ಅಟ್ಲಾಂಟಾ: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು 2020ರ ಜಾರ್ಜಿಯಾ ಚುನಾವಣಾ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕೃತವಾಗಿ ಗುರುವಾರ ಬಂಧಿಸಲಾಗಿದೆ. ಅಟ್ಲಾಂಟಾ ಜೈಲಿನಲ್ಲಿರುವ ಟ್ರಂಪ್ ಅವರ ಚಿತ್ರವನ್ನು ಜಾರ್ಜಿಯಾದ ಫುಲ್ವಾನ್ ಕೌಂಟಿಯ ಷೆರಿಫ್ ಕಚೇರಿ ಬಿಡುಗಡೆ ಮಾಡಿದೆ ಎಂದು ಆಗಸ್ಟ್-25 ಶುಕ್ರವಾರ ಮಾಧ್ಯಮಗಳು ವರದಿ ಮಾಡಿವೆ.
ಇದನ್ನೂ ಓದಿ:ಕ್ರಿಮಿನಲ್ ಕೇಸ್: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಂಧನ
ಇದರೊಂದಿಗೆ ಅಮೆರಿಕ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಾಜಿ ಅಧ್ಯಕ್ಷರೊಬ್ಬರ ಬಂಧನವಾದಂತಾಗಿದೆ. ಟ್ರಂಪ್ ವಿರುದ್ಧ ಕಳೆದ ಮಾರ್ಚ್ನಿಂದ ದಾಖಲಾಗಿರುವ ಕ್ರಿಮಿನಲ್ ಪ್ರಕರಣಗಳಲ್ಲಿ ಇದು ನಾಲ್ಕನೆಯದಾಗಿದೆ. ಫ್ಲಾರಿಡಾ, ವಾಷಿಂಗ್ಟನ್ನಲ್ಲಿಯೂ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದೆ.
Fulton County releases a mug shot following former President Donald Trump's fourth arrest this year https://t.co/6L8hHv7MY7 pic.twitter.com/JglMVwOlpo
— CNN Breaking News (@cnnbrk) August 25, 2023
ಪೆರಿಫ್ ಕಚೇರಿ ಬಿಡುಗಡೆ ಮಾಡಿರುವ ಚಿತ್ರದಲ್ಲಿ ನೀಲಿ ಸೂಟ್ ಹಾಗೂ ಕೆಂಪು ಟೈ ಧರಿಸಿರುವ ಟ್ರಂಪ್, ಮುಖ ಸಿಂಡರಿಸಿಕೊಂಡಿರುವುದು ದಾಖಲಾಗಿದೆ. ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಮಾಡಲಾಗುತ್ತಿರುವ ಆರೋಪಗಳನ್ನು ಎದುರಿಸುವ ಸಲುವಾಗಿ ಜಾರ್ಜಿಯಾ ಅಧಿಕಾರಿಗಳಿಗೆ ಶರಣಾಗುವುದಾಗಿ ಡೊನಾಲ್ಡ್ ಟ್ರಂಪ್ ಮಂಗಳವಾರ ಹೇಳಿದ್ದರು. “ನಿಮಗೆ ನಂಬಲು ಸಾಧ್ಯವೇ? ಬಂಧನಕ್ಕೊಳಗಾಗಲು ನಾನು ಗುರುವಾರದಂದು ಜಾರ್ಜಿಯಾದ ಅಟ್ಲಾಂಟಾಕ್ಕೆ ಹೋಗುತ್ತೇನೆ” ಎಂದು ಟ್ರಂಪ್ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದರು.
ಟ್ರಂಪ್ ಅವರು ಈ ವರ್ಷದ ಏಪ್ರಿಲ್ನಿಂದ ನಾಲ್ಕು ಬಾರಿ ದೋಷಾರೋಪಕ್ಕೆ ಗುರಿಯಾಗಿದ್ದಾರೆ. ಪೋರ್ನ್ ಸ್ಟಾರ್ಗೆ ಕಳ್ಳ ಹಣ ನೀಡಿರುವುದು, ಸರ್ಕಾರದ ಬಹಳ ಮುಖ್ಯವಾದ ರಹಸ್ಯ ದಾಖಲೆಗಳನ್ನು ದುರುಪಯೋಗಪಡಿಸಿಕೊಂಡಿದ್ದು, ಜೋ ಬೈಡನ್ ವಿರುದ್ಧದ ತಮ್ಮ ಸೋಲಿನ ಫಲಿತಾಂಶ ಬದಲಿಸಲು ಸಂಚು ನಡೆಸಿದ ಆರೋಪಗಳನ್ನು ಅವರು ಎದುರಿಸುತ್ತಿದ್ದಾರೆ.
ಚುನಾವಣಾ ವಂಚನೆ ಪ್ರಕರಣದ ವಿಚಾರಣೆ ನಡೆಸುತ್ತಿರುವ ಫುಲ್ಟೋನ್ ಕೌಂಟಿ ಜಿಲ್ಲಾ ಅಟಾರ್ನಿ ಫಾನಿ ವಿಲ್ಲಿಸ್ ಅವರು ಕೋರ್ಟ್ಗೆ ಶರಣಾಗಲು ಟ್ರಂಪ್ ಹಾಗೂ ಇತರೆ 18 ಮಂದಿಗೆ ಶುಕ್ರವಾರ ಮಧ್ಯಾಹ್ನದ ಗಡುವು ನೀಡಿದ್ದರು. ಈವರೆಗೂ ಟ್ರಂಪ್ ಮತ್ತು 11 ಮಂದಿ ಶರಣಾಗಿದ್ದಾರೆ.