ಶಿವಮೊಗ್ಗದಲ್ಲಿ ಕಾಡಾನೆ ದಾಳಿ: ಕೃಷಿ ಕಾರ್ಮಿಕ ಮೃತ

ಶಿವಮೊಗ್ಗ: ಶಿವಮೊಗ್ಗ ವನ್ಯಜೀವಿ ವಿಭಾಗದ ಪುರದಾಳ್​ ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಕಾಡಾನೆ ದಾಳಿಗೆ 41 ವರ್ಷದ ಕೃಷಿ ಕಾರ್ಮಿಕ ಮೃತಪಟ್ಟಿರುವ ಘಟನೆ  ನಡೆದಿದೆ.

ಗದಗ ಜಿಲ್ಲೆಯ ಲಕ್ಷ್ಮೇಶ್ವರ ಮೂಲದ ಹನುಮಂತಪ್ಪ ಎಂಬುವವರು ಮೃತಪಟ್ಟಿದ್ದಾರೆ. ಹನುಮಂತಪ್ಪ ಕಳೆದ ಐದು ವರ್ಷಗಳಿಂದ ಅಡಿಕೆ ತೋಟದಲ್ಲಿ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದನು.

ಘಟನೆ ಸಂಬಂಧ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಸನ್ನ ಕೃಷ್ಣ ಪಟಗಾರ ಮಾತನಾಡಿ, ಹನುಮಂತಪ್ಪ ಅವರು ಅಶ್ಫಾಕ್ ಅಹ್ಮದ್ ಖಾನ್ ಒಡೆತನದ ಎಸ್ಟೇಟ್‌ನಲ್ಲಿ ಕೆಲಸ ಮುಗಿಸಿ ಆಲದೇವರ ಹೊಸೂರಿನ ಮನೆಗೆ ವಾಪಸಾಗುತ್ತಿದ್ದಾಗ ಆನೆ ದಾಳಿ ಮಾಡಿದೆ. ಶವಪರೀಕ್ಷೆ ನಡೆಸಲಾಗಿದ್ದು, ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ ಎಂದು ತಿಳಿಸಿದರು. ಕಾಡಾನೆ 

ಇದನ್ನು ಓದಿ : ಗೃಹಲಕ್ಷ್ಮಿ ಯೋಜನೆಯ ಹಣದಿಂದ ಊರಿಗೆ ಹೋಳಿಗೆ ಊಟ ಹಾಕಿಸಿದ ಅಜ್ಜಿ; ಸಿಎಂ ಸಿದ್ದರಾಮಯ್ಯ ಟ್ವೀಟ್‌

ಘಟನೆ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಹನುಮಂತಪ್ಪ ಅವರ ಕುಟುಂಬಕ್ಕೆ ಕಾನೂನು ಪ್ರಕಾರ ಪರಿಹಾರ ನೀಡಲಾಗುವುದು ಎಂದು ಹೇಳಿದರು.

ಸ್ಥಳೀಯ ನಿವಾಸಿ ಬಸವರಾಜೇಂದ್ರ ಮಾತನಾಡಿ, ಹನುಮಂತಪ್ಪ ಸಾಮಾನ್ಯವಾಗಿ ರಾತ್ರಿ 7 ಗಂಟೆ ಸುಮಾರಿಗೆ ಮನೆಗೆ ವಾಪಾಸ್​ ಆಗುತ್ತಿದ್ದರು. ಆದರೆ ಭಾನುವಾರ ರಾತ್ರಿ ಎಟ್ಟೊತ್ತಾದರೂ, ಮನೆಗೆ ಹಿಂದಿರುಗಲಿಲ್ಲ. ಇದರಿಂದ ಹನುಮಂತಪ್ಪ ಅವರ ಪತ್ನಿ ಆತಂಕಗೊಂಡಿದ್ದರು. ಬಳಿಕ, ನಾವು ಹುಡುಕಾಟ ನಡೆಸಿದಾಗ ಒಂದು ಗಂಟೆಯ ನಂತರ ಹುಮಂತ್ತಪ್ಪ ಅವರ ಮೃತ ದೇಹವ ಪತ್ತೆಯಾಯಿತು ಎಂದು ಹೇಳಿದರು.

ಆನೆಗಳು ಪದೇ ಪದೇ ನಾಡಿಗೆ ಬಂದು ಬಾಳೆ, ಭತ್ತ, ಅಡಕೆ, ತೆಂಗು ಮುಂತಾದ ಬೆಳೆಗಳನ್ನು ಹಾನಿ ಮಾಡುತ್ತಿವೆ. ಆನೆಗಳ ಹಾವಳಿಯನ್ನು ನಿಯಂತ್ರಿಸಲು ಅರಣ್ಯ ಅಧಿಕಾರಿಗಳಿಗೆ ಸಾಕಷ್ಟು ಮನವಿ ಸಲ್ಲಿಸಿದರೂ, ಯಾವುದೇ ಪ್ರಯೋಜನವಾಗಿಲ್ಲ ಎಂದರು.

ಇದನ್ನು ನೋಡಿ : ಯು ಟರ್ನ್ ಮೋದಿಜೀ — ಮಸೂದೆಗಳನ್ನು ಹಿಂಪಡೆದ ಸರ್ಕಾರ… Janashakthi Media

 

Donate Janashakthi Media

Leave a Reply

Your email address will not be published. Required fields are marked *