ಭೂಮಾಪಕ ನಾಗರಾಜ.ಎಸ್.ಕೆ ₹10,000 ಲಂಚ ಪಡೆಯುವಾಗ ಇಡಿ ದಾಳಿ

ಹೊಸದುರ್ಗ: ಆಗಸ್ಟ್‌ 22ರಂದು ‌ಭೂಮಾಪಕ ನಾಗರಾಜ.ಎಸ್.ಕೆ ಅವರು ಎ.ಡಿ.ಎಲ್.ಆರ್ ಕಚೇರಿ ಬಳಿ ₹10,000 ಲಂಚ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ತಾಲ್ಲೂಕಿನ ಮತ್ತೋಡು ಹೋಬಳಿಯ ಗುಡ್ಡದ ನೇರಲಕೆರೆ ಗ್ರಾಮದ ಶಸಿಕಲಾ ಎಂಬುವವರು ತಮ್ಮ ಸಂಬಂಧಿಕರಿಗೆ ಸಂಬಂಧಿಸಿದ ಜಂಟಿಖಾತೆಯಲ್ಲಿರುವ ಪಹಣಿಯನ್ನು ಪ್ರತ್ಯೇಕವಾಗಿ ಮಾಡಿಕೊಡಲು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿರುತ್ತಾರೆ. ಭೂಮಾಪಕ 

ತತ್ಕಾಲ್ ಪೋಡ್ ಮಾಡಿಕೊಡಲು ಶಶಿಕಲಾ ಅವರಿಗೆ ಭೂಮಾಪಕ ನಾಗರಾಜ ರೂ.15,000/- ಸಾವಿರ ಲಂಚದ ಹಣಕ್ಕೆ ಬೇಡಿಕೆ ಇಟ್ಟಿರುತ್ತಾರೆ. ನಂತರ ಅವರು ತಮ್ಮ ಗ್ರಾಮದ ಪಂಚಾಯ್ತಿ ಸದಸ್ಯರಾದ ರಂಗನಾಥರವರನ್ನು ಸಂಪರ್ಕಿಸಿ ವಿಚಾರ ತಿಳಿಸಿದಾಗ, ರಂಗನಾಥರವರು ಸರ್ವೇಯರ್ ಬಳಿ ಹೋಗಿ ಮಾತನಾಡಿದಾಗ ರೂ.12,000/- ಸಾವಿರ ನೀಡಬೇಕು ಎಂದು ತಿಳಿಸಿರುತ್ತಾರೆ.

ಇದನ್ನೂ ಓದಿ: ಧರ್ಮಸ್ಥಳ| ತನಿಖೆ ತಾರ್ಕಿಕ ಅಂತ್ಯದವರೆಗೆ ನಿರ್ಭಾಧಿತವಾಗಿ ಮುಂದುವರೆಬೇಕು – ಹೋರಾಟಗಾರರ ಆಗ್ರಹ

ಲಂಚದ ಹಣ ನೀಡಲು ಇಷ್ಟವಿಲ್ಲದ ಶಶಿಕಲಾ ಅವರು ಆಗಸ್ಟ್ 20 ರಂದು ಲೋಕಾಯುಕ್ತ ತನಿಖಾಧಿಕಾರಿಯಾದ ಮುಸ್ತಾಕ್ ಅಹಮ್ಮದ್ ಡಿ ಶೇಖ್ ಅವರನ್ನು ಭೇಟಿಯಾಗಿ ದೂರು ನೀಡಿರುತ್ತಾರೆ‌. ಈ ದೂರಿನ ಮೇರೆಗೆ ಪರವಾನಗಿ ಭೂ ಮಾಪಕ ನಾಗರಾಜ, ಶಶಿಕಲಾ ಅವರಿಗೆ ತಾನು ಕರ್ತವ್ಯ ನಿರ್ವಹಿಸುವ ಕಛೇರಿ ಬಳಿ ಬರಲು ಹೇಳಿರುತ್ತಾರೆ‌. ಈ ವೇಳೆ 10,000/- ರೂಗಳ ಲಂಚದ ಹಣವನ್ನು ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿರುತ್ತಾರೆ. ಪ್ರಸ್ತುತ ಆರೋಪಿಯನ್ನು ವಶಕ್ಕೆ ಪಡೆದು ತನಿಖೆಯನ್ನು ಕೈಗೊಂಡಿರುತ್ತಾರೆ.

ಕರ್ನಾಟಕ ಲೋಕಾಯುಕ್ತ ಚಿತ್ರದುರ್ಗ ಕಛೇರಿಯ ಪೊಲೀಸ್ ಅಧೀಕ್ಷಕರಾದ ಎನ್. ವಾಸುದೇವರಾಮ ಇವರ ಮಾರ್ಗದರ್ಶನದಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಪೊಲೀಸ್ ಉಪಾಧೀಕ್ಷಕರಾದ ಎನ್. ಮೃತ್ಯುಂಜಯ ಇವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ದಾಳು ನಡೆಯುವಾಗ ಚಿತ್ರದುರ್ಗ ಲೋಕಾಯುಕ್ತ ಠಾಣೆಯ ಪೊಲೀಸ್ ನಿರೀಕ್ಷಕರಾದ ಬಿ. ಮಂಜುನಾಥ ಹಾಗೂ ಸಿಬ್ಬಂದಿಯವರಾದ ಜಿ.ಎಂತಿಪ್ಪೇಸ್ವಾಮಿ ಸಿಹೆಚ್‌ಸಿ, ಶ್ರೀನಿವಾಸ ಹೆಚ್, ಸಿಹೆಚ್‌ಸಿ, ಶ್ರೀಮತಿ ಪುಷ್ಪ, ಮಹೆಚ್‌ಸಿ, ಸತೀಶ್‌ಎಲ್.ಜಿ. ಸಿಪಿಸಿ, ಮಂಜುನಾಥ.ಆರ್. ಸಿಪಿಸಿ, ವೀರೇಶ ಎಂ. ಸಿಪಿಸಿ, ಮಾರುತಿಕೆ.ಟಿ ಸಿಪಿಸಿ, ರಾಜೇಶ್.ಎಸ್. ಸಿಪಿಸಿ, ವೆಂಕಟೇಶ್‌ಕುಮಾರ್.ಆರ್, ಎಪಿಸಿ. ಶ್ರೀಪತಿ ಎನ್.ಎಲ್. ಎಪಿಸಿ. ಮಾರುತಿ ಡಿ. ಎಪಿಸಿ, ಸಂತೋಷ ಟಿ.ವಿ ಎಪಿಸಿ ರವರುಗಳು ಹಾಜರಿದ್ದು ಕರ್ತವ್ಯ ನಿರ್ವಹಿಸಿರುತ್ತಾರೆ ಎಂದು ಎನ್. ವಾಸುದೇವರಾಮ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ನೋಡಿ: ಧರ್ಮಸ್ಥಳ | ಪಂಚಾಯಿತಿಯಲ್ಲಿ ದಾಖಲೆಗಳನ್ನು ಸುಟ್ಟು ಹಾಕಿರಬಹುದು. ಆದರೆ ನ್ಯಾಯಾಲಯದಲ್ಲಿ ದಾಖಲೆಗಳು ಇವೆ – ಜಯನ್

Donate Janashakthi Media

Leave a Reply

Your email address will not be published. Required fields are marked *