ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಆಡಳಿತಾರೂಢ TMC ಜೊತೆ ನೇರವಾಗಿ ಅಥವಾ ಪರೋಕ್ಷವಾಗಿ ಸಂಬಂಧ ಹೊಂದಿರುವ ಸುಮಾರು 1,000ಕ್ಕೂ ಹೆಚ್ಚು ವ್ಯಕ್ತಿಗಳ ಭದ್ರತೆಗಾಗಿ 2,100ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿರುವುದಕ್ಕೆ ಚುನಾವಣಾ ಆಯೋಗ ಆಕ್ಷೇಪ ವ್ಯಕ್ತಪಡಿಸಿದ್ದು, ಕೂಡಲೇ ಕ್ರಿಮಿನಲ್ ಪ್ರಕರಣಗಳನ್ನು ಹೊಂದಿರುವ ರಾಜಕಾರಣಿಗಳಿಗೆ ಭದ್ರತೆ ವಾಪಸ್ ಪಡೆಯುವಂತೆ ಪೊಲೀಸ್ ಮುಖ್ಯಸ್ಥರಿಗೆ ನಿರ್ದೇಶನ ನೀಡಿದೆ. ಕ್ರಿಮಿನಲ್
ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ಏಪ್ರಿಲ್ 23 ಮತ್ತು 29ರಂದು ಎರಡು ಹಂತಗಳಲ್ಲಿ ನಡೆಯಲಿದ್ದು, ಮೇ 4ರಂದು ಮತ ಎಣಿಕೆ ನಡೆಯಲಿದೆ. ಮಾರ್ಚ್ 15ರಂದು ಚುನಾವಣಾ ಘೋಷಣೆಯ ಮೊದಲು, ಪಶ್ಚಿಮ ಬಂಗಾಳ ಸರ್ಕಾರವು ಟಿಎಂಸಿಯೊಂದಿಗೆ ನೇರವಾಗಿ ಸಂಬಂಧ ಹೊಂದಿರುವ 832 ವ್ಯಕ್ತಿಗಳು ಮತ್ತು ಪಕ್ಷದ ಬೆಂಬಲಿಗರು ಸೇರಿದಂತೆ 144 ಇತರರಿಗೆ ಭದ್ರತೆ ಒದಗಿಸಲು 2,185 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿತ್ತು ಎಂದು ಚುನಾವಣಾ ಆಯೋಗದ (ಇಸಿ) ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಖಾಸಗಿ ಕಾಲೇಜಿನಲ್ಲಿ ಘಟಿಕೋತ್ಸವಕ್ಕೆ ವಿರೋಧ: ವಿವಿ ಕ್ಯಾಂಪಸ್‌ನಲ್ಲೇ ನಡೆಸಲು ವಿದ್ಯಾರ್ಥಿಗಳ ಮನವಿ
ಚುನಾವಣಾ ಪ್ರಾಧಿಕಾರವು ತಪ್ಪುನ್ನು ಗಂಭೀರವಾಗಿ ಪರಿಗಣಿಸಿದೆ. ವೈಯಕ್ತಿಕ ಭದ್ರತೆಗಾಗಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿದ ಕುರಿತು ಎರಡು ಮೂರು ದಿನಗಳಲ್ಲಿ “ನ್ಯಾಯಯುತ ಮತ್ತು ಸಮಾನ” ರೀತಿಯಲ್ಲಿ ಕಠಿಣ ವೃತ್ತಿಪರ ಪರಿಶೀಲನೆಯನ್ನು ನಡೆಸುವಂತೆ ಪೊಲೀಸ್ ಮಹಾನಿರ್ದೇಶಕರಿಗೆ ಚುನಾವಣಾ ಆಯೋಗ ನಿರ್ದೇಶನ ನೀಡಿದೆ .
ಇಲ್ಲಿಯವರೆಗೆ 1,370 ಅಧಿಕಾರಿಗಳ ವರ್ಗಾವಣೆ
ಪಶ್ಚಿಮ ಬಂಗಾಳ ಚುನಾವಣಾ ವೇಳಾಪಟ್ಟಿ ಘೋಷಣೆಯ ನಂತರ ಪ್ರಮುಖ ಆಡಳಿತಾತ್ಮಕ ಕ್ರಮಗಳ ಸರಣಿಯಲ್ಲಿ, ಚುನಾವಣಾ ಆಯೋಗವು ಮುಖ್ಯ ಕಾರ್ಯದರ್ಶಿ, ಪೊಲೀಸ್ ಮಹಾನಿರ್ದೇಶಕರು (ಡಿಜಿಪಿ), ಗೃಹ ಕಾರ್ಯದರ್ಶಿ, ಕೋಲ್ಕತ್ತಾ ಪೊಲೀಸ್ ಆಯುಕ್ತರು ಮತ್ತು ಹೆಚ್ಚುವರಿ ಮಹಾನಿರ್ದೇಶಕರು (ಕಾನೂನು ಮತ್ತು ಸುವ್ಯವಸ್ಥೆ) ಸೇರಿದಂತೆ ಹಲವಾರು ಹಿರಿಯ ರಾಜ್ಯ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ.
ಇದನ್ನೂ ನೋಡಿ: ಕೇರಳ ಚುನಾವಣೆ | ಎಲ್‌ಡಿಎಫ್ vs ಯುಡಿಎಫ್ ನೆಕ್ ಟು ನೆಕ್ ಫೈಟ್ – ಗೇಮ್‌ಚೇಂಜರ್ ಆಗುವ ಮತದಾರರು ಯಾರು?
