2022-23 ಆರ್ಥಿಕ ವರ್ಷದಲ್ಲಿ ಚುನಾವಣಾ ಬಾಂಡ್‌ ಜೊತೆಗೆ, ಹೆಚ್ಚುವರಿ 719 ಕೋಟಿ ರೂ. ದೇಣಿಗೆ ಪಡೆದ ಬಿಜೆಪಿ!

ನವದೆಹಲಿ: ಆಡಳಿತಾರೂಢ ಬಿಜೆಪಿ 2022-23ನೇ ಹಣಕಾಸು ವರ್ಷದಲ್ಲಿ 719.8 ಕೋಟಿ ರೂಪಾಯಿ ಮೌಲ್ಯದ ದೇಣಿಗೆಯನ್ನು ಸ್ವೀಕರಿಸಿದೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಕಳೆದ ಗುರುವಾರ ಚುನಾವಣಾ ಆಯೋಗ ಪ್ರಕಟಿಸಿದ ಪಕ್ಷದ ವಾರ್ಷಿಕ ಕೊಡುಗೆ ವರದಿಯಲ್ಲಿ ಇದು ಬಹಿರಂಗವಾಗಿದೆ. ಬಿಜೆಪಿಗೆ ಹಣ ನೀಡಿದ ದಾನಿಗಳಲ್ಲಿ ವಿವಿಧ ರೀತಿಯ ಸಣ್ಣ ಉದ್ಯಮಗಳು, ಖಾಸಗಿ ಶಾಲೆಗಳು, ಶಿಕ್ಷಣ ಮತ್ತು ಚಾರಿಟಬಲ್ ಟ್ರಸ್ಟ್‌ಗಳು, ಗಣಿ ಕಂಪನಿಗಳು, ನಿರ್ಮಾಣ ಸಂಸ್ಥೆಗಳು, ತ್ಯಾಜ್ಯ ನಿರ್ವಹಣಾ ಕಂಪನಿಗಳು, ಡಿಸ್ಟಿಲರಿಗಳು ಮತ್ತು ರೆಸ್ಟೋರೆಂಟ್‌ಗಳು ಸೇರಿವೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಹೇಳಿದೆ. ಚುನಾವಣಾ ಬಾಂಡ್‌

ಪ್ಲಾಂಟ್ ನರ್ಸರಿಗಳು, ವೈನ್ ಶಾಪ್‌ಗಳು, ಹಿಟ್ಟಿನ ಗಿರಣಿಗಳು ಮತ್ತು ಹಾರ್ಡ್‌ವೇರ್ ಸ್ಟೋರ್‌ಗಳು ಸಹ ಬಿಜೆಪಿಗೆ ದೇಣಿಗೆ ನೀಡಿದ ಸಣ್ಣ ಉದ್ಯಮಗಳಲ್ಲಿ ಸೇರಿವೆ ಎಂದು ಪತ್ರಿಕೆಯ ವರದಿ ಉಲ್ಲೇಖಿಸಿದೆ. ಕಳೆದ ಆರ್ಥಿಕ ವರ್ಷದಲ್ಲಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಉತ್ತರ ಪ್ರದೇಶದ ಆದಿತ್ಯನಾಥ್ ಮತ್ತು ಮಧ್ಯಪ್ರದೇಶದ ಶಿವರಾಜ್ ಸಿಂಗ್ ಚೌಹಾಣ್ ಸೇರಿದಂತೆ ಪಕ್ಷದ ನಾಯಕರು ಕೂಡ ಈ ದಾನಿಗಳ ಪಟ್ಟಿಯಲ್ಲಿ ಇದ್ದಾರೆ. ಚುನಾವಣಾ ಬಾಂಡ್‌

ಇದನ್ನೂ ಓದಿ: ಕಾರ್ಯಾಚರಣೆ ವೇಳೆ ದುರಂತ | ಕಾಡಾನೆ ಜೊತೆ ಕಾಳಗದಲ್ಲಿ ಪ್ರಾಣ‌ಬಿಟ್ಟ ‘ಅರ್ಜುನ’

ಚುನಾವಣಾ ಆಯೋಗವೂ ಇತರ ಪಕ್ಷಗಳ ಇದೇ ರೀತಿಯ ವರದಿಗಳನ್ನು ಪ್ರಕಟಿಸಿದೆ. ಕಳೆದ ಹಣಕಾಸು ವರ್ಷದಲ್ಲಿ ಆಮ್ ಆದ್ಮಿ ಪಕ್ಷ 37 ಕೋಟಿ ರೂಪಾಯಿ ದೇಣಿಗೆ ಪಡೆದಿರುವ ಬಗ್ಗೆ ಪಕ್ಷವೂ ಘೋಷಿಸಿದೆ. ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) 6.02 ಕೋಟಿ ರೂಪಾಯಿಗಳ ದೇಣಿಗೆ ಪಡೆದಿದ್ದು, ಬಹುಜನ ಸಮಾಜ ಪಕ್ಷ ಶೂನ್ಯ ದೇಣಿಗೆ ಘೋಷಿಸಿದೆ. ಕಾಂಗ್ರೆಸ್ ಪಡೆದ ದೇಣಿಗೆ ಬಗ್ಗೆ ಇನ್ನೂ ವರದಿ ಇನ್ನೂ ಪ್ರಕಟವಾಗಿಲ್ಲ.

ಈ ಮೊತ್ತವು ಚೆಕ್, ಬ್ಯಾಂಕ್ ವರ್ಗಾವಣೆ, ಆನ್‌ಲೈನ್ ವಹಿವಾಟು ಮತ್ತು ಯುನೈಟೆಡ್ ಪೇಮೆಂಟ್ಸ್ ಇಂಟರ್‌ಫೇಸ್(ಯುಪಿಎ) ಮೂಲಕ ಮಾಡಲಾದ 20 ಸಾವಿರ ರೂ. ಮತ್ತು ಅದಕ್ಕಿಂತ ಹೆಚ್ಚಿನ ಎಲ್ಲಾ ದೇಣಿಗೆಗಳನ್ನು ಒಳಗೊಂಡಿದೆ. ಆದರೆ, ಇದು ಚುನಾವಣಾ ಬಾಂಡ್‌ಗಳ ಮೂಲಕ ಪಡೆದ ದೇಣಿಗೆಯನ್ನು ಒಳಗೊಂಡಿಲ್ಲ. ಚುನಾವಣಾ ಬಾಂಡ್‌

2021-22ನೇ ಹಣಕಾಸು ವರ್ಷದಲ್ಲಿ, ಬಿಜೆಪಿಯ ವಾರ್ಷಿಕ ಆಡಿಟ್ ವರದಿಯು ಅಂತಹ ವಿಧಾನಗಳ ಮೂಲಕ 614.52 ಕೋಟಿ ರೂಪಾಯಿಗಳನ್ನು ಮತ್ತು ಚುನಾವಣಾ ಬಾಂಡ್‌ಗಳ ಮೂಲಕ 1,033.7 ಕೋಟಿ ರೂಪಾಯಿಗಳನ್ನು ದೇಣಿಗೆಯಾಗಿ ಪಡೆದಿರುವ ಬಗ್ಗೆ ಘೋಷಿಸಿದೆ.

ಇದನ್ನೂ ಓದಿ: ರೈತರಿಗೆ 7 ಗಂಟೆ ಮೂರು ಫೇಸ್ ವಿದ್ಯುತ್ ಪೂರೈಕೆ: ಪ್ರಿಯಾಂಕ್ ಖರ್ಗೆ

ಚುನಾವಣಾ ಬಾಂಡ್‌ಗಳು ಎಂದರೆ ಅದೊಂದು ವಿತ್ತೀಯ ಸಾಧನವಾಗಿದೆ. ಅದನ್ನು ನಾಗರಿಕರು ಅಥವಾ ಕಾರ್ಪೊರೇಟ್ ಗುಂಪುಗಳು ಬ್ಯಾಂಕ್‌ನಿಂದ ಖರೀದಿಸಿ ಯಾವುದೆ ರಾಜಕೀಯ ಪಕ್ಷಕ್ಕೆ ನೀಡಬಹುದಾಗಿದೆ. ಈ ವೇಳೆ ಪಕ್ಷಗಳು ಅವುಗಳನ್ನು ಪಡೆದುಕೊಳ್ಳಲು ಮುಕ್ತವಾಗಿರುತ್ತದೆ.

ಈ ಬಡ್ಡಿ ರಹಿತ ಬಾಂಡ್‌ಗಳ ಖರೀದಿಯನ್ನು ಯಾರೂ ಘೋಷಿಸಬೇಕಾಗಿಲ್ಲ ಮತ್ತು ರಾಜಕೀಯ ಪಕ್ಷಗಳು ಹಣದ ಮೂಲವನ್ನು ತೋರಿಸುವ ಅಗತ್ಯವೂ ಇರುವುದಿಲ್ಲ. ಯಾಕೆಂದರೆ ಈ ಸಂಪೂರ್ಣ ಪ್ರಕ್ರಿಯೆಯು ಅನಾಮಧೇಯವಾಗಿ ಇರುತ್ತದೆ. ಚುನಾವಣಾ ಬಾಂಡ್‌ಗಳ ಮೂಲಕ ಪಡೆದ ಒಟ್ಟು ಮೊತ್ತವನ್ನು ಮಾತ್ರ ಲೆಕ್ಕಪರಿಶೋಧಕ ಖಾತೆಗಳ ಹೇಳಿಕೆಗಳ ಮೂಲಕ ಚುನಾವಣಾ ಆಯೋಗಕ್ಕೆ ಬಹಿರಂಗಪಡಿಸಲಾಗುತ್ತದೆ.

ವಿಡಿಯೊ ನೋಡಿ: ಬಿಗ್‌ ಡಿಬೇಟ್‌ : ಐದು ರಾಜ್ಯಗಳ ಚುನಾವಣಾ ಫಲಿತಾಂಶ 2023| Assembly Election Results 2023

Donate Janashakthi Media

Leave a Reply

Your email address will not be published. Required fields are marked *