ರೀ ದ್ವೇಷದ ಹೇಳಿಕೆಗಳು, ಸುಪ್ರೀಂ ಗರಂ Janashakthi Media

 

Donate Janashakthi Media

Leave a Reply

Your email address will not be published. Required fields are marked *