“ಮಿ.ಸಾಲಿಸಿಟರ್, ಇದು ಪ್ರಜಾಪ್ರಭುತ್ವದ ಅಪಹಾಸ್ಯ ಮತ್ತು ಪ್ರಜಾಪ್ರಭುತ್ವದ ಕೊಲೆ”- ಇದು ಮೂರು ತಿಂಗಳ ಹಿಂದೆ ಚಂಡೀಗಡ ಮೇಯರ್ ಚುನಾವಣೆಗಳಲ್ಲಿ ಅಕ್ರಮದ ನಡೆದಿದೆ ಎಂದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಅವರ ಪರವಾಗಿ ವಾದಿಸಲು ಬಂದಿದ್ದ ಸರಕಾರದ ವಕೀಲರನ್ನು ಉದ್ದೇಶಿಸಿ ಮಾಡಿದ ದೇಶದ ಮುಖ್ಯ ನ್ಯಾಯಾಧೀಶರ ಟಿಪ್ಪಣಿ. ಅಂತಿಮವಾಗಿ ಸುಪ್ರಿಂ ಕೋರ್ಟ್ ಈ ಚುನಾವಣೆಯ ಘೋಷಿತ ಪ್ರಕಟಣೆಯನ್ನು ರದ್ದು ಮಾಡಿ ಎಎಪಿ-ಕಾಂಗ್ರೆಸ್ ಅಭ್ಯರ್ಥಿಯನ್ನು ಚುನಾಯಿತರು ಎಂದು ಘೋಷಿಸಿತು. ಈ ಚುನಾವಣೆಯ ಪೀಠಾಸೀನ ಅಧಿಕಾರಿ ಪ್ರತಿಪಕ್ಷಗಳ ಅಭ್ಯರ್ಥಿಗೆ ಬಿದ್ದ 8 ಮತಗಳನ್ನು ಅಸಿಂಧು ಎಂದು ತಿರಸ್ಕರಿಸಿ ಬಿಜೆಪಿ ಅಭ್ಯರ್ಥಿ 16-12 ಮತಗಳಿಂದ ಗೆದ್ದಿದಾರೆ ಎಂದು ಘೋಷಿಸಿದ್ದರು. ಈ ಅಧಿಕಾರಿಯ ನಡತೆಯನ್ನು ಬಲವಾಗಿ ಟೀಕಿಸುತ್ತ ಮುಖ್ಯ ನ್ಯಾಯಾಧೀಶರು “ಮತಪತ್ರಗಳನ್ನು ವಿರೂಪಗೊಳಿಸಿರುವುದು ಸ್ಪಷ್ಟವಾಗಿದೆ. ಆತನ ವಿರುದ್ಧ ಕಾನೂನು ಕ್ರಮ ಜರುಗಿಸಬೇಕಾಗಿದೆ. ಅವರು ಕ್ಯಾಮೆರಾವನ್ನು ಏಕೆ ನೋಡುತ್ತಿದ್ದಾರೆ? ಮಿ. ಸಾಲಿಸಿಟರ್, ಇದು ಪ್ರಜಾಪ್ರಭುತ್ವದ ಅಪಹಾಸ್ಯ ಮತ್ತು ಪ್ರಜಾಪ್ರಭುತ್ವದ ಕೊಲೆ. ನಾವು ಗಾಬರಿಗೊಂಡಿದ್ದೇವೆ. ಇದು ಒಬ್ಬ ಚುನಾವಣಾಧಿಕಾರಿಯ ವರ್ತನೆಯೇ? ಕೆಳಭಾಗದಲ್ಲಿ ಕ್ರಾಸ್ ಇರುವಲ್ಲೆಲ್ಲಾ ಅವರು ಅದನ್ನು ಮುಟ್ಟುವುದಿಲ್ಲ ಆದರೆ ಅದು ಮೇಲ್ಭಾಗದಲ್ಲಿದ್ದಾಗ ಅವರು ಅದನ್ನು ಬದಲಾಯಿಸುತ್ತಾರೆ. ಸುಪ್ರೀಂ ಕೋರ್ಟ್ ಅವರನ್ನು ಗಮನಿಸುತ್ತಿದೆ ಎಂದು ದಯವಿಟ್ಟು ಚುನಾವಣಾಧಿಕಾರಿಗೆ ತಿಳಿಸಿ.” ಎಂದು ಕಟುವಾಗಿ ಟಿಪ್ಪಣಿ ಮಾಡಿದರು. ಅಮೃತ
ಅಬ್ ಕೀ ಬಾರ್ 400 ಪಾರ್
ಅಬ್ ಕೀ ಬಾರ್ 400 ಪಾರ್
ಅಬ್ ಕೀ ಬಾರ್ 400 ಪಾರ್
ಅಬ್ ಕೀ ಬಾರ್ 400 ಪಾರ್
ಕೃಪೆ: ಸಜಿತ್ ಕುಮಾರ್,
ಡೆಕ್ಕನ್ ಹೆರಾಲ್ಡ್
ಇಲ್ಲೇನೋ ಸುಪ್ರಿಂ ಕೋರ್ಟ್ ಮಧ್ಯಪ್ರವೇಶದಿಂದ ಚುನಾವಣಾ ಫಲಿತಾಂಶವನ್ನು ಕದಿಯುವುದನ್ನು ತಡೆಯಲಾಯಿತು, ಆದರೆ ಇದು ಮುಂಬರಲಿದ್ದ ಸಾರ್ವತ್ರಿಕ ಚುನಾವಣೆಗಳ ಟ್ರೇಲರ್ ಆಗಿದೆಯೇ ಎಂದು ಹಲವು ರಾಜಕೀಯ ವೀಕ್ಷಕರು ಟಿಪ್ಪಣಿ ಮಾಡಿದರು. ಸಾರ್ವತ್ರಿಕ ಚುನಾವಣೆಗಳಲ್ಲಿ ಇದುವರೆಗೆ ಸೂರತ್, ಇಂದೋರ್, ಖಜುರಾಹೊ ಮತ್ತು ವಾರಣಾಸಿಯಲ್ಲಿ ಸಂಭವಿಸಿರುವ ಘಟನೆಗಳು ಒಂದು ರೀತಿಯಲ್ಲಿ ಇದನ್ನು ಟ್ರೇಲರ್ ಆಗಿಸುವ ಪ್ರಯತ್ನದಂತೆ ಕಾಣಿಸುತ್ತದೆ.
ಎಪ್ರಿಲ್ 22ರಂದು ಗುಜರಾತಿನ ಸೂರತ್ ಲೋಕಸಭಾ ಸ್ಥಾನದಲ್ಲಿ ಬಿಜೆಪಿ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಲಾಯಿತು. ಇಲ್ಲಿಯ ಕಾಂಗ್ರೆಸ್ ಅಭ್ಯರ್ಥಿಯ ಉಮೇದುವಾರಿಕೆಯನ್ನು ಅವರ ಪ್ರಸ್ತಾವಕರ ಸಹಿಗಳಲ್ಲಿ ವ್ಯತ್ಯಾಸಗಳಿದ್ದು, ಅವರು ಅವು ತಮ್ಮ ಸಹಿಗಳಲ್ಲ ಎಂದು ಹೇಳಿದ್ದಾರೆ ಎಂದು ತಿರಸ್ಕರಿಸಲಾಯಿತು. ಕಾಂಗ್ರೆಸ್ನ ಪರ್ಯಾಯ ಅಭ್ಯರ್ಥಿಯ ನಾಮಪತ್ರವನ್ನು ಕೂಡ ಅದೇ ಕಾರಣಕೊಟ್ಟು ತಿರಸ್ಕರಿಸಲಾಯಿತು. “ಉಳಿದ ಎಂಟೂ ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆಯನ್ನು ತಾವಾಗಿಯೇ ಹಿಂತೆಗೆದುಕೊಂಡಿದ್ದಾರೆ. ಆದ್ದರಿಂದ ಬಿಜೆಪಿ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ” ಎಂದು ಚುನಾವಣಾಧಿಕಾರಿ ಘೋಷಿಸಿದರು ಎಂದು ವರದಿಯಾಗಿದೆ. ನಾಲ್ಕೂ ಪ್ರಸ್ತಾವಕರ ಅಫಿಡವಿಟ್ಗಳಿಗೆ ಸಹಿ ಹಾಕಿದವರು ಒಬ್ಬ ವಕೀಲರು ಮತ್ತು ಬಿಜೆಪಿ ಮುಖಂಡರು ಮತ್ತು ಬಿಜೆಪಿ ಅಭ್ಯರ್ಥಿ ಅವರ ಸಹಿಗಳು ಖೋಟಾ, ಅವನ್ನು ಪರೀಕ್ಷಿಸಬೇಕು ಎಂದು ಚುನಾವಣಾಧಿಕಾರಿಯನ್ನು ಕೇಳುವ ಹಿಂದಿನ ದಿನವೇ ಅದು ಸಿದ್ಧವಾಗಿತ್ತು ಎನ್ನಲಾಗಿದೆ. ಕಾಂಗ್ರೆಸ್ ಅಭ್ಯರ್ಥಿ ನಾಪತ್ತೆಯಾಗಿದ್ದರು, ಅವರು ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿಯನ್ನು ಅವರ ಪತ್ನಿ ಅಲ್ಲಗಳೆದಿದ್ದಾರೆ, ಬದಲಾಗಿ ಪ್ರಸ್ತಾವಕರು ಬಿಜೆಪಿಯೊಂದಿಗೆ ಕೈ ಜೋಡಿಸಿದ್ದರು ಎಂದು ಹೇಳಿದ್ದಾರೆ. ಅಮೃತ
”ಒಂದು ಚುನಾವಣಾ ಕ್ಷೇತ್ರ
ಒಬ್ಬ ಅಭ್ಯರ್ಥಿ”
ಕೃಪೆ:
ಆರ್.ಪ್ರಸಾದ್
ಇಕನಾಮಿಕ್ ಟೈಮ್ಸ್
ಬಿಜೆಪಿಯ ಸೂರತ್ ಜಿಲ್ಲಾಧ್ಯಕ್ಷರು ಸೂರತ್ ಪ್ರಧಾನ ಮಂತ್ರಿಗಳಿಗೆ ಮೊದಲ ಕಮಲವನ್ನು ಸಮರ್ಪಿಸಿದೆ ಎಂದರೆ, ಒಬ್ಬ ವಿಶ್ಲೇಷಕರು ಇದನ್ನು ಚುನಾವಣಾ ಬಾಂಡ್ಗಳ ಮೂಲಕ ಪೇರಿಸಿಕೊಂಡ ಭ್ರಷ್ಟ ಹಣದಿಂದ ನಡೆಸಿರುವ ಆಪರೇಷನ್ ಕಪ್ಪು ಕಮಲ ಎಂದು ವರ್ಣಿಸಿದ್ದಾರೆ.
ಇದನ್ನು ಓದಿ : ನಾಳೆ ಐದನೇ ಹಂತದ ಮತದಾನ:ಪ್ರಮುಖರ ಸ್ಪರ್ಧೆ
ಕೆಲವು ದಿನಗಳ ನಂತರ ಮಧ್ಯಪ್ರದೇಶದ ಇಂದೋರಿನಲ್ಲಿ ಇದರ ಪುನರಾವರ್ತನೆಯ ಪ್ರಯತ್ನ ನಡೆಯಿತು. ಇಲ್ಲಿ ಕಾಂಗ್ರೆಸ್ ಅಭ್ಯರ್ಥಿಯೇ ತಮ್ಮ ನಾಮಪತ್ರವನ್ನು ಹಿಂತೆಗೆದುಕೊಂಡರು, ನಂತರ ಅವರನ್ನು ತಮ್ಮ ಕಾರಿನಲ್ಲಿ ಬಿಜೆಪಿ ಮುಖಂಡರು ರಾಜಾರೋಷವಾಗಿ ಒಯ್ದ ಫೋಟೋಗಳು ಮಾಧ್ಯಮಗಳಲ್ಲಿ ಪ್ರಕಟವಾದವು. ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳಲಾಯಿತು. ಕಾಂಗ್ರೆಸಿನ ಪರ್ಯಾಯ ಅಭ್ಯರ್ಥಿಯ ನಾಮಪ್ರತ್ರವನ್ನು ಮುಖ್ಯ ಅಭ್ಯರ್ಥಿಯ ನಾಮಪತ್ರ ಸ್ವೀಕೃತವಾಗಿದೆ ಎಂಬ ಕಾರಣಕೊಟ್ಟು ಹಿಂದಿನ ದಿನವೇ ತಿರಸ್ಕರಿಸಲಾಗಿತ್ತು. ನಾಲ್ಕು ಅಭ್ಯರ್ಥಿಗಳ ಮೇಲೆ ನಾಮಪತ್ರಗಳನ್ನು ಹಿಂತೆಗೆದುಕೊಳ್ಳುವಂತೆ ಒತ್ತಡ ಹಾಕುವ ಕರೆಗಳು ಹೋದವು, ಮತ್ತು ಹಿಂತೆಗೆದುಕೊಳ್ಳುವ ಪತ್ರಗಳಿಗೆ ಖೋಟಾ ಸಹಿಗಳನ್ನು ಸಂಗ್ರಹಿಸಲಾಯಿತು ಎಂದು ವರದಿಯಾಗಿದೆ (ದಿ ವೈರ್, ಮೇ 12). ಆದರೂ ಇಂದೋರಿನಲ್ಲಿ ಸೂರತನ್ನು ಪುರಾವರ್ತಿಸುವ ಪ್ರಯತ್ನ ಫಲಿಸಿಲ್ಲ. ಮೇ 13ರಂದು ಅಲ್ಲಿ ಮತದಾನ ನಡೆದಿದೆ. ಹಿಂದಿನ ಚುನಾವಣೆಗೆ ಹೋಲಿಸಿದರೆ, ಮತದಾನದಲ್ಲಿ 7.5% ಇಳಿಕೆಯಾಗಿದೆ ಎಂದು ವರದಿಯಾಗಿದೆ. ಅಮೃತ
ಸೂರತ್ ನಿಂದ ಇಂದೋರ್ ಗೆ
ಕೃಪೆ:
ಸಂದೀಪ ಅಧ್ವರ್ಯು, ಫೇಸ್ಬುಕ್
ಮಧ್ಯಪ್ರದೇಶದ ಖಜುರಾಹೋದಲ್ಲಿಯೂ ಕಾಂಗ್ರೆಸ್-ಸಮಾಜವಾದಿ ಪಕ್ಷದ ಜಂಟಿ ಅಭ್ಯರ್ಥಿಯ ನಾಮಪತ್ರವನ್ನು ಹಳೆಯ ಮತದಾರರ ಪಟ್ಟಿಯನ್ನು ಸಲ್ಲಿಸಲಾಗಿದೆ ಮತ್ತು ನಾಮಪತ್ರದಲ್ಲಿ ಒಂದು ಕಡೆ ಅಭ್ಯರ್ಥಿ ಸಹಿ ಮಾಡಿಲ್ಲ ಎಂಬ ಎರಡು ತಾಂತ್ರಿಕ ಕಾರಣಗಳನ್ನು ಕೊಟ್ಟು ತಿರಸ್ಕರಿಸಲಾಗಿದೆ. ವಾಸ್ತವವಾಗಿ ನಾಮಪತ್ರವನ್ನು ಸ್ವೀಕರಿಸುವ ಮೊದಲು ತಾಂತ್ರಿಕ ದೋಷಗಳಿದ್ದರೆ ಅದನ್ನು ಅಭ್ಯರ್ಥಿಯ ಗಮನಕ್ಕೆ ತರಬೇಕಾಗಿತ್ತು. ಇದನ್ನು ಮಾಡದೆ ಅದನ್ನು ತಿರಸ್ಕರಿಸುವ ನೆಪಗಳಾಗಿ ಮಾಡಲಾಗಿದೆ ಎಂದು ಇದರ ವಿರುದ್ಧ ಕಾನೂನು ಕ್ರಮಗಳನ್ನು ನಡೆಸಲು ಕಾಂಗ್ರೆಸ್-ಎಸ್ಪಿ ಯೋಚಿಸುತ್ತಿದ್ದಾರಂತೆ.ಅಮೃತ
ಪ್ರಧಾನ ಮಂತ್ರಿಗಳು ಸ್ಪರ್ಧಿಸುತ್ತಿರುವ ವಾರಣಾಸಿಯಲ್ಲೂ ಇಂತಹುದೇ ‘ತಾಂತ್ರಿಕ’ ಕಾರಣಗಳಿಗಾಗಿ ಹಾಸ್ಯ ಕಲಾವಿದ ಶ್ಯಾಮ್ ರಂಗೀಲ ಅವರ ನಾಮಪತ್ರವನ್ನು ತಿರಸ್ಕರಿಸಲಾಗಿದೆ. ಮೇ 13ರಂದು ನಾಮಪತ್ರ ಸಲ್ಲಿಸಲು ಬಂದಾಗ ತನ್ನನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್ ಕಚೇರಿಯೊಳಕ್ಕೆ ಬಿಡಲಿಲ್ಲ. ಮರುದಿನ ಪ್ರಧಾನಿಗಳು ನಾಮಪತ್ರ ಸಲ್ಲಿಸಲು ಬಂದಿದ್ದರಿಂದ ನಾಮಪತ್ರವನ್ನು ಸಲ್ಲಿಸುವ ಅವಧಿ ಮುಗಿಯಲು 2 ನಿಮಿಷಗಳಿದ್ದಾಗಲಷ್ಟೇ ತನಗೆ ಕಚೇರಿಯೊಳಕ್ಕೆ ಹೋಗಲು ಅವಕಾಶ ದೊರೆಯಿತು ಎನ್ನುತ್ತಾರೆ ಶ್ಯಾಮ್ ರಂಗೀಲಾ. ನಾಮಪತ್ರದಲ್ಲಿ ಒಂದು ಅಫಿಡವಿಟ್ ಇಲ್ಲ ಎಂದು ಹೇಳಲಾಯಿತು. ಆದಿನ ಸಂಜೆಯ ವೇಳೆಗೆ ಅದನ್ನು ಸಲ್ಲಿಸಲಾಯಿತು. ಆಗ ಅಭ್ಯರ್ಥಿ ಪ್ರತಿಜ್ಞೆ ತಗೊಂಡಿಲ್ಲ ಎಂದು ಹೇಳಲಾಯಿತು, ಆದರೆ ಅದು ತನಗೆ ಗೊತ್ತಿರಲಲ್ಲ, ಚುನಾವಣಾಧಿಕಾರಿಯೂ ಹೇಳಲಿಲ್ಲ ಎಂದು ಶ್ಯಾಮ್ ಹೇಳುತ್ತಾರೆ. ಕೊನೆಗೆ ಅದೇ ಕಾರಣ ಕೊಟ್ಟು ಅವರ ನಾಮಪತ್ರವನ್ನು ತಿರಸ್ಕರಿಸಲಾಯಿತು. ಚುನಾವಣಾಧಿಕಾರಿಗಳ ಕೈಪಿಡಿಯ ಪ್ರಕಾರ ಸಲ್ಲಿಸಿದ ನಾಮಪತ್ರವನ್ನು ಪರಿಶೀಲಿಸಿ ಅದು ಅಪೂರ್ಣವಾಗಿದ್ದರೆ ಅದನ್ನು ಅಭ್ಯರ್ಥಿಯ ಗಮನಕ್ಕೆ ತರಬೇಕು ಎಂದಿದೆಯಂತೆ. ಅಮೃತ
“ವಾರಣಾಸಿಯಲ್ಲಿ
ಸ್ಟಾಂಡ್-ಅಪ್”
ಕೃಪೆ:
ಮಂಜುಲ್, ಫೇಸ್ಬುಕ್
ಸೌತ್ ಫಸ್ಟ್
2014ರಲ್ಲಿ ತಾನು ಮೋದಿಯವರ ಅಭಿಮಾನಿಯಾಗಿದ್ದೆ ಎನ್ನುವ ಶ್ಯಾಮ್ ರಂಗೀಲ ಪ್ರಧಾನಿಗಳ ಭಾಷಣಗಳ ನಕಲು ಮಾಡಿ ಪ್ರಸಿದ್ಧಿಗೆ ಬಂದಿದ್ದಾರೆ, ‘ಇಂದು ರಾಜಕೀಯವೇ ಕಾಮಿಡಿಯಾಗಿದೆ” ಎನ್ನುವ ಅವರು ಸೂರತ್ನಲ್ಲಿ ಅವಿರೋಧ ಆಯ್ಕೆಯನ್ನು ನೋಡಿ, ವಾರಾಣಸಿಯಲ್ಲಿ ಹಾಗಾಗಬಾರದು, ಲಕ್ಷಾಂತರ ಮತದಾರರ ಮತದಾನದ ಹಕ್ಕನ್ನು ವಂಚಿಸಬಾರದು ಎಂಬ ಕಾರಣಕ್ಕೆ ತಾನು ಸ್ಪರ್ಧಿಸಲು ನಿರ್ಧರಿಸಿರುವದಾಗಿ ಈ ಮೊದಲು ಹೇಳಿದ್ದರು.
“ನಿರಾಸೆಯಾಗಿದೆ, ಆದರೆ ಉತ್ಸಾಹ ಕುಂದಿಲ್ಲ” ಎಂದಿದ್ದಾರೆ ಶ್ಯಾಮ್ ರಂಗೀಲ ತನ್ನ ನಾಮಪತ್ರವನ್ನು ತಿರಸ್ಕರಿಸಿದ ನಂತರ.ಅಮೃತ
ಈ ನಾಲ್ಕೂ ಕ್ಷೇತ್ರಗಳಲ್ಲಿ ಬಿಜೆಪಿ ಬಹಳ ಸಮಯದಿಂದ ಸತತವಾಗಿ ಭಾರೀ ಬಹುಮತದಿಂದ ಗೆಲ್ಲುತ್ತ ಬಂದಿದೆ. ಆದರೂ ಇಂತಹ ತಂತ್ರಗಳೇಕೆ ಎಂಬ¨ ಪ್ರಶ್ನೆ ಸಹಜವಾಗಿ ಎದ್ದಿದೆ.ಅಮೃತ
ಈ ನಡುವೆ ಚುನಾವಣಾ ಆಯೋಗ ಮೊದಲ ಎರಡು ಹಂತಗಳ ಮತದಾನದ ಅಂತಿಮ ಅಂಕಿ-ಅಂಶಗಳನ್ನು ಪ್ರಕಟಿಸುವಲ್ಲಿ ವಿಪರೀತ ವಿಳಂಬಮಾಡಿದೆ, ಅದು ಆರಂಭದಲ್ಲಿ ಪ್ರಕಟಿಸಿದ ಶೇಕಡಾವಾರು ಮತಗಳಿಗಿಂತ ಅಂತಿಮವಾಗಿ ಪ್ರಕಟಿಸಿದ ಶೇಕಡಾಗಳಲ್ಲಿ ಗಮನಾರ್ಹ ಏರಿಕೆ ಕಂಡಿದೆ, ಅಲ್ಲದೆ ಕ್ಷೇತ್ರವಾರು ಒಟ್ಟು ಮತಗಳ ಅಂಕಿ-ಅಂಶಗಳನ್ನು ಇನ್ನೂ ಪ್ರಕಟಿಸಿಲ್ಲ ಮತ್ತು ಪ್ರತಿ ಹಂತದ ಮತದಾನದ ನಂತರ ಹಿಂದೆ ಮಾಡುತ್ತಿದ್ದಂತೆ ಪತ್ರಿಕಾಗೋಷ್ಠಿ ನಡೆಸುತ್ತಿಲ್ಲ ಏಕೆ ಎಂಬ ಟೀಕೆಗಳೂ ಬಂದಿವೆ. ಅಮೃತ
‘ಗುಜರಾತ್ ಮಾಡೆಲ್”ನಲ್ಲಿ
ಮಾಡಿದ ಮತಯಂತ್ರದ ಅನಾವರಣ!
“ಇದರಿಂದ ಪ್ರಯೋಜನವಿದೆ,
ನಾವು ಹಣ ಉಳಿಸಬಹುದು”
ಕೃಪೆ: ಸತೀಶ ಆಚಾರ್ಯ, ಸೌತ್ ಫಸ್ಟ್
ಇದನ್ನು ನೋಡಿ : ಪೆನ್ ಡ್ರೈವ್ ಪ್ರಕರಣ ದಿಕ್ಕು ತಪ್ಪುತ್ತಿದೆ, ಸಾಕ್ಷಿ ನಾಶ ಸಾಧ್ಯತೆ – ವಕೀಲ ಸಿ ಎಚ್. ಹನುಮಂತರಾಯ ಆರೋಪ