ಮಂಗಳೂರು: ಬಿಜೆಪಿಯ ಕಿಶೋರ್ ಕುಮಾರ್ ಬೊಟ್ಯಾಡಿ ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರ ಕ್ಷೇತ್ರದಿಂದ ನಡೆದ ವಿಧಾನ ಪರಿಷತ್ ಉಪ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ನಿರೀಕ್ಷೆಯಂತೆ ಸುಲಭ ಗೆಲುವು ಸಾಧಿಸಿದ್ದಾರೆ.
ಅಕ್ಟೋಬರ್ 21 ರಂದು ಕೋಟ ಶ್ರೀನಿವಾಸ ಪೂಜಾರಿ ರಾಜಿನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಡೆದಿತ್ತು, ಅದರಂತೆ ಇಂದು ಗುರುವಾರ(ಅ.24) ಚುನಾವಣಾ ಫಲಿತಾಂಶ ಹೊರಬಿದ್ದಿದೆ.
ಇದನ್ನೂ ಓದಿ: ಎಡೆಬಿಡದೇ ಸುರಿಯುತ್ತಿರುವ ಮಳೆಗೆ ನಾಳೆಯೂ ಶಾಲೆಗಳಿಗೆ ರಜೆ: ಕಾಲೇಜುಗಳಿಗೆ ರಜೆ ಘೋಷಿಸಲಾಗಿಲ್ಲ
ಒಟ್ಟು 5907ಮತಗಳಲ್ಲಿ ಬಿಜೆಪಿಯ ಕಿಶೋರ್ ಕುಮಾರ್ ಬೊಟ್ಯಾಡಿ ಅವರು 3655 ಮತಗಳನ್ನು ಪಡೆಯುವ ಮೂಲಕ ಭರ್ಜರಿ ಗೆಲುವು ಸಾಧಿಸಿದ್ದಾರೆ, ಅದರಂತೆ ಕಾಂಗ್ರೆಸ್ ನ ರಾಜು ಪೂಜಾರಿ 1958 ಮತಗಳನ್ನು ಗಳಿಸಿದರೆ, ಎಸ್ ಡಿಪಿಐ ಅಭ್ಯರ್ಥಿ 195, ದಿನಕರ್ ಉಲ್ಲಾಳ್ 9 ಮತಗಳನ್ನು ಪಡೆದರೆ 90 ಮಠಗಳು ಅಮಾನ್ಯಗೊಂಡಿವೆ.
ಇದನ್ನೂ ನೋಡಿ: ಹಾಸನ ಲೈಂಗಿಕ ದೌರ್ಜನ್ಯ| ಪೆನ್ಡ್ರೈವ್ ಪ್ರಕರಣ – ಪ್ರಜ್ವಲ್ಗಿಲ್ಲ ಬೇಲ್, ಜೈಲು ಗ್ಯಾರಂಟೀನಾ?? – ಕೆಎಸ್ ವಿಮಲಾ