ದೆಹಲಿ : ಉಪರಾಷ್ಟ್ರಪತಿ ಹುದ್ದೆಗೆ ಮಂಗಳವಾರ ಚುನಾವಣೆ ನಡೆಯಲಿದೆ. ಮಾಜಿ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು ಜುಲೈ 21ರಂದು ದಿಢೀರ್ ರಾಜೀನಾಮೆ ನೀಡಿದ್ದರಿಂದ ತೆರವಾಗಿದ್ದ ಈ ಚುನಾವಣೆ ನಡೆಯಲಿದೆ. ದೆಹಲಿ
ಎನ್‌ಡಿಎ ಮೈತ್ರಿಕೂಟದ ಬಳಿ ಬಹುಮತ ಇರುವುದಿಂದ ಸಿ.ಪಿ. ರಾಧಾಕೃಷ್ಣನ್ ಅವರ ಗೆಲುವು ಬಹುತೇಕ ಖಚಿತವಾಗಿದೆ. ಆದರೆ, 1962ರಿಂದ ಇಲ್ಲಿಯವರೆಗೂ ವಿರೋಧ ಪಕ್ಷಗಳ ಅಭ್ಯರ್ಥಿಗೆ ಸಿಕ್ಕ ಮತಗಳ ಹೋಲಿಕೆಯಲ್ಲಿ ಈ ಬಾರಿ ನ್ಯಾ. ಸುದರ್ಶನ ರೆಡ್ಡಿ ಅವರಿಗೆ ಅತಿ ಹೆಚ್ಚು ಮತಗಳು ಲಭಿಸುವ ಸಾಧ್ಯತೆ ಹೆಚ್ಚು. ಎರಡೂ ಮೈತ್ರಿಕೂಟಗಳು ಸಭೆಗಳನ್ನು ನಡೆಸಿ ಒಗ್ಗಟ್ಟು ಪ್ರದರ್ಶಿಸಿವೆ ಮತ್ತು ಅಣಕು ಮತದಾನದ ಕಾರ್ಯಾಗಾರವನ್ನೂ ನಡೆಸಿವೆ.ದೆಹಲಿ
ಇದನ್ನೂ ಓದಿ: ಹುಬ್ಬಳ್ಳಿ| ದೇಶ ಅಪ್ನಾಯೇನ್ ಸಹಯೋಗ ಫೌಂಡೇಷನ್‌ನಿಂದ್ ಸರಕಾರಿ ಶಾಲೆ ಮಕ್ಕಳಿಗೆ ಶೈಕ್ಷಣಿಕ ಮಹತ್ವದ ಅರಿವು ದೆಹಲಿ
‘ಮೈತ್ರಿ’ಯಲ್ಲಿ ಇಲ್ಲದವರ ನಡೆ
- ವೈಆರ್‌ಎಸ್ ಕಾಂಗ್ರೆಸ್ ಪಕ್ಷವು ಎನ್‌ಡಿಎ ಅಭ್ಯರ್ಥಿಗೆ ಮತ ಹಾಕಲು ನಿರ್ಧರಿಸಿದೆ. ಈ ಪಕ್ಷದಲ್ಲಿರುವ ಒಟ್ಟು ಸಂಸದರು 11. ಲೋಕಸಭೆಯಲ್ಲಿ 4, ರಾಜ್ಯಸಭೆಯಲ್ಲಿ 7
- ಬಿಆರ್‌ಎಸ್ ಚುನಾವಣೆಯಲ್ಲಿ ತಟಸ್ಥವಾಗಿರುವುದಾಗಿ ಹೇಳಿದೆ. ಈ ಪಕ್ಷದಲ್ಲಿ ಒಟ್ಟು 4 ರಾಜ್ಯಸಭೆ ಸಂಸದರಿದ್ದಾರೆ. ಲೋಕಸಭೆಯಲ್ಲಿ ಸಂಸದರು ಇಲ್ಲ
- ಬಿಜೆಡಿ ಪಕ್ಷವು ಚುನಾವಣೆಯಲ್ಲಿ ತಟಸ್ಥವಾಗಿರುವುದಾಗಿ ಹೇಳಿದೆ. ಈ ಪಕ್ಷದಲ್ಲಿ ಒಟ್ಟು 7 ರಾಜ್ಯಸಭೆ ಸಂಸದರಿದ್ದಾರೆ. ಲೋಕಸಭೆಯಲ್ಲಿ ಸಂಸದರು ಇಲ್ಲ
- ಅಕಾಲಿ ದಳ ಪಕ್ಷದ ಒಬ್ಬ ಸಂಸದನು ಚುನಾವಣೆಯಲ್ಲಿ ತಟಸ್ಥವಾಗಿರುವುದಾಗಿ ಹೇಳಿದ್ದಾರೆ
ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ – ಮತದಾನದ ಅವಧಿ
ಸಂಜೆ 6 – ಮತ ಎಣಿಕೆ
- ಒಂದು ಮತಕ್ಕೆ ಒಂದು ಮತದ ಮೌಲ್ಯ
- ಚುನಾವಣಾಧಿಕಾರಿ ನೀಡಿದ ವಿಶೇಷ ಪೆನ್ ಮೂಲಕವೇ ಮತದಾನ ಮಾಡಬೇಕು. ಬ್ಯಾಲಟ್ ಪೇಪರ್‌ನಲ್ಲಿ ಮತದಾನ
- ಇಂಥವರಿಗೇ ಮತ ಹಾಕಬೇಕು ಎಂದು ಪಕ್ಷಗಳು ವಿಪ್ ಜಾರಿ ಮಾಡಲು ಬರುವುದಿಲ್ಲ
ಅಭ್ಯರ್ಥಿಗಳು
ಸಿ.ಪಿ. ರಾಧಾಕೃಷ್ಣನ್ (ಎನ್‌ಡಿಎ ಅಭ್ಯರ್ಥಿ)
ನ್ಯಾ. ಬಿ. ಸುದರ್ಶನ್ ರೆಡ್ಡಿ (‘ಇಂಡಿಯಾ’ ಅಭ್ಯರ್ಥಿ)
ಇದನ್ನೂ ನೋಡಿ: ಧರ್ಮಸ್ಥಳ ನಿಗೂಢಗಳು | ಕಣ್ಣಿಗೆ ಕಂಡದ್ದನ್ನು ಹೇಳದಾದರು!! ಕೇರಳ, ತಮಿಳುನಾಡು ಎಂದೆಲ್ಲ ಲಿಂಕ್ ಕೊಟ್ಟರು!!!
