ಇದೀಗ ಕಾರ್ಪೊರೇಟ್‌ಗಳು ಮತ್ತು ಜನತೆಯ ನಡುವಿನ ಸಮರ: ಎಐಕೆಎಸ್ ಸಿಸಿ

ಇದೀಗ ಕಾರ್ಪೊರೇಟ್‌ಗಳು ಮತ್ತು ರೈತರ ನಡುವಿನ ಸಮರವಲ್ಲ

 

ದೆಹಲಿ: ಭಾರತ ಬಂದ್‌ಗೆ ಸಿದ್ಧತೆಗಳು ಪೂರ್ಣ ಪ್ರಮಾಣದಲ್ಲಿ ನಡೆಯುತ್ತಿರುವಂತೆ ರೈತರಿಗೆ ಸಮಾಜದ ಎಲ್ಲೆಡೆಗಳಿಂದ ಬೆಂಬಲ ಹರಿದು ಬರುತ್ತಿದೆ- ಬಹಳಷ್ಟು ರಾಜಕೀಯ ಪಕ್ಷಗಳು, ಕಾರ್ಮಿಕ ಸಂಘಗಳು, ಮತ್ತು ಇತರ ದುಡಿಯುವ ಜನಗಳು ಮಾತ್ರವಲ್ಲ, ವಿದ್ಯಾರ್ಥಿಗಳು, ಯುವಜನರು, ಮಹಿಳೆಯರು, ಕಲಾವಿದರು, ಅಧ್ಯಾಪಕರು ಮುಂತಾದ ಎಲ್ಲ ಜನವಿಭಾಗಗಳಿಂದ ಬೆಂಬಲ ಧಾರಾಕಾರವಾಗಿ ಹರಿದು ಬರುತ್ತಿರುವಂತೆ ಹೆಚ್ಚೆಚ್ಚು ರೈತರು ದಿಲ್ಲಿಯತ್ತ ಬರುತ್ತಿದ್ದಾರೆ ಎಂದು ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ (ಎ.ಐ.ಕೆ.ಎಸ್.ಸಿ.ಸಿ.) ಹೇಳಿದೆ.

ಸರಕಾರ ಮೂರು ಕರಾಳ ಕಾಯ್ದೆಗಳನ್ನು ಹಿಂತೆಗೆದುಕೊಳ್ಳುವುದೇ ಇಲ್ಲೆಂದು ಹಟ ಹಿಡಿದು ಕೂತಿರುವುದು ಕಾರ್ಪೊರೇಟ್‌ಗಳಿಗೆ ಮತ್ತು ಬಹುರಾಷ್ಟಿçÃಯ ಕಂಪನಿಗಳಿಗೆ ಅದರ ಅಡಿಯಾಳುತನವನ್ನು ಬಯಲಿಗೆ ತಂದಿದೆ. ಆರೆಸ್ಸೆಸ್‌ನ ‘ಸ್ವದೇಶಿ’ ಮುಖವಾಡ ಮತ್ತು ಬಿಜೆಪಿಯ ‘ಆತ್ಮನಿರ್ಭರ ವಿಕಾಸ’ದ ನಟನೆಯೂ ಬಯಲಾಗಿದ್ದರೆ, ಸಂಘ ಪರಿವಾರಕ್ಕೆ ಸೇರಿದ ಭಾರತೀಯ ಕಿಸಾನ್ ಸಂಘ ಈ ಕರಾಳ ರೈತ-ವಿರೋಧಿ ಕಾಯ್ದೆಗಳಿಗೆ ಬೆಂಬಲ ನೀಡಿರುವುದು ಸಂಘ ಪರಿವಾರದ ನಿಜ ಬಣ್ಣವನ್ನು ಹೊರಗೆಡಹಿದೆ ಎಂದು ಅದು ಹೇಳಿದೆ.

ಮೂರು ಕೃಷಿ ಕಾಯ್ದೆಗಳನ್ನು ಹಿಂತೆಗೆದುಕೊಳ್ಳುವದಿಲ್ಲ ಎಂದು ಸರಕಾರ ಪ್ರಕಟಿಸಿರುವುದನ್ನು ಖಂಡಿಸಿರುವ ಎ.ಐ.ಕೆ.ಎಸ್.ಸಿ.ಸಿ. ಕಾರ್ಯಕಾರೀ ಗುಂಪು, ಇದು ವಿಮರ್ಶೆಯನ್ನು ಸಹಿಸಲಾರದ ಸರಕಾರ, ಜನರನ್ನು ಬಗ್ಗಿಸಲು ಟೊಂಕ ಕಟ್ಟಿರುವ ಸರಕಾರ ಎಂಬುದನ್ನು ತೋರಿಸಿ ಕೊಟ್ಟಿದೆ. ಇದುವರೆಗೆ ಮಾತುಕತೆಗಳ ಹೆಸರಿನಲ್ಲಿ ಅದು ದೇಶದ ಸಮಯವನ್ನು ವ್ಯರ್ಥಗೊಳಿಸಿದೆ.

ಸರಕಾರಕ್ಕೆ ತನ್ನ ನಿಲುವನ್ನು ಸಮರ್ಥಿಸಿಕೊಳ್ಳಲು ಯಾವ ತರ್ಕವೂ ಇಲ್ಲ, ಅದು ಕಾರ್ಪೊರೇಟ್ ಮತ್ತು ಬಹುರಾಷ್ಟಿçÃಯ ಕಂಪನಿಗಳ ಹಿತಗಳ ಮುಂದೆ ತಲೆಬಾಗಿಸಿದೆ ಎಂಬುದನ್ನು ಈಗ ಇಡೀ ದೇಶ ನೋಡಬಲ್ಲುದಾಗಿದೆ.ಭ

ಈ ಕಾಯ್ದೆಗಳನ್ನು ಸುಧಾರಿಸುತ್ತೇವೆ, ಕನಿಷ್ಟ ಬೆಂಬಲ ಬೆಲೆಯ ಆಶ್ವಾಸನೆ ಕೊಡುತ್ತೇವೆ, ಸರಕಾರೀ ಖರೀದಿ ನಿಲ್ಲಿಸುವುದಿಲ್ಲ ಎಂದು ಅದು ಯಾವ ಆಧಾರದಲ್ಲಿ ಹೇಳುತ್ತಿದೆ ಎಂದು ಎ.ಐ.ಕೆ.ಎಸ್.ಸಿ.ಸಿ. ಪ್ರಶ್ನಿಸಿದೆ. ಸರಕಾರೀ ಖರೀದಿ ನಿಲ್ಲಬೇಕು ಎಂದು ಸರಕಾರೀ ಪರಿಣಿತರು ಬಹಿರಂಗವಾÀಗಿಯೇ ಹೇಳುತ್ತಿದ್ದಾರೆ. ಏಕೆಂದರೆ ದೇಶದಲ್ಲಿ ಆಹಾರಧಾನ್ಯಗಳ ದಾಸ್ತಾನು ಬೇಕಾದುದಕ್ಕಿಂತ ಎರಡೂವರೆ ಪಟ್ಟುಇದೆ ಎಂದು ಅವರು ಹೇಳುತ್ತಾರೆ. ಕನಿಷ್ಟ ಬೆಂಬಲ ಬೆಲೆಯನ್ನು ಒಂದು ಕಾನೂನಾಗಿ ಮಾಡಲು ಸಾಧ್ಯವಿಲ್ಲ ಎಂದೂ ಅವರು ಹೇಳುತ್ತಾರೆ. ಹಾಗಿದ್ದರೆ ಈ ಕುರಿತ ಸರಕಾರದ ಆಶ್ವಾಸನೆಗಳು ಎಷ್ಟು ವಿಶ್ವಾಸಾರ್ಹ? ಈ ಮೂರು ಕಾಯ್ದೆಗಳು ದೊಡ್ಡ ಕಾರ್ಪೊರೇಟ್‌ಗಳು ಖಾಸಗಿ ಮಂಡಿಗಳನ್ನು ತೆರೆಯಲು ಉತ್ತೇಜನೆ ಕೊಡುವುದಾಗಿ ಹೇಳುತ್ತವೆ. ಅಂದರೆ ಸರಕಾರೀ ಮಂಡಿಗಳಿಗೆ ನಿರುತ್ತೇಜನೆ ಎಂದೇ ಅರ್ಥವಲ್ಲವೇ? ಇದು ಈಗಾಗಲೇ ಬೇರೆಲ್ಲ ವಲಯಗಳಲ್ಲಿ, ಶಿಕ್ಷಣ, ಆರೋಗ್ಯ, ವಿಮೆ, ಬ್ಯಾಂಕಿAಗ್ ಮುಂತಾದವುಗಳಲ್ಲಿ ಸಾಬೀತಾಗಿದೆ ಎಂದು ಎ.ಐ.ಕೆ.ಎಸ್.ಸಿ.ಸಿ. ಬೊಟ್ಟು ಮಾಡಿ ಹೇಳಿದೆ.

ಭಾರತದ ರೈತರಿಗೆ ಈ ಕಾಯ್ದೆಗಳ ದುಷ್ಪರಿಣಾಮಗಳನ್ನು ಪೂರ್ಣವಾಗಿ ಅರ್ಥವಾಗಿದೆ. ಅವು ಭಾರತೀಯ ಕೃಷಿಯನ್ನು ಗುತ್ತೇದಾರಿಗಳ ಸಂಪೂರ್ಣ ಹತೋಟಿಗೆ ಕೊಡುತ್ತಿವೆ, ಇದು ರೈತರನ್ನು ಅವರ ಭೂಮಿಯಿಂದ ಎತ್ತಂಗಡಿ ಮಾಡುತ್ತದೆ ಎಂದು ಅವರಿಗೆ ಅರ್ಥವಾಗಿದೆ. ಆದ್ದರಿಂದ ಅವರು ಕೊನೆಯ ವರೆಗೂ ಇದರ ವಿರುದ್ದ ಹೋರಾಡಲು ದೃಢನಿರ್ಧಾರ ಮಾಡಿದ್ದಾರೆ, ಹೆಚ್ಚೆಚ್ಚು ರೈತರು ದಿಲ್ಲಿಯ ಕಡೆಗೆ ಬರುತ್ತಿದ್ದಾರೆ.

ಬೆಂಬಲಾರ್ಥ ಹೇಳಿಕೆಗಳು, ರ‍್ಯಾಲಿಗಳು ಇತ್ಯಾದಿಗಳ ಬಗ್ಗೆ ಎಲ್ಲೆಡೆಗಳಿಂದ ವರದಿಗಳು ಬರುತ್ತಿವೆ. ಒಂದು ವಿಶೇಷ ಲಕ್ಷಣವೆಂದರೆ ನಗರ ಪ್ರದೇಶಗಳ ಯುವ ಬುದ್ಧಿಜೀವಿಗಳು ಹುರುಪಿನಿಂದ ಇದರಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಎ.ಐ.ಕೆ.ಎಸ್.ಸಿ.ಸಿ. ಸಂತಸ ವ್ಯಕ್ತಪಡಿಸಿದೆ.

Donate Janashakthi Media

Leave a Reply

Your email address will not be published. Required fields are marked *