ನವದೆಹಲಿ: ಬಿಜೆಪಿ ಪಕ್ಷ ಸೇರ್ಪಡೆಗೆ ತನ್ನನ್ನು ಸಂಪರ್ಕಿಸಿದೆ ಎಂಬ ಹೇಳಿಕೆಗೆ ಸತ್ಯಾಂಶ ನೀಡುವಂತೆ ಚುನಾವಣಾ ಆಯೋಗ, ಶುಕ್ರವಾರ ದೆಹಲಿಯ ಸಚಿವೆಯಾಗಿರುವ ಆಪ್ ನಾಯಕಿ ಅತಿಶಿಗೆ ಶೋಕಾಸ್ ನೊಟೀಸ್ ಜಾರಿ ಮಾಡಿದೆ. ಆಪರೇಷನ್
ಬಿಜೆಪಿ ಪಕ್ಷವು ತನ್ನ ನಿಕಟವರ್ತಿಗಳ ಮೂಲಕ ತನ್ನನ್ನು ತಲುಪಿ ತನ್ನನ್ನು ಸೇರುವಂತೆ ಕೇಳಿಕೊಂಡಿದೆ ಎಂಬ ಆಕೆಯ ಹೇಳಿಕೆಯ ವಿರುದ್ಧ ಬಿಜೆಪಿ ಈ ಹಿಂದೆ ಚುನಾವಣಾ ಆಯೋಗದ ಮೊರೆ ಹೋಗಿತ್ತು.
ಚುನಾವಣಾ ಆಯೋಗವು ಹೊರಡಿಸಿದ ನೊಟೀಸ್‌ನಲ್ಲಿ, “ನೀವು ದೆಹಲಿಯ ರಾಷ್ಟ್ರೀಯ ರಾಜಧಾನಿ ದೆಹಲಿ ಸರ್ಕಾರದ ಸಚಿವರು ಮತ್ತು ರಾಷ್ಟ್ರೀಯ ಪಕ್ಷದ ನಾಯಕರಾಗಿದ್ದೀರಿ. ಸಾರ್ವಜನಿಕವಾಗಿ ಭಾಷಣ ಮಾಡುವಾಗ ತಮ್ಮ ನಾಯಕರು ಏನು ಹೇಳುತ್ತಾರೆ? ಎನ್ನುವ ಅಂಶಗಳು ಚುನಾವಣಾ ಪ್ರಚಾರದ ಮೇಲೆ ಪರಿಣಾಮ ಬೀರುತ್ತವೆ. ಹೀಗಾಗಿ ಬಿಜೆಪಿ ಪಕ್ಷವು ಅತಿಶಿಗೆ ಸೇರುವಂತೆ ಹೇಳಿದ್ದಕ್ಕೆ ಸತ್ಯಾಸತ್ಯತೆ ಬೇಕು. ಆಮ್ ಆದ್ಮಿಪಕ್ಷದ ನಾಯಕಿ ನೀಡಿದ ಹೇಳಿಕೆಗಳಿಗೆ “ವಾಸ್ತವಿಕ ಅಡಿಪಾಯ” ಇರಬೇಕು ಎಂದು ಚುನಾವಣಾ ಸಮಿತಿ ಹೇಳಿದೆ. ತಾವು ನೀಡಿದ ಹೇಳಿಕೆಗಳ ಸತ್ಯಾಸತ್ಯತೆಯನ್ನು ತಿಳಿಸಬೇಕಾಗಿದೆ. ಹೀಗಾಗಿ ಅತಿಶಿಯವರು ಸೋಮವಾರ ಮಧ್ಯಾಹ್ನದೊಳಗೆ ಪ್ರತಿಕ್ರಿಯೆ ನೀಡುವಂತೆ ಸೂಚಿಸಿದೆ.
ಏಪ್ರಿಲ್ 2ರಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಅತಿಶಿ, ಆಪ್ತರ ಮೂಲಕ ಬಿಜೆಪಿ ಸೇರಲು ನನ್ನನ್ನು ಸಂಪರ್ಕಿಸಲಾಗಿತ್ತು. ಈ ವೇಳೆ ತಮ್ಮ ರಾಜಕೀಯ ಭವಿಷ್ಯ ಉಳಿಸಿಕೊಳ್ಳಲು ಬಿಜೆಪಿಗೆ ಸೇರಬಹುದು ಅಥವಾ ಮುಂದಿನ ತಿಂಗಳೊಳಗೆ ಬಂಧನಕ್ಕೀಡಾಗಬಹುದು. ಪ್ರತಿಯೊಬ್ಬ ಆಪ್ ನಾಯಕರನ್ನು ಜೈಲಿಗೆ ಹಾಕಲು ಪ್ರಧಾನಿ ನರೇಂದ್ರ ಮೋದಿ ನಿರ್ಧರಿಸಿದ್ದಾರೆ ಎಂದು ಆಪ್ತರೊಬ್ಬರು ತಿಳಿಸಿದ್ದಾಗಿ ಆರೋಪಿಸಿದ್ದರು.