ನವದೆಹಲಿ: ಬಹುನಿರೀಕ್ಷಿತ ಲೋಕಸಭೆ ಚುನಾವಣೆಯ ದಿನಾಂಕ, ವೇಳಾಪಟ್ಟಿ ಮತ್ತು ಇತರೆ ವಿವರಗಳನ್ನು ಶನಿವಾರ (ಮಾರ್ಚ್ 16) ಘೋಷಿಸುವುದಾಗಿ ಭಾರತದ ಚುನಾವಣಾ ಆಯೋಗ ಶುಕ್ರವಾರ (ಮಾರ್ಚ್ 15) ಪ್ರಕಟಿಸಿದೆ. ಚುನಾವಣಾ
ಚುನಾವಣಾ ಆಯುಕ್ತರಾಗಿ ಸುಖ್‌ಬೀರ್ ಸಿಂಗ್ ಸಂಧು ಮತ್ತು ಜ್ಞಾನೇಶ್ ಕುಮಾರ್ ಅಧಿಕಾರ ವಹಿಸಿಕೊಂಡ ಬಳಿಕ ಆಯೋಗ ಈ ವಿಚಾರ ಬಹಿರಂಗಗೊಳಿಸಿದೆ.
ಲೋಕಸಭೆ ಮತ್ತು ಕೆಲವು ರಾಜ್ಯಗಳ ವಿಧಾನಸಭೆಗಳ ವೇಳಾಪಟ್ಟಿಯನ್ನು ಮಾರ್ಚ್ 16 ರಂದು ಮಧ್ಯಾಹ್ನ ನಂತರ 3 ಗಂಟೆಗೆ ಸುದ್ದಿಗೋಷ್ಠಿ ನಡೆಸಿ ಪ್ರಕಟಿಸುವುದಾಗಿ ಚುನಾವಣಾ ಆಯೋಗ ಶುಕ್ರವಾರ ತಿಳಿಸಿದೆ. ನವದೆಹಲಿಯ ವಿಜ್ಞಾನ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಯಲಿದೆ.
ಘೋಷಣೆ ಮಾಡಿದ ತಕ್ಷಣ ಮಾದರಿ ನೀತಿ ಸಂಹಿತೆ ಜಾರಿಗೆ ಬರಲಿದೆ. ಪತ್ರಿಕಾಗೋಷ್ಠಿಯನ್ನು ಚುನಾವಣಾ ಆಯೋಗದ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಲೈವ್-ಸ್ಟ್ರೀಮ್ ಮಾಡಲಾಗುವುದು ಎಂದು ಅದು ಹೇಳಿದೆ.
2019ರಲ್ಲಿ ಲೋಕಸಭೆ ಚುನಾವಣೆಯು ಒಟ್ಟು ಏಳು ಹಂತಗಳಲ್ಲಿ ನಡೆದಿತ್ತು. ಈ ಬಾರಿ ಕೂಡ ಏಳು ಅಥವಾ ಎಂಟು ಹಂತಗಳಲ್ಲಿ ಮತದಾನ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ವಿವಿಧ ಹಂತಗಳಲ್ಲಿ ನಡೆಯುವ ಮತದಾನ, ನಾಮಪತ್ರ ಸಲ್ಲಿಕೆ, ನಾಮಪತ್ರಗಳ ಪರಿಶೀಲನೆ, ನಾಮಪತ್ರಗಳ ವಾಪಸ್ ಪಡೆಯುವ ದಿನಾಂಕ, ಫಲಿತಾಂಶ ಪ್ರಕಟವಾಗಲಿರುವ ದಿನಾಂಕದ ವಿವರಗಳನ್ನು ಆಯೋಗ ಪ್ರಕಟಿಸಲಿದೆ.
ವಿಡಿಯೋ ನೋಡಿ:ಚುನಾವಣಾ ಬಾಂಡ್ ಮೂಲಕ ಖಾವೋ, ಖಾನೆ ಮಾಡಿದ ಬಿಜೆಪಿ – ಗುರುರಾಜ ದೇಸಾಯಿ