ಬೆಂಗಳೂರು:ಬಿಜೆಪಿ ಸರ್ಕಾರದ ಅವಧಿಯಲ್ಲಿ ಅನುದಾನದ ಕೊರತೆಯಿಂದ ಮುಚ್ಚುವ ತಲುಪಿದ್ದ ಇಂದಿರಾ ಕ್ಯಾಂಟಿನ್‌ಗಳು ಈಗ ಸಿದ್ದರಾಮಯ್ಯ ಮುಖ್ಯ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ರಾಜ್ಯದಲ್ಲಿ ಮತ್ತೆ ಇಂದಿರಾ ಕ್ಯಾಂಟಿನ್‌ಗಳಿಗೆ ಮರು ಜೀವ ಬಂದತಾಗಿದೆ. ಸಾವಿರಾರು ಬಡ ಕೂಲಿ ಶ್ರಮಿಕರಿಗೆ, ಕಾರ್ಮೀಕರಿಗೆ, ನಿತ್ಯ ಕಡಿಮೆ ಮೊತ್ತದಲ್ಲಿ ಊಟ ಸಿಗುವಂತೆ ಮಾಡಿದ್ದ ಇಂದಿರಾ ಕ್ಯಾಂಟಿನಲ್ಲಿ ಇದೀಗ ಮೊಟ್ಟೆ ನೀಡುವ ಬಗ್ಗೆ ಚಿತನೆ ನಡೆಸಿದೆ ಕಾಂಗ್ರೆಸ್ ಇದರ ಜೊತೆಗೆ ಊಟದ ಮೆನುವಿನಲ್ಲಿ ಕೂಡ ಬದಲಾವಣೆ ಮಾಡಲಾಗುತ್ತಿದೆ.
ಇದ್ದನ್ನೂ ಓದಿ:ಬಿಬಿಎಂಪಿ ಇಂದಿರಾ ಕ್ಯಾಂಟೀನ್: ಆಹಾರ ನೀಡಲೂ ನಿರ್ಧಾರ
ಇದರ ಬೆನ್ನೆಲ್ಲೆ ಊಟದ ಜೊತೆ ಮೊಟ್ಟೆ ನೀಡುವ ಬೇಡಿಕೆಯನ್ನು ಮೆನುವಿನಲ್ಲಿ ಮೊಟ್ಟೆಗಳನ್ನು ಸೇರಿಸಲು ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸುವುದಾಗಿ ಮಾಜಿ ಬಿಬಿಎಂಪಿ ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜಿದ್ ಹೇಳಿದ್ದಾರೆ. ಈ ಸಂಬಂಧ ಅಬ್ದುಲ್ ವಾಜಿದ್,ಇಂದಿರಾ ಕ್ಯಾಂಟೀನ್‌ನಲ್ಲಿ ಬಹುಪಾಲು ಕಾರ್ಮಿಕ ವರ್ಗ ಮತ್ತು ಬಡ ಜನರು ಊಟಕ್ಕೆ ಬರುತ್ತಾರೆ. ಮೆನುವಿನಲ್ಲಿ ಪೌಷ್ಟಿಕಾಂಶ ಮತ್ತು ಪ್ರೋಟೀನ್ ಸೇರಿಸುವುದರಿಂದ ಉತ್ತಮ ಆರೋಗ್ಯಕ್ಕೆ ಸಹಾಯ ಮಾಡುತ್ತದೆ ಎಂದು ಮನವಿ ಮಾಡಿದ್ದಾರೆ.
ಮೆನುವಿನಲ್ಲಿ ಮೊಟ್ಟೆ ಸೇರಿಸುವ ಸಲಹೆಯನ್ನು ಮಾಜಿ ಸಚಿವ ಹಾಗೂ ಶಾಸಕ ಮುನಿರತ್ನ ನಾಯ್ಡು ಶ್ಲಾಘಿಸಿದ್ದಾರೆ. ಮೊಟ್ಟೆ ಆರೋಗ್ಯಕ್ಕೆ ಒಳ್ಳೆಯದು ಆದರೆ ಇಂದಿರಾ ಕ್ಯಾಂಟೀನ್‌ಗೆ ಸಾಕಷ್ಟು ಸಸ್ಯಾಹಾರಿಗಳು ಬರುವುದರಿಂದ ಮೊಟ್ಟೆಯ ಕೌಂಟರ್ ಪ್ರತ್ಯೇಕವಾಗಿರಬೇಕು ಎಂದಿದ್ದಾರೆ. ತಮ್ಮ ಶಾಸಕರ ಅನುದಾನ ನಿಧಿಯಿಂದ 17 ಲಕ್ಷ ರೂಪಾಯಿ ವೆಚ್ಚದಲ್ಲಿ ಆರ್‌ಆರ್‌ನಗರ ವಿಧಾನಸಭಾ ಕ್ಷೇತ್ರದ ಏಳು ಇಂದಿರಾ ಕ್ಯಾಂಟೀನ್‌ಗಳಲ್ಲಿ ಸಿಸಿಟಿವಿಗಳನ್ನು ಅಳವಡಿಸಿರುವುದಾಗಿ ತಿಳಿಸಿದ್ದಾರೆ. ಪಾಲಿಕೆ ಜಂಟಿ ಆಯುಕ್ತರ ಕಚೇರಿಯಲ್ಲಿರುವ ಮಾನಿಟರ್‌ಗೆ ಸಿಸಿಟಿವಿ ಸಂಪರ್ಕ ಕಲ್ಪಿಸಲಾಗುವುದು ಎಂದರು.