ನವದೆಹಲಿ: ದೇಶದ ಅತಿದೊಡ್ಡ ಟೆಲಿಕಾಂ ಆಪರೇಟರ್ ರಿಲಯನ್ಸ್ ಜಿಯೋ ಇಂದು (ಅಕ್ಟೋಬರ್ 6, ಬುಧವಾರ) ನೆಟ್‌ವರ್ಕ್ ಸಮಸ್ಯೆ ಎದುರಿಸಿದೆ. ಬೆಳಿಗ್ಗೆ ಸುಮಾರು 9.30ರಿಂದ ಜಿಯೋ ನೆಟ್‌ವರ್ಕ್ ತೀವ್ರತರವಾದ ಸಮಸ್ಯೆ ಎದುರಾದ ಹಿನ್ನೆಲೆಯಲ್ಲಿ ಕಂಪನಿಯ ವಿರುದ್ಧ ನೆಟ್ಟಿಗರು ವಿವಿಧ ರೀತಿಯ ಗಂಭೀರ ಆರೋಪ ಮಾಡಿದ್ದಾರೆ.
ಜಿಯೋ ನೆಟ್‌ವರ್ಕ್ ಸಮಸ್ಯೆಯ ಬಗ್ಗೆ ಸುಮಾರು 4,000 ಕ್ಕೂ ಹೆಚ್ಚು ಮಂದಿ ದೂಷಣೆ ಮಾಡಿದ್ದು, ಟ್ವಿಟ್ಟರ್‌ನಲ್ಲಿ ಟ್ರೆಂಡ್ ಆಗಿದ್ದವು. ಜಿಯೋ ನೆಟ್‌ವರ್ಕ್ ಸ್ಥಗಿತಗೊಂಡಿರುವ ಬಗ್ಗೆ ಬಳಕೆದಾರರು ನಿರಂತರವಾಗಿ ದೂರು ನೀಡುತ್ತಿದ್ದಾರೆ. ಕೆಲವು ಬಳಕೆದಾರರು ಜಿಯೋ ಕಂಪನಿಯನ್ನು ತೀವ್ರವಾಗಿ ದೂಷಿಸುತ್ತಿದ್ದಾರೆ. ಮೀಮ್‌ಗಳನ್ನೂ ಸಹ ಹಂಚಿಕೊಳ್ಳಲಾಗುತ್ತಿದೆ.
ಇದನ್ನು ಓದಿ: 6 ಗಂಟೆಗಳ ಕಾಲ ಸ್ಥಗಿತಗೊಂಡಿದ್ದ ಸಾಮಾಜಿಕ ಜಾಲತಾಣ! – ಚಟಪಟಿಸಿದವರೆಷ್ಟು ಜನ ಗೊತ್ತೆ?
ಮಂಗಳವಾರ ರಾತ್ರಿಯಿಂದ ಮಧ್ಯಪ್ರದೇಶದ ಕೆಲವು ನಗರಗಳಲ್ಲಿ ಜಿಯೋ ಸಂಪರ್ಕ ಸಮಸ್ಯೆ ಎದುರಾಯಿತು. ಇಂದು ಬೆಳಗ್ಗಿನಿಂದ ದೇಶಾದ್ಯಂತ ಹಲವು ಕಡೆಗಳಲ್ಲಿ ವ್ಯತ್ಯಯ ಉಂಟಾದವು. ಇಂತಹ ಪರಿಸ್ಥಿತಿಯಲ್ಲಿ, ಬಳಕೆದಾರರು ಫೋನ್ ಕರೆಗಳನ್ನು ಹಾಗೂ ಇಂಟರ್‌ನೆಟ್ ಬಳಸಲು ಸಾಧ್ಯವಾಗಲಿಲ್ಲ. ಕಂಪನಿಯ ಗ್ರಾಹಕ ಸೇವೆಯನ್ನು ಸಂಪರ್ಕಿಸಲೂ ಸಾಧ್ಯವಾಗುತ್ತಿಲ್ಲ ಎಂದು ಹಲವು ದೂರಿದ್ದಾರೆ.
ಡೌನ್ ಡಿಟೆಕ್ಟರ್ ಸೈಟ್ ಕೂಡಾ ಜಿಯೋ ನೆಟ್‌ವರ್ಕ್ ಸಮಸ್ಯೆಗೆ ಸಂಬಂಧಿಸಿದಂತೆ ಬಳಕೆದಾರರ ದೂರುಗಳಲ್ಲಿ ಹೆಚ್ಚಳವನ್ನು ತೋರಿಸುತ್ತಿದೆ. ಡೌನ್ ಡಿಟೆಕ್ಟರ್ ವರದಿಗಳ ಪ್ರಕಾರ, ದೆಹಲಿ, ಮುಂಬೈ, ಬೆಂಗಳೂರು, ಇಂದೋರ್ ಮತ್ತು ರಾಯ್‌ಪುರದಲ್ಲಿ ಜಿಯೋ ನೆಟ್‌ವರ್ಕ್ ತೀವ್ರವಾಗಿ ಸಮಸ್ಯೆಯಾಗಿದ್ದವು. ಜಿಯೋ ಇದುವರೆಗೆ ಯಾವುದೇ ಹೇಳಿಕೆಯನ್ನು ನೀಡಿಲ್ಲವಾದರೂ, ಕಂಪನಿಯ ಟ್ವಿಟರ್ ಹ್ಯಾಂಡಲ್, ಸಂಪರ್ಕ ಸಮಸ್ಯೆಗಳು ಎದುರಾಗಿವೆ ಎಂದು ಬಳಕೆದಾರರಿಗೆ ಪ್ರತಿಕ್ರಿಯಿಸಿದೆ.