ಭೋಪಾಲ್: ಈ ವರ್ಷದ ಕೊನೆಯಲ್ಲಿ ಮಧ್ಯಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಈ ಮಧ್ಯೆ ಸರ್ಕಾರವು ಉಜ್ವಲ ಯೋಜನೆ ಮತ್ತು ಲಾಡ್ಲಿ ಬೆಹ್ನಾ ಯೋಜನೆಯಡಿ ನೋಂದಾಯಿಸಿದ ಎಲ್‌ಪಿಜಿ ಗ್ಯಾಸ್ ಸಂಪರ್ಕ ಹೊಂದಿರುವವರು 450 ರೂ.ಗೆ ಸಿಲಿಂಡರ್ ನೀಡಲು ಮುಂದಾಗಿದೆ. ಸೆಪ್ಟೆಂಬರ್ 1 ರಿಂದ ಗ್ಯಾಸ್ ಸಿಲಿಂಡರ್‌ನ ಉಳಿದ ವೆಚ್ಚವನ್ನು ಸರ್ಕಾರವೆ ಭರಿಸಲಿದೆ ಎಂದು ಘೋಷಿಸಲಾಗಿದೆ.
ಈ ಕುರಿತು ರಾಜ್ಯ ಸರ್ಕಾರ ಬುಧವಾರ ಆದೇಶ ಹೊರಡಿಸಿದ್ದು, ಗ್ಯಾಸ್ ಸಿಲಿಂಡರ್‌ನ ಬಾಕಿ ಮೊತ್ತವನ್ನು ಲಾಡ್ಲಿ ಬೆಹ್ನಾ ಖಾತೆಗಳಿಗೆ ಜಮಾ ಮಾಡಲಾಗುತ್ತದೆ ಎಂದು ಹೇಳಿದೆ. ಅರ್ಹ ಗ್ರಾಹಕರು ಪ್ರತಿ ತಿಂಗಳು ಪ್ರತಿ ಮರುಪೂರಣದ ಮಾಡುವ ಸಿಲಿಂಡರ್ ಮೇಲೆ ಸಬ್ಸಿಡಿ ಪಡೆಯಲಿದ್ದಾರೆ ಎಂದು ಆದೇಶ ಹೇಳಿದೆ.
ಇದನ್ನೂ ಓದಿ: ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುಗಡೆ : ರಾಜ್ಯದ ಸಂಸದರ ನಿವಾಸಕ್ಕೆ ಮುತ್ತಿಗೆ ಕರವೇ ಎಚ್ಚರಿಕೆ
“ಅರ್ಹ ಗ್ರಾಹಕರು ತೈಲ ಕಂಪನಿಯಿಂದ ಮಾರುಕಟ್ಟೆ ದರದಲ್ಲಿ ಮರುಪೂರಣ ಸಿಲಿಂಡರ್‌ಗಳನ್ನು ಖರೀದಿಸಬೇಕಾಗುತ್ತದೆ. ಭಾರತ ಸರ್ಕಾರವು ಒದಗಿಸುವ ಸಬ್ಸಿಡಿ ಮತ್ತು ರಾಜ್ಯ ಸರ್ಕಾರ ನಿರ್ಧರಿಸುವ ಮಾರುಕಟ್ಟೆ ದರವನ್ನು ಅರ್ಹ ಗ್ರಾಹಕರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುತ್ತದೆ” ಸರ್ಕಾರ ಹೇಳಿದೆ. ಗೃಹಬಳಕೆ ಎಲ್‌ಪಿಜಿ ಮರುಪೂರಣಗಳ ಸಿಲಿಂಡರ್‌ಗಳ ಮಾರುಕಟ್ಟೆ ದರದಲ್ಲಿ ಏರಿಳಿಕೆಯ ಸಂದರ್ಭದಲ್ಲಿ, ರಾಜ್ಯದ ಸಬ್ಸಿಡಿಯನ್ನು ಸಹ ಅದಕ್ಕೆ ಅನುಗುಣವಾಗಿ ಸರಿಹೊಂದಿಸಲಾಗುತ್ತದೆ ಎಂದು ಆದೇಶ ತಿಳಿಸಿದೆ.
ಈಗಾಗಲೇ ಗ್ಯಾಸ್ ಸಂಪರ್ಕ ಹೊಂದಿರುವ ಗ್ರಾಹಕರನ್ನು ಲಾಡ್ಲಿ ಬೆಹ್ನಾ ಯೋಜನೆ ಪೋರ್ಟಲ್ ಅಡಿಯಲ್ಲಿ ನೋಂದಾಯಿಸಲಾಗುವುದು ಎಂದು ಸರ್ಕಾರ ತಿಳಿಸಿದೆ. ನೋಂದಣಿಗಾಗಿ, ಗ್ಯಾಸ್ ಸಂಪರ್ಕದ ಗ್ರಾಹಕ ಸಂಖ್ಯೆ ಮತ್ತು LPG ಸಂಪರ್ಕ ID ಅಗತ್ಯವಿದೆ. ಫಲಾನುಭವಿಗಳ ಗುರುತಿಸುವಿಕೆಗಾಗಿ ಎಲ್ಲಾ ತೈಲ ಕಂಪನಿಗಳಿಂದ ಪಡೆದ ಡೇಟಾವನ್ನು ಆಧರಿಸಿ ಲಾಡ್ಲಿ ಬೆಹನಾ ಯೋಜನೆಗಾಗಿ ನೋಂದಣಿ ಐಡಿಯನ್ನು ಈ ಯೋಜನೆಯಡಿಯಲ್ಲಿ ರಚಿಸಲಾಗುತ್ತದೆ.
ಮಧ್ಯಪ್ರದೇಶದಲ್ಲಿ 2023ರ ಜನವರಿ 6ರಂದು ಪ್ರಸ್ತುತ ಸರ್ಕಾರದ ಅಧಿಕಾರಾವಧಿ ಮುಗಿಯಲಿದ್ದು, ನವೆಂಬರ್ ತಿಂಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ರಾಜ್ಯ ಚುನಾವಣೆಯಲ್ಲಿ ಗೆದ್ದರೆ 500 ರೂಪಾಯಿಗೆ ಎಲ್‌ಪಿಜಿ ಸಿಲಿಂಡರ್ ನೀಡುತ್ತೇವೆ ಎಂದು ಕಾಂಗ್ರೆಸ್ ಮತದಾರರಿಗೆ ಭರವಸೆ ನೀಡಿತ್ತು. ಈ ನಡುವೆ ಬಿಜೆಪಿ ಸರ್ಕಾರವೆ ಎಲ್‌ಪಿಜಿ ಸಿಲಿಂಡರ್ ಬೆಲೆಗೆ ಸಬ್ಸಿಡಿ ಘೋಷಿಸಿದೆ. ಇತ್ತೀಚೆಗಷ್ಟೆ ಕೇಂದ್ರ ಸರ್ಕಾರ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು 200 ರೂಪಾಯಿಗಳಷ್ಟು ಇಳಿಸಿತ್ತು.
ವಿಡಿಯೊ ನೋಡಿ: ‘ಸಿನಿಮಾ’ ಸಾಮಾಜಿಕ ತಲ್ಲಣಗಳ ಪ್ರತಿಬಿಂಬ – ನಟ, ನಿರ್ದೇಶಕ ಬಿ.ಸುರೇಶ ಜೊತೆ ಮಾತುಕತೆ Janashakthi Media