ಭೋಪಾಲ್: ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನದಲ್ಲಿ ಸೂರಜ್ ಹೆಸರಿನ ಗಂಡು ಚೀತಾ ಶುಕ್ರವಾರ ಮೃತಪಟ್ಟಿದೆ ಎಂದು ಎನ್‌ಡಿ ಟಿ.ವಿ ವರದಿ ಮಾಡಿದೆ.
ಶುಕ್ರವಾರ ನಸುಕಿನಲ್ಲಿ ಚೀತಾದ ಕಳೇಬರ ರಾಷ್ಟ್ರೀಯ ಉದ್ಯಾನದಲ್ಲಿ ಪತ್ತೆಯಾಗಿದೆ. ಅಧಿಕಾರಿಗಳು ಇದರ ಸಾವಿಗೆ ನಿಖರ ಕಾರಣವನ್ನು ಪತ್ತೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ಅಧಿಕಾರಿಗಳು ಮೇಲ್ನೋಟಕ್ಕೆ ಸೂರಜ್ ಚೀತಾ ಹೆಣ್ಣು ಚೀತಾದೊಂದಿಗಿನ ಕಾದಾಟದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಚೀತಾ ಆ ಆಘಾತದಿಂದ ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ವಿಧಾನಸೌಧ ಪ್ರವೇಶಕ್ಕೆ ನಕಲಿ ಪಾಸ್ ಬಳಕೆ: ಜಾಲ ಪತ್ತೆ ಹಚ್ಚಿದ ಪೊಲೀಸರು
ಪ್ರತಿಕೂಲ ಹವಮಾನದ ತಾಳಲಾರದೆ ಎರಡು ಚೀತಾ ಮರಿಗಳು ಮೇ 25 ರಂದು ಮೃತಪಟ್ಟಿವೆ.ಮಾರ್ಚ್ 27 ರಂದು ಸಷಾ ಎಂಬ ಹೆಣ್ಣು ಚೀತಾ ಮೂತ್ರಪಿಂಡ ಸಮಸ್ಯೆಯಿಂದ ಮೃತಪಟ್ಟಿತ್ತು.ಏ 23 ರಂದು ಹೃದಯ ಸಂಬಂಧಿ ಸಮಸ್ಯೆಯಿಂದ ಉದಯ ಮೃತಪಟ್ಟರೆ ಮೇ 8 ರಂದು ದಕ್ಷಾ ಎಂಬ ಹೆಣ್ಣು ಚಿತಾ ಗಂಡಿನೊಂದಿಗಿ ಕಾದಾಟದಲ್ಲಿ ಸಾವನ್ನಪ್ಪಿತ್ತು.
ಚೀತಾವನ್ನು ಪ್ರಧಾನಿ ನರೇಂದ್ರ ಮೋದಿ ಅವರ ಭಾರತಕ್ಕೆ ಮರು ಪರಿಚಯಿಸುವ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ.
ದಕ್ಷಿಣ ಆಫ್ರಿಕಾದ ವನ್ಯಜೀವಿ ಪರಿಣಿತ ವ್ಯಾನ್‌ಡೆರ್ ಮೆರ್ವೆ ಅವರು ಈ ಯೋಜನೆ ಭಾಗವಾಗಿ ತರಲಾದ ಚೀತಾಗಳ ಸಾವಿಗೆ ಇತರ ಪ್ರಾಣಿಗಳೊಂದಿಗೆ ಕಾದಾಟ ಮತ್ತು ಹೊಸ ಜಾಗದಲ್ಲಿ ಹೊಂದಿಕೊಳ್ಳಲು ಸಾಧ್ಯವಾಗದಿರುವುದೇ ಪ್ರಮುಖವಾದ ಕಾರಣ ಎಂದು ಹೇಳಿದ್ದಾರೆ,