ಪ್ರಧಾನ ಮಂತ್ರಿಯಾದಿಯಾಗಿ ಬಿಜೆಪಿ ಮುಖಂಡರು ಸಂಭ್ರಮದಲ್ಲಿದ್ದಾರೆ. ಜೂನ್ 4ರಂದು ಮತಗಣನೆ ಆಂಭವಾಗುವ ಮೊದಲೇ ಹಲವರು ವಿಜಯೋತ್ಸವದ ಯೋಜನೆ ಮಾಡುತ್ತಿದ್ದಾರೆ. ಏಕೆಂದರೆ ಮತದಾನದ ನಂತರ ಮತಗಟ್ಟೆ ಸಮೀಕ್ಷೆ(ಎಕ್ಸಿಟ್ ಪೋಲ್) ನಡೆಸಿದ ಮುಖ್ಯಧಾರೆಯ ಕಂಪನಿಗಳು 350ಕ್ಕಿಂತ ಹೆಚ್ಚು ಸೀಟುಗಳನ್ನು ಬಿಜೆಪಿ ನೇತೃತ್ವದ ಎನ್‍ಡಿಎ ಗೆ ನೀಡಿವೆ. ಮೋದಿಯವರು ಹ್ಯಾಟ್ರಿಕ್ ಬಾರಿಸಿಯೇ ಬಿಟ್ಟರು ಎಂಬಂತೆ ಟಿವಿ ಚರ್ಚೆಗಳು ಆರಂಭವಾಗಿವೆ.
ಇನ್ನೊಂದೆಡೆಯಲ್ಲಿ ಇಂಡಿಯಾ ಕೂಟದ ಪಕ್ಷಗಳು ಈ ಎಕ್ಸಿಟ್ ಪೋಲ್‍ನ ಅಂಕೆ-ಸಂಖ್ಯೆಗಳನ್ನು ಪ್ರಶ್ನಿಸುತ್ತಿವೆ. ಜೂನ್ 1ರ ಕೊನೆಯ ಹಂತದ ಮತದಾನ ಮುಗಿಯುತ್ತಿದ್ದಂತೆಯೇ ಈ ಸಮೀಕ್ಷೆಗಳ ಫಲಿತಾಂಶಗಳ ಬಗ್ಗೆ ಟಿವಿವಾಹಿನಿಗಳು ತಮ್ಮ ಸದ್ದಗದ್ದಲಗಳನ್ನು ಆರಂಭಿಸುವ ಮೊದಲೇ ಇಂಡಿಯಾ ಮೈತ್ರಿಕೂಟದ ಮುಖಂಡರ ಸಭೆ ನಡೆದಿದ್ದು ಕಾಂಗ್ರೆಸ್ ಅಧ್ಯಕ್ಷರು ತಮ್ಮ ಮೈತ್ರಿಕೂಟ ಕನಿಷ್ಟ 295 ಸೀಟುಗಳನ್ನು ಗೆಲ್ಲುತ್ತದೆ ಎಂದು ಹೇಳಿದ್ದರು. ಸಭಯಲ್ಲಿ ಭಾಗವಹಿಸಿದ ವಿವಿಧ ಪಕ್ಷಗಳ ಮುಖಂಡರು ತಂತಮ್ಮ ರಾಜ್ಯಗಳಲ್ಲಿ ಮತದಾನದ ಬಗ್ಗೆ ನೀಡಿದ ವರದಿಗಳನ್ನು ಆಧರಿಸಿ ಈ ಸಂಖ್ಯೆಯನ್ನು ತಿಳಿಸಲಾಗಿದೆ ಎಂದು ಈಬಗ್ಗೆ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸುತ್ತ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚುರಿ ಹೇಳಿದ್ದಾರೆ.
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಇದು ‘ಮೋದೀಜಿ ಮೀಡಿಯ ಸಮೀಕ್ಷೆ’ ಎಂದು ತಳ್ಳಿ ಹಾಕಿದರೆ, ಆ ಪಕ್ಷದ ಪ್ರಮುಖ ವಕ್ತಾರ ಜೈರಾಮ ರಮೇಶ್ ಪಕ್ಷದ ರಾಜ್ಯಾಧ್ಯಕ್ಷರುಗಳೊಂದಿಗೆ ಮಾಧ್ಯಮ ಸಂವಹನಕ್ಕೆ ಪತ್ರಿಕಾ ಮಾಧ್ಯಮಗಳನ್ನು ಆಹ್ವಾನಿಸಿದ್ದಾರೆ, ಅವರು ತಂತಮ್ಮ ರಾಜ್ಯಗಳಲ್ಲಿನ ಅಂದಾಜುಗಳ ಬಗ್ಗೆ ಹೇಳಿದರು. ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ರಾಜ್ಯದಲ್ಲಿ ಕನಿಷ್ಟ ಮೂರನೇ ಎರಡು ಸೀಟುಗಳನ್ನು ಪಕ್ಷ ಪಡೆಯುತ್ತದೆ ಎಂದರು.
ಕಾಂಗ್ರೆಸ್ ಮುಖಂಡರಾದ ಶಶಿ ಥರೂರ್ ‘ಗೋದಿ ಮೀಡಿಯ’ದ ಸಮೀಕ್ಷೆಗಳನ್ನು ವಿಮರ್ಶೆ ಮಾಡುತ್ತ ಅವುಗಳಲ್ಲಿನ ವಿರೋಧಾಬಾಸಗಳತ್ತ ಗಮನ ಸೆಳೆದಿದ್ದಾರೆ.
ಉದಾಹರಣೆಗೆ, ಹರ್ಯಾಣದಲ್ಲಿ ಒಟ್ಟು ಸೀಟುಗಳ ಸಂಖ್ಯೆ 10, ಆದರೆ ಝೀ ನ್ಯೂಸ್ ಸಮೀಕ್ಷೆ16-19 ಸೀಟುಗಳನ್ನು ಕೊಟ್ಟಿದೆ’ ನಾಲ್ಕೇ ಸೀಟುಗಳಿರುವ ಹಿಮಾಚಲ ಪ್ರದೇಶದಲ್ಲೂ ಬಿಜೆಪಿಗೆ 6-8 ಸೀಟುಗಳನ್ನು ಕೊಟ್ಟಿಡಲಾಗಿದೆ., ಇವೇ ಸಮೀಕ್ಷೆಗಳು 2022ರ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಎಲ್ಲುತ್ತದೆ ಎಂದಿದ್ದವು, ಆದರೆ ಅದು ಸೋತಿತು; ಬಿಹಾರದಲ್ಲಿ ಎಲ್‍ಜೆಪಿ ಸ್ಪರ್ಧಿಸಿರುವುದೇ 5ಸ್ಥಾನಗಳಲ್ಲಾದರೂ, ಈ ಸಮೀಕ್ಷೆಗಳಲ್ಲಿ ಒಂದು ಅದಕ್ಕೆ 4-6 ಸ್ಥಾನಗಳನ್ನು ನೀಡಿದೆ. ಇನ್ನೊಂದೆಡೆಯಲ್ಲಿ ತಮಿಳುನಾಡಿನಲ್ಲಿ ಕೆಕೇವಲ 9 ಸ್ಥಾನಗಳಲ್ಲಿ ಸ್ಪರ್ಧಿಸಿರುವ ಕಾಂಗ್ರೆಸ್ 13-15 ಸೀಟುಗಳನ್ನು ಗೆಲ್ಲುತ್ತದೆ ಎಂದು ಇನ್ನೊಂದು ಸಮೀಕ್ಷೆ ಹೇಳುತ್ತದೆ ಎಂಬ ಸಂಗತಿಯತ್ತ ಥರೂರ್ ಗಮನ ಸೆಳೆದಿದ್ದಾರೆ.
ಇದನ್ನು ಓದಿ : ಈ ಬಾರಿ ಲೋಕಸಭೆಗೆ 642 ಮಿಲಿಯನ್ ಮತದಾರರಿಂದ ವಿಶ್ವದಾಖಲೆಯ ಹಕ್ಕು ಚಲಾವಣೆ; ರಾಜೀವ್ ಕುಮಾರ್
ಇನ್ನು ಕೆಲವು ಸಮೀಕ್ಷೆಗಳು ತತದ್ವಿರುದ್ಧ ಫಲಿತಾಂಶಗಳು ಬರುತ್ತವೆ ಎನ್ನುಂದೂ ಹೇಳಿವೆ. ದೇಶಬಂಧು ಎಂಬ ಚಾನೆಲ್ ಇಲೆಕ್ಟ್ ಲೈನ್ ಎಂಬ ಕಂಪನಿಯೊಂದಿಗೆ ನಡೆಸಿದ ಎಕ್ಸಿಟ್ ಪೋಲ್ ( ಸಬ್‍ರಂಗ್ ,ಜೂನ್ 2) ಇಂಡಿಯಾ ಮೈತ್ರಿಕೂಟ 255-291 ಸೀಟುಗಳನ್ನು ಗೆಲ್ಲುತ್ತದೆ, ಬಿಜೆಪಿ ನೇತೃತ್ವದ ಎನ್‍ಡಿಎ ಬಲ 207-241ಕ್ಕೆ ಸೀಮಿತಗೊಳ್ಳುತ್ತದೆ ಎಂದಿದೆ.
ಅದರ ಪ್ರಕಾರ ಉತ್ತರಪ್ರದೇಶದಲ್ಲಿ ಎನ್‍ಡಿಎ ಬಲ 40-48ಕ್ಕೆಇಳಿದರೆ, ಸಮಾಜವಾದಿ ಪಾರ್ಟಿ ಮತ್ತು ಕಾಂಗ್ರೆಸ್ ಒಟ್ಟಾಗಿ 32-34 ಸೀಟುಗಳನ್ನು, ಬಿಹಾರದಲ್ಲಿ ಎನ್‍ಡಿಎ ಸೀಟುಗಳ ಸಂಖ್ಯೆ 14-18ಕ್ಕೆ ಇಳಿದು ಇಂಡಿಯ ಮೈತ್ರಿಕೂಟ 28-30 ಸೀಟುಗಳನ್ನು ಪಡೆಯುತ್ತದೆ , ಆದರೆ ಮಧ್ಯಪ್ರದೇಶ ಮತ್ತು ಗುಜರಾತಿನಲ್ಲಿ ಎನ್‍ಡಿಎ ಕಳೆದ ಬಾರಿಯಂತೆಯೇ ಭಾರೀ ಜಯಗಳಿಸುತ್ತದೆ ಎಂದು ಈ ಸಮೀಕ್ಷೆ ಹೇಳುತ್ತದೆ. ಕರ್ನಾಟಕದಲ್ಲಿಯೂ ಬಿಜೆಪಿ ಈ ಬಾರಿಯೂ ಭಾರೀ ಜಯಭೇರಿ ಗಳಿಸುತ್ತದೆ ಎಂದು ಮುಖ್ಯಧಾರೆಯ ಟಿವಿ ಚಾನಲ್‍ಗಳು ಹೇಳಿದರೆ, ಈ ಸಮೀಕ್ಷೆ ಅದರ ಸಂಖ್ಯೆ 8-10ಕ್ಕೆ ಸೀಮಿತಗೊಳ್ಳುತ್ತದೆ, ಕಾಂಗ್ರೆಸ್ 18-20 ಸ್ಥಾನಗಳನ್ನು ಪಡೆಯುತ್ತದೆ ಎಂದು ಹೇಳುತ್ತದೆ.
ಎಕ್ಸಿಟ್‍ಪೋಲ್ ಗಳು ಎಷ್ಟೆಂದರೂ ಎಕ್ಸಿಟ್ ಪೋಲ್‍ಗಳೇ, ನಿಜನಾದೇಶಗಳಲ್ಲ, ಅದು ಗೊತ್ತಾಗುವುದು ಮತಗಣನೆಯ ನಂತರವೇ . ವಿಶೇಷವಾಗಿ, ಚುನಾವಣಾ ಪ್ರಚಾರದ ವೇಳೆಗೆ ಸ್ವತಃ ಪ್ರಧಾನ ಮಂತ್ರಿಗಳಿಂದಲೇ ಹಿಡಿದು ಎಲ್ಲ ಬಿಜೆಪಿ ಮುಖಂಡರು ಅರೆ ಸತ್ಯಗಳು, ಸುಳ್ಳುಗಳ ಸರಮಾಲೆಯನ್ನು ಹರಿಯ ಬಿಟ್ಟಿರುವ ವಾತಾವರಣದಲ್ಲಿ, ಇವು ವಿರೋಧಿಗಳನ್ನು ಬೆದರಿಸಿಲು ಮಾತ್ರವಲ್ಲ, ಚುನಾವಣಾ ಪ್ರಚಾರದಾದ್ಯಂತ ಮಾದರಿನೀತಿ ಸಂಹಿತೆಯ ಉಲ್ಲಂಘನೆಗಳ ಬಗ್ಗೆ ಮೌನವಾಗಿರುವ ಸಂದರ್ಭದಲ್ಲಿ ಚುನಾವಣಾ ಆಯೋಗದ ಮೇಲೆ ಒತ್ತಡ ಹಾಕಿ ಜನಾದೇಶವನ್ನು ಹುಸಿಗೊಳಿಸಲು ಆಳುವ ಪಕ್ಷ ನಡೆಸುತ್ತಿರುವ ಇನ್ನೊಂದು ಪ್ರಯತ್ನವೆಂದು ಕೆಲವು ವೀಕ್ಷಕರು ಅಭಿಪ್ರಾಯಪಡುತ್ತಿದ್ದಾರೆ.
ಈ ಎಕ್ಸಿಟ್ ಪೋಲ್‍ಗಳೂ ಸ್ಯಾಂಪಲ್ ಸರ್ವೆಗಳೇ ಆಗಿರುವದರಿಂದ ಅವನ್ನು ಸಾರಾಸಗಟು ತಳ್ಳಿಹಾಕುವಂತಿಲ್ಲ ಎಂಬುದು ನಿಜವೇ. ಆದರೆ ಅವನ್ನು ನಂಬುವ ಮೊದಲು ಎಷ್ಟು ವೈಜ್ಞಾನಿಕವಾಗಿ ನಡೆದಿವೆ ಎಂಬುದನ್ನು ಖಾತ್ರಿಮಾಡಿಕೊಳ್ಳಬೇಕು. ಎಕ್ಸಿಟ್ ಪೋಲ್ ನ ಸಂದರ್ಭದಲ್ಲಿ ಸಮೀಕ್ಷೆಯ ವಿಧಾನವೇನು, ಅದಕ್ಕೆ ಪ್ರಾತಿನಿಧಿಕವಾದ, ಅಂದರೆ ಸಮಾಜದ ವಿಭಿನ್ನ ವಿಭಾಗಗಳನ್ನು ಬಿಂಬಿಸುವ ಸ್ಯಾಂಪಲನ್ನು ಪಡೆಯಲಾಗಿದೆಯೇ, ಸ್ಯಾಂಪಲಿನ ಗಾತ್ರ ಎಷ್ಟು, ಮತ್ತುಈ ಸಮೀಕ್ಷೆ ನಡೆಸುವ ಕಂಪನಿಯ ಪೂರ್ವಾಪರವೇನು, ಅದು ಒಂದು ನಿರ್ದಿಷ್ಠ ಪಕ್ಷಕ್ಕೆ ಚುನಾವಣಾ ಪ್ರಚಾರ ಸೇವೆ ಒದಗಿಸಿರುವ ಕಂಪನಿಯೇ ಎಂಬಿತ್ಯಾದಿ ಹಲವು ಅಂಶಗಳನ್ನು ಆಧರಿಸಿವೆ. ಇವುಗಳ ಬಗ್ಗೆ ಪಾರದರ್ಶಕತೆ ಇಲ್ಲದಿದ್ದರೆ ಅವುಗಳನ್ನು ಹೆಚ್ಚೆಂದರೆ ಅವುಗಳನ್ನು ನಡೆಸಿದವರ ನಿರಿಕ್ಷೆಗಳೇಂದಷ್ಟೇ ಭಾವಿಸಬೇಕಾಗುತ್ತದೆ.
ಇದನ್ನು ನೋಡಿ : ಬಿಜೆಪಿ ನಿದ್ದೆ ಗೆಡಿಸಿದ ಸಟ್ಟಾ ಬಜಾರ್ : INDIA ಮತ್ತು NDA ನಡುವೆ ತೀವ್ರ ಪೈಪೋಟಿ Janashakthi Media