ತುಂಗಭದ್ರಾ ನದಿಯಲ್ಲಿ ಕಾಲು ಜಾರಿ ಬಿದ್ದು 15 ಕಿ.ಮೀ ಈಜಿ ಬದುಕುಳಿದ ವಯೋವೃದ್ಧ

ಹಾವೇರಿ: ರಾಣೇಬೆನ್ನೂರು ತಾಲೂಕಿನ ಐರಣಿ ಗ್ರಾಮದ ತುಂಗಭದ್ರಾ ನದಿಯಲ್ಲಿ ಬಟ್ಟೆ ತೊಳೆಯಲು ಹೋಗಿ ಕಾಲು ಜಾರಿ ಬಿದ್ದ 60 ವರ್ಷದ ವಯೋವೃದ್ಧ ಜಯಣ್ಣ, ನದಿ ತುಂಬಿ ಹರಿಯುತ್ತಿದ್ದರೂ ಸಹ 15 ಕಿ.ಮೀ. ದೂರವರೆಗೆ ಈಜಿ ಅಂತಿಮವಾಗಿ ಜೀವ ಉಳಿಸಿಕೊಂಡಿದ್ದಾರೆ. ತುಂಗಭದ್ರಾ

ಘಟನೆ ವಿವರ :

ನದಿಯಲ್ಲಿ 15 ಕಿ.ಮೀ. ಈಜಿ ಜೀವ ಉಳಿಸಿಕೊಂಡಿರುವ ವೃದ್ಧ ಜಯಣ್ಣ ಕುಮಾರಪಟ್ಟಣಂ ಬಳಿ ಇರುವ ಅಯ್ಯಪ್ಪ ಸ್ವಾಮಿ ದೇವಾಲಯದ ಬಳಿ ಬಟ್ಟೆ ತೊಳೆಯಲು ತೆರಳಿದ್ದರು. ಈ ಸಂದರ್ಭ, ಕಾಲು ಜಾರಿ ನದಿಗೆ ಬಿದ್ದು, ನೀರಿನ ಸೆಳೆತದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ನಂತರ ದಡಕ್ಕೆ ಈಜಿ ಬರಲು ಸಾಧ್ಯವ ಆಗದೇ ಅವರು 15 ಕಿ.ಮೀ.ವರೆಗೂ ನೀರಿನಲ್ಲಿ ತೇಲಿಕೊಂಡು ಐರಣಿ ಗ್ರಾಮದ ಹೊಳೆಮಠದ ಬಳಿ ತಲುಪಿದ್ದಾರೆ.

ಇದನ್ನೂ ಓದಿ: ಶಾಲೆ, ಕಾಲೇಜು ಮತ್ತು ಕ್ಯಾಂಪಸ್ ಗಳಲ್ಲಿ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ – ಎಸ್‌ಎಫ್‌ಐ ಪ್ರತಿಭಟನೆ

ಆ ಸಮಯದಲ್ಲಿ ತಮ್ಮ ಶಕ್ತಿ ಕುಗ್ಗುತ್ತಿದ್ದಂತೆಯೇ ‘ಕಾಪಾಡಿ, ಕಾಪಾಡಿ’ ಎಂದು ಸಹಾಯ ಕೇಳಿದ ಜಯಣ್ಣರನ್ನು ಸ್ಥಳೀಯರು ಗಮನಿಸಿ, ಸ್ಥಳೀಯ ಮೀನುಗಾರರ ದೋಣಿಯನ್ನು ಬಳಸಿಕೊಂಡು ನದಿಗೆ ಇಳಿದು ರಕ್ಷಣೆ ಮಾಡಿದರು. ತಕ್ಷಣವೇ ದಡಕ್ಕೆ ತರಲಾದ ಜಯಣ್ಣರನ್ನು ಹರಿಹರ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತೆ. ವೈದ್ಯರು ಅವರ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿಸಿದ್ದಾರೆ.

ಜೀವ ಉಳಿಸಿಕೊಳ್ಳಲು ಹೆದರುವ ಬದಲು ಧೈರ್ಯದಿಂದ ನೀರಿನಲ್ಲಿ ಈಜಿದ ಜಯಣ್ಣ ಅವರ ಸಾಹಸ, ಇಡೀ ಹಾವೇರಿ ಜಿಲ್ಲೆಯಲ್ಲೇ ಚರ್ಚೆಗೆ ವಿಷಯವಾಗಿದೆ. ಅವರ ಬದುಕುಳಿಯಲು ಸಹಾಯ ಮಾಡಿದ ಗ್ರಾಮಸ್ಥರಿಂದ ಪ್ರಶಂಸೆಗೆ ಪಾತ್ರವಾಗಿದೆ.

ಇದನ್ನೂ ನೋಡಿ: ವಿಶ್ವ ಹಾವುಗಳ ದಿನ | ಆತಂಕ ಬಿಡಿ ಜೀವವೈವಿಧ್ಯತೆ ಕಾಪಾಡಿ Janashakthi Media #WorldSnakeDay

Donate Janashakthi Media

Leave a Reply

Your email address will not be published. Required fields are marked *