ಚುನಾವಣಾ ಬಾಂಡ್‌ಗಳ ಯೋಜನೆಯನ್ನು ಅಸಂವಿಧಾನಿಕ ಎಂದು ರದ್ದುಗೊಳಿಸಿದ ಸುಪ್ರೀಂ ಕೋರ್ಟ್‌ನ ತೀರ್ಪು ಐತಿಹಾಸಿಕ ಎಂದು ಸಿಪಿಐ(ಎಂ) ಪೊಲಿಟ್ ಬ್ಯೂರೋ ಶ್ಲಾಘಿಸಿದೆ. ಈ ತೀರ್ಪಿನ ಮೂಲಕ, ಅನಾಮಧೇಯ ಕಾರ್ಪೊರೇಟ್ ದಾನಿಗಳಿಂದ ಆಳುವ ಪಕ್ಷಕ್ಕೆ ಹಣಕಾಸು ಒದಗಿಸಲು ವಿನ್ಯಾಸಗೊಳಿಸಲಾದ ಈ ಅನೀತಿಯುತ ಯೋಜನೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ ಎಂದು ಅದು ಹರ್ಷ ವ್ಯಕ್ತಪಡಿಸಿದೆ.
ಈ ಯೋಜನೆಯು ಭ್ರಷ್ಟಾಚಾರವನ್ನು ಕಾನೂನುಬದ್ಧಗೊಳಿಸುವುದರಿಂದ ಪಕ್ಷವು ಚುನಾವಣಾ ಬಾಂಡ್‌ಗಳನ್ನು ಸ್ವೀಕರಿಸುವುದಿಲ್ಲ ಎಂದು ಸಿಪಿಐ(ಎಂ) ಆರಂಭದಲ್ಲಿಯೇ ಘೋಷಿಸಿತ್ತು. ಸಿಪಿಐ(ಎಂ) ಇತರ ಅರ್ಜಿದಾರರೊಂದಿಗೆ ಸುಪ್ರೀಂ ಕೋರ್ಟ್‌ನಲ್ಲಿ ಚುನಾವಣಾ ಬಾಂಡ್‌ಗಳ ಯೋಜನೆಯನ್ನು ಪ್ರಶ್ನಿಸಿತ್ತು. ಯೋಜನೆ ವಿರುದ್ಧದ ಅರ್ಜಿಯಲ್ಲಿ ಉಲ್ಲೇಖಿಸಲಾದ ಪ್ರಮುಖ ವಾದಗಳನ್ನು ಎತ್ತಿ ಹಿಡಿದಿರುವುದು ಸಂತಸ ತಂದಿದೆ ಎಂದಿರುವ ಸಿಪಿಐ(ಎಂ) ಪೊಲಿಟ್‍ಬ್ಯುರೊ ಪಾರದರ್ಶಕತೆ, ಸ್ವಚ್ಛ ನಿಧಿ ನೀಡಿಕೆ ಮತ್ತು ಸಮಾನ ಸನ್ನಿವೇಶವನ್ನು ಖಚಿತಪಡಿಸಿಕೊಳ್ಳಲು ರಾಜಕೀಯ ಮತ್ತು ಚುನಾವಣಾ ನಿಧಿಗಾಗಿ ಸುಧಾರಣೆಗಳನ್ನು ಪರಿಚಯಿಸುವುದು ಈಗ ಅತ್ಯಗತ್ಯ ಎಂದು ಹೇಳಿದೆ.
ತೀರ್ಪನ್ನು ಸ್ವಾಗತಿಸುತ್ತ, ಚುನಾವಣಾ ಬಾಂಡ್ ಯೋಜನೆಯನ್ನು ಪ್ರಶ್ನಿಸಿದ ಅರ್ಜಿದಾರರಲ್ಲಿ ಒಬ್ಬರಾದ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚುರಿ, ಈ ಯೋಜನೆ ಸಂವಿಧಾನದ ಹಲವು ವಿಧಿಗಳ ಉಲ್ಲಂಘನೆಯಾಗಿದೆ ಮಾತ್ರವಲ್ಲ, ಕಂಪನಿ ಕಾಯ್ದೆಯ ತಿದ್ದುಪಡಿಯನ್ನೂ ರದ್ದು ಮಾಡಿದೆ, ಅಲ್ಲದೆ ಈ ಕುರಿತ ಪಟ್ಟಿಯನ್ನು ಪ್ರಕಟಿಸಬೇಕು ಎಂದು ಕೂಡಾ ಹೇಳಿದೆ. ಇದರಿಂದ ಭಾರತದ ಪ್ರಜಾಪ್ರಭುತ್ವಕ್ಕೆ ಒಳಿತಾಗುತ್ತದೆ ಎಂದು ಹೇಳಿದ್ದಾರೆ.
“ಒಳ್ಳೆಯ ವಿಚಾರವಲ್ಲ”
ಚುನಾವಣಾ ಆಯೋಗ, 2017
ರಿಜರ್ವ್ ಬ್ಯಾಂಕ್, 2017
ಸಿಪಿಐ(ಎಂ), 2017-2024
ಸಾಮಾಜಿಕ ಕಾರ್ಯಕರ್ತರು, 2017-2024
“ಒಳ್ಳೆಯ ವಿಚಾರವಲ್ಲ”
ಸುಪ್ರಿಂ ಕೋರ್ಟ್, 2024
ವ್ಯಂಗ್ಯಚಿತ್ರ: ಪೆನ್‍ಪೆನ್ಸಿಲ್‍ಡ್ರಾ