ಐದರ್‌ ಹುಕ್‌ ಆರ್‌ ಕುಕ್‌ :ಜಾಣಗೆರೆ ವೆಂಕಟರಾಮಯ್ಯ

ಬೆಂಗಳೂರು: ಹತ್ತು ವರ್ಷಗಳ ಹಿಂದಿನ ಮೋಡಿಯ ಮಾತುಗಳಿಗೆ ಜನ ಮರುಳಾಗಿ ಸುಳ್ಳು ಭರವಸೆಗಳನ್ನು ನಂಬಿ ಮೋಸ ಹೋಗಿದ್ದು ಸಾಕು. ಈ ಬಾರಿಯಾದರೂ ಎಚ್ಚೆತ್ತುಕೊಳ್ಳಬೇಕು. ಸುಳ್ಳನ್ನು ಧಿಕ್ಕರಿಸಿ ತಕ್ಕಪಾಠ ಕಲಿಸಬೇಕು ಎಂದು ಸಾಹಿತಿ ಜಾಣಗೆರೆ ವೆಂಕಟರಾಮಯ್ಯ ಕರೆ ನೀಡಿದ್ದಾರೆ. ಜಾಣಗೆರೆ ವೆಂಕಟರಾಮಯ್ಯ

ಜನಶಕ್ತಿ ಮೀಡಿಯಾದ ಜೊತೆ ಮಾತನಾಡಿದ ಜಾಣಗೆರೆ ವೆಂಟರಾಮಯ್ಯ, ಸುಳ್ಳನ್ನು ಸತ್ಯವೆಂದು ಹೇಳುತ್ತಾ ಜನರನ್ನು ಮೋಸಗೊಳಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ದೇಶದ ಒಕ್ಕೂಟ ವ್ಯವಸ್ಥೆಗೆ ವಿಮುಖವಾಗಿ ಎನ್ಡಿಎ ನಡೆದುಕೊಳ್ಳುತ್ತಿದೆ. ನಮ್ಮ ಪಾಲಿನ ತೆರಿಗೆ ವಾಪಸು ಕೊಡಬೇಕಾಗಿದ್ದು ಕೇಂದ್ರದ ಕರ್ತವ್ಯ. ತೆರಿಗೆ ಕೇಳುವುದು ನಮ್ಮ ಕರ್ತವ್ಯ. ಸುಳ್ಳನ್ನು ಸತ್ಯವೆಂದು ಹೇಳುವುದು ಪ್ರಜಾಪ್ರಭುತ್ವ ಅಲ್ಲ. ದೇಶದಾದ್ಯಂತ ಇವರಿಂದಾಗಿ “ ಐದರ್‌ ಹುಕ್‌ ಆರ್‌ ಕುಕ್” ದುಃಸ್ಥಿತಿ ಬಂದೊದಗಿದೆ ಎಂದು ಜಾಣಗೆರೆ ಬೇಸರ ವ್ಯಕ್ತಪಡಿಸಿದರು.

ಕಪ್ಪುಹಣವನ್ನು ವಾಪಸು ತಂದುಕೊಡುವಷ್ಟು ಉದಾರಿಗಳು ಬಿಜೆಪಿ ಸರ್ಕಾರವಲ್ಲ‌. ಈ ದೇಶದ ಯುವಜನತೆಯ ಬದುಕನ್ನು ಹಸನು ಮಾಡುವ ಮನಸ್ಥಿತಿ ಈ ಬಿಜೆಪಿಗೆ ಇಲ್ಲ. ಬದುಕು ತುಂಬಾ ಭಯಾನಕವಾಗಿದೆ‌. ರೈತರ ಬಗ್ಗೆಯೂ ದುರುಳರಿಗೆ ಕಾಳಜಿಯಿಲ್ಲ. ರೈತ ವಿರೋಧಿ ಮೂರು ಕರಾಳ ಮಸೂದೆಗಳನ್ನು ಯಾರೊಂದಿಗೂ ಚರ್ಚಿಸದೇ, ರೈತರೊಂದಿಗೆ ಯಾವುದೇ ಸಂಧಾನ ಮಾಡದೇ ಮಸೂದೆ ಪಾಸುಮಾಡಿದ್ದಾರೆ‌. ದೇಶವನ್ನು ಕಾಪಾಡುವವ ಯೋಧನಾದರೆ, ಹೊಟ್ಟೆಯನ್ನು ಕಾಪಾಡುವವನು ರೈತ. ರೈತರನ್ನು ಭಯೋತ್ಪಾದಕರು ಎಂದು ಕೇಂದ್ರದ ಬಿಜೆಪಿ ಹೇಳಿರುವುದು ತೀರಾ ಅಮಾನವೀಯ ಎಂದರು. ಜಾಣಗೆರೆ ವೆಂಕಟರಾಮಯ್ಯ

ಇದನ್ನು ಓದಿ : ಉತ್ತರ ಪ್ರದೇಶದ ಮದರಸಾ ಕಾನೂನನ್ನು ರದ್ದುಗೊಳಿಸಿದ ಅಲಹಾಬಾದ್‌ ಹೈಕೋರ್ಟ್‌ ತೀರ್ಪಿಗೆ ಮಧ್ಯಂತರ ತಡೆಯಾಜ್ಞೆ ನೀಡಿದ ಸುಪ್ರೀಂಕೋರ್ಟ್‌

ರೈತರು ಬೀದಿಗೆ ಬಂದಿದ್ದಾರೆ. ರೈತರನ್ನು ಅಪಮಾನಿಸುವ ಪಮಾವರನ್ನು ಓಡಿಸುವ ಹುನ್ನಾರ ಮಾಡುತ್ತಿದ್ದಾರೆಯೇ‌ ಹೊರತೂ ರೈತರನ್ನು ಕರೆದು ಮಾತನಾಡಿಸುವ ಪ್ರೀತಿ‌, ಕಾಳಜಿಯಾಗಲೀ, ಸೌಜನ್ಯವಾಗಲೀ ಈ ವಿಶ್ವಗುರು ಎಂದುಕೊಳ್ಳುವ ದುಷ್ಟ ಪ್ರಧಾನಿ ಮೋದಿಗೆ ಇಲ್ಲ. ಈ ದೇಶಕ್ಕೆ ಇವರಿಂದ ಏನೂ ಒಳ್ಳೆಯದಾಗುವುದಿಲ್ಲ. ಧರ್ಮಾಧಾರಿತ ಮತೀಯ ರಾಜಕಾರಣ ಈ ಸಂವಿಧಾನದ ಪ್ರಜಾಪ್ರಭುತ್ವದ ಒಕ್ಕೂಟ ವ್ಯವಸ್ಥೆಯ ಭಾರತಕ್ಕೆ ಸಲ್ಲದು. ಇವರಿಂದಾಗಿ ಭಾರತ ಅಧಃಪತನದ‌ ಹಾದಿ ಹಿಡಿಯುವುದು ಖಚಿತ.

ಹೀಗಾಗಿ ಇಂತಹವರನ್ನು ಸೋಲಿಸಲೇಬೇಕು. ಜನರ ಬಗ್ಗೆ,ಮಹಿಳೆಯರ ಬಗ್ಗೆ, ರೈತರ‌ ಬಗ್ಗೆಯಾಗಲೀ ಪ್ರೀತಿಯೇ ಇಲ್ಲ. ದುರಂಹಕಾರದ ಧರ್ಮ ಮತೀಯ ಅಮಲಿನ ಸರ್ಕಾರ ಇದು. ಹುಚ್ಚುಭ್ರಮೆಯಲ್ಲಿ ಜನ ತೇಲುತ್ತಾರೆ ಎಂದು ಈ ಬಾರಿಯೂ ಭಾವಿಸಿ ಮುಂದಾಗಿದ್ದಾರೆ. ಇದಕ್ಕೆ ದೇಶದ ಜನ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಎಂದು ಮನವಿ ಮಾಡಿದರು.

ಇದನ್ನು ನೋಡಿ : ಬಿಜೆಪಿಯ extended ಸಂಸ್ಥೆ ಈಡಿ ಕುರಿತು ‘ಬೆಚ್ಚಿ ಬೀಳಿಸುವ ಮಾಹಿತಿಗಳು’ Janashakthi Media

Donate Janashakthi Media

Leave a Reply

Your email address will not be published. Required fields are marked *