ದೇಶದ ಎಂಟು ರಾಜ್ಯಗಳಲ್ಲಿ ಶೇ.84ರಷ್ಟು ಕೋವಿಡ್‌-19 ಹೊಸ ಪ್ರಕರಣ

ನವದೆಹಲಿ/ಮುಂಬೈ : ಮಹಾರಾಷ್ಟ್ರ ರಾಜ್ಯದಲ್ಲಿ ಅತಿ ಹೆಚ್ಚು ಕೋವಿಡ್‌ ಪ್ರಕರಣಗಳು ದಾಖಲಾಗಿದ್ದು ಅಲ್ಲಿ ಒಂದೇ ದಿನದಲ್ಲಿ 40,414 ಹೊಸ ಪ್ರಕರಣಗಳು ವರದಿಯಾಗಿದೆ.

ಅದೇ ರೀತಿಯಲ್ಲಿ ನಂತರದ ಸ್ಥಾನದಲ್ಲಿ ಕರ್ನಾಟಕ-3,082, ಪಂಜಾಬ್-2‌,870, ಮಧ್ಯಪ್ರದೇಶ-2,276, ಗುಜರಾತ್-2‌,276 ಮತ್ತು ಕೇರಳದಲ್ಲಿ 2,216, ತಮಿಳುನಾಡು-2,194 ಮತ್ತು ಛತ್ತೀಸ್‌ಘಡದಲ್ಲಿ-2,153 ಹೊಸ ಪ್ರಕರಣಗಳು ದಾಖಲಾಗಿವೆ.

ಇದನ್ನು ಓದಿ : ಕೋವಿಡ್‌ ಈ ಶತಮಾನದ ಅತ್ಯಂತ ದೊಡ್ಡ ಪಿಡುಗು

ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಕೊರೊನಾ ವೈರಸ್ ಒಟ್ಟು 68,020 ಹೊಸ ಪ್ರಕರಣಗಳು ದಾಖಲಾಗಿದೆ. ಮಹಾರಾಷ್ಟ್ರ, ಕರ್ನಾಟಕ ಮತ್ತು ಪಂಜಾಬ್ ಸೇರಿದಂತೆ ಎಂಟು ರಾಜ್ಯಗಳು ಶೇ .84.5 ರಷ್ಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಇಂದು ತಿಳಿಸಿದೆ.

ಕಳೆದ 24 ಗಂಟೆಗಳಲ್ಲಿ 291 ಸಾವುಗಳೊಂದಿಗೆ, ಒಟ್ಟಾರೆ ಸಾವಿನ ಸಂಖ್ಯೆ 1,61,843 ಕ್ಕೆ ತಲುಪಿದೆ. ದೇಶದಲ್ಲಿ 5,21,808 ಸಕ್ರಿಯ ಕೋವಿಡ್‌ ಪ್ರಕರಣಗಳಿದ್ದು, ಒಟ್ಟಾರೆ 1,13,55,993 ಜನರು ಈ ಕಾಯಿಲೆಯಿಂದ ಚೇತರಿಸಿಕೊಂಡಿದ್ದಾರೆ.

ಪ್ರಸ್ತುತ ಸಕ್ರಿಯವಾಗಿರುವ ಕೋವಿಡ್ ಪ್ರಕರಣಗಳ ಸಂಖ್ಯೆ ಮಹಾರಾಷ್ಟ್ರದಲ್ಲಿ ದಾಖಲೆ ಮುಟ್ಟುತ್ತಿದ್ದು, ಮುಂದಿನ ವಾರದಲ್ಲಿ ರಾಜ್ಯವು ಬೀಗಮುದ್ರೆಯತ್ತ ಸಾಗುವುದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನು ಓದಿ : ಕೊರೊನಾ ಪರಿಹಾರದ ಬಗ್ಗೆ ಶ್ವೇತಪತ್ರ ಹೊರಡಿಸಿ: ಸಿದ್ಧು ಸರಣಿ ಟ್ವೀಟ್‌

ಮಹಾರಾಷ್ಟ್ರದಲ್ಲಿ ಕೋವಿಡ್‌ ಪ್ರಕರಣಗಳ ನಿಯಂತ್ರಣಕ್ಕೆ ತರುವ ಹೊಸ ಮಾರ್ಗಗಳ ಅನುಷ್ಠಾನಕ್ಕಾಗಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಆರೋಗ್ಯ ಸಚಿವ ರಾಜೇಶ್ ಟೊಪೆ, ಆರೋಗ್ಯ ಕಾರ್ಯದರ್ಶಿ ಡಾ.ಪ್ರದೀಪ್ ವ್ಯಾಸ್ ಮತ್ತು ಕೋವಿಡ್ ಟಾಸ್ಕ್ ಫೋರ್ಸ್ ಅವರೊಂದಿಗೆ ನಡೆಸಿದ ಸಭೆಯಲ್ಲಿ ಲಾಕ್ ಡೌನ್ ಆಯ್ಕೆಯನ್ನು ಚರ್ಚಿಸಲಾಯಿತು.

ಕಳೆದ ಮೂರು ದಿನಗಳಲ್ಲಿ ಮಹಾರಾಷ್ಟ್ರವು 1.13 ಲಕ್ಷಕ್ಕೂ ಹೆಚ್ಚು ಹೊಸ ಸೋಂಕಿತರು ಸಂಖ್ಯೆ ದಾಖಲಾಗಿದೆ. ಭಾನುವಾರ ಒಂದೇ ದಿನ 40,414 ಹೊಸ ಪ್ರಕರಣಗಳು ಪತ್ತೆಯಾಗಿವೆ.

Donate Janashakthi Media

Leave a Reply

Your email address will not be published. Required fields are marked *