ಚುನಾವಣಾ ಆಯೋಗ ಅನುಮಾನಗಳನ್ನು ನಿವಾರಿಸಬೇಕು

ನವದೆಹಲಿ: ಚುನಾವಣಾ ಆಯೋಗ ರಾಜಕೀಯ ಪಕ್ಷಗಳು ಮತ್ತು ಇತರರು ಎತ್ತಿರುವ ವಿವಿಧ ಕಳವಳಗಳನ್ನು ಗಮನಕ್ಕೆ ತಗೊಳ್ಳುವ ಮೂಲಕ ಚುನಾವಣಾ ಪ್ರಕ್ರಿಯೆಯಲ್ಲಿ ಸಾರ್ವಜನಿಕರ ವಿಶ್ವಾಸವನ್ನು ಪುನಃ ಸ್ಥಾಪಿಸಲು ತುರ್ತು ಸರಿಪಡಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಆಗ್ರಹಿಸಿದೆ.

ಇತ್ತೀಚಿನ ದಿನಗಳಲ್ಲಿ, ಚುನಾವಣೆಗಳ ನ್ಯಾಯಬದ್ಧತೆಯ ಬಗ್ಗೆ– ಮತದಾರ ಪಟ್ಟಿಗಳ ತಯಾರಿಕೆಯಲ್ಲಿನ, ವಿಶೇಷವಾಗಿ ಬಿಹಾರದಲ್ಲಿ ಎಸ್‍ಐಆರ್ ಪ್ರಕ್ರಿಯೆಯಲ್ಲಿನ ಅನಿಯಮಿತತೆಗಳಿಂದ ಹಿಡಿದು, ಮಹಾರಾಷ್ಟ್ರ ಮತ್ತು ಕರ್ನಾಟಕದ ರಾಜ್ಯ ಚುನಾವಣೆಗಳಲ್ಲಿ ಕಂಡುಬಂದ ದುರಾಚರಣೆಗಳ ವರೆಗಿನ, ಆಳುವ ಪಕ್ಷಕ್ಕೆ ಅನುಕೂಲ ಮಾಡಿಕೊಳ್ಳುವಂತೆ ಕಾಣುವ ನಡೆಗಳ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿವೆ.

ಇದನ್ನೂ ಓದಿ: ಕಲಬುರಗಿಯ ಕೇಂದ್ರೀಯ ವಿಶ್ವವಿದ್ಯಾಲಯದ ಕೋಮುವಾದೀಕರಣದ ವಿರುದ್ಧ ಹೋರಾಟದ ಕಹಳೆ

ವಿರೋಧ ಪಕ್ಷಗಳು ಎತ್ತಿರುವ ಪ್ರಶ್ನೆಗಳ ಬಗ್ಗೆ ಆಮೂಲಾಗ್ರ ತನಿಖೆ ನಡೆಸುವುದು ಮತ್ತು ಆಳುವ ಪಕ್ಷದ ಜಗಳಗಂಟ ಸಹಯೋಗಿಯಂತೆ ಕಾರ್ಯನಿರ್ವಹಿಸದೆ, ತಾನು ಒಂದು ಪಾರದರ್ಶಕ ಮತ್ತು ನಿಷ್ಪಕ್ಷಪಾತ ಸಾಂವಿಧಾನಿಕ ಸಂಸ್ಥೆ ಎಂದು ಜನರಿಗೆ ಪ್ರದರ್ಶಿಸುವುದು ಚುನಾವಣಾ ಆಯೋಗದ ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ ಎಂದು ಪೊಲಿಟ್‍ಬ್ಯುರೊ ಹೇಳಿದೆ.

ಇದನ್ನೂ ನೋಡಿ: ಧರ್ಮಸ್ಥಳದಲ್ಲಿ ದೌರ್ಜನ್ಯ ನಡೆಸಿದವರು ಕಟಕಟೆಗೆ ಬರಬೇಕು, ಅವರಿಗೆ ಶಿಕ್ಷೆಯಾಗಬೇಕು Janashakthi Media

Donate Janashakthi Media

Leave a Reply

Your email address will not be published. Required fields are marked *