ನವದೆಹಲಿ : ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್ಮುಖ್ ಅವರಿಗೆ ಸೇರಿದ ₹ 4.20 ಕೋಟಿ ಮೌಲ್ಯದ ಆಸ್ತಿಯನ್ನ ಜಾರಿ ನಿರ್ದೇಶನಾಲಯ ಸೀಜ್ ಮಾಡಿದೆ. ಈ ಮೂಲಕ ಅನಿಲ್ ದೇಶ್ಮುಖ್ಗೆ ಮತ್ತೆ ಸಂಕಷ್ಟ ಎದುರಾದಂತಾಗಿದೆ.
ಅನಿಲ್ ದೇಶ್ಮುಖ್ ವಿರುದ್ಧ ಅಕ್ರಮ ಹಣ ಸಂಪಾದನೆ ಆರೋಪ ಕೇಳಿಬಂದ ಹಿನ್ನೆಲೆ ಜಾರಿ ನಿರ್ದೇಶನಾಲಯ ಅನಿಲ್ ದೇಶ್ಮುಖ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಮೂರು ಬಾರಿ ಸಮನ್ಸ್ ಕಳುಹಿಸಿತ್ತು, ಆದ್ರೆ ಅನಿಲ್ ದೇಶ್ಮುಖ್ ಮೂರು ಬಾರಿಯೂ ವಿಚಾರಣೆಗೆ ಹಾಜರಾಗದ ಹಿನ್ನೆಲೆ ಜಾರಿ ನಿರ್ದೇಶನಾಲಯ ಈ ಕ್ರಮ ತೆಗೆದುಕೊಂಡಿದೆ ಎನ್ನಲಾಗಿದೆ.
ಅನಿಲ್ ದೇಶ್ಮುಖ್ ಮಾತ್ರವಲ್ಲದೇ ಅವರ ಪುತ್ರ ಹೃಷಿಕೇಶ್ ಹಾಗೂ ಪತ್ನಿಗೂ ಸಹ ಫೆಡರಲ್ ಪ್ರೋಬ್ ಏಜೆನ್ಸಿ ಸಮನ್ಸ್ ಕಳುಹಿಸಿತ್ತು. ಆದ್ರೆ ಇವರೂ ಸಹ ವಿಚಾರಣೆಗೆ ಗೈರುಹಾಜರಾಗಿದ್ದಾರೆ. ಮಹಾರಾಷ್ಟ್ರ ಪೊಲೀಸರಿಗೆ ತಿಂಗಳಿಗೆ ₹ 100 ಕೋಟಿ ಹಣ ಸಂಗ್ರಹಿಸುವಂತೆ ಅನಿಲ್ ದೇಶ್ಮುಖ್ ಸೂಚಿಸಿದ್ದರು ಎನ್ನಲಾದ ಪ್ರಕರಣದಲ್ಲಿ ಅನಿಲ್ ದೇಶ್ಮುಖ್ ಅವರಿಗೆ ಸಮನ್ಸ್ ಕಳುಹಿಸಲಾಗಿತ್ತು.