ಭಾರತದ ಚುನಾವಣಾ ಆಯೋಗದೊಳಗಿನ ಹಠಾತ್ ಬೆಳವಣಿಗೆ ದಿಗಿಲುಂಟುಮಾಟುವಂತದ್ದು ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಆತಂಕ ವ್ಯಕ್ತಪಡಿಸಿದೆ. ಸಿಪಿಐಎಂ
ನಿವೃತ್ತಿಗೆ ಮೂರು ವರ್ಷ ಬಾಕಿಯಿದ್ದ ಚುನಾವಣಾ ಆಯುಕ್ತರೊಬ್ಬರು ರಾಜೀನಾಮೆ ನೀಡಿದ್ದು, ರಾಜೀನಾಮೆಯನ್ನು ಔಪಚಾರಿಕವಾಗಿ ಅಂಗೀಕರಿಸಲಾಗಿದೆ. ಈ ಮೊದಲೇ ಒಬ್ಬ ಆಯುಕ್ತರ ಹುದ್ದೆ ಖಾಲಿಯಿರುವುದರಿಂದ, ಆಯೋಗವನ್ನು ಪ್ರಸ್ತುತ ಮುಖ್ಯ ಚುನಾವಣಾ ಆಯುಕ್ತರೊಬ್ಬರೇ ಪ್ರತಿನಿಧಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸಿಪಿಐಎಂ
ಇದನ್ನು ಓದಿ : ಮಲೆಗಾಂವ್ ಸ್ಫೋಟ ಪ್ರಕರಣದ ಆರೋಪಿ ಬಿಜೆಪಿ ಸಂಸದೆ ಪ್ರಜ್ಞಾಸಿಂಗ್ ಠಾಕೂರ್ಗೆ ವಾರೆಂಟ್
18ನೇ ಲೋಕಸಭೆಗೆ ಸಾರ್ವತ್ರಿಕ ಚುನಾವಣೆಯ ಕೆಲವೇ ದಿನಗಳ ಮುನ್ನ ಇದು ಅನಿಶ್ಚಿತತೆಯ ವಾತಾವರಣವನ್ನು ಸೃಷ್ಟಿಸಿದೆ. ಚುನಾವಣಾ ಆಯುಕ್ತರುಗಳ ನೇಮಕಾತಿಯ ಹೊಸ ಕಾನೂನಿನಿಂದಾಗಿ ಚುನಾವಣಾ ಆಯೋಗದ ಸಂಯೋಜನೆಯು ಸರ್ಕಾರದ ಸಂಪೂರ್ಣ ನಿಯಂತ್ರಣಕ್ಕೆ ಒಳಪಟ್ಟಿದೆ. ಈ ಪರಿಸ್ಥಿತಿಯು ಈ ಸಾಂವಿಧಾನಿಕ ಸಂಸ್ಥೆಯ ವಿಶ್ವಾಸಾರ್ಹತೆ ಮತ್ತು ಮುಕ್ತ ಮತ್ತು ನ್ಯಾಯಸಮ್ಮತವಾದ ಚುನಾವಣೆಗಳನ್ನು ನಡೆಸುವ ಅದರ ಸಾಮರ್ಥ್ಯದ ಬಗ್ಗೆ ಆತಂಕಗಳನ್ನು ಉಂಟುಮಾಡಿದೆ. ಈ ಬಗ್ಗೆ ಗಮನ ಹರಿಸಬೇಕಾಗಿದೆ ಎಂದಿರುವ ಸಿಪಿಐ(ಎಂ) ಪೊಲಿಟ್‍ಬ್ಯುರೊ, ಇಂತಹ ಪರಿಸ್ಥಿತಿ ಉದ್ಭವಿಸಿರುವ ಸಂದರ್ಭಗಳ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟ ಹೇಳಿಕೆ ನೀಡಬೇಕು ಎಂದು ಸಿಪಿಐ(ಎಂ) ಆಗ್ರಹಿಸಿದೆ. ಸಿಪಿಐಎಂ
ಇದನ್ನು ನೋಡಿ : RSS ನವರು “ಬಾಂಬ್ ವಿದ್ಯಾ ಪ್ರವೀಣರು, ಅಪಪ್ರಚಾರದ ಪ್ರವೀಣರು..” – ಸುಧೀರ್ ಕುಮಾರ್ ಮರೋಳಿ Janashakthi Media